ಕೃತಕ ಕೋಳಿ ಮಾಂಸ ಮಾರಾಟಕ್ಕೆ ಅನುಮೋದಿಸಿದ ಅಮೆರಿಕ!
ಚಿಕನ್ ಕೋಶ (Cell) ಗಳನ್ನು ಪ್ರಯೋಗಾಲಯಗಳಲ್ಲಿ ಇರಿಸಿ, ಅದರಿಂದ ಉತ್ಪತ್ತಿಯಾಗುವ ಮಾಂಸವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ಮೀರಿ, ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ತ್ಯಜಿಸುವ ‘ವ್ಯಾಗನ್’ ಎಂಬ ಆಹಾರ ಪದ್ದತಿ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಈ ಆಹಾರವು ಪರಿಸರ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ಅದರ ಅನುಯಾಯಿಗಳು ಹೇಳುತ್ತಿದ್ದಾರೆ.
ಈ ಹಿನ್ನಲೆಯಲ್ಲಿ, ಕೃತಕ ಮಾಂಸ ಉತ್ಪಾದನಾ ಮಾರುಕಟ್ಟೆಯೂ ಅತಿ ವೇಗವಾಗಿ ಬೆಳೆಯಲು ಆರಂಭಿಸಿದೆ. ಅಂದರೆ ಪ್ರಾಣಿಗಳ ‘ಕೋಶ’ಗಳನ್ನು ಪ್ರಯೋಗಾಲಯದಲ್ಲಿ ಇರಿಸಿ, ನಿರ್ವಹಿಸಿ ಮತ್ತು ಪೋಷಿಸಿ, ಇದನ್ನು ಮಾಂಸವಾಗಿ ಉತ್ಪಾದಿಸುವ ವಿಧಾನವನ್ನೇ ಪ್ರಯೋಗಾಲಯ ಮಾಂಸ ಎಂದು ಕರೆಯಲಾಗುತ್ತದೆ.
ಈ ರೀತಿಯಾಗಿ, ಪ್ರಾಯೋಗಿಕ ಚಿಕನ್ ಅನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೋಳಿಗೆ ಜೀವವಿಲ್ಲ. ’ಕೋಶ’ಗಳನ್ನು ಇಟ್ಟುಕೊಂಡು ಮಾಂಸಕ್ಕೆ ಬೇಕಾದ ಭಾಗಗಳನ್ನು, ಅಗತ್ಯವಿರುವ ರೂಪದಲ್ಲಿ ತಯಾರಿಸಿಕೊಳ್ಳುತ್ತಿದ್ದಾರೆ.
ಈ ಪ್ರಯೋಗಾಲಯದ ಕೋಳಿ ಮಾಂಸವನ್ನು ಮಾರಾಟ ಮಾಡಲು, ಅಮೆರಿಕ ಕೃಷಿ ಇಲಾಖೆ ಅನುಮೋದನೆ ನೀಡಿದೆ. ‘ಅಪ್‌ಸೈಡ್ ಫುಡ್ಸ್’ ಮತ್ತು ‘ಗುಡ್ ಮೀಟ್’ ಎಂಬ ಎರಡು ಕಂಪನಿಗಳಿಗೆ ಈ ಅನುಮತಿಯನ್ನು ನೀಡಲಾಗಿದೆ.
ಪ್ರಯೋಗಾಲಯದಲ್ಲಿ ತಯಾರಿಸಿದ ಮಾಂಸವನ್ನು ಯಾರು ಬೇಕಾದರೂ ತಿನ್ನಬಹುದು. ಇರಲ್ಲಿ ಪ್ರೋಟೀನ್ ಇದೆ. ಹಾನಿ ಮಾಡುವುದಿಲ್ಲ. ನಾವು ಪ್ರಾಣಿಗಳನ್ನು ಕೊಲ್ಲುತ್ತೇವೆ; ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಎಂಬ ಪಾಪಪ್ರಜ್ಞೆ ಇರುವುದಿಲ್ಲ ಎಂದು, ಕಂಪನಿ ಹೇಳುತ್ತಿದೆ. ಈ ಮಾಂಸ ಶೀಘ್ರದಲ್ಲೇ ಮುಕ್ತ ಮಾರಾಟಕ್ಕೆ ಲಭ್ಯವಾಗಲಿದೆ. ಅದೇ ಸಮಯದಲ್ಲಿ, ಅಮೆರಿಕದಲ್ಲಿ ಇದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ.
ಪ್ರಯೋಗಾಲಯ ಮಾಂಸವನ್ನು ಅಭಿವೃದ್ಧಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಇದರಲ್ಲಿ ಕೆಲವು ಪ್ರಾಯೋಗಿಕ ಸಮಸ್ಯೆಗಳು ಇದೆ ಎಂದು ಹೇಳಲಾಗುತ್ತದೆ. ‘ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ರೀತಿಯ ಕೋಳಿ ಮಾಂಸ ಉತ್ಪನ್ನ, 2030ರ ವೇಳೆಗೆ 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕ್ಷೇತ್ರವಾಗಿ ಬೆಳೆಯಲಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.