ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
August 2023 » Dynamic Leader
January 21, 2025
Home 2023 August
ವಿದೇಶ

ಭಾರತದಲ್ಲಿ ಜಾತಿ ತಾರತಮ್ಯ ಶತಮಾನಗಳಿಂದಲೂ ಇದೆ. ಇದರಿಂದ ಸಮಾಜದಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಸಾರ್ವಜನಿಕವಾಗಿ ನಡೆಯಲು, ನೀರು ಕುಡಿಯಲು, ಓದಲು ಮತ್ತು ಮೂಲಭೂತ ಅಗತ್ಯಗಳನ್ನು ಪೂರೈಸಲು ಜಾತಿ ಆಧಾರಿತ ನಿಷೇಧವಿತ್ತು.

ಇಂತಹ ಜಾತಿ ಮನಸ್ಥಿತಿಯ ಜನರು ವಿದೇಶಕ್ಕೆ ಹೋದರೂ ಜಾತಿಯೆಂಬ ಮಲವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿ ತಮ್ಮ ಜಾತಿಯ ಮನಸ್ಥಿತಿಯನ್ನು ವಿದೇಶದಲ್ಲೂ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಾದಲ್ಲಿ ನೆಲೆಸಿರುವುದರಿಂದ, ಅಲ್ಲಿನ ಭಾರತೀಯರಲ್ಲಿ ಜಾತೀಯತೆಯ ಆರೋಪಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಆಯೇಶಾ ವಹಾಬ್, ಕ್ಯಾಲಿಫೋರ್ನಿಯಾ ರಾಜ್ಯ ಅಸೆಂಬ್ಲಿಯಲ್ಲಿ

ಇಂತಹ ಆರೋಪಗಳು ಮುಂದುವರಿದಂತೆ, ಅಮೆರಿಕಾದ ಆರ್ಥಿಕ ರಾಜಧಾನಿ ನ್ಯೂಯಾರ್ಕ್‌ನಲ್ಲಿರುವ ಸಿಯಾಟಲ್ ಸಿಟಿ ಕೌನ್ಸಿಲ್‌ನ ಭಾರತೀಯ-ಅಮೆರಿಕನ್ ಸದಸ್ಯರಾದ ಕ್ಷಮಾ ಸಾವಂತ್ ಅವರು ಜಾತಿ, ಜನಾಂಗ, ಬಣ್ಣ, ಲಿಂಗ, ಧರ್ಮ ಮತ್ತು ರಾಷ್ಟ್ರೀಯತೆಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಪರಿಚಯಿಸಿದರು. ಅದನ್ನು ಅನುಸರಿಸಿ ಆ ಕಾನೂನು ಜಾರಿಗೆ ಬಂದಿತು. ಜಾತಿ ತಾರತಮ್ಯದ ವಿರುದ್ಧ ಕಾನೂನನ್ನು ಅಂಗೀಕರಿಸಿದ ಮೊದಲ ಅಮೆರಿಕನ್ ನಗರವೆಂಬ ಹೆಗ್ಗಳಿಕೆ ಸಿಯಾಟಲ್‌ಗೆ ಸಿಕ್ಕಿದೆ.

ಇದರ ಬೆನ್ನಲ್ಲೇ ಕಳೆದ ಮಾರ್ಚ್ ನಲ್ಲಿ ಅಮೆರಿಕದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾಲಿಫೋರ್ನಿಯಾದಲ್ಲಿ ಇದೇ ರೀತಿಯ ಕಾನೂನನ್ನು ಜಾರಿಗೆ ತರಲಾಗಿದೆ. ಈ ಮಸೂದೆಯನ್ನು ಕ್ಯಾಲಿಫೋರ್ನಿಯಾ ರಾಜ್ಯ ಅಸೆಂಬ್ಲಿಯಲ್ಲಿ ಭಾರತೀಯ ಮೂಲದ ಅಮೆರಿಕಾ ಕಾಂಗ್ರೆಸ್ ಸೆನೆಟರ್ ಆಯೇಶಾ ವಹಾಬ್ ಮಂಡಿಸಿದರು. ಈ ಅಸೆಂಬ್ಲಿಯಲ್ಲಿ ಚರ್ಚೆಗಳು ನಡೆದು, ಹಲವು ಕ್ರಮಗಳ ನಂತರ, ಈಗ ಕ್ಯಾಲಿಫೋರ್ನಿಯಾ ಅಸೆಂಬ್ಲಿಯಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ಸಿಕ್ಕಿದೆ. ಈ ಮಸೂದೆಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದವರು ಪರವಾಗಿ ಮತ ಚಲಾಯಿಸಿದ್ದಾರೆ. ನಂತರ, ಈ ಮಸೂದೆಯನ್ನು ಪ್ರಾಂತೀಯ ರಾಜ್ಯಪಾಲರಿಗೆ ಕಳುಹಿಸಲಾಗಿದೆ.

ಜಾತಿ ತಾರತಮ್ಯದ ವಿರುದ್ಧ ಮಂಡಿಸಲಾದ ಕಾನೂನಿನ ಪರವಾಗಿ ಮತ ಕೇಳುತ್ತಿರುವ ಆಯೇಶಾ ವಹಾಬ್ ಮತ್ತು ಸದಸ್ಯರು

ಇದರೊಂದಿಗೆ ಜಾತಿ ವಿರುದ್ಧ ಕಾನೂನು ರೂಪಿಸಿದ ಮೊದಲ ಪ್ರಾಂತ್ಯ ಕ್ಯಾಲಿಫೋರ್ನಿಯಾ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಉತ್ತರ ಅಮೆರಿಕಾದ ಹಿಂದೂ ಒಕ್ಕೂಟ (CoHNA) ಈ ಮಸೂದೆಯನ್ನು ಬಲವಾಗಿ ವಿರೋಧಿಸಿದೆ. ಅಲ್ಲದೆ, “ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಇದು ಕಪ್ಪು ದಿನವಾಗಿದೆ” ಎಂದು ಹೇಳಿಕೊಂಡಿದೆ.

ರಾಜಕೀಯ

ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ, ಬಣ್ಣದ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಬಿಜೆಪಿಯ ಪೊಳ್ಳು ಆಡಳಿತವನ್ನು ಜನ ಅರಿತಿದ್ದಾರೆ. ಇಂತಹ ಕಣ್ಕಟ್ಟಿನ ತಂತ್ರಗಳನ್ನು ಇನ್ನು ಮುಂದುವರಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ರೂ.200 ಕಡಿಮೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಕ್ರಮವನ್ನು ಟೀಕಿಸಿದ್ದಾರೆ.

“ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು. ನಮ್ಮ ಜನಪರವಾದ ಯೋಜನೆಗಳಿಂದ ಪ್ರೇರಿತರಾಗಿ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಚುನಾವಣಾ ಪೂರ್ವದಲ್ಲಿ ನಾವು ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ನೂರು ದಿನಗಳೊಳಗೆ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆಯುವ ನಮ್ಮ ಬದ್ಧತೆ ನಿಮಗೂ ಪ್ರೇರಣೆಯಾಗಲಿ, ಅದರಿಂದ ಜನರಿಗೆ ಒಳ್ಳೆಯದಾಗಲಿ ಎಂದು ಮನ: ಪೂರ್ವಕವಾಗಿ ಹಾರೈಸುತ್ತೇನೆ.

ಪ್ರಧಾನಿ ನರೇಂದ್ರ ಮೋದಿ ಅವರೇ, 2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಹಿಂದಿನ ನಮ್ಮ ಸರ್ಕಾರ ಈಡೇರಿಸಿದ್ದು, ಅದರ ಬಗೆಗಿನ ವಿವರವಾದ ಅಧಿಕೃತ ಮಾಹಿತಿಯನ್ನು ರಾಜ್ಯದ ಜನರ ಮುಂದಿಟ್ಟಿದ್ದೇವೆ. ಈ ನಮ್ಮ ಬದ್ಧತೆ ಕೂಡಾ ನಿಮಗೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2014 ಮತ್ತು 2018ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿರುವ ಎರಡು ಪ್ರಣಾಳಿಕೆಗಳು ನನ್ನ ಮುಂದಿದೆ. ಮೂರನೇ ಬಾರಿ ಪ್ರಧಾನ ಮಂತ್ರಿಯಾಗಲು ಹೊರಟಿರುವ ನರೇಂದ್ರ ಮೋದಿ ಅವರೇ, ದಯವಿಟ್ಟು ಈ ಎರಡು ಪ್ರಣಾಳಿಕೆಗಳಲ್ಲಿನ ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎನ್ನುವ ಲೆಕ್ಕವನ್ನು ನಮಗಲ್ಲವಾದರೂ ದೇಶದ ಜನತೆಗೆ ಕೊಡಿ ಎನ್ನುವುದು ನನ್ನ ವಿನಮ್ರ ವಿನಂತಿ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ನೇತೃತ್ವದ ಕೆಂದ್ರ ಸರ್ಕಾರವು ಬಹಳಷ್ಟು ಮೀನಮೇಷ ಎಣಿಸಿದ ನಂತರ ಅಂತಿಮವಾಗಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ರೂ.200 ಕಡಿಮೆ ಮಾಡಿ ಘೋಷಣೆ ಮಾಡಿದೆ. ಆದರೆ, ಮೇಲು ನೋಟಕ್ಕೆ ಇದರಲ್ಲಿ ಕೇಂದ್ರದ ಪಾಲು ಏನೂ ಇಲ್ಲ ಎನ್ನುವುದು ನಿಚ್ಚಳಗೊಂಡಿದೆ. ‘ಕಾರ್ಪೊರೆಟ್‌ ಹೊಣೆಗಾರಿಕೆ’ಯ ರೀತಿ ತೈಲ ಕಂಪೆನಿಗಳೇ ಈ ವೆಚ್ಚವನ್ನು ಭರಿಸಲಿವೆ ಎಂದು ನಿಮ್ಮದೇ ಮಂತ್ರಿಮಂಡಲದ ಸಚಿವರು ಹೇಳುವ ಮೂಲಕ ಅದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮಾದರಿಯಲ್ಲಿ ಉಚಿತ ಭರವಸೆಗಳನ್ನು ನೀಡಿ ಐದು ರಾಜ್ಯಗಳ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್!

ಅಡುಗೆ ಅನಿಲ ದರ ನಿಗದಿಗೆ ಆಧಾರವಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ‘ಸೌದಿ ಸಿಪಿ’ ದರ ಪ್ರತಿ ಟನ್‌ಗೆ ಈ ಆರ್ಥಿಕ ವರ್ಷಾರಂಭದಲ್ಲಿ 732 ಡಾಲರ್‌ ಇದ್ದದ್ದು, ಈಗ 385 ಡಾಲರ್‌ಗೆ ಕುಸಿದಿದೆ. ಅಂದರೆ ಶೇ.48ರಷ್ಟು ಇಳಿಕೆಯಾಗಿದೆ. ಸಿಲಿಂಡರ್ ದರವೂ ಹೆಚ್ಚು ಕಡಿಮೆ ಅರ್ಧದಷ್ಟು ಇಳಿಕೆ ಮಾಡಬೇಕಿತ್ತಲ್ಲವೇ? ಆದರೆ, ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಪ್ರತಿ ಸಿಲಿಂಡರ್‌ಗೆ ರೂ.200 ಮಾತ್ರ, ಯಾಕೆ ನರೇಂದ್ರ ಮೋದಿ ಅವರೇ?

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸುವ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ ಪ್ರತಿ ಸಿಲಿಂಡರ್‌ನ ಬೆಲೆಯನ್ನು ಕನಿಷ್ಠ ರೂ.500-600ರಷ್ಟು ಇಳಿಸಬೇಕಾಗಿದೆ. ಇದೇ ರೀತಿ ಡೀಸೆಲ್-ಪೆಟ್ರೋಲ್ ಬೆಲೆಯನ್ನು ರೂ.60-70ಕ್ಕೆ ಇಳಿಸಬೇಕಾಗುತ್ತದೆ. ಇದನ್ನು ಮಾಡದೆ ಇದ್ದರೆ ಇದೊಂದು ಕಣ್ಣೊರೆಸುವ ತಂತ್ರ, ಚುನಾವಣಾ ಗಿಮಿಕ್, ಬಾಯಿ ಬಡಾಯಿ ಎಂದು ಹೇಳಬೇಕಾಗುತ್ತದೆ.

ಜಾಗತಿಕವಾಗಿ ಅನಿಲ ಬೆಲೆಯಲ್ಲಿ ಅಪಾರ ಇಳಿಕೆಯಾದಾಗಲೂ ಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ ಬದಲಿಗೆ ತೈಲೋತ್ಪನ್ನ ಕಂಪೆನಿಗಳಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಈಗಲೂ ಸಹ ಅನಿಲ ಬೆಲೆಯನ್ನು ಕೇವಲ ರೂ.200 ಮಾತ್ರವೇ ಇಳಿಕೆ ಮಾಡಿ ತೈಲೋತ್ಪನ್ನ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ, ಜನರ ಹಿತಾಸಕ್ತಿ ಎಲ್ಲಿ ಅಡಗಿದೆ ಪ್ರಧಾನಿ ನರೇಂದ್ರ ಮೋದಿ ಅವರೇ?

ಜನತೆಯನ್ನು ಬೆಲೆ ಏರಿಕೆಯಿಂದ ರಕ್ಷಿಸುವ, ಸ್ವಾವಲಂಬಿಗಳಾಗಿಸಿರುವ ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಅವರ ಪಕ್ಷ ಅವುಗಳಿಂದ ಭಯಭೀತರಾಗಿ ತೋರಿಕೆಗೆ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಿರುವುದು ಸ್ಪಷ್ಟ. ಆದರೆ, ದೇಶದ ಜನತೆ “ಕೆಲಸ ಮಾಡದೆ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ, ಬಣ್ಣದ ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ” ಬಿಜೆಪಿಯ ಪೊಳ್ಳು ಆಡಳಿತವನ್ನು ಅರಿತಿದ್ದಾರೆ. ಇಂತಹ ಕಣ್ಕಟ್ಟಿನ ತಂತ್ರಗಳನ್ನು ಇನ್ನು ಮುಂದುವರಿಸಲಾಗದು.” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಯೋಜನೆಗಳನ್ನು ಘೋಷಿಸುವುದು ಎಂಬುದನ್ನು ಸೂಚಿಸುವಂತೆ ಪಕ್ಷದ ನಾಯಕತ್ವ ಎಲ್ಲಾ ರಾಜ್ಯ ಬಿಜೆಪಿ ನಾಯಕರನ್ನು ಕೇಳಿಕೊಂಡಿವೆ.

ಚುನಾವಣಾ ಆಯೋಗವು ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮಿನಿ ಸಾರ್ವತ್ರಿಕ ಚುನಾವಣೆ ಎಂದೇ ಬಿಂಬಿಸಲಾಗಿದೆ.

ಹೀಗಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಇದರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ, ಮಿಜೋರಾಂನಲ್ಲಿ ಬಿಜೆಪಿ ಮೈತ್ರಿ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ ಅಧಿಕಾರದಲ್ಲಿದೆ.

ಕರ್ನಾಟಕದಲ್ಲಿ ಅಧಿಕಾರ ಹಿಡಿದುಕೊಂಡು ಉತ್ಸಾಹದಲ್ಲಿರುವ ಕಾಂಗ್ರೆಸ್, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಅಧಿಕಾರಕಾರಕ್ಕೆ ಬರಲು ತೀವ್ರ ಪೈಪೋಟಿ ನಡೆಸುತ್ತಿವೆ. ಕರ್ನಾಟಕದಲ್ಲಿ ಚುನಾವಣಾ ಕೆಲಸದಲ್ಲಿ ತೊಡಗಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳ್ ಅವರಿಗೆ ಇದರ ಹೊಣೆಯನ್ನು ರಾಹುಲ್ ವಹಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 16 ರಂದು ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೋದಿ, ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದ್ದರು.

ಇದನ್ನೂ ಓದಿ: ಅಡುಗೆ ಸಿಲಿಂಡರ್ ಬೆಲೆ: ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು 200 ರೂಪಾಯಿ ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ; ಇದು ಚುನಾವಣೆ ಲಾಲಿಪಾಪ್!

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಹಲವು ಕಾರಣಗಳಿದ್ದರೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ನಿರುದ್ಯೋಗಿ ಪದವೀಧರರಿಗೆ 3,000 ರೂ., ಡಿಪ್ಲೊಮಾದಾರರಿಗೆ ತಿಂಗಳಿಗೆ 1,500 ರೂ., 200 ಯೂನಿಟ್ ಉಚಿತ ವಿದ್ಯುತ್ ಮುಖ್ಯ ಕಾರಣಗಳಾಗಿದ್ದವು.

ಇದನ್ನು ಬಿಜೆಪಿ ನಾಯಕತ್ವದ ಗಮನಕ್ಕೆ ತಂದಿರುವ ರಾಜ್ಯ ನಾಯಕರುಗಳು, ಉಚಿತ ಯೋಜನೆಗಳನ್ನು ಘೋಷಿಸದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ಕೇಂದ್ರ ಸಮಿತಿ ಸಭೆಯಲ್ಲೂ ಚರ್ಚೆ ನಡೆದಿದೆ. ಅದರ ಬೆನ್ನಲ್ಲೇ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ.ಗಳನ್ನು ಕಡಿಮೆ ಮಾಡಲಾಯಿತು.

ಅದನ್ನು ಅನುಸರಿಸಿ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಯಾವ ಉಚಿತ ಕಾರ್ಯಕ್ರಮಗಳನ್ನು ಘೋಷಿಸಲಿದೆ ಎಂಬುದನ್ನು ತಿಳಿದುಕೊಂಡು, ಅದನ್ನು ಈಗಲೇ ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಬಿಜೆಪಿ ನಾಯಕತ್ವ ಕೇಳಿಕೊಂಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಉಚಿತ ಕಾರ್ಯಕ್ರಮಗಳನ್ನು ಘೋಷಿಸುವುದು ಎಂಬುದರ ಕುರಿತು ಬಿಜೆಪಿ ರಾಜ್ಯ ಮುಖಂಡರು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸಲಹೆ ನೀಡುವಂತೆ ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ, 300 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದಿನಕ್ಕೆ ಎರಡು ಜಿಬಿ ಮೊಬೈಲ್‌ ಡೇಟಾ, ಉಚಿತ ಸ್ಮಾರ್ಟ್‌ಫೋನ್‌, ಗೃಹಿಣಿಯರಿಗೆ ತಿಂಗಳಿಗೆ 3 ಸಾವಿರ ರೂ. ಸೇರಿದಂತೆ ಹಲವು ಭರವಸೆಗಳನ್ನು ನೀಡಲು ಬಿಜೆಪಿ ಮುಂದಾಗಿದೆ. ಎಂದು ತಿಳಿದು ಬಂದಿದೆ.

ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್ ಸಿ.ಎಂ.ಶಿವಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಬಿಬಿಎಂಪಿಯ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್‌ನಲ್ಲಿ ಆಗಸ್ಟ್ 11 ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 45 ವರ್ಷದ ಶಿವಕುಮಾರ್ ಅವರು ಸೇರಿದಂತೆ 9 ನೌಕರರು ಗಾಯಗೊಂಡಿದ್ದರು.ಶೇ. 25 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಿವಕುಮಾರ್ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಶಿವಕುಮಾರ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೃತರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗದ ಮುಖ್ಯ ಅಭಿಯಂತರರಾದ ಸಿ.ಎಂ.ಶಿವಕುಮಾರ್ ಅವರು ಮೃತಪಟ್ಟಿರುವ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ಬಿಬಿಎಂಪಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಅವರು ಮೈಸೂರು ಜಿಲ್ಲೆಯ ನಂಜನಗೂಡು ಮೂಲದವರಾಗಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ರಾಜಕೀಯ

ಮುಂಬೈ: ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರು ಇಂದು ಜಂಟಿಯಾಗಿ ಸುದ್ದಿಗಾರರಿಗೆ ಸಂದರ್ಶನ ನೀಡಿ, “ಭಾರತವನ್ನು ರಕ್ಷಿಸಲಿಕ್ಕಾಗಿ ವಿರೋಧ ಪಕ್ಷಗಳು ಒಟ್ಟಾಗಿವೆ; ಹೊಸದಾಗಿ ಎರಡು ಪಕ್ಷಗಳು ಇಂಡಿಯಾ ಮೈತ್ರಿ ಕೂಟಕ್ಕೆ ಬರಲಿವೆ” ಎಂದು ಹೇಳಿದರು.

ನಾಳೆಯಿಂದ (ಆಗಸ್ಟ್ 31) 2 ದಿನಗಳ ಕಾಲ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ 3ನೇ ಸಮಾಲೋಚನಾ ಸಭೆ ನಡೆಯಲಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಜಂಟಿಯಾಗಿ ಸುದ್ದಿಗಾರರನ್ನು ಭೇಟಿಯಾಗಿ ಸಭೆಯ ಸಿದ್ಧತೆಗಳ ಕುರಿತು ಸಂದರ್ಶನ ನೀಡಿದರು.

ಇದನ್ನೂ ಓದಿ: ಅಡುಗೆ ಸಿಲಿಂಡರ್ ಬೆಲೆ: ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು ರೂ.200 ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ; ಇದು ಚುನಾವಣೆ ಲಾಲಿಪಾಪ್!

ಸಂದರ್ಶನದ ಸಮಯದಲ್ಲಿ ಮಾತನಾಡಿದ ಅವರು, “ಇಂಡಿಯಾ ಮೈತ್ರಿಕೂಟದ ಬೆಳವಣಿಗೆಗೆ ಹೆದರಿ ಬಿಜೆಪಿ ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿಯೂ ಕೊಡುತ್ತದೆ. ಇಂಡಿಯಾ ಮೈತ್ರಿಯ ಉದ್ದೇಶವು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸುವುದಾಗಿದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ 28 ಪಕ್ಷಗಳ 63 ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಭಾರತವನ್ನು ರಕ್ಷಿಸಲಿಕ್ಕಾಗಿಯೇ ಪ್ರತಿಪಕ್ಷಗಳು ಒಂದಾಗಿವೆ. ಮತ್ತು ಹೊಸದಾಗಿ ಎರಡು ಪಕ್ಷಗಳು ಇಂಡಿಯಾ ಮೈತ್ರಿ ಕೂಟಕ್ಕೆ ಬರಲಿವೆ. ನಮ್ಮ ಸಿದ್ಧಾಂತಗಳು ವಿಭಿನ್ನವಾಗಿರಬಹುದು ಆದರೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಗುರಿಯಾಗಿದೆ. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆಧುನಿಕ ಗೂಢಚಾರಿಕೆ ಉಪಕರಣಗಳ ಮೂಲಕ ಭಾರತದ 140 ಕೋಟಿ ಜನರನ್ನೂ ಮೋದಿ ಸರ್ಕಾರ ನಿಗಾ ಇಡುತ್ತಿದೆ.!?

ಎನ್‌ಸಿಪಿ ತೊರೆದವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ನಮ್ಮಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಹಲವು ಆಯ್ಕೆಗಳಿವೆ. ಆದರೆ ಬಿಜೆಪಿಗೆ ಒಂದನ್ನು ಬಿಟ್ಟರೆ ಬೇರೆ ಯಾವ ಆಯ್ಕೆ ಇದೆ? ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲ್ಲಬಹುದು” ಎಂದು ಹೇಳಿದರು.

ದೇಶ

ಮೋದಿ ಸರಕಾರವು ಭಾರತದ ಎಲ್ಲಾ 140 ಕೋಟಿ ಜನರನ್ನು ಆಧುನಿಕ ಗೂಢಚಾರಿಕೆ ಉಪಕರಣಗಳ ಮೂಲ ನಿಗಾ ಇಡುತ್ತಿದೆ ಎಂಬ ಸುದ್ದಿ ಬಹಿರಂಗವಾಗಿದೆ.

ಇಂಗ್ಲೆಂಡಿನ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆ ಮೋದಿ ಸರ್ಕಾರದ ಬೇಹುಗಾರಿಕೆ ಯೋಜನೆಯನ್ನು ಬಹಿರಂಗಪಡಿಸಿದೆ. ಕಾಗ್ನೈಟ್ ಮತ್ತು ಸೆಪ್ಟಿಯರ್‌ನಂತಹ ಇಸ್ರೇಲ್ ಮೂಲದ ಕಂಪನಿಗಳಿಂದ ಮೋದಿ ಸರ್ಕಾರ ಅತ್ಯಾಧುನಿಕ ಬೇಹುಗಾರಿಕೆ ಉಪಕರಣಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಡುಗೆ ಸಿಲಿಂಡರ್ ಬೆಲೆ ಇಳಿಕೆ: 200 ರೂಪಾಯಿ ಕೊಟ್ಟರೂ ಜನರ ಕೋಪ ಕಡಿಮೆಯಾಗುವುದಿಲ್ಲ; ಇದು ಚುನಾವಣೆ ಲಾಲಿಪಾಪ್!

ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ, ವೊಡಾಫೋನ್ ಮತ್ತು ಸಿಂಗಾಪುರದ ಸಿಂಗ್‌ಟೆಲ್‌ನಂತಹ ಕಂಪನಿಗಳ ಗ್ರಾಹಕರ ಮೇಲೆ ನಿಗಾ ಇರಿಸಲಾಗಿದೆ. ಸೆಲ್ ಫೋನ್ ಸಂಭಾಷಣೆಗಳು, ಸೆಲ್ ಫೋನ್ ಸಂವಹನಗಳು ಮತ್ತು ಇ-ಮೇಲ್‌ಗಳನ್ನು ಮೇಲ್ವಿಚಾರಣೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟಿಯರ್ ಪತ್ತೇದಾರಿ ಉಪಕರಣವು ಸಾರ್ವಜನಿಕರು ಅಂತರ್ಜಾಲದಲ್ಲಿ ಏನು ಬಳಸುತ್ತಿದ್ದಾರೆ ಎಂಬುದನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಇಸ್ರೇಲ್‌ನ ಪೆಗಾಸಸ್ ಸ್ಪೈ ಉಪಕರಣಗಳ ಮೂಲಕ ಮೋದಿ ಸರ್ಕಾರ ಪತ್ರಕರ್ತರ ಮೇಲೆ ನಿಗಾ ಇಟ್ಟಿರುವುದು ಈಗಾಗಲೇ ಬಹಿರಂಗವಾಗಿದೆ.

Source: Dinakaran.com 

ರಾಜಕೀಯ

ಡಿ.ಸಿ.ಪ್ರಕಾಶ್

2014ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಡುಗೆ ಸಿಲಿಂಡರ್ ಬೆಲೆ ರೂ.417 ಆಗಿತ್ತು. ಆದರೆ ಕ್ರಮೇಣ 1118 ರೂಪಾಯಿಗೆ ಏರಿಕೆಯಾಗಿದೆ. ಗಗನಕ್ಕೇರಿರುವ ಸಿಲಿಂಡರ್ ಬೆಲೆಯಿಂದಾಗಿ ಕುಟುಂಬದ ಮುಖ್ಯಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕಡಿದಾದ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಇತರ ಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದವು. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದೆ ಸಿಲಿಂಡರ್ ಬೆಲೆ ಏರಿಕೆಗೆ ಕಾರಣ ಎಂದು ಮೋದಿ ಸರ್ಕಾರ ಹೇಳಿಕೊಂಡಿತ್ತು. ನಂತರ ಕಚ್ಚಾ ತೈಲ ಬೆಲೆ ಕುಸಿದರೂ ಮೋದಿ ಸರ್ಕಾರ ಸಿಲಿಂಡರ್ ಬೆಲೆ ಇಳಿಸಲಿಲ್ಲ.

ಈ ಹಿನ್ನಲೆಯಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಅಡುಗೆ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿಮೆ ಮಾಡಿದೆ; ಕೇಂದ್ರ ಬಿಜೆಪಿ ಸರ್ಕಾರ. ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ.200 ಸಬ್ಸಿಡಿ ನೀಡುವುದಾಗಿಯೂ ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರದ ಘೋಷಣೆ ಚುನಾವಣಾ ನಾಟಕ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

ಈ ಹಿನ್ನಲೆಯಲ್ಲಿ “ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು ರೂ.200 ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಹೇಳಿಕೆಯನ್ನು ಪ್ರಕಟಿಸಿರುವ ಅವರು, “ಯಾವಾಗ ಮತಗಳು ಕಡಿಮೆಯಾಗಲು ಪ್ರಾರಂಭಿಸುತ್ತದೆಯೋ, ಆಗ ಚುನಾವಣೆ ಉಡುಗೊರೆಗಳ ವಿತರಣೆ ಪ್ರಾರಂಭವಾಗುತ್ತದೆ!

ಜನರ ದುಡಿಮೆಯ ಹಣವನ್ನು ಲೂಟಿ ಮಾಡಿದ ನಿರ್ದಯಿ ಮೋದಿ ಸರ್ಕಾರ, ಪ್ರಸ್ತುತ ತಾಯಿ ಮತ್ತು ಸಹೋದರಿಯರ ಬಗ್ಗೆ ಸುಳ್ಳು ಅಭಿಮಾನ ತೋರಿಸುತ್ತಿದೆ. ಒಂಬತ್ತೂವರೆ ವರ್ಷಗಳ ಕಾಲ ಜನ ಸಾಮಾನ್ಯರ ಜೀವನವನ್ನು ಹಾಳುಮಾಡಿದ್ದಾರೆ. ಆಗ “ಪ್ರೀತಿಯ ಉಡುಗೊರೆ” ಏಕೆ ನೆನಪಿಗೆ ಬಂದಿಲ್ಲ?

ಒಂಬತ್ತೂವರೆ ವರ್ಷಗಳ ಕಾಲ 140 ಕೋಟಿ ಭಾರತೀಯರನ್ನು ಹಿಂಸಿಸಿದ ಬಿಜೆಪಿ ಸರ್ಕಾರ “ಚುನಾವಣಾ ಲಾಲಿಪಾಪ್‌ಗಳನ್ನು” ಹಂಚುವುದರಿಂದ ಏನೂ ಪ್ರಯೋಜವಾಗುವುದಿಲ್ಲ ಎಂದು ತಿಳಿದುಕೊಳ್ಳಬೇಕು. ನಿಮ್ಮ ಹತ್ತು ವರ್ಷಗಳ ಪಾಪಗಳು ತೊಳೆಯಲಾಗದು.

ಬಿಜೆಪಿಯಿಂದ ಜಾರಿಗೊಂಡ ಹಣದುಬ್ಬರವನ್ನು ಎದುರಿಸಲು ಹಲವು ರಾಜ್ಯಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಬಡವರಿಗೆ 500 ರೂಪಾಯಿ ಸಿಲಿಂಡರ್ ನೀಡಲು ಹೊರಟಿದೆ. ರಾಜಸ್ಥಾನದಂತಹ ಹಲವು ರಾಜ್ಯಗಳು ಇದನ್ನು ಈಗಾಗಲೇ ಜಾರಿಗೆ ತಂದಿವೆ.

ಸಂಕಷ್ಟದಲ್ಲಿರುವ ಜನರ ಸಿಟ್ಟು 200 ರೂಪಾಯಿಗಳ ಸಬ್ಸಿಡಿಯಿಂದ ಕಡಿಮೆಯಾಗುವುದಿಲ್ಲ ಎಂಬುದನ್ನು ಮೋದಿ ಸರ್ಕಾರ ಅರಿಯಬೇಕು. ಇಂಡಿಯಾದ ಭಯ ಒಳ್ಳೆಯದು, ಮೋದಿ ಅವರೇ! ಜನ ಸಾಮಾನ್ಯರು ನಿರ್ಧರಿಸಿದ್ದಾರೆ. ಹಣದುಬ್ಬರವನ್ನು ಸೋಲಿಸುವ ಏಕೈಕ ಮಾರ್ಗವೆಂದರೆ ಬಿಜೆಪಿಗೆ ನಿರ್ಗಮನದ ಬಾಗಿಲನ್ನು ತೋರಿಸುವುದೇ ಆಗಿದೆ” ಎಂದರು.

ರಾಜಕೀಯ

ಮೊನ್ನೆಯಷ್ಟೇ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಗಡಿ ವಿವಾದ ಕುರಿತಂತೆ‌ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಚೀನಾ, ಅರುಣಾಚಲ ಪ್ರದೇಶ ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆ ರೂ.200 – 400 ಇಳಿಕೆ: ಕೇಂದ್ರ ಸರಕಾರ ಘೋಷಣೆ!

“ಅರುಣಾಚಲ ಪ್ರದೇಶವನ್ನು ಸೇರಿಸಿಕೊಂಡು ಚೀನಾ ಹೊಸ ನಕ್ಷೆ ಬಿಡುಗಡೆ ಮಾಡಿದೆ‌.‌ ಗಡಿ ವಿಚಾರದಲ್ಲಿ ಚೀನಾದ ತಗಾದೆ ಹೊಸದೇನಲ್ಲ. ಇಷ್ಟಾದರೂ ಮೋದಿಯವರು ಗಡಿಯಲ್ಲಿ ಏನು ಆಗಿಲ್ಲ ಎಂಬ ನಿರ್ಲಿಪ್ತತೆಯಲ್ಲಿದ್ದಾರೆ. ಭಾಷಣಕ್ಕೆ ನಿಂತರೆ ಶೌರ್, ರೌದ್ರ, ಪ್ರತಾಪಗಳ ಬಗ್ಗೆಯೇ ಮಾತಾಡುವ ಮೋದಿಯವರು ಚೀನಾ ವಿಚಾರದಲ್ಲಿ ಹೆದರುವುದ್ಯಾಕೆ? ಅಷ್ಟು ಭಯವೇ?

ಮೊನ್ನೆಯಷ್ಟೇ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಗಡಿ ವಿವಾದ ಕುರಿತಂತೆ‌ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಚೀನಾ, ಅರುಣಾಚಲ ಪ್ರದೇಶ ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡಿದೆ. ಭಕ್ತರ ಪಾಲಿನ ವಿಶ್ವಗುರು ಮೋದಿಯವರು,ವಿಶ್ವಮಟ್ಟದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾರೆ ಎಂದು ಇದರಲ್ಲೆ ಅರ್ಥವಾಗುತ್ತದೆ.

ಇದನ್ನೂ ಓದಿ: ಸ್ವಾಭಿಮಾನದ ಮದುವೆಗಳನ್ನು ವಕೀಲರೇ ನಡೆಸಬಹುದು; ನ್ಯಾಯಾಲಯದ ಪ್ರತಿನಿಧಿಯಾಗಿ ಅಲ್ಲ! – ಸುಪ್ರೀಂ ಕೋರ್ಟ್

ನಮ್ಮೊಂದಿಗೆ ಚೀನಾ ಪದೇ ಪದೇ ರಗಳೆ ಮಾಡುತ್ತಿದ್ದರೂ ಪ್ರಧಾನಿ ದಿವ್ಯ ಮೌನದಲ್ಲಿದ್ದಾರೆ. ಮೌನದ ಹಿಂದಿರುವುದು ಚೀನಾದ ಮೇಲಿನ ಭಯವೋ, ಅಸಹಾಯಕತೆಯೋ ದೇವರೆ ಬಲ್ಲ. ಆದರೆ ಬೆನ್ನಟ್ಟಿ ಬರುವ ಬೇಟೆಗಾರನಿಗೆ ಶಕ್ತಿಯಿಲ್ಲದಿದ್ದರೆ ಮೊಲ ಕೂಡ ಮೂರು ಕಾಲಲ್ಲಿ ಓಡುವಂತೆ ಚೀನಾ ಮೋದಿಯವರ ಪುಕ್ಕಲುತನವನ್ನು ಕೆಣಕುತ್ತಿದೆ. 56 ಇಂಚಿನ ಶೌರ್ಯ ಎಲ್ಲಿ? ಎಂದು ಹೇಳಿದ್ದಾರೆ.

ರಾಜಕೀಯ

ಹೊಸದಿಲ್ಲಿ: ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ.200 ಇಳಿಕೆ ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಉಜ್ವಲ ಯೋಜನೆಯಡಿಯ ಫಲಾನುಭವಿಗಳಿಗೆ ರೂ.200 ಹೆಚ್ಚುವರಿ ಸಹಾಯಧನ ನೀಡುವುದಾಗಿಯೂ ಘೋಷಿಸಲಾಗಿದೆ.

ಇಂದು (ಆ.29) ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಕೇಂದ್ರ ಸರ್ಕಾರ ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡುವುದಾಗಿ ಘೋಷಿಸಿದೆ. ಅದೇ ರೀತಿ ಉಜ್ವಲ ಯೋಜನೆಯಡಿಯ ಫಲಾನುಭವಿಗಳಿಗೆ ರೂ.200 ಹೆಚ್ಚುವರಿ ಸಹಾಯಧನ ನೀಡುವುದಾಗಿಯೂ ಘೋಷಿಸಲಾಗಿದೆ.

ಇದನ್ನೂ ಓದಿ: ಸ್ವಾಭಿಮಾನದ ಮದುವೆಗಳನ್ನು ವಕೀಲರೇ ನಡೆಸಬಹುದು; ನ್ಯಾಯಾಲಯದ ಪ್ರತಿನಿಧಿಯಾಗಿ ಅಲ್ಲ! – ಸುಪ್ರೀಂ ಕೋರ್ಟ್

ಇದರ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, “ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಎಲ್ಲಾ ಬಳಕೆದಾರರಿಗೆ ರೂ.200 ಇಳಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ರಕ್ಷಾ ಬಂಧನ್ ಆಚರಿಸುವ ಸಲುವಾಗಿ ದೇಶದ ಮಹಿಳೆಯರಿಗೆ ಇದು ಪ್ರಧಾನಿ ನರೇಂದ್ರ ಮೋದಿಯವರ ಉಡುಗೊರೆಯಾಗಿದೆ.

ಉಜ್ವಲ ಯೋಜನೆಯಡಿಯ ಫಲಾನುಭವಿಗಳಿಗೆ ರೂ.200 ಹೆಚ್ಚುವರಿ ಸಹಾಯಧನ ನೀಡಲಾಗುವುದು. ಇದರಿಂದ 10.35 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರೂ.7,500 ಕೋಟಿ ವೆಚ್ಚ ಮಾಡಲಿದೆ. ಹಾಗಾಗಿ ಈಗ ಉಜ್ವಲಾ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಖರೀದಿದಾರರು ರೂ.700ಕ್ಕೆ ಮತ್ತು ಇತರರು ರೂ.900ಕ್ಕೆ ಸಿಲಿಂಡರ್ ಖರೀದಿಸಬಹುದು.” ಎಂದು ಹೇಳಿದ್ದಾರೆ.

ದೇಶ

ಯಾವುದೇ ಧಾರ್ಮಿಕ ವಿಧಿಯಿಲ್ಲದೆ ಸ್ವಾಭಿಮಾನದ ವಿವಾಹವಾಗುತ್ತಿರುವ ದಂಪತಿಗಳನ್ನು ಪರಿಚಯವಿರುವ ವಕೀಲರು ಮಾನ್ಯತೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

1968ರಲ್ಲಿ, ತಮಿಳುನಾಡು ಸರ್ಕಾರ ಯಾವುದೇ ಸಾಮಾನ್ಯ ಧಾರ್ಮಿಕ ಆಚರಣೆಗಳಿಲ್ಲದೆ ಸ್ವಾಭಿಮಾನದ ವಿವಾಹಗಳನ್ನು ಗುರುತಿಸಲು ಕಾನೂನನ್ನು ಜಾರಿಗೆ ತಂದಿತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹಿಂದೂ ವಿವಾಹ ತಿದ್ದುಪಡಿ ಕಾಯ್ದೆಯೂ ಇದಕ್ಕೆ ಮನ್ನಣೆ ನೀಡಿತು. ಈ ಕಾನೂನು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸುತ್ತದೆ. ಅದೇ ವೇಳೆಯಲ್ಲಿ, ಅಂತಹ ವಿವಾಹಗಳನ್ನು ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳಬೇಕು.

ಈ ಹಿನ್ನಲೆಯಲ್ಲಿ ಇಳವರಸನ್ ಎಂಬುವವರು ಧಾರ್ಮಿಕ ಆಚರಣೆಗಳಿಲ್ಲದೆ ಸ್ವಾಭಿಮಾನದ ವಿವಾಹವನ್ನು ಮಾಡಿಕೊಂಡರು. ಆದರೆ, ಪತ್ನಿಯ ಸಂಬಂಧಿಕರು ವಿವಾಹಿತಳನ್ನು ಬಲವಂತವಾಗಿ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಇಳವರಸನ್ ಮದ್ರಾಸ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ವಕೀಲರ ಸಮ್ಮುಖದಲ್ಲಿಯೇ ಸ್ವಾಭಿಮಾನದ ವಿವಾಹ ನಡೆದಿರುವುದಾಗಿಯೂ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಸ್ವಾಭಿಮಾನದ ಮದುವೆಗಳನ್ನು ವಕೀಲರೇ ನಡೆಸಿ, ಆ ನಂತರ ಪ್ರಮಾಣಪತ್ರ ನೀಡುವಂತಿಲ್ಲ ಎಂದು ಆದೇಶಿಸಿ, ಇಳವರಸನ್ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ ಇಂತಹ ನಕಲಿ ವಿವಾಹ ಪ್ರಮಾಣ ಪತ್ರ ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಬಾರ್ ಕೌನ್ಸಿಲ್ ಗೆ ಸೂಚಿಸಿತು.

ನಂತರ ಇಳವರಸನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಸೋಮವಾರ ಅರ್ಜಿಯ ವಿಚಾರಣೆ ನಡೆಸಿತು. ನ್ಯಾಯಾಧೀಶರು ಎರಡೂ ಕಡೆಯ ವಾದವನ್ನು ಆಲಿಸಿ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದರು. ವಕೀಲರು ಸ್ವಾಭಿಮಾನಿ ವಿವಾಹಗಳನ್ನು ಗುರುತಿಸಬಹುದು ಎಂದೂ ಆದೇಶ ಮಾಡಿದರು.

“ಅದೇ ಸಮಯದಲ್ಲಿ, ವಕೀಲರು ದಂಪತಿಗಳ ವೈಯಕ್ತಿಕ ಪರಿಚಯವಾಗಿ ಮಾತ್ರ ಸ್ವಾಭಿಮಾನದ ಮದುವೆಗಳನ್ನು ಮಾಡಬಹುದು ಮತ್ತು ನ್ಯಾಯಾಲಯದ ಪ್ರತಿನಿಧಿಯಾಗಿ ಅಲ್ಲ” ಎಂದೂ ನ್ಯಾಯಾಧೀಶರು ಹೇಳಿದ್ದಾರೆ.