ಬಿಹಾರದಲ್ಲಿ ನಿತೀಶ್ ಕುಮಾರ್-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಮತ್ತೆ ಅಧಿಕಾರಕ್ಕೆ ಬರಲು ಐದು ವಿಷಯಗಳು ಮುಖ್ಯವೆಂದು ಪರಿಗಣಿಸಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಎನ್‌ಡಿಎ ಮೈತ್ರಿಕೂಟ ಆರಂಭದಿಂದಲೂ ಮುನ್ನಲೆ ಕಾಯ್ದುಕೊಂಡು ಬರುತ್ತಿದೆ. ಇದರಿಂದಾಗಿ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಸರ್ಕಾರ ರಚಿಸುವುದು ದೃಢಪಟ್ಟಿದೆ. ಈ ಯಶಸ್ಸಿಗೆ ಐದು ವಿಷಯಗಳು ಮುಖ್ಯವೆಂದು ಪರಿಗಣಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ:
ಎಲ್ಲಾ ಮನೆಗಳಿಗೆ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸಿದ್ದೇ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದೆ. ಇದಲ್ಲದೆ, 1.3 ಕೋಟಿ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡಲು ಅವರ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಲಾಯಿತು. ಇದರಿಂದಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಮಹಿಳಾ ಮತಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿದೆ.
ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಮತದಾನದ ಪ್ರಮಾಣ ಶೇ.66.91 ರಷ್ಟಿದ್ದರೆ, ಮಹಿಳಾ ಮತದಾರರ ಮತದಾನ ಶೇ.71.6ಕ್ಕೆ ಏರಿದೆ. ಎನ್‌ಡಿಎ ಮೈತ್ರಿಕೂಟ ಪ್ರಸ್ತುತ ಮುನ್ನಡೆ ಸಾಧಿಸಲು ಇದೇ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.
ತೇಜಸ್ವಿ ಯಾದವ್ ಗೆದ್ದರೆ ತಿಂಗಳಿಗೆ 2,500 ರೂ. ನೀಡುವುದಾಗಿ ನೀಡಿದ್ದ ಭರವಸೆಯನ್ನು ನಂಬುವ ಬದಲು, ಮಹಿಳೆಯರು ನಿತೀಶ್ ಕುಮಾರ್ ಮೇಲಿನ ನಂಬಿಕೆಯನ್ನು ಬಲಪಡಿಸಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರು 1.2 ಕೋಟಿ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ಪಿಂಚಣಿಯನ್ನು 400 ರೂ.ಗಳಿಂದ 1,100 ರೂ.ಗಳಿಗೆ ಹೆಚ್ಚಿಸಿರುವುದು ಅವರು ಮತ್ತೆ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದೆ.
ಹಿರಿಯ ನಾಗರಿಕರು ಇದನ್ನು ನಿತೀಶ್ ಕುಮಾರ್ ಅವರ ದೊಡ್ಡ ಕೊಡುಗೆ ಎಂದು ಪರಿಗಣಿಸಿದ್ದರು. ಪರಿಣಾಮವಾಗಿ, ನಿತೀಶ್ ಕುಮಾರ್-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಬಿಹಾರದ ಜನರು ಅದ್ಭುತ ಜಯ ಸಾಧಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೊಂದಲ, ಸೀಟ್ ಹಂಚಿಕೆ ವಿಚಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನಲ್ಲಿ ಆದ ಗೊಂದಲ, ನಿತೀಶ್ ಕುಮಾರ್-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕಾಂಗ್ರೆಸ್ ಗ್ಯಾರಂಟಿಗನ್ನೇ ಕಾಪಿ ಮಾಡಿ, ಬಣ್ಣಹಚ್ಚಿ, ಮತದಾರರ ಮುಂದೇ ಯಶಸ್ವಿಯಾಗಿ ಕೊಂಡೊಯ್ದದ್ದು ಕೂಡ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೋಲಲು ಕಾರಣವಾಯಿತು.














