ಅಮೆರಿಕದ ಉತಾಹ್ (Utah) ರಾಜ್ಯದಲ್ಲಿ, ಸ್ಪ್ಯಾನಿಷ್ ಕೋಟೆ ಪ್ರದೇಶದಲ್ಲಿ ಇಸ್ಕಾನ್ ರಾಧಾಕೃಷ್ಣ ದೇವಾಲಯವಿದೆ. ಈ ದೇವಾಲಯದಲ್ಲಿ ನಡೆದ ಗುಂಡಿನ ದಾಳಿ ದೊಡ್ಡ ಸಂಚಲನವನ್ನೇ ಮೂಡಿಸಿದೆ.
ದೇವಾಲಯದ ಕಟ್ಟಡ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೆ 20 ರಿಂದ 30 ಗುಂಡುಗಳು ತಗುಲಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಬಿಡುಗಡೆಯಾಗಿ ಆಘಾತವನ್ನು ಉಂಟುಮಾಡಿವೆ. ರಾತ್ರಿ ವೇಳೆ ಭಕ್ತರು ದೇವಸ್ಥಾನದ ಒಳಗೆ ಇದ್ದಾಗ ದಾಳಿ ನಡೆಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
“ಇಸ್ಕಾನ್ ದೇವಾಲಯದಲ್ಲಿ ನಡೆದ ಗುಂಡಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. “ರಾಯಭಾರ ಕಚೇರಿಯು ಭಕ್ತಾಧಿಗಳಿಗೆ ಮತ್ತು ಸಮುದಾಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಅಪರಾಧಿಗಳನ್ನು ನ್ಯಾಯಕ್ಕೆ ಒಳಪಡಿಸಲು ಸ್ಥಳೀಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.