ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2023 » Page 6 of 7 » Dynamic Leader
October 23, 2024
Home 2023 April (Page 6)
ರಾಜಕೀಯ

ರಜೆಯ ದಿನಗಳಲ್ಲೂ ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ!

ಪ್ರವಾಸೋದ್ಯಮ ಮತ್ತು ಆರ್ಥಿಕ ಕ್ಷೇತ್ರಗಳನ್ನು ಉತ್ತೇಜಿಸಲು ದೇಶದ ಪ್ರಮುಖ ನಗರಗಳಲ್ಲಿ ‘ವಂದೇ ಭಾರತ್’ ರೈಲುಗಳನ್ನು ನಿರ್ವಹಿಸಲಾಗುತ್ತಿದೆ. ಆದರೆ ಈ ರೈಲುಗಳು ಸಂಚರಿಸುವ ಸ್ಥಳಗಳು ವಿವಾದಗಳಿಂದ ಕೂಡಿದೆ.

ಹಸುವಿಗೆ ಡಿಕ್ಕಿ ಹೊಡೆದಿದ್ದರಿಂದ ರೈಲಿನ ಮುಂಭಾಗದ ಭಾಗಗಳು ಜಖಂಗೊಂಡಿತು. ಅದೇ ರೀತಿ, ಪ್ರಧಾನಿ ಮೋದಿ ಪ್ರತಿ ಬಾರಿ ವಂದೇ ಭಾರತ್ ರೈಲು ಧ್ವಜಾರೋಹಣ ಮಾಡುವಾಗ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ಭಾನುವಾರವೂ ಶಾಲಾ ಸಮವಸ್ತ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿರುವುದು ಟೀಕೆಗೆ ಗುರಿಯಾಗಿದೆ. ಅದೇ ರೀತಿ ಶಾಲೆಗೆ ರಜೆ ಇರುವ ಸೆಪ್ಟೆಂಬರ್ 8 ರಂದು ಶನಿವಾರ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುವಹಾಗೆ ಕಾರ್ಯಕ್ರಮ ರೋಪಿಸಿರುವುದು ವಿವಾದಕ್ಕೀಡಾಗಿದೆ. ಶಾಲಾ ಸಮವಸ್ತ್ರದಲ್ಲಿ ಕುಳಿತ ವಿದ್ಯಾರ್ಥಿಗಳನ್ನು ಆಕಸ್ಮಿಕವಾಗಿ ಗಮನಿಸಿ ಅವರೊಂದಿಗೆ ಸಂವಾದ ನಡೆಸುವಹಾಗೆ ಸ್ಕ್ರಿಪ್ಟ್ ರೆಡಿಮಾಡಲಾಗಿದೆಯಂತೆ.

ಸಾಂದರ್ಭಿಕ ಚಿತ್ರ

ಈ ಹಿನ್ನಲೆಯಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ತೆರಳಬಹುದಾದ ‘ವಂದೇ ಭಾರತ್’ ರೈಲನ್ನು ಉದ್ಘಾಟಿಸಲು ಪ್ರಧಾನಿ ಮೋದಿಯವರು  ಏಪ್ರಿಲ್ 8 ರಂದು (ನಾಳೆ) ತಮಿಳುನಾಡಿಗೆ ಬರುತ್ತಿದ್ದಾರೆ. ತಮಿಳುನಾಡಿನೊಳಗೆ ಚಲಿಸುವ ಮೊದಲ ‘ವಂದೇ ಭಾರತ್’ ರೈಲು ಇದಾಗಿದೆ. ಇದು ದಕ್ಷಿಣ ಭಾರತದ ಎರಡನೇ ರೈಲು.

ಫೆಬ್ರವರಿ 15, 2019 ರಂದು ದೆಹಲಿ ಮತ್ತು ವಾರಣಾಸಿ ನಡುವೆ ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ 11 ವಂದೇ ಭಾರತ್ ರೈಲುಗಳು ಓಡುತ್ತಿವೆ. 8ರಂದು ಚೆನ್ನೈ-ಕೊಯಮತ್ತೂರು ನಡುವಿನ 12ನೇ ವಂದೇ ಭಾರತ್ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಮುಂದಿನ ವರ್ಷ ಮಾರ್ಚ್ ವೇಳೆಗೆ ದೇಶಾದ್ಯಂತ 100ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಪ್ರತಿ ವಂದೇ ಭಾರತ್ ರೈಲಿನಲ್ಲಿ 1 ಪ್ರಥಮ ದರ್ಜೆ ಎಸಿ ಕೋಚ್, 3 ಸೆಕೆಂಡ್ ಕ್ಲಾಸ್ ಎಸಿ ಕೋಚ್‌ಗಳು ಮತ್ತು 11 ಥರ್ಡ್ ಕ್ಲಾಸ್ ಎಸಿ ಕೋಚ್‌ಗಳಿವೆ ಎಂಬುದು ಗಮನಿಸಬೇಕಾದ ಸಂಗತಿ. The PM is also set to inaugurate the Chennai-Coimbatore Vande Bharat Express and Tambaram- Sengottai Express in Tamil Nadu on April 8, 2023.

ದೇಶ

ಏಪ್ರಿಲ್ 23 ರಂದು ಪಾಕಿಸ್ತಾನದ ರಾವಿ ನದಿ ನೀರು ಸೇರಿದಂತೆ 155 ದೇಶಗಳ ನದಿಗಳಿಂದ ಸ್ವೀಕರಿಸಲಾದ ನೀರಿನಿಂದ ಶ್ರೀರಾಮನ ಜಲಾಭಿಷೇಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಪಾಕಿಸ್ತಾನದ ರಾವಿ ನದಿಯಿಂದ ಕಲಶದಲ್ಲಿ ತಂದ ನೀರನ್ನು ಸ್ವೀಕರಿಸಿಕೊಂಡ ಹಿಂದೂಗಳ ಮುಖಾಂತರ ಅದನ್ನು ದುಬೈಗೆ ಕಳುಹಿಸಿ ಅಲ್ಲಿಂದ ದೆಹಲಿಗೆ ತರಲಾಗಿದೆ.

ಅದೇ ರೀತಿ 155 ದೇಶಗಳ ನದಿಗಳ ಪವಿತ್ರ ನೀರನ್ನು ತಂದು ಕಲಶದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿದೇಶ

ಭಾರತೀಯನಾದ ಮೊಹಮ್ಮದ್ ಬೇಗೆ ಮಿರ್ಜಾ (20) ಎಂಜಿನಿಯರಿಂಗ್ ಓದುತ್ತಿದ್ದನು. ಕಳೆದ 2019ರಲ್ಲಿ, ದುಬೈನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಮೊಹಮ್ಮದ್, ಓಮನ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು. ಈ ಪೈಕಿ 12 ಮಂದಿ ಭಾರತೀಯರು. ಮಹಮ್ಮದ್ ಸೇರಿದಂತೆ ಹಲವರಿಗೆ ಗಂಭೀರವಾದ ಗಾಯಗಳಾದವು. ಅಪಘಾತಕ್ಕೆ ಕಾರಣವಾದ ಬಸ್ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅಪಘಾತದ ಸಂತ್ರಸ್ತರಿಗೆ 3.4 ಮಿಲಿಯನ್ ದಿರ್ಹಮ್ ಪಾವತಿಸಲು ಆದೇಶಿಸಲಾಯಿತು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಎರಡು ತಿಂಗಳಿಗೂ ಹೆಚ್ಚು ಕಾಲ ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಆತನು 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದನು. ಆ ಬಳಿಕ ಪುನರ್ವಸತಿ ಕೇಂದ್ರದಲ್ಲಿಯೂ ಚಿಕಿತ್ಸೆ ಪಡೆದಿದ್ದ.

ಅಪಘಾತದಲ್ಲಿ ಮೊಹಮ್ಮದ್ ಮಿದುಳಿಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಆತನ ತಲೆಬುರುಡೆ, ಕಿವಿ, ಬಾಯಿ, ಶ್ವಾಸಕೋಶಗಳು, ತೋಳುಗಳು ಮತ್ತು ಕಾಲುಗಳಿಗೆ ಆಗಿರುವ ಗಾಯಗಳನ್ನೂ ವಿಧಿವಿಜ್ಞಾನ ವೈದ್ಯಕೀಯ ತಜ್ಞರು ಮೌಲ್ಯಮಾಪನ ಮಾಡಿಸಿದರು.

ಮೊಹಮ್ಮದ್‌ಗೆ ಶೇಕಡಾ 50ರಷ್ಟು ಮಿದುಳು ಶಾಶ್ವತ ಹಾನಿಯಾಗಿದೆ ಎಂಬ ವರದಿಯನ್ನು ಆಧರಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್‌ ಸುಪ್ರೀಂ ಕೋರ್ಟ್ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿದೆ.

ಅದರಂತೆ ಮೊಹಮ್ಮದ್ ಗೆ 11 ಕೋಟಿ ರೂ.ಪರಿಹಾರ ನೀಡುವಂತೆ ಆದೇಶಿಸಲಾಗಿದೆ.   

ರಾಜಕೀಯ

ಮುಂಬೈ: ಸಿಬಿಐ ಸಂಸ್ಥೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರವರ ಪಂಜರದ ಗಿಣಿ ಎಂದು ಶಿವಸೇನೆ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.

ಪ್ರತಿಪಕ್ಷ ನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಕಳೆದ ತಿಂಗಳು ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 9 ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಪ್ರಧಾನಿ ನರೆಂದ್ರ ಮೋದಿಯವರು ‘ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು, ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು. ‘ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಿಬಿಐ ವ್ಯವಸ್ಥೆಯಂತಹ ಸಂಸ್ಠೆಯ ಅಗತ್ಯವಿದೆ’ ಎಂದೂ ಹೇಳಿದ್ದರು.  

ಈ ಹಿನ್ನಲೆಯಲ್ಲಿ ಶಿವಸೇನೆ (ಯುಬಿಟಿ) ಪಕ್ಷದ ನಿಯತಕಾಲಿಕೆಯಾದ ಸಾಮ್ನಾದಲ್ಲಿ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅವರು ‘ಸಿಬಿಐ ಸಂಸ್ಥೆಯು ಮೋದಿ ಮತ್ತು ಅಮಿತ್ ಶಾ ಅವರ ಪಂಜರದ ಗಿಣಿಯಾಗಿದೆ’ ಎಂದು ಟೀಕಿಸಿದ್ದಾರೆ. ‘ಅಧಿಕಾರಿಗಳು ಯಾರೇ ಭ್ರಷ್ಟಾಚಾರ ಮಾಡಿದರೂ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿದ್ದರೂ ಸಿಬಿಐ ಸಂಸ್ಥೆಯು ಮೋದಿ ಮತ್ತು ಅಮಿತ್ ಶಾ ರವರ ಪಂಜರದ ಗಿಣಿಯೇ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ’ ಎಂದು ಹೇಳಿದ್ದಾರೆ.

ಉದ್ಯೋಗ

ಕೆಲಸದ ವಿವರ:

1) Junior Engineer (Civil).
ಜೂನಿಯರ್ ಇಂಜಿನಿಯರ್ (ಸಿವಿಲ್). 13 ಸ್ಥಾನಗಳು (ಸಾಮಾನ್ಯ-6, OBC-4, SC-1, ST-1, ಆರ್ಥಿಕವಾಗಿ ಹಿಂದುಳಿದ-1). ವಯಸ್ಸು: 18 ರಿಂದ 27 ರ ನಡುವೆ. ವೇತನ: ರೂ.35,400 – 1,12,400.

2) Junior Accounts Officer:
ಜೂನಿಯರ್ ಅಕೌಂಟ್ಸ್ ಆಫೀಸರ್: 1 ಪೋಸ್ಟ್ (ಸಾಮಾನ್ಯ). ವಯಸ್ಸು: 21 ರಿಂದ 30 ರ ನಡುವೆ. ವೇತನ: ರೂ.35,400 – 1,12,400.

3) Draftsman Grade III:
ಡ್ರಾಫ್ಟ್ಸ್‌ಮನ್ ಗ್ರೇಡ್ III: 6 ಸೀಟುಗಳು (ಸಾಮಾನ್ಯ-2, OBC-1, SC-1, ST-1, ಆರ್ಥಿಕವಾಗಿ ಹಿಂದುಳಿದ-1). ವಯಸ್ಸು: 18 ರಿಂದ 27 ರ ನಡುವೆ. ವೇತನ: ರೂ.25,500-81,100.

4) Upper Division Clerk:
ಅಪ್ಪರ್ ಡಿವಿಷನ್ ಕ್ಲರ್ಕ್: 7 ಹುದ್ದೆಗಳು (ಸಾಮಾನ್ಯ-4, OBC-2, SC-1). ವಯಸ್ಸು: 18 ರಿಂದ 27 ರ ನಡುವೆ. ವೇತನ: ರೂ.25,500-81,100.

5) Stenographer Grade II:
ಸ್ಟೆನೋಗ್ರಾಫರ್ ಗ್ರೇಡ್ II: 9 ಹುದ್ದೆಗಳು (ಸಾಮಾನ್ಯ-2, OBC-3, SC-2, ಆರ್ಥಿಕವಾಗಿ ಹಿಂದುಳಿದ-2) ವಯಸ್ಸು: 18 ರಿಂದ 27 ರ ನಡುವೆ. ವೇತನ: ರೂ.25,500-81,100.

6) Lower Division Clerk:
ಲೋವರ್ ಡಿವಿಷನ್ ಕ್ಲರ್ಕ್: 4 ಹುದ್ದೆಗಳು (ಸಾಮಾನ್ಯ-1, SC-1, ಆರ್ಥಿಕವಾಗಿ ಹಿಂದುಳಿದ-1, ಅಂಗವಿಕಲರು-1). ವಯಸ್ಸು: 18 ರಿಂದ 27 ರ ನಡುವೆ. ವೇತನ: ರೂ.19,900-63,200. ಮೀಸಲಾತಿ ವರ್ಗಕ್ಕೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆ, ಪರೀಕ್ಷಾ ವಿಧಾನ, ಶುಲ್ಕ, ಆನ್‌ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನದಂತಹ ವಿವರಗಳಿಗಾಗಿ www.nwda.gov.in ಗೆ ಭೇಟಿ ನೀಡಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.4.2023.

ಶಿಕ್ಷಣ

WhatsApp ನಲ್ಲಿ ಕರೆ ಮತ್ತು ಸ್ಟೇಟಸ್ ಸೇರಿದಂತೆ Navigation bar ಸೌಲಭ್ಯಗಳು ಐಫೋನ್‌ನಲ್ಲಿರುವಂತೆ ಕೆಳಗೆ ಬದಲಾಯಿಸಲಾಗುವುದು ಎಂದು ವರದಿಯಾಗಿದೆ.

ಮೆಟಾ ಕಂಪನಿಯ ಒಡೆತನದ ವಾಟ್ಸಾಪ್ ಅನ್ನು ಅನೇಕ ಜನರು ಬಳಸುತ್ತಾರೆ. ವಾಟ್ಸ್ ಆಪ್ ಕಂಪನಿಯೂ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದೆ. ಆ ಮೂಲಕ ಇದೀಗ ವಾಟ್ಸ್ ಆಪ್ Navigation bar ಫೀಚರ್ ಅನ್ನು ಐಫೋನ್ ನಲ್ಲಿರುವಂತೆ ಕೆಳಭಾಗದ ಪರದೆಯ ಮೇಲೂ ತರಲಿದೆ ಎನ್ನಲಾಗುತ್ತಿದೆ chat, calls, communities ಮತ್ತು status ಟ್ಯಾಬ್ ಸೌಲಭ್ಯಗಳನ್ನು ಪರದೆಯ ಕೆಳಭಾಗಕ್ಕೆ (bottom of the screen) ಸರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ ಬದಲಾವಣೆ ತರಲಾಗುವುದು ಎನ್ನಲಾಗುತ್ತಿದೆ. ಈ ಸೌಲಭ್ಯಗಳು ಈಗಾಗಲೇ ಐಫೋನ್‌ನಲ್ಲಿ ಲಭ್ಯವಿದ್ದರೂ, ಅದನ್ನು ಈಗ ಆಂಡ್ರಾಯ್ಡ್‌ಗೂ ತರಲಾಗುತ್ತಿದೆ.

ಮತ್ತು ಈ ಸೌಲಭ್ಯವನ್ನು ಪ್ರಸ್ತುತ ಪರೀಕ್ಷಾ ಕ್ರಮದಲ್ಲಿ ಅಳವಡಿಸಲಾಗಿದೆ. ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ WhatsApp ಬೀಟಾ ಆವೃತ್ತಿಯಲ್ಲಿ ಅಳವಡಿಸಲಾಗಿದೆ (v2.23.8.4). ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

WhatsApp ಈ ವರ್ಷದ ಆರಂಭದಿಂದ ವಿವಿಧ ನವೀಕರಣಗಳನ್ನು ಹೊರತರುತ್ತಿದೆ. ಈ ಮೂಲಕ ಪ್ರತ್ಯೇಕ chat ಅಂಶವನ್ನು ಲಾಕ್ ಮಾಡುವ ಸೌಲಭ್ಯ, status ನಲ್ಲಿ ವಾಯ್ಸ್ ಮೆಸೇಜ್ ಹಾಕುವ ಸೌಲಭ್ಯ ಹೀಗೆ ನಾನಾ ರೀತಿಯ Update ಗಳನ್ನು ಬಿಡುಗಡೆ ಮಾಡಿದ್ದಾರೆ.

ರಾಜಕೀಯ

ವಿಜಯಪುರ: (ಹಗರಬೊಮ್ಮನಳ್ಳಿ) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ರಣಕಹಳೆ ಊದಿದೆ. ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಎಎಪಿ ಹಾಗೂ ಗಾಲಿ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ನೌಕರರು ಅನೇಕರು ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಲಕ್ಷ್ಮಿ ನಾರಾಯಣ ಬಿಜೆಪಿ ಸೇರಿದ್ದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಲಕ್ಷ್ಮೀ ನಾರಾಯಣ ವಿಜಯನಗರದ ಬಿಜೆಪಿ ಕಚೇರಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2023ರ ಚುನಾವಣೆಯಲ್ಲಿ ಅವರು ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲಕ್ಷ್ಮೀ ನಾರಾಯಣ ಹಲವು ದಿನಗಳಿಂದ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಂಘಟನೆ, ಕಾರ್ಯಕರ್ತರ ಭೇಟಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೂಡಾ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಿವೃತ್ತರಾದ ಬಳಿಕ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಬಿಬಿಎಂಪಿ ಆಯುಕ್ತರಾಗಿ, ಕರ್ನಾಟಕ ಗೃಹ ಮಂಡಳಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಬಯಸಿರುವ ಇವರಿಗೆ, ಈ ಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೆಯಾಗದಿರುವುದು ವರದಾನವಾಗಿದ್ದು, ಹಲವು ಇಲಾಖೆಯಲ್ಲಿ ಕೆಸಲ ಮಾಡಿದ ಇವರು ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ಧಿ ನಾಗಲೋಟಕ್ಕೆ ಸಾಗುವುದು ಎಂಬ ಅಭಿಪ್ರಾಯ ಕ್ಷೇತ್ರದ ಜನತೆಯದಾಗಿದೆ. ಹಾಗಾಂತ ಇಲ್ಲಿ ಟಿಕೆಟಿಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಡದಿರುವುದು ಕೂಡ ಪಕ್ಷಕ್ಕೆ ವರದಾನವಾಗಲಿದೆ.

2018ರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರಾದ ಭೀಮಾ ನಾಯ್ಕ್ ವಿರುದ್ಧ ಕೆ.ನೇಮಿರಾಜ್ ನಾಯಕ್ ಬಿಜೆಪಿ ಅಭ್ಯರ್ಥಿಯಾಗಿ 71105 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಳೆದೆರಡು ಬಾರಿ ಶಾಸಕರಾದ ಭೀಮಾ ನಾಯ್ಕ್ ರವರಿಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಹಾಲಿ ನಗರ ಸಭೆ ಸದಸ್ಯರ ವಿರೋಧವಿದೆ ಎಂದು ಹೇಳಲಾಗುತ್ತಿದ್ದು, ತಾವು ಖರೀದಿ ಮಾಡಿರುವ ಜಾಗದಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇಲ್ಲಿ ಜೆಡಿಎಸ್ ಕೂಡ ಪ್ರಬಲವಾಗಿ ಸ್ಪರ್ಧೆಯೊಡ್ಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಮೂರನೇ ಬಾರಿಗೆ ಆಯ್ಕೆಯಾಗುವ ಭೀಮಾ ನಾಯ್ಕ್ ರವರಿಗೆ ಬಿಜೆಪಿ ಕಬ್ಬಿಣದ ಕಡಲೆಕಾಯಿಯಾಗುವುದಂತೂ ಅಲ್ಲಗಳೆಯುವಂತಿಲ್ಲ.

ರಾಜಕೀಯ

“ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲವನ್ನು ನೋಡಿಕೊಂಡು ಮೌನವಾಗಿದೆ. ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತಿದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನವಾಗಿದೆ.

ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಬಿಜೆಪಿ ಸರ್ಕಾರ ‘ಶಿಂಧೆ ಸೂತ್ರದ ಗೊಂಬೆ’ ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?

ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ.

ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?” ಎಂದು ಮಹಾರಾಷ್ಟ್ರ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ತಮ್ಮ ಆಕ್ರೊಷವನ್ನು ವ್ಯಕ್ತ ಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. Ahead of elections in Karnataka, Maharashtra issues order to extend medical benefits to border villages.

ದೇಶ

ಈಗಾಗಲೇ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ, ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿಲ್ಲ ಎಂದು CMIE ವರದಿ ಬೊಟ್ಟು ಮಾಡಿದೆ.

ಪ್ರಪಂಚದಾದ್ಯಂತ ಆರ್ಥಿಕ ಮಂದಗತಿಯಿಂದಾಗಿ ಕಂಪನಿಗಳಲ್ಲಿ ವಜಾಗೊಳಿಸುವ ಪ್ರಕ್ರಿಯೆಗಳು ತೀವ್ರಗೊಂಡಿವೆ. ಈ ಹಿನ್ನಲೆಯಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ ಎಂದು ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಪ್ರಕಟಿಸಿದೆ.

ಈಗಾಗಲೇ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ, ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿಲ್ಲ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತಿದೆ.

ಇದರ ಬಗ್ಗೆ ವಿವರಣೆ ನೀಡಿದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್, “ಜಾಗತಿಕ ಮಂದಗತಿಯು, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕದ ನಡುವೆ, ಭಾರತದ ನಿರುದ್ಯೋಗ ದರವು ಕಳೆದ ಮೂರು ತಿಂಗಳಲ್ಲಿ ಗರಿಷ್ಠ ಮಾರ್ಚ್‌ ತಿಂಗಳಲ್ಲಿ ಶೇ.7.8ಕ್ಕೆ ಏರಿಕೆಯಾಗಿದೆ.

ಭಾರತದ ಆರ್ಥಿಕ ವೀಕ್ಷಣಾಲಯದ ಅಂಕಿ ಅಂಶಗಳ ಪ್ರಕಾರ ನಗರ ನಿರುದ್ಯೋಗವು ಶೇ.8.4ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಶೇ.7.5 ರಷ್ಟಿದೆ. ಫೆಬ್ರವರಿಯಲ್ಲಿ ಶೇ.7.5 ಇದ್ದ ನಿರುದ್ಯೋಗ ದರವು ಮಾರ್ಚ್‌ ವೇಳೆಗೆ ಶೇ.7.8ಕ್ಕೆ ಏರಿಕೆಯಾಗಿದೆ.

ರಾಜ್ಯವಾರು ನಿರುದ್ಯೋಗ ವಿವರಗಳಲ್ಲಿ ಗರಿಷ್ಠವಾಗಿ, ಹರಿಯಾಣ-26.8%, ರಾಜಸ್ಥಾನ-26.4%, ಜಮ್ಮು ಮತ್ತು ಕಾಶ್ಮೀರ-23.1%, ಸಿಕ್ಕಿಂ-20.7%, ಬಿಹಾರ-17.6%, ಜಾರ್ಖಂಡ್-17.5%. ಛತ್ತೀಸ್‌ಗಢದಲ್ಲಿ ನಿರುದ್ಯೋಗ ಕನಿಷ್ಠ-0.8% ಮತ್ತು ಪುದುಚೇರಿ-1.5% ಆಗಿರುತ್ತದೆ. ಮತ್ತು ಉತ್ತರಾಖಂಡ, ಗುಜರಾತ್, ಕರ್ನಾಟಕ, ಮೇಘಾಲಯ ಮತ್ತು ಒಡಿಶಾ ರಾಜ್ಯಗಳಲ್ಲಿ ಕನಿಷ್ಠ ನಿರುದ್ಯೋಗವಿದೆ” ಎಂದು ಅವರು ಹೇಳಿದರು.

India’s unemployment rate rose for the second consecutive month in March 2023 and is now at 7.8 percent, data from Centre for Monitoring Indian Economy (CMIE) shows. The unemployment rate in urban markets is higher at 8.51 percent compared with 7.47 percent in rural India.

ದೇಶ

ತಿರುವನಂತಪುರಂ: ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಕೇರಳ ರಾಜ್ಯದ ಪಾಲಕ್ಕಾಡ್‌ನ ಅಟ್ಟಪ್ಪಾಡಿ ಕಡುಗುಮನ್ನ ಬುಡಕಟ್ಟು ಗ್ರಾಮದ ಮಲ್ಲನ್ ಅವರ ಪುತ್ರನಾದ ಮಧು, ಮಾನಸಿಕ ಅಸ್ವಸ್ಥನಾಗಿದ್ದು, ಗುಹೆ ಒಂದರಲ್ಲಿ ವಾಸಿಸುತ್ತಿದ್ದನು. 2018 ಫೆಬ್ರವರಿ 22 ರಂದು ಹಸಿವಿನಿಂದ ಬಳಲುತ್ತಿದ್ದ ಮಧು, ಮುಕ್ಕಲಿ ಪ್ರದೇಶದ ಅಂಗಡಿಯೊಂದರಲ್ಲಿ ಆಹಾರ ಕದ್ದನೆಂದು ಹೇಳಿ; ಆತನ ಕೈಕಾಲುಗಳನ್ನು ಕಟ್ಟಿ ನೆಲಕ್ಕೆ ಎಳೆದೊಯ್ದು ಹೊಡೆದು ಕೊಂದ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿತ್ತು.

ದೇಹದ ಮೇಲೆ 15 ಕಡೆ ಗಂಭೀರವಾದ ಗಾಯಗಳಾಗಿದ್ದರಿಂದಲೇ ಮಧು ಸಾವನ್ನಪ್ಪಲು ಕಾರಣವಾಯಿತು ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಆ ಭಾಗದ ವರ್ತಕರು, ಕಾರು ಚಾಲಕರು ಸೇರಿ ಒಟ್ಟು 16 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಇದರಲ್ಲಿ ಪ್ರಥಮ ಅಪರಾಧಿಗಳಾದ ಕಾರು ಚಾಲಕ ಸಂಸುದ್ದೀನ್, ವರ್ತಕನಾದ ಹೀಸೈನ್ ಮತ್ತು ಮುನೀರ್ ಅವರನ್ನು ಮೊದಲ ಮೂರು ಅಪರಾಧಿಗಳಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ 16 ಜನರ ವಿರುದ್ಧ ಕೊಲೆ, ಆದಿವಾಸಿಗಳ ಮೇಲೆ ಹಲ್ಲೆ ಮುಂತಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 129 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.

5 ವರ್ಷಗಳ ಕಾಲ ವಿಚಾರಣೆ ನಡೆಸಲಾದ ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ.ರತೀಶ್ ಕುಮಾರ್ ಇಂದು ತೀರ್ಪು ನೀಡಿದರು. ಅಟ್ಟಪಾಡಿ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀದಲಾಗಿದೆ. ಹುಸೇನ್, ಮರೈಕ್ಕಾರ್, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕ್ಕರ್, ಸಿದ್ದಿಕಿ, ಉಬೈದ್, ನಜೀಬ್, ಜೈಜುಮೋನ್, ಮುನೀರ್, ಸಜೀವ್, ಸತೀಶ್, ಹರೀಶ್ ಮತ್ತು ಬಿಜು ಎಂಬ 14 ಮಂದಿಯನ್ನು ಐಪಿಸಿ 304(2) ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಅನೀಶ್ ಮತ್ತು ಅಬ್ದುಲ್ ಕರೀಂ ಅವರನ್ನು ಖುಲಾಸೆ ಮಾಡಲಾಗಿದೆ. 14 ಆರೋಪಿಗಳಿಗೆ ಶಿಕ್ಷೆಯ ವಿವರವನ್ನು ನಾಳೆ ಪ್ರಕಟಿಸಲಾಗುತ್ತದೆ.