ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2023 » Page 7 of 7 » Dynamic Leader
October 23, 2024
Home 2023 April (Page 7)
ದೇಶ ರಾಜಕೀಯ

ಬಿಹಾರ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಮೇಲೆ ಪ್ರತಿದಿನ ದಾಳಿಗಳು ನಡೆಯುತ್ತಲೇ ಇವೆ. CAA ಯಂತಹ ಕಠಿಣ ಕಾನೂನುಗಳನ್ನು ತರುವ ಮೂಲಕ ಅಲ್ಪಸಂಖ್ಯಾತರನ್ನು ಭಾರತದಿಂದ ಪ್ರತ್ಯೇಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದು ಒಂದೆಡೆಯಾದರೆ ಮತ್ತೊಂದೆಡೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲವು ಹಿಂದೂ ಪರ ಸಂಘಟನೆಗಳು ಹಿಂಸಾಚಾರಕ್ಕೆ ಮುಗಿಬಿದ್ದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲೇ ಹೆಚ್ಚು ಧಾರ್ಮಿಕ ಸಂಘರ್ಷಗಳು ನಡೆಯುತ್ತವೆ. ಆದರೆ ಈಗ ಬಿಜೆಪಿ ಇಲ್ಲದ ರಾಜ್ಯಗಳಲ್ಲೂ ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ.

ಈ ರೀತಿಯಾಗಿ, ಉತ್ತರ ಪ್ರದೇಶದಲ್ಲಿ ಈ ವರ್ಷ ಶ್ರೀರಾಮನವಮಿ ಮೆರವಣಿಗೆಯಲ್ಲಿ, ಕೆಲವರು ಮಸೀದಿಯ ಹೊರಗಿನ ಅಂಗಡಿಗಳ ಮೇಲೆ ಹತ್ತಿ, ಅಲ್ಲಿ ಕೇಸರಿ ಧ್ವಜಗಳನ್ನು ಕಟ್ಟಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ಆತಂಕಕ್ಕೆ ಕಾರ್ಣವಾಗಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ನಡೆದ ಶ್ರೀರಾಮನವಮಿ ಮೆರವಣಿಗೆಯಲ್ಲಿ ಘರ್ಷಣೆ ನಡೆದು, ಮದರಸಾಕ್ಕೆ ಬೆಂಕಿ ಹಚ್ಚಲಾದ ಘಟನೆ ದುರಂತಕ್ಕೆ ಕಾರಣವಾಗಿದೆ. ಈ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದರೆ, ಒಬ್ಬರು ಸಾವನ್ನಪ್ಪಿದ್ದಾರೆ.

ಹೀಗಿರುವಾಗ ಬಿಹಾರದಲ್ಲಿ ಶ್ರೀರಾಮನವಮಿ ಮೆರವಣಿಗೆ ವೇಳೆ ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹೈದರ್ ಅಜಮ್ ಶೋರೂಂ ಲೂಟಿ ಮಾಡಿರುವ ಘಟನೆ ಸಂಚಲನ ಮೂಡಿಸಿದೆ. ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ ಹಾಗೂ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮ ಲಿಮಿಟೆಡ್ (ಮಹಾರಾಷ್ಟ್ರ ಸರ್ಕಾರ, ರಾಜ್ಯ ಸಚಿವರು) ಮಾಜಿ ಅಧ್ಯಕ್ಷ ಹೈದರ್ ಅಜಮ್, ಬಿಹಾರದಲ್ಲಿ ಎಲೆಕ್ಟ್ರಾನಿಕ್ಸ್ ಶೋ ರೂಂ ನಡೆಸುತ್ತಿದ್ದಾರೆ. ರಾಮನವಮಿಯ ದಿನದಂದು ನಡೆದ ಹಿಂಸಾಚಾರದಲ್ಲಿ ಇವರ ಮಾಲೀಕತ್ವದ ಶೋರೂಮ್ ಗೆ ನುಗ್ಗಿದ ಹಿಂದೂ ಪರ ಸಂಘಟನೆಯ ಕೆಲವರು ಅಂಗಡಿಯನ್ನು ಲೂಟಿ ಮಾಡಿ ಹೋಗಿದ್ದಾರೆ. ಅವರ ಅಂಗಡಿಯಲ್ಲಿದ್ದ ಮೊಬೈಲ್‌, ಟಿವಿ ಸೆಟ್‌ಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಬಿಡುಗಡೆಯಾಗಿ ಆಶ್ಚರ್ಯವನ್ನು ಉಂಟು ಮಾಡಿದೆ.

ದೇಶ ರಾಜಕೀಯ

ಸೂರತ್: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ, ಜಾಮೀನನ್ನೂ ನೀಡಲಾಯಿತು. 2 ವರ್ಷಗಳ ಜೈಲು ಶಿಕ್ಷೆ ಪ್ರಕಟಣೆಯ ಮರುದಿನ, ರಾಹುಲ್ ಗಾಂಧಿಯನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು.

ಈ ಹಿನ್ನಲೆಯಲ್ಲಿ, ಇಂದು ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ವಿಧಿಸಿರುವ 2 ವರ್ಷಗಳ ಜೈಲು ಶಿಕ್ಷೆಯ ವಿರುದ್ಧ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ಜತೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹಾಗೂ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಜಾಮೀನು ವಿಸ್ತರಿಸುವಂತೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದರು.

ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಾಗಲ್, ಸುಖವಿಂದರ್ ಸಿಂಗ್ ಸುಗು ಮತ್ತು ಪಕ್ಷದ ಪ್ರಮುಖ ನಾಯಕರು ನ್ಯಾಯಾಲಯಕ್ಕೆ ಬಂದಿದ್ದರು.

ರಾಹುಲ್ ಗಾಂಧಿಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು, ಏಪ್ರಿಲ್ 13 ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿತು. ಅಲ್ಲಿಯವರೆಗೆ ರಾಹುಲ್ ಗಾಂಧಿಯ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ವಿಸ್ತರಿಸಿ ಆದೇಶ ಹೊರಡಿಸಿತು. ಮುಂದಿನ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗುವ ಅಗತ್ಯವಿಲ್ಲ ಎಂದೂ ತಿಳಿಸಲಾಗಿದೆ.

ರಾಜಕೀಯ

ದೆಹಲಿ: ಬಿಜೆಪಿ ದುರ್ಬಲ ಎಂದೆನಿಸಿದಾಗಲೆಲ್ಲ ಅದು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.! ಕಳೆದ ವಾರ ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸಲಾಯಿತು. ಈ ಸಂಭ್ರಮಾಚರಣೆಯಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದವು.

ಬಿಹಾರದ ನಳಂದಾ ಮತ್ತು ಸಸ್ಸಾರಾಮ್ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಪ್ರದೇಶಗಳಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಮನವಮಿ ಹಬ್ಬದ ವೇಳೆ ನಡೆದ ಹಿಂಸಾಚಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿ ಮಾತನಾಡಿದರು:

“ಬಿಜೆಪಿ ದುರ್ಬಲ ಎಂದೆನಿಸಿದಾಗಲೆಲ್ಲ ಹಿಂಸೆಯನ್ನು ಪ್ರಚೋದಿಸುತ್ತದೆ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ನ್ಯಾಯಾಲಯದ ಆದೇಶದ ವಿರುದ್ಧ ವಾದ ಮಾಡಲು ಸಾಧ್ಯವಿಲ್ಲ; ಆದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬಹುದು” ಎಂದು ಹೇಳಿದರು. “ಅವರು (ಕೇಂದ್ರ) ಅದಾನಿ ವಿಷಯದಲ್ಲಿ ಜಂಟಿ ಸದನ ಸಮಿತಿ (ಜೆಪಿಸಿ) ನಿರ್ಮಿಸಲು ಬಯಸುವುದಿಲ್ಲ. ಸಂಸತ್ತಿನ ಕಲಾಪ ನಡೆಯುವುದಿಲ್ಲ ಎಂದು ಯೋಜನೆ ರೂಪಿಸಿದ್ದಾರೆ” ಎಂದೂ ಅವರು ಹೇಳಿದರು.

ರಾಜಕೀಯ

ಕನ್ನಡಕ್ಕೆ: ಡಿ.ಸಿ.ಪ್ರಕಾಶ್
ಸಂಪಾದಕರು, ಡೈನಾಮಿಕ್ ಲೀಡರ್

ಕಳೆದ 4 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ 50 ಸಾರ್ವಜನಿಕ ಸಭೆಗಳಲ್ಲಿ ದ್ವೇಷದ ಮಾತುಗಳನ್ನು ಆಡಿರುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲೂ ದ್ವೇಷದ ಭಾಷಣದ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪ್ರಕರಣಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಇದರ ಕುರಿತು ಮಾತನಾಡಿದ ನ್ಯಾಯಾಧೀಶರು, “ಪ್ರತಿಯೊಬ್ಬರೂ ದ್ವೇಷದ ಮಾತುಗಳನ್ನು ಆಡುವುದನ್ನು ನಿಯಂತ್ರಿಸಿಕೊಳ್ಳಬೇಕು. ರಾಜಕಾರಣಿಗಳು ರಾಜಕೀಯವನ್ನು ಧರ್ಮದೊಂದಿಗೆ ಬೆರೆಸಿದಾಗ ದೊಡ್ಡ ಸಮಸ್ಯೆ ಎದುರಾಗುತ್ತದೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದಾಗ ಇದು ಕೊನೆಗೊಳ್ಳುತ್ತದೆ. ರಾಜಕಾರಣಿಗಳು ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ಇದೆಲ್ಲವೂ ನಿಲ್ಲುತ್ತದೆ. ರಾಜಕೀಯವನ್ನು ಧರ್ಮದೊಂದಿಗೆ ಬೆರೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನಾವು ಇತ್ತೀಚಿನ ತೀರ್ಪಿನಲ್ಲಿ ಹೇಳಿದ್ದೇವೆ. ಟಿವಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ದ್ವೇಷದ ಮಾತುಗಳು ಹೆಚ್ಚಾಗಿವೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೋಡಬೇಕು? ಮಾತಿನಲ್ಲಿ ಸ್ವಲ್ಪ ಸಂಯಮ ಇರಬೇಕಲ್ಲವೇ? ಇಲ್ಲದಿದ್ದರೆ ನಮಗೆ ಬೇಕಾದ ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ಈ ಮಾತುಗಳಿಂದ ನಮಗೆ ಯಾವ ರೀತಿಯ ಆನಂದ ಸಿಗುತ್ತದೆ” ಎಂದು ನ್ಯಾಯಾಧೀಶರು ತಮ್ಮ ಕಳವಳವನ್ನು ಕಟುವಾದ ಮಾತುಗಳಲ್ಲಿ ಎಚ್ಚರಿಕೆಯ ಭಾವದಿಂದ ವ್ಯಕ್ತಪಡಿಸಿದ್ದಾರೆ.

“ಇತರರನ್ನು ಅವಹೇಳನ ಮಾಡುವ ಉದ್ದೇಶದಿಂದ ‘ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇತರ ಸಮುದಾಯಗಳೂ ಈ ದೇಶವನ್ನು ಆರಿಸಿಕೊಂಡಿವೆ. ಅವರೂ ನಿಮ್ಮ ಸಹೋದರ ಸಹೋದರಿಯರಂತೆ. ಅವರನ್ನು ಅವಮಾನಿಸುವ ಮತ್ತು ದೇಶದ ಕಾನೂನನ್ನು ಉಲ್ಲಂಘಿಸುವ ಹಕ್ಕು ನಿಮಗೆ ಇದೆಯೇ? ನೆಲದ ಕಾನೂನನ್ನು ಮುರಿದರೆ ಅದು ಇಟ್ಟಿಗೆಯಂತೆ ನಿಮ್ಮ ತಲೆಯ ಮೇಲೆ ಬೀಳುತ್ತದೆ. ನಿಜವಾದ ಅಭಿವೃದ್ಧಿ ಎಂದರೆ ನಮ್ಮ ದೇಶವನ್ನು ಸೂಪರ್ ಪವರ್ ಮಾಡುವುದು. ಅದಕ್ಕಾಗಿ ನಾವು ಕಾನೂನಿನ ನಿಯಮವನ್ನು ಗೌರವಿಸಬೇಕು. ಆಗ ಮಾತ್ರ ನಾವು ನಮ್ಮ ದೇಶವನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಬಹುದು” ಎಂದು ನ್ಯಾಯಾಧೀಶರು ಬುದ್ಧಿಮಾತು ಹೇಳಿದ್ದಾರೆ.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಮಾತುಗಳನ್ನು ಹಾಡುತ್ತರೆ. ಈ ಬಗ್ಗೆ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆ ನೀಡಿದ್ದಾರೆ. ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಹಿಂಸಾಚಾರ ನಡೆಯುತ್ತಿದೆ. ಉತ್ತರ ಪ್ರದೇಶವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ಪ್ರಜಾಸತ್ತಾತ್ಮಕ ಶಕ್ತಿಗಳು ತಮ್ಮ ಖಂಡನೆ ಮತ್ತು ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತವೆ.

‘ದೇಶದ ಸಂವಿಧಾನವನ್ನು ಬಲಿಪೀಠದ ಮೇಲೆ ಇಟ್ಟಂತೆ ಆಗಿದೆ. ಬೆಳೆಯುತ್ತಿರುವ ದ್ವೇಷ ರಾಜಕಾರಣವನ್ನು ಕೊನೆಗಾಣಿಸಿ’ ಎಂದು ಕಳೆದ ವರ್ಷ ಮೇ ತಿಂಗಳಲ್ಲಿ 108 ಮಂದಿ ಪ್ರಧಾನಿ ಮೋದಿಗೆ ಪತ್ರ ಬರೆದು ಸಹಿ ಹಾಕಿದ್ದರು. ಮಾಜಿ ನ್ಯಾಯಾಧೀಶರು, ಮಾಜಿ ಲೆಫ್ಟಿನೆಂಟ್ ಗವರ್ನರ್‌ಗಳು, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಈ ಪತ್ರಕ್ಕೆ ಸಹಿ ಹಾಕಿದ್ದರು. ಹಾಗಾಗಿ ಇದು ಅನಾಮಧೇಯ ಪತ್ರವಲ್ಲ. ಅದನ್ನೇ ಈಗ ನ್ಯಾಯಾಲಯ ಹೇಳುತ್ತಿದೆ.

ಸುಪ್ರೀಂ ಕೋರ್ಟ್ ಈ ರೀತಿ ಹೇಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ, ‘ದ್ವೇಷದ ಭಾಷಣಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ದೂರುಗಳಿಗಾಗಿ ಕಾಯಬಾರದು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದ್ದರು. ‘ಮುಸ್ಲಿಮರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು’ ಎಂದು ಬಿಜೆಪಿ ಸಂಸದ ಮಾಡಿದ ದ್ವೇಶ ಭಾಷಣದ ವಿರುದ್ಧ ದಾಖಲಾದ ಪ್ರಕರಣವದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ರಿಷಿಕೇಶ್ ರಾಯ್ ಪೀಠವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು.

“ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಭಾರತದಲ್ಲಿ ಇಂತಹ ಭಾಷಣಗಳು ಅತ್ಯಂತ ಖಂಡನೀಯವಾದದ್ದು. ಮೂಲಭೂತ ಹಕ್ಕುಗಳು ಮತ್ತು ಕಾನೂನಿನ ನಿಯಮವನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯಾಲಯಗಳಿವೆ. ದೇಶದ ಜಾತ್ಯತೀತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯವಾದ ಆದೇಶಗಳನ್ನು ಹೊರಡಿಸಲು ಮುಂದಾಗಬೇಕು’’ ಎಂದು ಆ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದರು. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕ್ರಮ ತೆಗೆದುಕೊಂಡರೆ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಭಾಷಣಗಳನ್ನು ಮಾಡುತ್ತಾರೆ. ಇದಕ್ಕೆ ಈಗ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆಯನ್ನು ನೀಡಿದ್ದಾರೆ. ‘ರಾಜಕೀಯ ಮತ್ತು ಧರ್ಮವನ್ನು ಬೇರ್ಪಡಿಸಿದರೆ; ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ; ದ್ವೇಷದ ಮಾತುಗಳು ಕಡಿಮೆಯಾಗುತ್ತವೆ’ ಎಂಬುದೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತೋರಿದ ಹಾದಿಯಾಗಿದೆ.

ಆದರೆ ಬಿಜೆಪಿಗೆ ಇದರ ಅರಿವೇ ಇಲ್ಲ ಎಂಬುದನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಭಾಷಣವು ತೋರಿಸುತ್ತಿದೆ. ಇತ್ತೀಚೆಗೆ ‘ಇಂಡಿಯಾ ಟುಡೇ’ ಪತ್ರಿಕೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, “ಭಾರತ ವಿರೋಧಿ ಗುಂಪಿನ ಭಾಗವಾಗಿರುವ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಂಗವನ್ನು ವಿರೋಧ ಪಕ್ಷವಾಗಿ ನರ್ತಿಸುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದರು. ಇದು ಭಾರತೀಯ ನ್ಯಾಯಾಂಗದ ಮೇಲೆ ಬಿಜೆಪಿಯ ದಾಳಿಯಾಗಿದೆ. ಇದು ನ್ಯಾಯಾಂಗವನ್ನು ಅಸಹ್ಯ ಮಾಡುವುದು ಮತ್ತು ಅದನ್ನು ತಮ್ಮ ಕೋಮು ರಾಜಕಾರಣಕ್ಕೆ ಎಳೆದು ತರುವುದಾಗಿದೆ.

ರಾಜಕೀಯಕ್ಕೆ ಧಾರ್ಮಿಕ ರಂಗು ಹೊಡೆದಂತೆ ನ್ಯಾಯಾಂಗಕ್ಕೂ ಹೊಡೆಯುವ ಪ್ರಯತ್ನ ಇದಾಗಿದೆ. ಬೆದರಿಕೆಯ ದ್ವೇಷ ಭಾಷಣಗಳು, ನ್ಯಾಯಾಲಯದ ಕಟ್ಟಡಗಳನ್ನೂ ಬಿಡಲಿಲ್ಲ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಅದಾನಿ ಸಮೂಹವು ತನ್ನ ಸಾಲವನ್ನು ಇನ್ನೂ ಪೂರ್ಣವಾಗಿ ಇತ್ಯರ್ಥಪಡಿಸಿಲ್ಲ ಎಂಬ ವರದಿಗಳ ಕುರಿತು ಅದಾನಿಯಿಂದ ವಿವರಣೆ ಕೇಳಿದೆ.

ಅದಾನಿ ಗ್ರೂಪ್ ಕಂಪನಿಗಳು ಲೆಕ್ಕಪತ್ರ ವಂಚನೆ, ತೆರಿಗೆ ವಂಚನೆ ಮತ್ತು ಅಕ್ರಮ ಹಣ ರವಾನೆಯಲ್ಲಿ ತೊಡಗಿವೆ ಎಂದು ಹೆಸರಾಂತ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಎಲ್‌ಎಲ್‌ಸಿ ಆರೋಪಿಸಿತ್ತು. ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗುವ ಮೂಲಕ ತನ್ನ ಕಂಪನಿಯ ಷೇರು ಬೆಲೆಯನ್ನು ಹೆಚ್ಚಿಸಿಕೊಂಡಿದೆ ಎಂದು ತನ್ನ ವರದಿಯಲ್ಲಿ ಆರೋಪಿಸಿತ್ತು.

ಈ ವರದಿಯ ನಂತರ, ಅದಾನಿ ಕಂಪನಿಗಳ ಷೇರು ಮೌಲ್ಯಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದರಿಂದಾಗಿ ಅದಾನಿ ಕಂಪನಿಯ ಮೌಲ್ಯವು ಹಲವು ಕೋಟಿ ರೂಪಾಯಿಗಳ ಕುಸಿತವನ್ನು ಕಂಡಿತು. ಇದರಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ 28ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಆಸ್ತಿ ಮೌಲ್ಯ ಲಕ್ಷ ಕೋಟಿಗಳಷ್ಟು ಕುಸಿದಿದೆ ಎಂದು ವರದಿಯಾಗಿದೆ.

ಅದಾನಿ ಷೇರುಗಳ ಈ ಕುಸಿತದಿಂದ ಅದಾನಿಯಲ್ಲಿ ಹೂಡಿಕೆ ಮಾಡಿದ್ದ LIC ಸೇರಿದಂತೆ ಸಾರ್ವಜನಿಕ ವಲಯದ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿವೆ. ಎಲ್ಐಸಿ ಸಂಸ್ಥೆಯು ಅದಾನಿಯ ಕಂಪನಿಗಳಲ್ಲಿ ರೂ.30,127 ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿತ್ತು. ಜನವರಿ 24 ರಂದು ಇದರ ಮೌಲ್ಯ 72,193.87 ಕೋಟಿ ರೂಪಾಯಿಯಾಗಿತ್ತು. ಆದರೆ ಈಗ ಅದಾನಿ ಕಂಪನಿಗಳ ಷೇರು ಮೌಲ್ಯವು ಕಡಿಮೆಯಾಗುತ್ತಿರುವುದರಿಂದ ಈಗ ಅದರ ಮೌಲ್ಯವು ರೂ.26,861.88 ಕೋಟಿಗೆ ಕುಸಿದಿದೆ ಎಂದು ವರದಿಯಾಗಿದೆ.

ಆ ನಂತರ ಭಾರತದಲ್ಲಿ ಉದ್ಯೋಗಿಗಳ PF ಹಣದ ಮೌಲ್ಯವೂ ಅದಾನಿಯಿಂದ ಕಡಿಮೆಯಾಗಿದೆ ಎಂಬ ಅಘಾತಕಾರಿ ಸುದ್ಧಿಯೂ ಈಗ ಹೊರಬರುತ್ತಿದೆ. ಅದಾನಿ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸ್ ಮತ್ತು ಅದಾನಿ ಪೋರ್ಟ್‌ನ ಷೇರುಗಳಲ್ಲಿ EPFO ಗಣನೀಯ ಪ್ರಮಾಣದ PF ಹಣವನ್ನು ಹೂಡಿಕೆ ಮಾಡಿದೆ. ಇದೀಗ ಅದಾನಿ ಕಂಪನಿಗಳಲ್ಲಿನ ನಷ್ಟದಿಂದಾಗಿ ಈ ಪಿಎಫ್ ಹಣವೂ ಮೌಲ್ಯ ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಅದಾನಿ ಕಂಪನಿಗಳಲ್ಲಿ ಹೂಡಿರುವ ಪಿಎಫ್ ಹಣವನ್ನು ವಾಪಸ್ ನೀಡುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.

ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಮುಂಬೈ ಷೇರುಪೇಟೆ (BSE) ಅದಾನಿ ಸಮೂಹವು ತನ್ನ ಸಾಲವನ್ನು ಸಂಪೂರ್ಣವಾಗಿ ಇತ್ಯರ್ಥಗೊಳಿಸಿಲ್ಲ ಎಂಬ ಮಾಹಿತಿಗೆ ಸಂಬಂಧಿಸಿದಂತೆ ಅದಾನಿಯಿಂದ ವಿವರಣೆ ಕೇಳಿದೆ. ಅದಾನಿ ಷೇರುಗಳು ಕುಸಿದಿರುವ ಹಿನ್ನಲೆಯಲ್ಲಿಯೇ ಕಂಪನಿಯು ಅವರ ಸಾಲವನ್ನು ತೀರಿಸಲು ಮುಂದಾಯಿತು.

ಆ ನಂತರ ಅದಾನಿ ಕಂಪನಿ ಸಾಲ ಮರುಪಾವತಿಯಾಗಿದೆ ಎಂದು ಹೇಳಿಕೊಂಡಿದ್ದರೂ ಅದಾನಿ ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಿಲ್ಲ ಎಂದು ‘ದಿ ಕೆನ್’ (The Ken) ಕಂಪನಿ ತಿಳಿಸಿದೆ. ಅದಾನಿ ಗ್ರೂಪ್ ಇದುವರೆಗೆ ತನ್ನ ಅರ್ಧದಷ್ಟು ಸಾಲವನ್ನು ಮಾತ್ರ ಮರುಪಾವತಿ ಮಾಡಿದೆ. ಆದ್ದರಿಂದಲೇ ಆ ಕಂಪನಿಯ ಷೇರುಗಳನ್ನು ಇನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ ಎಂದು ‘ದಿ ಕೆನ್’ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲೇ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಮುಂಬೈ ಷೇರುಪೇಟೆ (BSE) ಅದಾನಿ ಅವರಿಂದ ವಿವರಣೆ ಕೇಳಿವೆ. ಅದಾನಿ ಗ್ರೂಪ್ ತನ್ನ ಷೇರುಗಳನ್ನು ಅಡಮಾನವಿಟ್ಟು ಪಡೆದ 21.5 ಬಿಲ್ಲಿಯನ್ ಡಾಲರ್ ಸಾಲವನ್ನು ಪಾವತಿಸಿದೆ ಎಂದು ಈಗಾಗಲೇ ಹೇಳಿಕೊಂಡಿದ್ದ ಹಿನ್ನಲೆಯಲ್ಲಿ, ಈಗ ಈ ವರದಿ ಹೊರಬಂದು ಕಂಪನಿಯ ನಿಜವಾದ ಸ್ಥಿತಿಯನ್ನು ಬಹಿರಂಗಪಡಿಸಿದೆ.  

ದೇಶ

ನವದೆಹಲಿ: ಒಂಬತ್ತು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣಗಳ ಸಂಖ್ಯೆ 505% ರಷ್ಟು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ ದಾಳಿಗಳ ಸಂಖ್ಯೆ 2,555% ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಕೇಂದ್ರ ಬಿಜೆಪಿ ಸರ್ಕಾರದ ಅಡಿಯಲ್ಲಿ ಸ್ವಾಯತ್ತ ತನಿಖಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಜಾರಿ ನಿರ್ದೇಶನಾಲಯ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, PEMA ಮತ್ತು ಮನಿ ಲಾಂಡರಿಂಗ್ ತಡೆ ಕಾಯಿದೆ, ಪರಾರಿಯಾಗಿರುವ ಅಪರಾಧಿಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ದೆಹಲಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಜಾರಿ ನಿರ್ದೇಶನಾಲಯವು ಮುಂಬೈ, ಚೆನ್ನೈ, ಚಂಡೀಗಢ, ಕೋಲ್ಕತ್ತಾ ಮತ್ತು ದೆಹಲಿ ಮುಂತಾದ ಐದು ಪ್ರಾದೇಶಿಕ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರಾದೇಶಿಕ ಕಚೇರಿಗಳು ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಪ್ರಾದೇಶಿಕ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ, ಜಲಂಧರ್, ಕೋಲ್ಕತ್ತಾ, ಲಕ್ನೋ, ಮುಂಬೈ, ಪಾಟ್ನಾ, ಮುಂತಾದ ನಗರಗಳಲ್ಲಿ ಇವೆ.

ಪ್ರತಿ ವಲಯ ಕಛೇರಿಯು ಒಬ್ಬ ಸಹ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಜಾರಿ ನಿರ್ದೇಶನಾಲಯದ ಕಠಿಣ ಕ್ರಮಗಳ ಪರಿಣಾಮವಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಹಲವಾರು ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಾಖಲಾಗಿವೆ. ರಾಜಕೀಯ ಮುಖಂಡರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ PEMA ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯು ಶೇ.500 ರಷ್ಟು ಹೆಚ್ಚಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2018-19 ಮತ್ತು 2021-22 (ಸುಮಾರು 4 ವರ್ಷಗಳು) ನಡುವೆ, ಜಾರಿ ನಿರ್ದೇಶನಾಲಯ ದಾಖಲಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಶೇ.505 ರಷ್ಟು ಹೆಚ್ಚಾಗಿದೆ. 2018-19ರಲ್ಲಿ 195 ಪ್ರಕರಣಗಳು ದಾಖಲಾಗಿದ್ದರೆ, 2021-22ರಲ್ಲಿ 1,180 ಪ್ರಕರಣಗಳಿಗೆ ಏರಿಕೆಯಾಗಿದೆ.

ಏತನ್ಮಧ್ಯೆ, 2004-14 ಮತ್ತು 2014-22 ರ ನಡುವೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳ ಸಂಖ್ಯೆಯು ಶೇ.2,555 ರಷ್ಟು ಹೆಚ್ಚಾಗಿದೆ. ಅಂದರೆ, 2004-14ರ ನಡುವೆ 112 ಸ್ಥಳಗಳಲ್ಲಿ ದಾಳಿಗಳು ನಡೆಸಲಾಗಿತ್ತು. ಆದರೆ 2014-22ರ ನಡುವೆ 2,974 ಸ್ಥಳಗಳಲ್ಲಿ ದಾಳಿ ನಡೆದಿದೆ. ಅಂದರೆ ಪರೀಕ್ಷೆಗಳ ಸಂಖ್ಯೆ ಶೇ.2,555ಕ್ಕೆ ಏರಿದೆ. ಇಂತಹ ತನಿಖೆಗಳು ಮತ್ತು ಪ್ರಕರಣಗಳ ಆಧಾರದ ಮೇಲೆ ರೂ.95,432.08 ಕೋಟಿ ಮೌಲ್ಯದ ಆಸ್ತಿಯನ್ನು ಸ್ಥಗಿತಗೊಳಿಸಲಾಗಿದೆ.

ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಶೇ.95ಕ್ಕೂ ಹೆಚ್ಚು ಪ್ರಕರಣಗಳು ಶಿಕ್ಷೆಗೆ ಗುರಿಯಾಗಿವೆ ಎಂದು ವರದಿಗಳು ಹೇಳುತ್ತವೆ. ಕೇಂದ್ರ ಬಿಜೆಪಿ ಸರಕಾರವು ಜಾರಿ ನಿರ್ದೇಶನಾಲಯ, ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವಾಗಲೇ, ಜಾರಿ ನಿರ್ದೇಶನಾಲಯದ ಕ್ರಮ ಸದ್ಯದ ಅಂಕಿ ಅಂಶಗಳನ್ನು ಗಮನಿಸಿದರೆ ಭಾರೀ ಕುತೂಹಲ ಮೂಡಿಸುತ್ತದೆ.

ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮೊಸರು ಪ್ಯಾಕೆಟ್ ಮೇಲೆ ಹಿಂದಿಪದ ‘ದಹಿ’ ಎಂದು ನಮೂದಿಸುವಂತೆ ಕಳೆದ ತಿಂಗಳು ಮಾರ್ಚ್ 10 ರಂದು ಕರ್ನಾಟಕ ಮತ್ತು ತಮಿಳುನಾಡಿನ ಹಾಲು ಒಕ್ಕೂಟಗಳಿಗೆ ನಿರ್ದೇಶನ ನೀಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ‘ದಹಿ’ ಎಂಬ ಶಬ್ದವನ್ನೇ ಬಳಸಬೇಕು. ಆವರಣದಲ್ಲಿ ಮಾತ್ರ ಪ್ರಾದೇಶಿಕ ಭಾಷೆಯನ್ನು ನಮೂದಿಸುವಂತೆ ಸೂಚಿಸಿತ್ತು. ಉದಾಹರಣೆಗೆ ದಹಿ (ಮೊಸರು) ಎಂದು ಆವರಣದಲ್ಲಿ ನಮೂದಿಸುವಂತೆ ಸೂಚಿಸಿತ್ತು.

ಇದಕ್ಕೆ ಮೊದಲು ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್  “FSSAI ನಿರ್ದೇಶನವನ್ನು ನಾವು ಪಾಲಿಸುವುದಿಲ್ಲ. ನಮ್ಮ ರಾಜ್ಯಗಳಲ್ಲೇ ತಮಿಳು ಮತ್ತು ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಬಳಸುವಂತೆ ಬಲವಂತದ ನಿರ್ದೇಶನ ನೀಡಲಾಗುತ್ತಿದೆ. ಇಂತಹ ನಿರ್ದೇಶನ ನೀಡಲು ಜವಾಬ್ದಾರಿಯಾಗಿರುವವರನ್ನು ಶಾಶ್ವತವಾಗಿಯೇ ದಕ್ಷಿಣದಿಂದ ನಿಷಧಿಸಲಾಗುವುದು” ಎಂದು ಕಟುವಾಗಿ ಟೀಕಿಸಿದರು. ನಂತರ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ, ಕನ್ನಡಪರ ಸಂಘಟನೆಗಳ ನಾಯಕರು FSSAI ಗೆ ತೀವ್ರರೀತಿಯ ಖಂಡನೆಯನ್ನು ವ್ಯಕ್ತಪಡಿಸಿ, ಹಿಂದಿ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯ ಮಾಡಿದರು. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ವ್ಯಾಪಕವಾದ ಖಂಡನೆ ಮತ್ತು ಎಚ್ಚರಿಕೆಗೆ ಮನಿದ FSSAI ತಮ್ಮ ಸುತ್ತೋಲೆಯನ್ನು ಕಳೆದ ಗುರುವಾರ ಹಿಂದಕ್ಕೆ ಪಡೆಯಿತು.

ಆದರೆ, ನಮ್ಮ ಕನ್ನಡಿಗರು ನಡೆಸುವ ಸಸ್ಯಹಾರಿ ಹೋಟೆಲ್ ಗಳಲ್ಲಿ ‘ಟುಡೆ ಸ್ಪೆಷಲ್ ದಹಿ ವಡ’ (Today Special Dahi Vada) ಎಂದು ನಾಮ ಫಲಕ ಹಾಕಿ, ಮೊಸರು ವಡೆಯನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹವರನ್ನು ಏನೆಂದು ಹೇಳುವುದು? ‘ಮೊಸರನ್ನ’ ಎಂದು ಹೇಳುವ ಇವರೇ ‘ಮೊಸರು ವಡೆ’ ಎಂದು ಹೇಳುವುದಿಲ್ಲ. ‘ದಹಿ ವಡ’ ಎಂದು ಹೇಳುವುದೇ ಇವರಿಗೆ ಫ್ಯಾಷನ್. ‘ಊಟ ತಯಾರಿದೆ’ ಎಂದು ಅರ್ಧ ಕನ್ನಡ ಅರ್ಧ ಹಿಂದಿಯಲ್ಲಿ ಬೊಗಳುವ ಇವರಿಗೆ ಇದೆಲ್ಲ ಎಷ್ಟರಮಟ್ತಿಗೆ. ಹೋಟೆಲ್ ಗಳಲ್ಲಿ ‘ದಹಿ ವಡ’, ‘ಕಚೋರಿ’ ‘ದಹಿ ಕಚೋರಿ’, ‘ದಹಿ ಪೂರಿ’, ‘ದಹಿ ಪಪಡಿ’, ‘ಪಾವ್ ಬಜ್ಜಿ’, ‘ಪಾನಿಪೂರಿ’, ‘ಗೋಲ್ ಕಪ್ಪ’ ಈ ರೀತಿಯ ನೂರಾರು ಹಿಂದಿ ಪದಬಳಕೆಗಳು ಬೆಂಗಳೂರು ಮತ್ತು ಇತರ ಮಹಾನಗರದ ಹೋಟೆಲ್ ಗಳಲ್ಲಿ ಸರ್ವಸಾಮಾನ್ಯವಾಗಿದೆ. ಇವುಗಳನ್ನು ಮೊದಲು ಸ್ಚಚ್ಚಗೊಳಿಸಬೇಕು.

ಕನ್ನಡದ ನಾಮ ಫಲಕಗಳು ಹೊರಗಡೆ ಇದ್ದರೆ ಸಾಲದು, ಅದು ಒಳಗಡೆಯೂ ಇರಬೇಕು; ಮತ್ತು ವ್ಯವಹಾರಿಕವಾಗಿಯೂ ಇರಬೇಕು. ಹಿಂದಿ ಮಾತ್ರವಲ್ಲ ಇತರ ಭಾಷೆಗಳ ಪದಗಳು ಕನ್ನಡದಲ್ಲಿ ಮುದ್ರಿಸುವುದು ಕೂಡ ಸಾಂಸ್ಕೃತಿಕ ದಾಳಿಯೇ.   

ವಿದೇಶ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ. ಅಲ್ಲಿ ಅಧ್ಯಕ್ಷರಾಗಿರುವ ಕಿಮ್ ಜಾಂಗ್ ಉನ್ ವಿವಿಧ ಹೇಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ದಕ್ಷಿಣ ಕೊರಿಯಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಬಿಡುಗಡೆ ಮಾಡಿದೆ, ಇದು ಕೊರಿಯನ್ ನಡುವಿನ ವ್ಯವಹಾರಗಳನ್ನು ನಿರ್ವಹಿಸುತ್ತದೆ. 450 ಪುಟಗಳ ವರದಿಯು 2017 ರಿಂದ 2022 ರವರೆಗೆ ತಮ್ಮ ದೇಶದಿಂದ ಪಲಾಯನ ಮಾಡಿದ 500ಕ್ಕೂ ಹೆಚ್ಚು ಉತ್ತರ ಕೊರಿಯನ್ನರಿಂದ ಸಂಗ್ರಹಿಸಲಾದ ಸಾಕ್ಷ್ಯವನ್ನು ಒಳಗೊಂಡಿದೆ. “ಉತ್ತರ ಕೊರಿಯಾದ ನಾಗರಿಕರ ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತೋರುತ್ತದೆ” ಎಂದು ಸಚಿವಾಲಯ ವರದಿಯಲ್ಲಿ ತಿಳಿಸಿದೆ.

“ಡ್ರಗ್ ಅಪರಾಧಗಳು, ದಕ್ಷಿಣ ಕೊರಿಯಾದ ವೀಡಿಯೊಗಳ ವಿತರಣೆ ಮತ್ತು ಧಾರ್ಮಿಕ ಹಾಗೂ ಮೂಢನಂಬಿಕೆಯ ಚಟುವಟಿಕೆಗಳು ಸೇರಿದಂತೆ ಮರಣದಂಡನೆಯನ್ನು ಸಮರ್ಥಿಸದ ಕೃತ್ಯಗಳಿಗೆ ಮರಣದಂಡನೆಗಳನ್ನು ವ್ಯಾಪಕವಾಗಿ ನೀಡಲಾಗುತ್ತಿದೆ” ಎಂದು ಅದು ವಿವರಿಸಿದೆ. ವರದಿಯು ಉತ್ತರ ಕೊರಿಯಾದ ಆಡಳಿತದ ಹಿಂಸಾತ್ಮಕ ಕ್ರಮಗಳನ್ನು ವಿವರಿಸಿದೆ. ಗರ್ಭಿಣಿ ಮಹಿಳೆ ತನ್ನ ಮನೆಯಲ್ಲಿ ನೃತ್ಯ ಮಾಡುತ್ತಿದ್ದಾಗ ದಿವಂಗತ ಕಿಮ್ ಇಲ್-ಸಂಗ್ ಅವರ ಭಾವಚಿತ್ರವನ್ನು ತೋರಿಸಿದ ನಂತರ ಅವಳು ಕೊಲ್ಲಲ್ಪಟ್ಟಳು ಎಂದು ಹೇಳಿದೆ. 16 ಮತ್ತು 17 ವರ್ಷ ವಯಸ್ಸಿನ ಆರು ಹದಿಹರೆಯದವರನ್ನು ಗುಂಡಿಕ್ಕಿ ಗಲ್ಲಿಗೇರಿಸಲಾಗಿದೆ ಎಂದು ವರದಿ ಹೇಳಿದೆ. ಮಕ್ಕಳಿಗೆ ಮರಣದಂಡನೆ, ಆರು ತಿಂಗಳ ಗರ್ಭಿಣಿಗೆ ಮರಣದಂಡನೆಯಂತಹ ಅತ್ಯಂತ ಕ್ರೂರ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಉತ್ತರ ಕೊರಿಯಾ ಹೊಂದಿದೆ. ಅದೇ ರೀತಿ ಕಡಿಮೆ ಎತ್ತರವಿರುವ ಮಹಿಳೆಯರಿಗೆ ಅಂಡಾಶಯಗಳನ್ನು ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ದಕ್ಷಿಣ ಕೊರಿಯಾ ಮಾಡಿದೆ. North Korea committed horrific human rights violations including the execution of a six-month pregnant woman who pointed at the portrait of Kim Il-sung, the country’s founder. An extensive South Korean report which has been publicised for the first time, Kim Jong-un is said to have ordered the execution of homosexuals, religious persons and North Koreans who tried to flee the country.

ದೇಶ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ‘ಅಖಂಡ ಭಾರತವೆಂಬುದು ಸತ್ಯ. ಆದರೆ ವಿಭಜಿತ ಭಾರತವೆಂಬುದು ಕನಸು. 1947ರ ವಿಭಜನೆಗೆ ಮೊದಲು ಇದು ಭಾರತವಾಗಿತ್ತು. ವಿಭಜನೆಯಿಂದಾಗಿ ಭಾರತದಿಂದ ಬೇರ್ಪಟ್ಟವರು ಸಂತೋಷವಾಗಿದ್ದಾರೆಯೇ? ನೋವು ಇದೆ.

ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುತ್ತಿಲ್ಲ. ನಮ್ಮದು ಆಕ್ರಮಣ ಸಂಸ್ಕೃತಿಯಲ್ಲ. ಆತ್ಮರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳುವ ಸಂಸ್ಕೃತಿ ನಮ್ಮದು. ಭಾರತದಿಂದ ಬೇರ್ಪಟ್ಟದ್ದು ತಪ್ಪು ಎಂದು ಪಾಕಿಸ್ತಾನದ ಜನರು ಈಗ ಹೇಳುತ್ತಿದ್ದಾರೆ. ವಿಭಜನೆ ತಪ್ಪು ಎಂದು ಎಲ್ಲರೂ ಹೇಳುತ್ತಿದ್ದಾರೆ’ ಎಂದರು.