ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2024 » Page 2 of 7 » Dynamic Leader
October 23, 2024
Home 2024 September (Page 2)
ದೇಶ

ಡಿ.ಸಿ.ಪ್ರಕಾಶ್

ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಅಧ್ಯಯನ ನಡೆಸಲು ರಚಿಸಲಾದ ಜಂಟಿ ಸದನ ಸಮಿತಿಗೆ 1.25 ಕೋಟಿ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ ವಿದೇಶಿಯರ ಪಾತ್ರವಿರಬಹುದೆಂದು ಬಿಜೆಪಿ, ಸಂಸದ ನಿಶಿಕಾಂತ್ ದುಬೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸಿದೆ.

ವಕ್ಫ್ ಬೋರ್ಡ್ (Waqf Board) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ತಂದಿತು. ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿತು. ಚರ್ಚೆಯ ಸಂದರ್ಭದಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಗಣನೆಗೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು. ಇದರ ನಂತರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಯಿತು.

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಈ ಸಮಿತಿಗೆ ವಿವಿಧ ಪಕ್ಷಗಳ ಸದಸ್ಯರನ್ನು ನೇಮಿಸಲಾಗಿದೆ. ತಂಡವು ವಿವಿಧ ಪಕ್ಷಗಳಿಂದ ಸಲಹೆ ಪಡೆಯುತ್ತಿದೆ. ಸಾರ್ವಜನಿಕರು, ದತ್ತಿ ಸಂಸ್ಥೆಗಳು ಮತ್ತು ತಜ್ಞರು ಇಮೇಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಸಮಿತಿ ತಿಳಿಸಿತ್ತು. ಇದೀಗ ಇಮೇಲ್ ಮೂಲಕ 1.25 ಕೋಟಿ ಅಭಿಪ್ರಾಯಗಳು ದಾಖಲಾಗಿವೆ. ಈ ಮಟ್ಟಿಗೆ ಅಭಿಪ್ರಾಯಗಳು ಬರುತ್ತವೆ ಎಂದು ಸಂಸತ್ತಿನ ಜಂಟಿ ಸಮಿತಿಯೇ ನಿರೀಕ್ಷಿಸಿರಲಿಲ್ಲ.

ಅನುಮಾನ
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಕಳುಹಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey),  ‘ಜಂಟಿ ಸಮಿತಿಗೆ ಬಂದಿರುವ ಪ್ರತಿಕ್ರಿಯೆಗಳು ಹಿಂದೆಂದೂ ಕಾಣದು. ಇದು ವಿಶ್ವದಾಖಲೆ ಸೃಷ್ಟಿಸಿದೆ. ಇದರ ಹಿಂದೆ ಚೀನಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ, ಝಾಕಿರ್ ನಾಯಕ್ ಮುಂತಾದವರ ಕೈವಾಡ ಇರುವ ಸಾಧ್ಯತೆ ಇದೆ.

ವಿದೇಶಿ ಸಂಘಟನೆಗಳು ಅಥವಾ ಸಂಸ್ಥೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಅತಿಯಾಗಿ ಪ್ರತಿಕ್ರಿಯಿಸುವಲ್ಲಿ ತೊಡಗಿರುವ ಶಂಕೆ ಇದೆ. ಎಲ್ಲ ಉತ್ತರಗಳು ಎಲ್ಲಿಂದ ಬರುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ವಿವರವಾದ ತನಿಖೆಯಾಗಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಲ್ಪನೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರರು, ‘ಇಷ್ಟೊಂದು ಪ್ರತಿಕ್ರಿಯೆಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ, ಜಂಟಿ ಸದನ ಸಮಿತಿಗೆ 1.25 ಕೋಟಿ ಅಭಿಪ್ರಾಯಗಳು ಬಂದಿದೆ ಎಂದು ಕಡಿಮೆಗೊಳಿಸಿ ಹೇಳಲಾಗುತ್ತಿದೆ. 3.7 ಕೋಟಿ ಮುಸ್ಲಿಮರು ನಮ್ಮ ಪರವಾಗಿ ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ಇತರ ಮುಸ್ಲಿಂ ಸಂಘಟನೆಗಳೂ ವಕ್ಫ್ ಬೋರ್ಡ್ ಕಾಯಿದೆ ತಿದ್ದುಪಡಿ ಕುರಿತು ಪ್ರತಿಕ್ರಿಯೆಗಳನ್ನು ಕಳುಹಿಸಿವೆ. ಈ ಮೂಲಕ ಜಂಟಿ ಸದನ ಸಮಿತಿಗೆ 5 ಕೋಟಿ ಪ್ರತಿಕ್ರಿಯೆಗಳು ಬಂದಿರಬಹುದು.

ಸರ್ಕಾರ ಕೇಳಿದ್ದಕ್ಕೆ ಉತ್ತರಗಳು ಬಂದಿವೆ; ಇಷ್ಟೊಂದು ಜನ ಸ್ಪಂದಿಸಿರುವುದರಲ್ಲಿ ಸಮಸ್ಯೆ ಏನಿದೆ? ವಿದೇಶಿಯರ ಪಾತ್ರ ಎಂಬುದೆಲ್ಲ ಕಾಲ್ಪನಿಕ. ಏಕರೂಪ ನಾಗರಿಕ ಸಂಹಿತೆಯ (UCC) ಬಗ್ಗೆ 4.85 ಕೋಟಿ ಜನರು ಅಭಿಪ್ರಾಯಗಳನ್ನು ಕಳುಹಿಸಿದ್ದರು’ ಎಂದು ಹೇಳಿದ್ದಾರೆ.

ಖಂಡನೆ
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಶಕ್ತಿ ಸಿನ್ಹಾ ಗೋಹಿಲ್ (Shaktisinh Gohil), ‘ಭಾರತದಂತಹ ದೊಡ್ಡ ದೇಶದಲ್ಲಿ 1.5 ಕೋಟಿ ಜನರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು ಬಿಜೆಪಿಗೆ ನೋವು ತಂದಿದೆ. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಚಿದಂಬರಂ ನಟರಾಜ ದೇಗುಲಕ್ಕೆ ಸೇರಿದ 2 ಸಾವಿರ ಎಕರೆ ಭೂಮಿಯನ್ನು ದೇವಸ್ಥಾನದ ದೀಕ್ಷಿತರು ಮಾರಾಟ ಮಾಡಿದ್ದಾರೆ ಎಂದು ಮುಜರಾಯಿ ಇಲಾಖೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ವಿವರಗಳನ್ನು ವರದಿಯಾಗಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಚಿದಂಬರಂ ನಟರಾಜ ದೇವಸ್ಥಾನವು 2008 ರಿಂದ 2014 ರವರೆಗೆ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲಿದ್ದಾಗ ವಾರ್ಷಿಕ ರೂ.3 ಕೋಟಿಗೂ ಹೆಚ್ಚು ಆದಾಯ ಗಳಿಸಿತ್ತು. ದೀಕ್ಷಿತರ ಹಿಡಿತಕ್ಕೆ ಬಂದ ನಂತರ ವಾರ್ಷಿಕ ಕೇವಲ 2 ಲಕ್ಷ ರೂ.ಗಳು ಮಾತ್ರ ಆದಾಯ ಬರುತ್ತಿರುವುದರಿಂದ ದೇವಸ್ಥಾನದ ಆಯವ್ಯಯವನ್ನು ಸಲ್ಲಿಸಲು ಆದೇಶ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ನ್ಯಾಯಾಧೀಶರಾದ ಆರ್.ಸುರೇಶ್ ಕುಮಾರ್, ಎಸ್.ಸೌಂದರ್ ಅವರನ್ನೊಳಗೊಂಡ ಪೀಠದಲ್ಲಿ ಗುರುವಾರ ಮತ್ತೆ ವಿಚಾರಣೆಗೆ ಬಂದಿತ್ತು.

ಆಗ, ಸಾಮಾನ್ಯ ದೀಕ್ಷಿತರ ಕಡೆಯಿಂದ, ದೇವಸ್ಥಾನದ ಲೆಕ್ಕಪರಿಶೋಧಕ ಬಜೆಟ್‌ನ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಅಲ್ಲದೆ, “ದೇವಸ್ಥಾನಕ್ಕೆ ಸೇರಿದ ಸಾವಿರ ಎಕರೆ ಭೂಮಿಯನ್ನು ಮುಜರಾಯಿ ಇಲಾಖೆಯ ಜಿಲ್ಲಾಧಿಕಾರಿ ನಿರ್ವಹಣೆ ಮಾಡುತ್ತಿದ್ದಾರೆ. ಆ ಜಮೀನಿನಿಂದ ಬಾಡಿಗೆ ಆದಾಯವಾಗಿ ಕೇವಲ ರೂ.93 ಸಾವಿರ ಮಾತ್ರ ಸಿಗುತ್ತದೆ. ರಾಜರು ಮತ್ತು ದಾನಿಗಳು ನಟರಾಜ ದೇವಸ್ಥಾನಕ್ಕೆ ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು, ಈಗ ಕೇವಲ ಒಂದು ಸಾವಿರ ಎಕರೆ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಆ ನಿಟ್ಟಿನಲ್ಲಿಯೂ ವರದಿ ಸಲ್ಲಿಸಲು ಆದೇಶಿಸಬೇಕು.

ಅದೇ ರೀತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಅರ್ಪಿಸುವ ಕಾಣಿಕೆಯನ್ನು ದೀಕ್ಷಿತರು ತೆಗೆದುಕೊಂಡು ಹೋದರೂ ಅಗತ್ಯ ಬಿದ್ದರೆ ದೇವಸ್ಥಾನ ಆಡಳಿತ ಮಂಡಳಿಗೆ ಕಾಣಿಕೆ ಮೊತ್ತದಲ್ಲಿ ಭಾಗವನ್ನೂ ನೀಡಲಾಗುತ್ತದೆ. ದೇಣಿಗೆಯ ಆದಾಯ ಮತ್ತು ವೆಚ್ಚದ ಖಾತೆಯನ್ನು ನಿರ್ವಹಿಸಲು ನಾವು ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಲು ಸಿದ್ಧರಿದ್ದೇವೆ” ಎಂದು ಹೇಳಲಾಯಿತು. ಆಗ ಮುಜರಾಯಿ ಇಲಾಖೆ ವತಿಯಿಂದ, “ಚಿದಂಬರ ನಟರಾಜ ದೇವಸ್ಥಾನಕ್ಕೆ 3 ಸಾವಿರ ಎಕರೆ ಜಮೀನಿದ್ದು, ಅದರಲ್ಲಿ 2 ಸಾವಿರ ಎಕರೆ ಜಮೀನನ್ನು ದೇವಸ್ಥಾನದ ದೀಕ್ಷಿತರು ತಮ್ಮ ಇಚ್ಛೆಯಂತೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಲಾಯಿತು.

“ಎರಡೂ ಕಡೆಯ ವಾದಗಳಿಂದ ತಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ” ಎಂದು ಹೇಳಿದ ನ್ಯಾಯಾಧೀಶರು, ಕಳೆದ 2017-18 ರಿಂದ 2021-22ರ ಅವಧಿಯ ವರೆಗಿನ ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ದೀಕ್ಷಿತರ ಕಡೆಯವರಿಗೆ ಸೂಚಿಸಿದರು. ಅಲ್ಲದೆ, ಭಕ್ತಾದಿಗಳಿಂದ ಬರುವ ಕಾಣಿಕೆ ಮತ್ತು ವೆಚ್ಚಗಳ ಕುರಿತು ಲೆಕ್ಕ ಇಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿ; ಅದರ ಕರಡು ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಧೀಶರು ದೀಕ್ಷಿತರ ಕಡೆಯವರಿಗೆ ಆದೇಶಿಸಿದರು.

ಪ್ರಸ್ತುತ ದೇವಸ್ಥಾನ ಎಷ್ಟು ಎಕರೆ ಜಮೀನು ಹೊಂದಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಹಾಗೆಯೇ ದೇವಸ್ಥಾನಕ್ಕೆ ಸೇರಿದ 2,000 ಎಕರೆ ಜಮೀನನ್ನು ದೇವಸ್ಥಾನ ದೀಕ್ಷಿತರು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಮುಜರಾಯಿ ಇಲಾಖೆಗೆ ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದ್ದಾರೆ.

ರಾಜಕೀಯ ಸಿನಿಮಾ

ಡಿಯರ್ ಪವನ್ ಕಲ್ಯಾಣ್, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೋಂಡು ಮಾತನಾಡಿರುವುದು ಆಶ್ಚರ್ಯಕರವಾಗಿದೆ – ನಟ ಪ್ರಕಾಶ್ ರಾಜ್

ತಿರುಪತಿ ಲಡ್ಡು ವಿಚಾರದಲ್ಲಿ ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸಬೇಕು ಎಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿರುವುದಕ್ಕೆ ನಟ ಪ್ರಕಾಶ್ ರಾಜ್, “ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲೇ ಈ ಘಟನೆ ನಡೆದಿದೆ.

ದಯವಿಟ್ಟು ವಿಚಾರಿಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ಈ ಸಮಸ್ಯೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೃಹದಾಕಾರವಾಗಿ ಬಿಂಬಿಸಿ ಏಕೆ ಭಯವನ್ನು ಹರಡುತ್ತಿದ್ದೀರಿ? ದೇಶವು ಈಗಾಗಲೇ ಸಾಕಷ್ಟು ಹಿಂಸಾತ್ಮಕ ಉದ್ವಿಗ್ನತೆಯನ್ನು ಹೊಂದಿದೆ. ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು” ಎಂದು ಹೇಳಿದ್ದರು.

ಇದಕ್ಕಾಗಿ ನಟ ಪ್ರಕಾಶ್ ರಾಜ್ ಅವರನ್ನು ಪವನ್ ಕಲ್ಯಾಣ್ ತೀವ್ರವಾಗಿ ಟೀಕಿಸಿದ್ದರು. “ನಮ್ಮ ಭಾವನೆಗಳನ್ನು ಗೇಲಿ ಮಾಡಬೇಡಿ. ಈ ಘಟನೆ ನಿಮಗೆ ತಮಾಷೆಯಾಗಿ ಕಾಣಿಸಬಹುದು. ಆದರೆ ನಮಗೆ ಹಾಗಲ್ಲ. ಇದು ಆಳವಾದ ನೋವನ್ನು ಉಂಟುಮಾಡಿದೆ. ಸನಾತನ ಧರ್ಮದ ಬಗ್ಗೆ ಮಾತನಾಡುವ ಮುನ್ನ 100 ಬಾರಿ ಯೋಚಿಸಿ” ಎಂದು ಹೇಳಿದ್ದರು.

ಇದಕ್ಕೆ ತಮ್ಮ ‘ಎಕ್ಸ್’ ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರಾಜ್, “ಡಿಯರ್ ಪವನ್ ಕಲ್ಯಾಣ್, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೋಂಡು ಮಾತನಾಡಿರುವುದು ಆಶ್ಚರ್ಯಕರವಾಗಿದೆ.

ವಿದೇಶದಲ್ಲಿ ಶೂಟಿಂಗ್ ನಲ್ಲಿ ಇದ್ದೇನೆ. ಅದನ್ನು ಮುಗಿಸಿಕೊಂಡು 30ನೇ ತಾರೀಖಿನ ನಂತರ ನಿಮ್ಮ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡುತ್ತೇನೆ. ಅಷ್ಟರೊಳಗೆ ನನ್ನ ಹಳೆಯ ಪೋಸ್ಟ್‌ಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದು ಇಂದು ನಡೆದ ಮಾಧ್ಯಮ ಘೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ.

ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ಎಸ್ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು.

ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ಎಸ್ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ.

ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ.

ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ.

ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು, ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ.

ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ.

ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ.

ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ.

ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ಮನವಿ ಮಾಡುತ್ತೇನೆ.

ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ.

ಇದೇ ಬಿಜೆಪಿ, ಜೆಡಿಎಸ್  ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ.

ಇಂದು ನನ್ನ ವಿರುದ್ಧ ರಾಜಕೀಯ ಸಂಚು ನಡೆಸುತ್ತಿರುವ ಇದೇ ನಾಯಕರು ಎಸ್‌ಸಿಎಸ್‌ಪಿ/ಟಿಎಸ್‌‌ಪಿ ಕಾಯ್ದೆಯನ್ನು ವಿರೋಧಿಸಿದ್ದಾರೆ.

ಕರ್ನಾಟಕದ ಜನತೆ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತ ನೀಡಿಲ್ಲ. ಇಲ್ಲಿಯ ವರೆಗೆ ಬಿಜೆಪಿ ಅನೈತಿಕವಾಗಿ, ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು.

ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ.

ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ. ಎಂದು ಹೇಳಿದರು.

ರಾಜಕೀಯ

“ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ” ಕಾಂಗ್ರೆಸ್

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

“ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ” ಎಂದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​​, ಮುಖ್ಯಮಂತ್ರಿ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ” ಎಂದಿದೆ. ಮುಖ್ಯಮಂತ್ರಿ ಪರ ವಕೀಲರ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು. ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ಸೆಕ್ಷನ್ 17 ಎ ಅಡಿಯಲ್ಲಿ ನೋಡಬೇಕು. ರಾಜ್ಯಪಾಲರು ತೀರ್ಪು ನೀಡಿಲ್ಲ ಮತ್ತು ನೀಡುತ್ತಿಲ್ಲ. ತನಿಖೆಗೆ ಅನುಮತಿಯಷ್ಟೇ ನೀಡುತ್ತಿದ್ದಾರೆ. ಹೀಗಾಗಿ ಅವರು ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದಂತೆ ಆಗುವ ಸಾಧ್ಯತೆ ಇರುತ್ತದೆ ಎಂದು ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ “ಹೋರಾಟ ಮುಂದುವರೆಯಲಿದೆ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯಪಾಲರ ಪ್ರಯತ್ನಕ್ಕೆ, ಬಿಜೆಪಿಯ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ, ಈ ಬಗ್ಗೆ ದೂರುಗಳು ಹೇಗೆ ಸೋರಿಕೆಯಾದವು ಎಂದು ರಾಜ್ಯಪಾಲರ ಪ್ರಶ್ನೆಯೇ ಅವರ ತಾರತಮ್ಯದ ರಾಜಕೀಯಕ್ಕೆ ಪುರಾವೆ ಒದಗಿಸುತ್ತವೆ” ಎಂದು ಹೇಳಿದೆ.

ವಿದೇಶ

ಟೆಲ್ ಅವಿವ್: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ಸ್ಥಾನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೇನೆಯ ರಾಕೆಟ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 492 ಜನರು ಸಾವನ್ನಪ್ಪಿದ್ದಾರೆ; 700ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಳೆದ ವರ್ಷ ಪಶ್ಚಿಮ ಏಷ್ಯಾ ರಾಷ್ಟ್ರವಾದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಹಮಾಸ್‌ಗೆ ಬೆಂಬಲವಾಗಿ, ಇಸ್ರೇಲ್‌ನ ನೆರೆಯ ದೇಶವಾದ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಕೂಡ ಸಾಂದರ್ಭಿಕ ದಾಳಿಗಳಲ್ಲಿ ತೊಡಗಿದೆ.

ಇದನ್ನು ಕೊನೆಗೊಳಿಸುವ ಸಲುವಾಗಿ, ಇಸ್ರೇಲ್ ಹಿಜ್ಬುಲ್ಲಾ ಮೇಲೆ ನೇರ ದಾಳಿ ನಡೆಸಿತ್ತು. ಗುಪ್ತಚರ ಏಜೆನ್ಸಿಗಳ ಸಹಾಯದಿಂದ, ಪೇಜರ್‌ಗಳು, ವಾಕಿ-ಟಾಕಿಗಳನ್ನು ಪ್ರತಿಬಂಧಗೊಳಿಸಿ ಸ್ಪೋಟಿಸಿತ್ತು. ಮುಂದುವರಿದು, ಲೆಬನಾನ್‌ನಲ್ಲಿ ಅಡಗಿರುವ ಹಿಜ್ಬುಲ್ಲಾ ಪಡೆಗಳ ವಿರುದ್ಧ ವೈಮಾನಿಕ ದಾಳಿಯನ್ನು ಸಹ ಪ್ರಾರಂಭಿಸಿದೆ. ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿರುವ ದಾಳಿಯಲ್ಲಿ ನೂರಾರು ಮಂದಿ ಬಲಿಯಾಗಿದ್ದಾರೆ.

ದಾಳಿಯ ಸ್ವಲ್ಪ ಸಮಯದ ಹಿಂದೆ, ಇಸ್ರೇಲ್‌ನಿಂದ ಲೆಬನಾನಿನ ನಗರಗಳಿಗೆ ಫೋನ್ ಕರೆಗಳು ಹೋಗಿದೆ. ಅದರಲ್ಲಿ, ‘ವೈಮಾನಿಕ ದಾಳಿ ನಡೆಯಲಿರುವ ಕಾರಣ ತಕ್ಷಣ ಮನೆಯಿಂದ ಹೊರಬನ್ನಿ’ ಎಂಬ ಎಚ್ಚರಿಕೆಯ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ. ಮುಂದಿನ ಕೆಲವು ನಿಮಿಷಗಳಲ್ಲಿ ಇಸ್ರೇಲಿ ವಿಮಾನಗಳು ಬಾಂಬ್‌ಗಳ ಮಳೆಗರೆದವು.

ಇಂತಹ ದಾಳಿಯಲ್ಲಿ ಸತ್ತವರ ಸಂಖ್ಯೆ 500ರ ಸಮೀಪದಲ್ಲಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), “ಹಾನಿ ಮಾಡುವವರು ಹೊರನಡೆಯಿರಿ; ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಇರಾನ್ ಸರ್ಕಾರ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.

“ನಮಗೆ ಹೋಗಲು ಬೇರೆ ಸ್ಥಳಗಳಿಲ್ಲ” ಎಂದು ಇಸ್ರೇಲಿ ದಾಳಿಯಿಂದ ಪಲಾಯನ ಮಾಡುತ್ತಿರುವ ಲೆಬನಾನ್‌ನಿಂದ ಸ್ಥಳಾಂತರಗೊಳ್ಳುವ ಜನರು ಕಣ್ಣೀರಿನಿಂದ ಹೇಳಿದರು.

ದೇಶ

ಡಿ.ಸಿ.ಪ್ರಕಾಶ್

ತಿರುಪತಿ ವೆಂಕಟಾಚಲಪತಿ ದೇವಸ್ಥಾನದಲ್ಲಿ ಮಾರಾಟ ಮಾಡುವ ಜಗತ್ ಪ್ರಸಿದ್ಧ ಪ್ರಸಾದವಾದ ಲಡ್ಟುವನ್ನು ಗೋಮಾಂಸದ ಕೊಬ್ಬನ್ನು ತುಪ್ಪದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿರುವುದರಿಂದ ಪ್ರಸಾದದಲ್ಲಿ ಗೋಮಾಂಸದ ಕೊಬ್ಬನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ಆಹಾರಗಳಲ್ಲಿ ದನದ ಕೊಬ್ಬನ್ನು ಬೆರೆಸಿದ ತುಪ್ಪವನ್ನು ಬಳಸುವುದು ಹೊಸದೇನಲ್ಲ.

ಗೋಮಾಂಸದಿಂದ ಕೊಬ್ಬನ್ನು ಹೇಗೆ ತಯಾರಿಸಲಾಗುತ್ತದೆ?
ಕಟುವಾದ ಗೋಮಾಂಸದಲ್ಲಿ ಅಧಿಕ ಕೊಬ್ಬು ಇರುವ ಅಂಗಾಂಶಗಳನ್ನು ಕತ್ತರಿಸಿ, ಕುದಿಯುವ ನೀರಿನಲ್ಲಿ ಬೇಯಿಸಿ, ಅದರಲ್ಲಿನ ಕಲ್ಮಶವನ್ನು ತೆಗೆದುಹಾಕಿ, ಅದನ್ನು ಸಂಸ್ಕರಿಸಿದಾಗ ಗೋಮಾಂಸದ ಕೊಬ್ಬು ಬೆಣ್ಣೆಯಂತಹ ರೂಪದಲ್ಲಿ ಸಿಗುತ್ತದೆ.

ಹಸುವಿನ ಮೂತ್ರಪಿಂಡವನ್ನು ಸುತ್ತುವರೆದಿರುವ ಮಾಂಸದಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವುದರಿಂದ ಅದರಿಂದಲೇ ಹೆಚ್ಚಾಗಿ ಕೊಬ್ಬನ್ನು ತಯಾರಿಸಲು ಗೋಮಾಂಸವನ್ನು ಪಡೆಯಲಾಗುತ್ತದೆ. ಈ ಕೊಬ್ಬು ಸೇವಿಸಲು ಯೋಗ್ಯವಾದದ್ದು. ಈ ಕೊಬ್ಬನ್ನು ಅಧಿಕ ತಾಪಮಾನದಲ್ಲಿ ಹುರಿದು, ರೋಸ್ಟ್ ಮಾಡಲಾದ ಆಹಾರಗಳಲ್ಲಿ ಸುವಾಸನೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ.

ಅನುಕೂಲಗಳು ಮತ್ತು ಅನಾನುಕೂಲಗಳು:
ಈ ದನದ ಕೊಬ್ಬಿನಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗುವ ಮೊನೊ ಮತ್ತು ಪಾಲಿ (Mono and Poly Unsaturated) ಕೊಬ್ಬುಗಳು ಸಮೃದ್ಧವಾಗಿದೆ. ಇದರಲ್ಲಿರುವ Conjugated Linoleic Acid (CLA) ಮತ್ತು omega-6 ಕೊಬ್ಬು ರಕ್ತನಾಳಗಳ ಅಡಚಣೆ ಸೇರಿದಂತೆ ಸಮಸ್ಯೆಗಳನ್ನು ತಡೆಯುತ್ತದೆ.

ದನದ ಕೊಬ್ಬಿನಲ್ಲಿ ರೋಗ ನಿರೋಧಕತೆ, ಮೂಳೆ ಮತ್ತು ಚರ್ಮದ ಆರೋಗ್ಯ ಸೇರಿದಂತೆ ದೇಹದ ವಿವಿಧ ಕಾರ್ಯಗಳಿಗೆ ಅಗತ್ಯವಾದ ಕೊಬ್ಬು-ಕರಗಬಲ್ಲ (fat-soluble) ಜೀವಸತ್ವಗಳು ಅಡಗಿದೆ. ಆದಾಗ್ಯೂ, ಇದರ ಅತಿಯಾದ ಸೇವನೆಯು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. 

ವಿದೇಶ

ಕೊಲಂಬೊ: ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಅನುರ ಕುಮಾರ ದಿಸ್ಸನಾಯಕೆ (Anura Kumara Dissanayake) ಪ್ರಮಾಣ ವಚನ ಸ್ವೀಕರಿಸಿದರು. ಕೊಲಂಬೊದ ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿ ಜಯಂತ್ ಸೂರ್ಯ ಅವರು ಅನುರ ಕುಮಾರ ದಿಸ್ಸನಾಯಕೆ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ “ರಾಷ್ಟ್ರೀಯ ಜನ ಶಕ್ತಿ” ನಾಯಕ ಅನುರ ಕುಮಾರ ದಿಸ್ಸನಾಯಕೆ 55.89% ಮತಗಳೊಂದಿಗೆ ಗೆದ್ದು, “ಆಡಳಿತ ಬದಲಾವಣೆ ಮಾತ್ರವಲ್ಲ ಆರ್ಥಿಕ ಅಭಿವೃದ್ಧಿಯೂ ಅಗತ್ಯ” ಎಂಬ ಘೋಷಣೆಯೊಂದಿಗೆ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾದ ಅವರನ್ನು ಬೌದ್ಧ ಸನ್ಯಾಸಿಗಳು ಕೈಗೆ ದಾರ ಕಟ್ಟಿ ಅಭಿನಂದಿಸಿದರು. ನೂತನ ಅಧ್ಯಕ್ಷರ ಜೊತೆಗೆ 15 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಅಗತ್ಯವಾಗಿದೆ. ಸಿಂಹಳೀಯರು, ತಮಿಳರು ಮತ್ತು ಮುಸ್ಲಿಮರ ಐಕ್ಯತೆಯು ಹೊಸ ಆರಂಭದ ಬುನಾದಿಯಾಗಿದೆ. ಐಕ್ಯತೆಯಿಂದ ಭವಿಷ್ಯವನ್ನು ರೂಪಿಸಿಕೊಳ್ಳೋಣ” ಎಂದು ದಿಸ್ಸನಾಯಕೆ ಹೇಳಿದರು.

ಏತನ್ಮಧ್ಯೆ, ಶ್ರೀಲಂಕಾದ ಅಧಿಕಾರವು ಮೊದಲ ಬಾರಿಗೆ ಕಮ್ಯುನಿಸ್ಟರ ಪಾಲಾಗಿರುವುದರಿಂದ, ಶ್ರೀಲಂಕಾ – ಭಾರತದ ಸಂಬಂಧ ಏನಾಗಬಹುದು? ಅನುರ ಕುಮಾರ ದಿಸ್ಸನಾಯಕೆ ಅವರು ಚೀನಾದ ಪರವಾದ ನಿಲುವು ತಳೆಯುತ್ತಾರೆಯೇ? ಚೀನಾ ಪ್ರಾಬಲ್ಯ ಹೊಂದಿರುವುದರಿಂದ ಭಾರತವನ್ನು ಬೆಂಬಲಿಸುವ ನಿಲುವು ತೆಗೆದುಕೊಳ್ಳುತ್ತಾರೆಯೇ? ಶ್ರೀಲಂಕಾದ ತಮಿಳರು ಮತ್ತು ಮುಸ್ಲಿಮರ ಜೀವನದಲ್ಲಿ ಪುನರುಜ್ಜೀವನ ಉಂಟಾಗಲಿದೆಯೇ? ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಲೇಖನ

ಡೈನಾಮಿಕ್ ಲೀಡರ್‌ನಲ್ಲಿ ಇದುವರೆಗೂ ಪ್ರಕಟಣೆಗೊಂಡ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಖಾಸಿಂ ಸಾಬ್ ಅವರ ಬರಹ / ಭಾಷಣ / ಹೇಳಿಕೆಗಳ ಸಂಗ್ರಹವನ್ನು ಮರು ಓದಿಗಾಗಿ ಎಲ್ಲಾ ಲಿಂಕ್‌ಗಳನ್ನು ಒಂದೆಡೆ ನಿಮಗಾಗಿ ಸಂಗ್ರಹಿಸಿ ಕೊಡಲಾಗಿದೆ; ತಪ್ಪದೆ ಓದಿ.

ಹಿಂದಿನ ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಮರನ್ನು EWS ವರ್ಗಕ್ಕೆ ಸೇರಿಸಿ ಮುಖ್ಯಮಂತ್ರಿ ಬೊಮ್ಮಾಯಿ ಧರ್ಮ ದ್ವೇಷದ ಕ್ರಮ; ಕರ್ನಾಟಕ ಮುಸ್ಲಿಂ ಯುನಿಟಿ ಖಂಡನೆ!

ದಿನಾಂಕ: 25-03-2023
ಬೆಂಗಳೂರು: ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನ ಬದ್ಧವಾಗಿ ನೀಡಿರುವ ಶೇಕಡಾ 4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರ ಮೀಸಲಾತಿ ಬದಲಾವಣೆ; ನ್ಯಾಯ ಸಮ್ಮತವೆ.!?

ದಿನಾಂಕ: 27-03-2023
ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನಬದ್ಧವಾಗಿ ನೀಡಿರುವ ಶೇ.4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡಿ ಬದಲಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಮುಸ್ಲಿಮರ ಕುರಿತಾದ ತಮ್ಮ ಮಲತಾಯಿ ಧೋರಣೆಯನ್ನು ಹಿಜಾಬ್, ಅಝ, ಗೋಹತ್ಯೆ ನಿಷೇದಗಳ ನಂತರದ ಮುಸ್ಲಿಮ್ ವಿರೋಧಿ ನಿಲುವುಗಳ ಮುಂದುವರಿವಿಕೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಬಿ.ಝಡ್.ಜಮೀರ್ ಅಹಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಕರ್ನಾಟಕ ಮುಸ್ಲಿಮ್ ಯುನಿಟಿ!

ದಿನಾಂಕ: 14-05-2023
ಈ ಭಾರಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮುತುವರ್ಜಿಯಿಂದ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಕಾಂಗ್ರೆಸ್ಸಿನೊಂದಿಗೆ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ನಿರೀಕ್ಷೆಗಳಿವೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯಾಧ್ಯಕ್ಷರಾಗಿ ಜಬ್ಬಾರ್ ಕಲಬುರ್ಗಿ ಆಯ್ಕೆ: ಖಾಸಿಂ ಸಾಬ್

ದಿನಾಂಕ: 20-06-2023
ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿಯು ಪುನರ್ ರಚನೆಯಾಗಿದ್ದು, ಜನಾಬ್ ಜಬ್ಬಾರ್ ಕಲಬುರ್ಗಿ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಂದು ಕೆ.ಎಂ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಖಾಸಿಂ ಸಾಬ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಶಾಂತಿ ಕದಡುವ ಹೇಳಿಕೆಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ! ಶೇಕಬ್ಬ-KMU

ದಿನಾಂಕ: 03-07-2023
ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ.
(ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮುಖಾಂತರ ಕರ್ನಾಟಕ ಮುಸ್ಲಿಮ್ ಯುನಿಟಿ ಪತ್ರ!

ದಿನಾಂಕ: 06-07-2023
ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಸಾಮಾಜಿಕ-ಆರ್ಥಿಕ-ಉದ್ಯೋಗ ಕ್ಷೇತ್ರಗಳಲ್ಲಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ 2023-24ರ ಬಜೆಟ್ ನಲ್ಲಿ, ಸಾಮಾಜಿಕ ನ್ಯಾಯದ ಯೋಜನೆಗಳನ್ನು ಘೋಷಣೆ ಮಾಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಮನವಿ ಮಾಡಿದೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಮುಸ್ಲಿಮರು ಸರ್ಕಾರದ ಎಲ್ಲಾ ಯೋಜನೆಗಳ ಪಾಲುದಾರರು ಆಗಬೇಕು! ಕರ್ನಾಟಕ ಮುಸ್ಲಿಮ್ ಯೂನಿಟಿ (KMU)

ದಿನಾಂಕ: 31-07-2023
ಕರ್ನಾಟಕ ಮುಸ್ಲಿಮ್ ಯೂನಿಟಿ (KMU) ಬಾಗಲಕೋಟೆ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಮುಸ್ಲಿಮರ ಐಕ್ಯತಾ ಸಮಾವೇಶವು ಬಾಗಲಕೋಟೆ ಜಿಲ್ಲೆಯ ಹುನುಗುಂದ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ತನ್ವೀರ್ ಪೀರಾ ರವರ ಕುರಿತು ಯತ್ನಾಳರ ತೇಜೋವದೆ ಹೇಳಿಕೆಯನ್ನು KMU ತೀವ್ರವಾಗಿ ಖಂಡಿಸುತ್ತದೆ: ಎ.ಖಾಸಿಂ ಸಾಬ್

ದಿನಾಂಕ: 07-12-2023
ವಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಒಂದು ಚಿತ್ರವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿ ಸಂಚಲನ ಮೂಡಿಸಿದರು. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಭಾರತದ ಮೊದಲ ದಲಿತ ಪ್ರಧಾನಿ? ತೊಡಕು ಮತ್ತು ಸಾಧ್ಯತೆಗಳು: ಒಂದು ನೋಟ

ದಿನಾಂಕ: 23-12-2023
ಸಾವಿರಾರು ವರ್ಷಗಳ ಕಾಲದಿಂದ ವರ್ಣ ಜಾತಿಯ ಕಾರಣಕ್ಕಾಗಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರದ ಎಲ್ಲಾ ಅವಕಾಶಗಳಿಂದ ವಂಚಿತರಾಗಿರುವ ದಲಿತರು, ನಾಗರಿಕ ಹಕ್ಕುಗಳು ಮತ್ತು ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲಾ ರಾಜಕೀಯ ಅವಕಾಶಗಳಿಂದ ಇಂದಿಗೂ ವಂಚಿತರಾಗಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಮಾನ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ಬಹಿರಂಗ ಪತ್ರ: ಖಾಸಿಂ ಸಾಬ್ ಎ

ದಿನಾಂಕ: 04-01-2024
ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಪೆರಿಯಾರ್ ವಾದಿಗಳು, ಜಾತ್ಯತೀತ ಸಿದ್ಧಾಂತಃ ನಂಬಿರುವ ನೀವು ಇತ್ತೀಚಿಗೆ ಒಂದು ಹೇಳಿಕೆಯನ್ನು ನೀಡಿದ್ದೀರಾ. “ಅಯೋಧ್ಯೆಗೆ ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು; ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು” ಎನ್ನುವುದು ನಿಮ್ಮ ಹೇಳಿಕೆಯಾಗಿತ್ತು. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಖಂಡನೀಯ! ಖಾಸಿಂ ಸಾಬ್

ದಿನಾಂಕ: 19-04-2024
ಬೆಂಗಳೂರು: ಹುಬ್ಬಳ್ಳಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಫಯಾಜ್‌ ಎಂಬ ಯುವಕ ನೇಹಾ ಎಂಬ ಯುವತಿಯನ್ನು ತಾನು ಓದುತ್ತಿರುವ ಕಾಲೇಜಿನ ಆವರಣದಲ್ಲಿಯೆ ಇರಿದು ಕೊಂದಿದ್ದಾನೆ. ಇಬ್ಬರೂ ಪರಿಚಿತರಿದ್ದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂಬುದೇ ಕೊಲೆಗೆ ಕಾರಣ ಎನ್ನಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ನಿಧನಕ್ಕೆ ಕೆಎಂಯು ಸಂತಾಪ!

ದಿನಾಂಕ: 08-07-2024
ಉಳ್ಳಾಲದ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸುಪುತ್ರರು, ಇಸ್ಲಾಂ ಧಾರ್ಮಿಕ ಪಂಡಿತರ ಕುಟುಂಬದ ನೇತಾರರು, ಹಲವಾರು ಮಸೀದಿಗಳ ಖಾಝಿಗಳು, ಗೌರವಾಧ್ಯಕ್ಷರು, ಆದ್ಯಾತ್ಮಿಕ ಗುರುಗಳು, ಸಾವಿರಾರು ಧಾರ್ಮಿಕ ಮುಖಂಡರ ಮಾರ್ಗದರ್ಶಿಗಳು, ತಮ್ಮ ಒಟ್ಟು ಜೀವಿತ ಅವಧಿಯನ್ನು ಸಮಾಜಕ್ಕಾಗಿ ಮುಡುಪಾಗಿ ಇಟ್ಟಿದ್ದ ಹಜ್ರತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರು ನಮ್ಮೆಲ್ಲರನ್ನು ಅಗಲಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

Part-1: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ..!? – ಖಾಸಿಂ ಸಾಬ್ ಎ.

ದಿನಾಂಕ: 22-07-2024
ನವೀನ್ ಸೂರಿಂಜೆ., ಕರ್ನಾಟಕದ ಮದರಸ – ಕನ್ನಡ ಕಲಿಕೆ – ಕೋಮುವ್ಯಾದಿ ನುಸುಳುವಿಕೆ ಕುರಿತು ನಿಮ್ಮ ನೀಲುವನ್ನು ಬದಲಾವಣೆ ಮಾಡಿಕೊಳ್ಳಲು, ನೀವು ಇತ್ತೀಚೆಗೆ ಪ್ರಕಟಿಸಿದ ಎರಡು ಲೇಖನಗಳ ಎರಡು ಭಾಗಗಳಿಗೆ ನನ್ನ ಪ್ರಶ್ನೆ – ಪ್ರತಿಕ್ರಿಯೆಗಳು! (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

Part-2: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆಯ ದಾಳಿ: ನವೀನ್ ಸೂರಿಂಜೆಯವರ ಎರಡನೇಯ ಲೇಖನಕ್ಕೆ ಪ್ರತಿಕ್ರಿಯೆ!

ದಿನಾಂಕ: 24-07-2024
ಕಾಂ.ನವೀನ್ ಸೂರಿಂಜೆ ಅವರೇ, ನೀವು ಅಥವಾ ಈಗಿನ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ – ಮದರಸಗಳಲ್ಲಿ ಕನ್ನಡಕಲಿಕೆ’ ನಿಲುವನ್ನು ಒಪ್ಪದಿರುವ ಎಡಪಂತಿಯ ಅಥವಾ ಜಾತ್ಯತೀತ ಕಾಂಗ್ರೆಸ್ಸಿಗರ ಗಮನಕ್ಕೆ ಈ ಒಂದು ಪ್ರತಿಕ್ರಿಯೆ! (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ವಕ್ಫ್ ಬೋರ್ಡ್ ಸ್ವತಂತ್ರವನ್ನು ಮೋಟಕುಗೊಳಿಸುವ ಕೇಂದ್ರ ಸರಕಾರದ ಯೋಜನೆಗೆ KMU ವಿರೋಧ!

ದಿನಾಂಕ: 06-08-2024
“ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ!”- ಕರ್ನಾಟಕ ಮುಸ್ಲಿಂ ಯುನಿಟಿ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಇಸ್ಮಾಯಿಲ್ ತಮಟಗಾರರ ಮನೆಯ ಮೇಲಿನ ದಾಳಿಗೆ ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರ ಖಂಡನೆ!

ದಿನಾಂಕ: 17-08-2024
“ಇಸ್ಮಾಯಿಲ್ ತಮಟಗಾರ ಮೇಲೆ ಈ ಹಿಂದೆಯೂ ಸಹ ಹತ್ಯೆಗೆ ಯತ್ನ ನಡೆದಿದ್ದು, ಇವರ ಹಾಗೂ ಇವರ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು” – ಕರ್ನಾಟಕ ಮುಸ್ಲಿಂ ಯುನಿಟಿ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಸಿಎಂ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಜಾರಿ ಸಂಸದೀಯ ಪ್ರಜಾಪ್ರಭುತ್ವದ ವಿರುದ್ಧವಾಗಿದೆ; ಇದು ಖಂಡನೀಯ: ಖಾಸಿಂ ಸಾಬ್

ದಿನಾಂಕ: 18-08-2024
“ನೇರ ಭಾಗಿಯಾಗದ ಆರ್ಥಹೀನ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಯೋಜಿಸಿ ಸಿಲುಕಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಘಿ ಪ್ರೇರಿತ ಪಕ್ಷಗಳು ಹೊರಟಿವೆ. ಇದು ಜಾತಿ ಹಾಗೂ ಕೋಮು ಭ್ರಷ್ಟರ ನಡೆಯಾಗಿದೆ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್ ಹೇಳಿದ್ದಾರೆ. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ಒಬಿಸಿ ಮುಸ್ಲಿಂ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು; 4% ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು: ಕರ್ನಾಟಕ ಮುಸ್ಲಿಂ ಯುನಿಟಿ

ದಿನಾಂಕ: 24-08-2024
ಕರ್ನಾಟಕ ಮುಸ್ಲಿಮರ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸೂಕ್ತ ಹಾಗೂ ಶೀಘ್ರವಾಗಿ ಈಡೇರಿಸಲು ಒತ್ತಾಯಿಸಿ ಇದೇ ಆಗಸ್ಟ್ 22 ರಂದು ಕರ್ನಾಟಕ ಮುಸ್ಲಿಂ ಯುನಿಟಿ ವತಿಯಿಂದ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಚಿಂತನಾ ಸಭೆಯನ್ನು ಆಯೋಜಿಸಲಾಗಿತ್ತು. (ಮುಂದುವರಿದ ಸುದ್ಧಿಗಾಗಿ ಫೋಟೋ ಕ್ಲಿಕ್ ಮಾಡಿ)

ದೇಶ

ತಮ್ಮ ನಿರಂತರ ಮುಷ್ಕರವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದ ಕಿರಿಯ ವೈದ್ಯರು ಸುಮಾರು 42 ದಿನಗಳ ನಂತರ ಇಂದು ಕೆಲಸಕ್ಕೆ ಮರಳಿದರು.

ಭಾರತದಲ್ಲಿ ಲೈಂಗಿಕ ದೌರ್ಜನ್ಯ ಉತ್ತುಂಗದಲ್ಲಿರುವಾಗಲೇ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ಲೈಂಗಿಕ ದೌರ್ಜನ್ಯ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಇಂತಹ ಲೈಂಗಿಕ ದೌರ್ಜನ್ಯಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಪ್ರತಿಜ್ಞೆ ಮಾಡಿದ್ದರು.

ಆದರೂ ಕಾಲೇಜು ಆವರಣದಲ್ಲಿ ಉದ್ವಿಗ್ನತೆ ಮುಂದುವರಿದಿತ್ತು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರು ಘೋಷಣೆಗಳನ್ನು ಕೂಗಿ ದನಿ ಎತ್ತಿದರು. ಇದಕ್ಕಾದ ಉತ್ತರ, ಭಾರತೀಯ ಮಟ್ಟದಲ್ಲಿ ಪ್ರತಿಧ್ವನಿಸಿತು. ಈ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಸ್ವತಃ ಮುತುವರ್ಜಿ ವಹಿಸಿ, ಭಾಗಿಯಾದವರಿಗೆ ಸೂಕ್ತ ಶಿಕ್ಷೆ ಮತ್ತು ಇಂತಹ ದುಷ್ಕೃತ್ಯಗಳು ಮುಂದೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿತು.

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನನ್ನು ಪ್ರಸ್ತಾಪಿಸಿ ಅನುಮೋದಿಸಿತು. ಈ ವೇಳೆ ತಮ್ಮ ನಿರಂತರ ಪ್ರತಿಭಟನೆ ಕೈಬಿಡುವುದಾಗಿ ಘೋಷಿಸಿದ ಕಿರಿಯ ವೈದ್ಯರು ಸುಮಾರು 42 ದಿನಗಳ ನಂತರ ಇಂದು ತಮ್ಮ ಕೆಲಸಕ್ಕೆ ಮರಳಿದರು.