ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧ ರದ್ದು: ಪ್ರಶಾಂತ್ ಕಿಶೋರ್ » Dynamic Leader
October 22, 2024
ದೇಶ ರಾಜಕೀಯ

ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧ ರದ್ದು: ಪ್ರಶಾಂತ್ ಕಿಶೋರ್

ಪಾಟ್ನಾ: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇದವನ್ನು ರದ್ದುಗೊಳಿಸಲಾಗುವುದು ಎಂದು ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ.

ರಾಜಕೀಯ ತಂತ್ರಗಾರ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ತಮ್ಮ ‘ಜನ್ ಸುರಾಜ್’ (Jan Suraaj) ಸಂಘಟನೆಯನ್ನು ಹೊಸ ಪಕ್ಷವನ್ನಾಗಿ ಆರಂಭಿಸಲು ಮುಂದಾಗಿದ್ದಾರೆ. ಅಕ್ಟೋಬರ್ 2 ರಂದು ಔಪಚಾರಿಕವಾಗಿ ಪಕ್ಷ ಆರಂಭಿಸಲಿದ್ದಾರೆ. ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸರ್ಕಾರವನ್ನು ಹಿಡಿಯಲು ಸಜ್ಜಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಪ್ರಶಾಂತ್ ಕಿಶೋರ್, “ರಾಜ್ಯದಲ್ಲಿ ಪ್ರಸ್ತುತ ಮದ್ಯಪಾನ ನಿಷೇಧ ನಿಯಂತ್ರಣಗಳು ನಿಷ್ಪರಿಣಾಮಕಾರಿಯಾಗಿದೆ. ಅದು ಅಕ್ರಮ ಮದ್ಯವನ್ನು ಮನೆಗೆ ತಲುಪಿಸಲು ಕಾರಣವಾಗಿದೆ. ರಾಜ್ಯವು ರೂ.20,000 ಕೋಟಿ ಅಬಕಾರಿ ಆದಾಯವನ್ನು ಕಳೆದುಕೊಂಡಿದೆ. ನಾನು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.

Related Posts