ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2023 » Page 5 of 7 » Dynamic Leader
October 23, 2024
Home 2023 February (Page 5)
ದೇಶ

ನವದೆಹಲಿ: ಹೆಚ್ಚು ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊಂದಿರುವ ದೇಶ ಭಾರತ. ಎಂದು ನೀತಿ ವಿಶ್ಲೇಷಣೆ ಕೇಂದ್ರ (ಸಿಪಿಎ) ಹೇಳಿದೆ.

ಜಾಗತಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ, ಭಾರತವು ಸೇರಿದಂತೆ 110 ದೇಶಗಳಲ್ಲಿ ಸಿಪಿಎ ನಡೆಸಿದ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ. ಆ ಅಧ್ಯಯನದ ಪ್ರಕಾರ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಈ ನಿಟ್ಟಿನಲ್ಲಿ, ನೀತಿ ವಿಶ್ಲೇಷಣೆ ಕೇಂದ್ರವು ಪ್ರಕಟಿಸಿರುವ ಹೇಳಿಕೆಯಲ್ಲಿ:

‘ಭಾರತವು ಧಾರ್ಮಿಕ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ಭಾರತವು ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿರುತ್ತದೆ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಗತಿಗೆ ನಿರ್ದಿಷ್ಟವಾದ ಮತ್ತು ವಿಶೇಷವಾದ ನಿಯಮಗಳನ್ನು ಹೊಂದಿರುತ್ತದೆ. ಯಾವುದೇ ಇತರ ದೇಶದ ಸಂವಿಧಾನವು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪ್ರಗತಿಗಾಗಿ ಯಾವುದೇ ಸ್ಪಷ್ಟವಾದ ನಿಯಮಗಳನ್ನು ಅಥವಾ ಕಾರ್ಯಕ್ರಮಗಳನ್ನು ಹೊಂದಿರುವುದಿಲ್ಲ. ನಂತರದ ಸ್ಥಾನಗಳನ್ನು ದಕ್ಷಿಣ ಕೊರಿಯಾ, ಜಪಾನ್ ಮತ್ತು ಪನಾಮ ಪಡೆದಿರುತ್ತದೆ. ಕೊನೆಯ ಸ್ಥಾನಗಳನ್ನು ಅಮೆರಿಕ, ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾ ಪಡೆದುಕೊಂಡಿದೆ.

ಇಂಗ್ಲೆಂಡ್ 54ನೇ ಸ್ಥಾನದಲ್ಲಿದೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ 61ನೇ ಸ್ಥಾನದಲ್ಲಿದೆ. ಭಾರತದ ಅಲ್ಪಸಂಖ್ಯಾತ ನೀತಿಯು ವೈವಿಧ್ಯತೆಯನ್ನು ಉತ್ತೇಜಿಸುವ ವಿಧಾನವನ್ನು ಆಧರಿಸಿದೆ. ಆದ್ದರಿಂದಲೇ ಭಾರತಕ್ಕೆ ಈ ಶ್ರೇಯಾಂಕದಲ್ಲಿ ಅಗ್ರಸ್ಥಾನ ಸಿಕ್ಕಿದೆ’ ಎಂದು ಸಿಪಿಎ ವರದಿ ಹೇಳುತ್ತಿದೆ. CPA ವರದಿಯು ಭಾರತದ ಅಲ್ಪಸಂಖ್ಯಾತ ನೀತಿಯ ನಿಯತಕಾಲಿಕ ಪರಿಶೀಲನೆ ಮತ್ತು ಮರುಪರಿಶೀಲನೆಗೆ ಒತ್ತಾಯಿಸುತ್ತದೆ.

ಭಾರತವನ್ನು ಸಂಘರ್ಷ ಮುಕ್ತವಾಗಿಡಬೇಕಾದರೆ, ಅಲ್ಪಸಂಖ್ಯಾತರ ಬಗೆಗಿನ ಅದರ ವರ್ತನೆಯನ್ನು ಸಮರ್ಥಿಸಿಕೊಳ್ಳಬೇಕು ಎಂದು ವರದಿ ಸೂಚಿಸುತ್ತದೆ.

Desi global minority index puts India at top, says CAA protest ‘notable sign of status of Muslims’

Week after U.S. report claimed religious freedom & related human rights in India under threat, Patna-based Centre for Policy Analysis gives country top rank in inclusivity & global minority index.

New Delhi: A week after a U. S. Commission for International Religious Freedom (USCIRF) report claimed that religious freedom and related human rights in India are under ongoing threat, a report released by the Patna-based Centre for Policy Analysis (CPA) awarded India top rank in terms of neutrality of state towards religion, inclusivity and global minority index.

Released Tuesday by former Indian Vice President Venkaiah Naidu, the CPA’s Global Minority Report placed USA in fourth place in the global minority index.

Claiming that this was the first time an Afro-Asian or ‘non-Western’ country had prepared such a report, the report’s author and CPA Patna chairman, Durganand Jha joked, “now they will complain about their rankings, not us”.

The Indian government had earlier rejected the USCIRF report, terming it “inaccurate and biased”. Ministry of External Affairs (MEA) spokesperson, Arindam Bagchi, had alleged that USCIRF has a tendency to consistently misrepresent the facts which shows the lack of their understanding about India, its constitutional framework, plurality and robust democratic system.

News Source: The Print 

ಸಿನಿಮಾ

ಅರುಣ್ ಜಿ.,

ಕೊಪ್ಪದಲ್ಲಿ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಸಾಂಗ್ ಬಿಡುಗಡೆ: ಸ್ಯಾಂಡಲ್ ವುಡ್  ಘಟೋದ್ಗಜ ಎಂದು ಪ್ರಮೋದ್ ಶೆಟ್ಟಿಗೆ ಟೈಟಲ್ ನೀಡಿದ ನಿರ್ದೇಶಕ!

ಬೆಂಗಳೂರು: ಬಹು ನಿರೀಕ್ಷೆಯ ಇನಾಮ್ದಾರ್ ಸಿನಿಮಾ, ಟೀಸರ್ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಇದೀಗ ಕೊಪ್ಪದಲ್ಲಿ ತನ್ನ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ. ಕೊಪ್ಪದಲ್ಲಿ ‘ಸಿಲ್ಕು-ಮಿಲ್ಕು’ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ, ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾವಿದರ ದಂಡೆ ಇರುವ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ ಎಂದು ನಿರ್ದೇಶಕರು ಹೇಳುತ್ತಾರೆ.

ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಕೊಪ್ಪದ ಮಕ್ಕಳ ಕೈಯಲ್ಲಿ ಸಿಲ್ಕು-ಮಿಲ್ಕು ಸಾಂಗ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಕೊಪ್ಪದ ಜನತೆಯನ್ನು ಸ್ಮರಿಸಿಕೊಂಡಿದ್ದಾರೆ. ಖಡಕ್ ಧ್ವನಿಯಲ್ಲಿ ಪ್ರಮೋದ್ ಶೆಟ್ಟಿಯ ಡೈಲಾಗ್ ಕೇಳಿ ಹುಚ್ಚೆದ್ದು ಕುಣಿದ ಕೊಪ್ಪದ ಜನತೆಗೆ ನಿರ್ದೇಶಕ ಸಂದೇಶ ಶೆಟ್ಟಿ, ಪ್ರಮೋದ್ ಶೆಟ್ಟಿ ಅವರಿಗೆ ಸ್ಯಾಂಡಲ್ವುಡ್ ಘಟೋದ್ಗಜ ಎಂದು ಬಿರುದನ್ನು ನೀಡಿದ್ದಾರೆ. ಇದು ಕೊಪ್ಪದ ಜನತೆಯಲ್ಲಿ ಮತ್ತಿಷ್ಟು ಜೋಶ್ ತಂದು ಕೊಟ್ಟಿದೆ.

ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಹಾಗೂ ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಉಳಿಯಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರಂಜನ್ ಶೆಟ್ಟಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ, ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ, ನಿಮಗೆಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತೆ ನಮ್ಮ ತಂಡವನ್ನ ಬೆಂಬಲಿಸಿ, ನೀವು ನಮಗೆ ಶಕ್ತಿಯಾಗಿ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಮಾತನಾಡಿ ಇದೊಂದು ಸೂಕ್ಷ್ಮವಾದ ಕಥಾಹಂದರ ಬಲು ಅಚ್ಚುಕಟ್ಟಾಗಿ ಈ ಸಿನಿಮಾವನ್ನ ತೆರೆಯ ಮೇಲೆ ತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ. ಈ ಸಿನಿಮಾದಲ್ಲಿ ನಾನು ಮೂರು ಹಾಡುಗಳನ್ನ ಮಾಡಿದ್ದೇನೆ. ನಿಮ್ಮೆಲ್ಲರ ಬೆಂಬಲ ಈ ಸಿನಿಮಾದ ಮೇಲೆ ಇರಲಿ ಎಂದು ಕೇಳಿಕೊಂಡರು. ನಾಯಕ ನಟ ರಂಜನ್  ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪದ ವೇದಿಕೆಯಲ್ಲಿ ಸಂತೋಷವನ್ನು ಹಂಚಿಕೊಂಡರು.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ವಿಜಯ್​ ಜಗದಾಲ್​ ಮೊದಲ ಬಾರಿಗೆ ನಟಿಸಿ-ನಿರ್ದೇಶಿಸಿರುವ ‘ರೂಪಾಯಿ’ ಚಿತ್ರವು ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವಷ್ಟೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿ ಜನರ ಮೆಚ್ಚುಗೆ ಪಡೆದಿತ್ತು. ಈಗ ‘ಉಸಿರಾಟ’ ಎಂಬ ಹೊಸ ಹಾಡು ಬಿಡುಗಡೆಯಾಗಿದ್ದು. ಈ ಹಾಡಿಗೂ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿರುವ ‘ಉಸಿರಾಟ’ ಹಾಡನ್ನು ವ್ಯಾಸರಾಜ ಸೋಸಲೆ ಹಾಡಿದ್ದು, ಆನಂದ್​ ರಾಜಾವಿಕ್ರಮ್​ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ನಟ-ನಿರ್ದೇಶಕ ವಿಜಯ್​ ಜಗದಾಲ್​ ಅವರೇ ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ.

‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್​ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆಯಂತೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ಉಕ್ಕಿಸುವಂತಿದೆ’ ಎನ್ನುತ್ತಾರೆ ವಿಜಯ್​ ಜಗದಾಲ್​. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ವಿಜಯ್​ ಜಗದಾಲ್​, ‘ಇದೊಂದು ರೆಗ್ಯುಲರ್​ ಚಿತ್ರ ಅಲ್ಲ. ಐದು ಜನರ ಸುತ್ತ ಸುತ್ತುವ ಕಥೆ ಇಲ್ಲಿದೆ. ಅವರಿಗೆ ಆಕಸ್ಮಿಕವಾಗಿ ಒಂದಿಷ್ಟು ಹಣ ಸಿಗುತ್ತದೆ. ಒಂದ ದೊಡ್ಡ ಹಗರಣಕ್ಕೆ ಸಂಬಂಧಿಸಿದ ಹಣ, ಮಧ್ಯಮ ವರ್ಗದ ಜನರಿಗೆ ಸಿಕ್ಕಾಗ ಅವರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದರ ಕುರಿತು ಹೇಳುವುದಕ್ಕೆ ಹೊರಟಿದ್ದೇವೆ. ದುಡ್ಡಿಗಿಂತ ಸಂಬಂಧಗಳ ಕುರಿತಾದ ಚಿತ್ರ ಇದು. ಆ ದುಡ್ಡು ಸಂಬಂಧಗಳನ್ನು ಹೇಗೆ ಹಾಳು ಮಾಡುತ್ತದೆ ಎಂದು ಹೇಳುವ ಚಿತ್ರ ಇದು’ ಎಂದು ಹೇಳುತ್ತಾರೆ.

ವಿವಿಧ್​ ಸಿನಿಮಾಸ್​ ಬ್ಯಾನರ್​ನಡಿ ಮಂಜುನಾಥ್​ ಎಂ., ಹರೀಶ್​,ಬಿ.ಕೆ. ಮತ್ತು ವಿನೋದ ಎನ್​. ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಜಗದಾಲ್​ ಜೊತೆಗೆ ಕೃಷಿ ತಾಪಂಡ, ಯಶ್ವಿಕ್​, ‘ಮೈತ್ರಿ’ ಜಗದೀಶ್​, ಶಂಕರ್​ ಮೂರ್ತಿ, ರಾಮ್​ ಚಂದನ್​, ಚಂದನಾ ರಾಘವೇಂದ್ರ, ಪ್ರಮೋದ್​ ಶೆಟ್ಟಿ, ರಾಕ್​ಲೈನ್​ ಸುಧಾಕರ್​, ಮೋಹನ್​ ಜನೇಜ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್​ ಅವರ ಸಂಗೀತ, ಆರ್​.ಡಿ.ನಾಗಾರ್ಜುನ್​ ಅವರ ಛಾಯಾಗ್ರಹಣ ಮತ್ತು ಶಿವರಾಜ್​ ಮೇಹು ಅವರ ಸಂಕಲನವಿದೆ.

ವಿದೇಶ

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಬಗ್ಗೆ ಮೂರು ದಿನಗಳ ಮೊದಲೇ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ ಬೀಟ್ಸ್, ಭಾರತದಲ್ಲೂ ಭೂಕಂಪ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಭಾನುವಾರ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 11 ಸಾವಿರವನ್ನು ದಾಟಿದೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಜಗತ್ತು ಅವರಿಗೆ ನೆರವಿನ ಹಸ್ತವನ್ನು ಚಾಚುತ್ತಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಮುಂಜಾನೆ ವೇಳೆ; ಜನರು ಗಾಢ ನಿದ್ರೆಯಲ್ಲಿದ್ದಾಗ ನಡುಕ ಸಂಭವಿಸಿತು ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ವರದಿಗಳು ಹೇಳುತ್ತಿವೆ.

ಆದರೆ ಒಬ್ಬ ವ್ಯಕ್ತಿ ಮಾತ್ರ ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ಈ ಟರ್ಕಿ-ಸಿರಿಯಾ ಭೂಕಂಪದ ಬಗ್ಗೆ ಮೊದಲೇ ಮುನ್ಸೂಚನೆ ನೀಡಿ ಎಚ್ಚರಿಕೆಯನ್ನು ನೀಡಿದ್ದಾರೆ. ಈ ದುರಂತ ಘಟನೆಗೆ ನಡೆಯುವ ಮೂರು ದಿನಗಳ ಮೊದಲೇ ಫ್ರಾಂಕ್ ಹೂಗರ್‌ ಬೀಟ್ಸ್ ಎಂಬ ಡಚ್ ವಿಜ್ಞಾನಿ, ‘ಫೆಬ್ರವರಿ 3 ರಂದು, ದಕ್ಷಿಣ-ಮಧ್ಯ ಟರ್ಕಿ, ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿ ಈಗ ಅಥವಾ ಕೆಲವೇ ದಿನಗಳಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಲಿದೆ’ ಎಂದು ಹೇಳಿದ್ದರು.

ಅವರು ನೆದರ್ಲ್ಯಾಂಡ್ ನ ಸೌರವ್ಯೂಹದ ಆಕಾರದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಟರ್ಕಿ, ಸಿರಿಯಾ ನಂತರ ಅಫ್ಘಾನಿಸ್ತಾನದಲ್ಲಿ ಆರಂಭವಾಗುವ ಭೂಕಂಪವು ಪಾಕಿಸ್ತಾನ, ಭಾರತದ ಮೂಲಕ ಹಾದು ಹಿಂದೂ ಮಹಾಸಾಗರದಲ್ಲಿ ಕೊನೆಗೊಳ್ಳಲಿದೆ ಎಂದು ಡಚ್ ವಿಜ್ಞಾನಿ ಫ್ರಾಂಕ್ ಹೂಗರ್‌ ಬೀಟ್ಸ್ ಎಚ್ಚರಿಸಿದ್ದಾರೆ.

ಪಾಕಿಸ್ತಾನದ ರಾಜ್ಯ ಸಚಿವ ಇಬ್ರಾಹಿಂ, ಡಚ್ ವಿಜ್ಞಾನಿ ಫ್ರಾಂಕ್ ಹೂಗರ್‌ ಬೀಟ್ಸ್ ಮಾಡಿರುವ ಸಂಭಾಷಣೆಯ ವೀಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪಾಕಿಸ್ತಾನ, ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ಭೂಕಂಪದ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Earthquake To Strike India Very Soon? Dutch Researcher Frank Hoogerbeets, Who Predicted Earthquake in Turkey and Syria, Had Made Similar Predictions About India, Pakistan and Afghanistan (Watch Video)

A video of Frank Hoogerbeets is going viral in which he is seen predicting a large size earthquake originating in Afghanistan.

ರಾಜ್ಯ

ಬೆಂಗಳೂರು: ಬೆಂಗಳೂರಿನಲ್ಲಿರುವ ಬಡವರ ಪುಟ್ಟ ಸಹೋದರಿಯರು ನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಮನೆಯಲ್ಲಿ (Little Sisters ವೃದ್ಧಾಶ್ರಮ) ಬೆಳಗಿನ ಜಾವ 1:30ಕ್ಕೆ ಆರ್ಚ್ ಬಿಷಪ್ ವಿಶ್ರಾಂತ ಇಗ್ನೇಷಿಯಸ್ ಪಿಂಟೋ ನಿಧನರಾದರು ಎಂಬ ಸುದ್ಧಿಯನ್ನು ಬೆಂಗಳೂರಿನ ಆರ್ಚ್‌ಬಿಷಪ್ ಪೀಟರ್ ಮಚಾಡೊ ಅವರ ಸಂದೇಶದಲ್ಲಿ ತಿಳಿಸಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಆರ್ಚ್ ಬಿಷಪ್ ಪಿಂಟೋ ಅವರು ಮೇ 18, 1925 ರಂದು ಮಂಗಳೂರು ಧರ್ಮಪ್ರಾಂತ್ಯದ ಬಂಟ್ವಾಳದಲ್ಲಿ ಜನಿಸಿದರು ಮತ್ತು ಆಗಸ್ಟ್ 24, 1952 ರಂದು ಪಾದ್ರಿಯಾಗಿ ನೇಮಕಗೊಂಡರು.

ಬೆಂಗಳೂರಿನ ಆರ್ಚ್‌ಬಿಷಪ್ ಅಲ್ಫೋನ್ಸ್ ಮಥಿಯಾಸ್ ಅವರ ನಂತರ, ಬೆಂಗಳೂರು ಮಹಾಧರ್ಮಕ್ಷೇತ್ರಕ್ಕೆ ಆರ್ಚ್‌ಬಿಷಪ್ ಆಗಿ, (ಸೆಪ್ಟೆಂಬರ್ 10, 1998) ರಂದು ಇಗ್ನೇಷಿಯಸ್ ಪಿಂಟೋ ಅವರು ನೇಮಕವಾದರು. ಆ ಸಮಯದಲ್ಲಿ ಬೆಂಗಳೂರಿನ ದೇವಾಲಯಗಳಲ್ಲಿ ಧರ್ಮಾಚರಣೆಯ ಭಾಷೆಯ ಬಗ್ಗೆ ದೊಡ್ಡ ವಿವಾದವೊಂದು ಸೃಷ್ಠಿಯಾಯಿತು.

ಚರ್ಚ್ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಶೇ.20 ರಷ್ಟಿರುವ ಕ್ಯಾಥೋಲಿಕ ಕ್ರೈಸ್ತರು, ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನು ಮಾತನಾಡುವ ಸ್ಥಳೀಯರಾಗಿದ್ದಾರೆ. ಸುಮಾರು ಶೇ.70 ರಷ್ಟಿರುವ ಕ್ಯಾಥೋಲಿಕರು ತಮಿಳು ಭಾಷಿಕರಾಗಿದ್ದಾರೆ ಮತ್ತು ಉಳಿದವರು ಇತರ ರಾಜ್ಯಗಳಿಂದ ವಲಸೆ ಬಂದವರು ಎಂದು ಹೇಳಲಾಗುತ್ತಿದೆ.

ಭಾಷಾ ಸಮಸ್ಯೆಯು ಮೂರು ದಶಕಗಳಿಗೂ ಹೆಚ್ಚು ಕಾಲ ಧರ್ಮಪ್ರಾಂತ್ಯವನ್ನು ಕಾಡಿತ್ತು. ಸ್ಥಳೀಯ ಕನ್ನಡ ಮಾತನಾಡುವ ಕ್ರೈಸ್ತರು ತಮ್ಮ ಭಾಷೆಗೆ ಪೂಜೆಯಲ್ಲಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಬಯಸಿದ್ದರು. ಆದರೆ, ಇಲ್ಲಿನ 70% ತಮಿಳರು ಅದಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡ – ತಮಿಳು ದ್ವೀಭಾಷಾ ಸೂತ್ರವನ್ನು ಮುಂದಿಟ್ಟರು. ಒಪ್ಪದ ಕನ್ನಡಿಗರಿಂದ. ಘರ್ಷಣೆಗಳು ಹೆಚ್ಚಾಗಿ ಅದು ಹಿಂಸಾಚಾರಕ್ಕೆ ತಿರುಗಿತ್ತು.

1940ರಲ್ಲಿ ಬೆಂಗಳೂರು ಧರ್ಮಪ್ರಾಂತ್ಯ ಮತ್ತು 1953ರಲ್ಲಿ ಆರ್ಚ್‌ಡಯಾಸಿಸ್ ಆದಂದಿನಿಂದ ಅದರ ಎಲ್ಲಾ ಬಿಷಪ್‌ಗಳು ಹೊರಗಿನವರು ಎಂದು ಕನ್ನಡ ಕ್ರೈಸ್ತರು ಆರೋಪಿಸಿದರು.

ಕಟ್ಟುನಿಟ್ಟಾದ ಧರ್ಮಾಭಿಮಾನಿಯಾಗಿದ್ದ ಆರ್ಚ್‌ಬಿಷಪ್ ಪಿಂಟೋ ಅವರು ಮೌನದ ಜೊತೆಗೆ ಮಧ್ಯಮ ಮಾರ್ಗವನ್ನು ಅನುಸರಿಸುವ ಮೂಲಕ ಭಾಷಾ ವಿವಾದವನ್ನು ಧೈರ್ಯದಿಂದ ಎದುರಿಸಿದ್ದರು. ಆರ್ಚ್‌ಬಿಷಪ್ ಪಿಂಟೋ ಅವರು ಉತ್ತಮ ಶಿಸ್ತು, ಕಟ್ಟುನಿಟ್ಟಾದ ಮತ್ತು ನಿಖರವಾದ ವ್ಯಕ್ತಿಯಾಗಿದ್ದು, ಅವರು ಧಾರ್ಮಿಕ ವಿಷಯಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ.

ಆರ್ಚ್‌ಬಿಷಪ್ ಪಿಂಟೋ ಅವರು ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಕ್ಷರೂ ಆಗಿದ್ದರು. ಅವರು 70 ವರ್ಷಗಳ ಕಾಲ ಪಾದ್ರಿಯಾಗಿ ಮತ್ತು 34 ವರ್ಷಗಳ ಕಾಲ ಬಿಷಪ್ ಆಗಿ ಸೇವೆ ಸಲ್ಲಿಸಿದ್ದಾರೆ.

Bangalore archbishop emeritus Ignatius Pinto passes away

Bengalore: Archbishop emeritus Ignatius Pinto passed away on Wednesday February 8. He was 98.
He was residing at the Senior Citizens Home of the Little Sisters of the Poor at Bangalore.
He was born on 18 May 1925 in Bantwal. He ordained priest on August 24, 1952.
Archbishop of Bangalore Alphonsus Mathias ordained him bishop of Shimoga, on January 31, 1989. He was appointed as archbishop of Bangalore, India on September 10, 1998.
He retired from his active episcopal ministry on July 22, 2004. He served as a priest for 70 years and a Bishop for 34 years.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ನಟಿ ಶೃತಿ ಅವರ ಮನೆಯ ಮೂರನೇ ತಲೆಮಾರು ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದೆ. ಇತ್ತೀಚೆಗೆ ನಟ ಶರಣ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮ್ಮ ಶೃತಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಮಾವ ಶರಣ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ನಡುವೆ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ ಲಾಂಚ್ ಆಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರರಂಗದಲ್ಲಿ ಸಾಕಷ್ಟು ಜನ ಕೀರ್ತಿ ಕೃಷ್ಣ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದರು. ಅಂತಿಮವಾಗಿ ಈಗ ಕೀರ್ತಿ ತಮ್ಮ ಮೊದಲ ಸಿನಿಮಾವನ್ನು ಒಪ್ಪಿದ್ದಾರೆ. ಅದು ಧರಣಿ. ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶೃತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

ಶೃತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಕೃಷ್ಣ ಅವರ ತಾಯಿ ಕೂಡಾ ನಟಿಯಾಗಿದ್ದವರು. ನಂತರ ಶೃತಿ, ಶರಣ್ ಕೂಡಾ ಬಣ್ಣದ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಈಗ ಮೂರನೇ ತಲೆಮಾರಿನ ಕೀರ್ತಿ ಕೃಷ್ಣ ಕೂಡಾ ಭರವಸೆ ಮೂಡಿಸಿದ್ದಾರೆ. 

ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ.ಎಸ್.ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ.

ಸಿನಿಮಾ

ಬೆಂಗಳೂರು: ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಅವರ ನೆನಪಿಗಾಗಿ ಜೀವಬಿಂಬ ಎಂಬ ಪುಸ್ತಕವನ್ನು ಹೊರತಂದಿದೆ. ಅದರ ಬಿಡುಗಡೆ ಸಮಾರಂಭ ಪ್ರೆಸ್‌ಕ್ಲಬ್ ಆವರಣದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ  ಪತ್ರಕರ್ತರ ಸಂಘದ ಅಧಿಕೃತ  ಜಾಲತಾಣವನ್ನು ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ಹಿರಿಯನಟ ದೇವರಾಜ್, ನಟಿ ಭಾವನಾ ರಾಮಣ್ಣ  ಉದ್ಘಾಟಿಸಿದರು. ವೇದಿಕೆಯಲ್ಲಿ ಮಾತನಾಡಿದ ನಟ ದೇವರಾಜ್ ‘ನಾಗೇಶ್ ಒಬ್ಬ  ಸರಳಜೀವಿ, ನನ್ನ ಮೊದಲ ಫೋಟೋಶೂಟ್ ಅವರೇ ಮಾಡಿದ್ದರು. ಅವರ, ನನ್ನ ಸ್ನೇಹ 35 ವರ್ಷದ್ದು ಎಂದು ಹೇಳಿದರು,  ನಟಿ ಭಾವನಾ ಮಾತನಾಡುತ್ತ  ನನ್ನ ಪ್ರಥಮ ಛಾಯಾಚಿತ್ರವನ್ನು ಕ್ಲಿಕ್ ಮಾಡಿದ್ದು ಡಿಸಿ, ಅದು ಮಯೂರದಲ್ಲಿ ಪ್ರಕಟವಾಗಿತ್ತು. ನನ್ನ ತಂದೆಯ ಜೊತೆ ಸಾಕಷ್ಟು ಬಾರಿ ಅವರ ಮನೆಗೆ ಹೋಗಿದ್ದೆ’ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.  

ಸಂಘದ ಅಧ್ಯಕ್ಷ ಬಿ.ಎನ್.ಸುಬ್ರಹ್ಮಣ್ಯ ಮಾತನಾಡುತ್ತ ‘ನಮ್ಮ ಸಂಘ ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿದೆ. ಸಂಘದ ಜಾಲತಾಣವನ್ನು ಗೆಳೆಯರಾದ ಚಂದ್ರಶೇಖರ್ ಮಾಡಿಕೊಟ್ಟಿದ್ದಾರೆ. ಸಂಘದ ಸದಸ್ಯತ್ವವನ್ನು ಅರ್ಹತೆ ಪರಿಗಣಿಸಿ ನೀಡಲಾಗುತ್ತದೆ. ನೇರವಾಗಿ ಯಾರಿಗೂ ಕೊಡುತ್ತಿಲ್ಲ. ಮುಂದಿನ ದಿನಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುವ ಆಶಯವಿದೆ’ ಎಂದರು.

ಕೊನೆಯಲ್ಲಿ ಮಾತನಾಡಿದ  ನಾಗಾಭರಣ,’ಬಹಳ ಅರ್ಥಪೂರ್ಣವಾಗಿ ಜೀವಬಿಂಬವನ್ನು ಬಿಡುಗಡೆ ಮಾಡಿದ್ದಾರೆ. ನನ್ನ ಸಿನಿಮಾ, ಜೀವನ ಪಯಣವನ್ನೂ ಸಹ ಡಿಸಿ ತನ್ನ ಬಿಂಬದಲ್ಲಿ ದಾಖಲಿಸಿ ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಪ್ರಗತಿ ಸ್ಟುಡಿಯೋ ಕಟ್ಟಿಕೊಟ್ಟಿದ್ದರೂ,.ಅದನ್ನು ಡಿಸಿ ಮುಂದುವರೆಸಿಕೊಟ್ಟಿದ್ದಾರೆ. ಆತ ಬಹುಮುಖ ವ್ಯಕ್ತಿತ್ವ ಹೊಂದಿದ ಬಿಂಬಗ್ರಾಹಿ, ಆತನಲ್ಲೊಂದು ತುಡಿತವಿತ್ತು. ಆತನಿಂದ ಬೆಳ್ಳಿಹೆಜ್ಜೆಯ ಸ್ವರೂಪ ಬೇರೆಯದೇ ರೂಪ ಪಡೆಯುತ್ತಿತ್ತು. ಆತ ದಾಖಲೆಗಳ ಸೃಷ್ಟಿಕರ್ತ. ತಪಸ್ಸನ್ನು ಮಾಡಿದಂಥ ವ್ಯಕ್ತಿ. ಲಕ್ಷಾಂತರ ಮನಸುಗಳಿಗೆ ಆತ ಬೇಕಾದವನಾಗಿ ಬದುಕಿದ್ದಾನೆಂದು ಡಿಸಿ ಸ್ಮರಿಸಿದ ನಂತರ, ಚಲನಚಿತ್ರ ಅಕಾಡೆಮಿ ಮಾಡಲಾಗದ ಹಲವು ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ. ಪತ್ರಕರ್ತರ ಸಂಘ ಹಿಂದೆಯೂ ಇತ್ತು. ನಾವೆಲ್ಲ ಆಗ ಬೇರೆಬೇರೆ ಕಾರಣಗಳಿಂದಾಗಿ ಪತ್ರಕರ್ತರ ಸಂಘವನ್ನು ಒಂದು ಮಾನದಂಡವಾಗಿ ಪರಿಗಣಿಸುತ್ತಿದ್ದೆವು’ ಎಂದು  ಹೇಳಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಮಾತನಾಡುತ್ತ ಅವರು ತಮ್ಮ ಹಾಗೂ ಡಿಸಿ ಜೊತೆಗಿನ ಒಡನಾಟದ ಸಂದರ್ಭವನ್ನು ನೆನಪು ಮಾಡಿಕೊಂಡರು. ಕಾರ್ಯಾಧ್ಯಕ್ಷರು ಹಾಗೂ ಕೃತಿಯ ಸಂಪಾದಕರೂ ಆದ ಚೇತನ್‌ ನಾಡಿಗೇರ್‌, ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಜಿ., ಕಾರ್ಯದರ್ಶಿ ಜಗದೀಶ್‌ ಕುಮಾರ್‌, ದೃಶ್ಯ ಮಾದ್ಯಮದ ಪತ್ರಕರ್ತ ಮಾಲತೇಶ್ ಜಗ್ಗಿನ್, ಅವಿನಾಶ್, ಕೇಶವಮೂರ್ತಿ, ರವಿಕಾಂತ ಕುಂದಾಪುರ, ವಿಕಾಸ ನೇಗಿಲೋಣಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಶಶಿಧರ ಚಿತ್ರದುರ್ಗ ಸ್ವಾಗತ ಮಾತುಗಳನ್ನಾಡಿದರೆ, ಶರಣು ಹುಲ್ಲೂರು ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ದೇಶ

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 31 ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ದೇಶಗಳಲ್ಲಿ ವಾಸಿಸುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹೊರತುಪಡಿಸಿ, ಪೌರತ್ವ ಕಾಯಿದೆ 1955ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗುತ್ತಿದೆ.

ಪೌರತ್ವಕ್ಕಾಗಿ ಬಂದಿರುವ ಅರ್ಜಿಗಳ ಮೇಲೆ ಶೀಗ್ರದಲ್ಲಿ ಕ್ರಮ ಕೈಗೊಂಡು ಕೂಡಲೇ ಪೌರತ್ವ ನೀಡಲು, ಒಂಬತ್ತು ರಾಜ್ಯಗಳ 31 ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ.

ಅದರಂತೆ ಛತ್ತೀಸ್ ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಹಾಗೂ ನವದೆಹಲಿಯ 31 ಕಲೆಕ್ಟರ್‌ಗಳಿಗೆ ಪೌರತ್ವ ನೀಡುವ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ’ ಎಂದು ಹೇಳಿದರು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸತತ ಮೂರು ದಿನಗಳ ಕಾಲ ಸಂಸತ್ತಿನ ಉಭಯ ಸದನಗಳನ್ನು ಅಮಾನತುಗೊಳಿಸಿದ ನಂತರ ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಮತ್ತೆ ಪ್ರಾರಂಭಗೊಂಡಿತು. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಲಾಪ ಆರಂಭಿಸುತ್ತಿದ್ದಂತೆ ಪ್ರತಿಪಕ್ಷಗಳು ‘ಅದಾನಿ ಗ್ರೂಪ್’ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿದವು.

ಇದಕ್ಕೆ ಪ್ರಶ್ನೋತ್ತರ ಸಮಯವನ್ನು ಬಳಸಿಕೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರೂ ವಿರೋಧ ಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರೆಸಿದವು. ಹೀಗಾಗಿ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಒಂದು ಗಂಟೆ ಕಾಲ ಮುಂದೂಡಿದ ಕಲಾಪವು ಮತ್ತೆ ಪುನರಾರಂಭವಾದಾಗ, ಬಿಜೆಪಿ ಲೋಕಸಭಾ ಸದಸ್ಯ ಸಿ.ಪಿ.ಜೋಶಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಅರ್ಪಿಸುವ ನಿರ್ಣಯವನ್ನು ಮಂಡಿಸಿದರು. ಇದಕ್ಕೂ ಮುನ್ನ ಲೋಕಸಭೆ ಸದಸ್ಯರು ಟರ್ಕಿ-ಸಿರಿಯಾ ಭೂಕಂಪದ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು.

ಲೋಕಸಭೆಯಲ್ಲಿ ಸಿ.ಪಿ.ಜೋಶಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದವನ್ನು ಓದುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನ ಮಧ್ಯಭಾಗಕ್ಕೆ ಬಂದು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಓಂ ಬಿರ್ಲಾ ಅವರು ಮತ್ತೆ ಸದನವನ್ನು ಮಧ್ಯಾಹ್ನ 1.30ಕ್ಕೆ ಮುಂದೂಡಿದರು.

ಇದಾದ ಬಳಿಕ ಆರಂಭವಾದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾತನಾಡಿ, ‘ಭಾರತೀಯ ಏಕತಾ ಯಾತ್ರೆಯ (ಭಾರತ್ ಜೋಡೋ ಯಾತ್ರೆ) ಸಮಯದಲ್ಲಿ ನಾವು ದೇಶಾದ್ಯಂತ ಜನರ ಧ್ವನಿಯನ್ನು ಕೇಳಿದ್ದೇವೆ. ಯಾತ್ರೆಯ ಆರಂಭದಲ್ಲಿ ಸ್ವಲ್ಪ ಕಷ್ಟವಾಗಿತ್ತು. ಯಾತ್ರೆಯ ವೇಳೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಕುಂದುಕೊರತೆಗಳನ್ನು ಆಲಿಸಿದೆವು.

ಏಕತಾ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ರೈತರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದಿವಾಸಿಗಳು ಮಸೂದೆಯ ಬಗ್ಗೆ ಪ್ರಶ್ನೆ ಮಾಡಿದರು.

ಲೋಕಸಭೆ

ಸೇನೆಯ ಮೇಲೆ ಅಗ್ನಿವೀರ್ ಯೋಜನೆ ಹೇರಲಾಗುತ್ತಿದೆ ಹಾಗೂ ಅನೇಕರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದೂ ಹೇಳಿದರು. ಕೆಲಸ ಸಿಗದವರಿಗೆ ಅದಕ್ಕಾದ ಕಾರಣವನ್ನು ವಿವರಿಸಬೇಕಿತ್ತು. ಜನರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಿ ನಂತರ ಸಮುದಾಯಕ್ಕೆ ಹಿಂತಿರುಗುವಂತೆ ಹೇಳಲಾಗುತ್ತಿದೆ ಇದು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ.

ಜನರು ಅಗ್ನಿವೀರ್ ಯೋಜನೆ ಬಗ್ಗೆಯೂ ಮಾತನಾಡಿದ್ದಾರೆ. ಭಾರತೀಯ ಯುವಕರು, 4 ವರ್ಷಗಳ ನಂತರ ತಮ್ಮನ್ನು ಹೊರಹೋಗುವಂತೆ ಕೇಳಿಕೊಂಡ ಬಗ್ಗೆ ನಮಗೆ ತಿಳಿಸಿದರು. ಅಗ್ನಿವೀರ್ ಯೋಜನೆ ಆರ್‌ಎಸ್‌ಎಸ್ ಹಾಗೂ ಗೃಹ ಸಚಿವಾಲಯದಿಂದ ಬಂದಿದೆಯೇ ಹೊರತು ಸೇನೆಯಿಂದಲ್ಲ. ಅದು ಎನ್ಎಸ್ಎ ಅಜಿತ್ ದೋವಲ್ ಮುಖಾಂತರ ಸೇನೆಯ ಮೇಲೆ ಬಲವಂತವಾಗಿ ಹೇರಿದ್ದಾರೆ ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಿದ್ದಾರೆ.

ಅಧ್ಯಕ್ಷರ ಭಾಷಣದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಉಲ್ಲೇಖಗಳಿಲ್ಲ.

ತಮಿಳುನಾಡು, ಕೇರಳದಿಂದ ಹಿಮಾಚಲ ಪ್ರದೇಶದವರೆಗೆ ಎಲ್ಲೆಲ್ಲೂ ‘ಅಧಾನಿ’ ಎಂಬ ಒಂದೇ ಹೆಸರನ್ನು ಪದೆ ಪದೇ ಕೇಳುತ್ತಿದ್ದೇವೆ. ಅದು ‘ಅದಾನಿ’, ‘ಅದಾನಿ’, ‘ಅದಾನಿ’ ಎಂಬುದಾಗಿದೆ. ‘ಅದಾನಿ ಮಾಡದ ವ್ಯವಹಾರಗಳು ಇಲ್ಲ; ಅದರಲ್ಲಿ ಅವರು ಎಂದಿಗೂ ವಿಫಲರಾಗಿಲ್ಲ’. ಇದು ಹೇಗೆ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ಪ್ರಧಾನಿಗೂ ಅದಾನಿಗೂ ಏನು ಸಂಬಂಧ? ಪ್ರತಿ ವೃತ್ತಿಯಲ್ಲೂ ಅವರು ಹೇಗೆ ಯಶಸ್ವಿಯಾಗುತ್ತಾರೆ.

ಅದಾನಿ ಈಗ 8-10 ಕ್ಷೇತ್ರಗಳಲ್ಲಿದ್ದಾರೆ. ಅವರು 2014 ರಿಂದ 2022 ರವರೆಗೆ 8 ಬಿಲಿಯನ್ ಡಾಲರ್‌ಗಳಿಂದ 140 ಬಿಲಿಯನ್ ಡಾಲರ್‌ಗೆ ಹೋಗಿದ್ದು ಹೇಗೆ ಎಂದು ಯುವಕರು ನಮ್ಮನ್ನು ಪ್ರಶ್ನಿಸುತ್ತಾರೆ.

ಕಾಶ್ಮೀರ, ಹಿಮಾಚಲ ಪ್ರದೇಶದಿಂದ ಹಿಡಿದು ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ನಾವು ನಡೆಯುವ ರಸ್ತೆಗಳ ವರೆಗೆ ಎಲ್ಲದರಲ್ಲೂ ಅದಾನಿಯೇ ಇದ್ದಾರೆ’ ಎಂದು ಅವರು ಹೇಳಿದರು.

ದೇಶ

ನವದೆಹಲಿ: ಭಾರತದ ದೊಡ್ಡ ಉದ್ಯಮಿ ಅದಾನಿಯ ಕಂಪೆನಿಗಳು ಷೇರುಪೇಟೆಯಲ್ಲಿ ವಂಚನೆ ಎಸಗಿವೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಕಂಪನಿ ಪ್ರಕಟಿಸಿರುವ ವರದಿಯಿಂದ ಭಾರತದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸುತ್ತಿದೆ.

ಈ ಹಿನ್ನಲೆಯಲ್ಲಿ ಅದಾನಿ ಗ್ರೂಪ್ ವಿಚಾರವಾಗಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಗೆ ನೀಡಿದೆ. ಈ ಮಧ್ಯೆ ಹಿಂಡೆನ್‌ಬರ್ಗ್ ಸಂಸ್ಥಾಪಕ ನಾಥನ್ ಆಂಡರ್ಸನ್ ಅವರನ್ನು ತನಿಖೆಗೆ ಕೋರಿ PIL ಸಲ್ಲಿಸಲಾಯಿತು. ಅರ್ಜಿಯನ್ನು ಫೆಬ್ರವರಿ 10 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಅದಾನಿ ಕುರಿತು ಅಮೆರಿಕ ಮೂಲದ ಹಿಂಡೆನ್‌ಬರ್ಗ್ 413 ಪುಟಗಳ ವರದಿಯನ್ನು ಪ್ರಕಟಿಸಿದೆ. ವರದಿಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ಕೂಲಂಕಷವಾಗಿ ಪರಿಶೀಲಿಸಲು ಕೇಳಲಾಗಿದೆ.