ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ಕ್ಯಾಲಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು (14-11-2025) ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಜೊತೆ ಮಾತನಾಡಿದ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರು, “ಶಾಲೆಯಲ್ಲಿ ಮಕ್ಕಳು ಚನ್ನಾಗಿ ಓದಬೇಕು. ಪ್ರತಿ ದಿನ ಶಾಲೆಗೆ ತಪ್ಪದೇ ಹಾಜರಾಗಬೇಕು. ಟೀಚರ್ಸ್ ಎಲ್ಲರೂ ಕಷ್ಟಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ. ನೀವು ಕೂಡ ಚೆನ್ನಾಗಿ ಕಲಿಯಬೇಕು. ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಇದೇ ರೀತಿ ನೀವು ಚೆನ್ನಾಗಿ ಓದಿದರೆ ನಮಗೂ ಕೂಡ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಲು ಆಸೆ ಬರುತ್ತೆ. ಎಲ್ಲಾ ಕಡೆಯಿಂದಲೂ ನೀವು ಬಂದಿದ್ದೀರಿ. ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಬಡ ಮಕ್ಕಳು ಇದ್ದಾರೆ. ನೀವೆಲ್ಲರೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬುದು ನನ್ನ ಆಸೆ. ಟೀಚರ್ಸ್ ಕೂಡ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಮತ್ತುಷ್ಟು ಪ್ರತಿಭಾನ್ವಿತರು ಬೆಳಕಿಗೆ ಬರುತಾರೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮವಸ್ತ್ರ ದಾನಿಗಳು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್ ಅವರು “ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಕೈಲಾದ ಸಹಾಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೊರಮಾವು ವಾರ್ಡ್ ನ ಎಲ್ಲಾ ಶಾಲೆಗಳ ಅಭಿವೃದ್ಧಿಗೆ ಸಹಾಯ ಮಾಡಲಾಗುವುದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂ ನ್ಯಾಯಮಂಡಳಿಯ ಸದಸ್ಯರು ಹಾಗೂ ಹೊರಮಾವು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಿ.ವೆಂಕಟೇಶ್ ಅವರು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಮುಖಂಡರಾದ ಆರ್.ಪುರುಷೋತ್ತಮ್ ಬಾಬು, ಎಂ.ಎಸ್.ಗುರುದಾಸ್, ಕ್ಯಾಲಸನಹಳ್ಳಿ ಶ್ರೀನಿವಾಸ್, ಹಿರಿಯ ಮುಖಂಡರಾದ ವೆಂಕಟೇಶ್ ಪತಿ, ಹೊರಮಾವು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ರಾಖೇಶ್, ಹೊರಮಾವು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಗೆದ್ದಲಹಳ್ಳಿ ಮುನಿರಾಜು, ನಾರಾಯಣಪುರ ಸೊನ್ನಪ್ಪ, ನಾರಾಯಣಪುರ ವೆಂಕಟೇಶ್, ಕೊತ್ತನೂರು ವಾರ್ಡ್ ಮಹಿಳಾ ಅಧ್ಯಕ್ಷೆ ಕೊತ್ತನೂರು ಕೆ ಮಾಧವಿ, ಶರಣಮ್ಮ, ಹೊರಮಾವು ಬ್ಲಾಕ್ ಎಸ್.ಸಿ.ವಿಭಾಗದ ಪ್ರಧಾನ ಕಾರ್ಯದರ್ಶಿ ಮಾರೇಶ್, ಕ್ಯಾಲಸನಹಳ್ಳಿ ಯುವ ಮುಖಂಡ ಹರೀಶ್ ಮತ್ತು ನಗರೇಶ್ವರ ನಾಗೇನ ಹಳ್ಳಿಯ ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಗೋಪಮ್ಮ, ಸಹ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ದೇವಿ, ಶ್ರೀಮತಿ ಮರಿಯ ಚಿನ್ನಪ್ಪ, ಸಹ ಶಿಕ್ಷಕರಾದ ಶ್ರೀ ಧರ್ಣೇಶ್ ಮತ್ತು ಅಂಗನವಾಡಿ ಶಿಕ್ಷಕಿಯಾದ ಅಂಬಿಕಾ ಮತ್ತು ಇತರೆ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.













