ಕಳೆದ ನವಂಬರ್ 6 ರಂದು ಶೃಂಗೇರಿಯಿಂದ ಮಠದ ಶ್ರೀಗಳಿಂದ ಉದ್ಘಾಟನೆಯಾದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಹರಿಹರಪುರದ ಮೂಲಕ ಮುನ್ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಜಿಲ್ಲಾ ಸಂಚಾಲಕರು ಹಾಗೂ ಕಾರ್ಯದರ್ಶಿಗಳು, ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಕರ್ನಾಟಕದ ನಿವೃತ್ತ ಸೈನಿಕರಾದ ವಾಸಪ್ಪ ಎಂ. ಅವರು ಹೇಳಿದ್ದಾರೆ.
ಪಾದಯಾತ್ರೆ ಶಿವಮೊಗ್ಗಕ್ಕೆ ನವಂಬರ್ 10 ರಂದು ತಲುಪಲಿದ್ದು ಅಲ್ಲಿಂದ ದಿನಾಂಕ 11 ರಂದು ಸಂಜೆ ಹೊಳಲೂರ್ ನಲ್ಲಿ ರಾತ್ರಿ ವಿಶ್ರಾಂತಿಯ ನಂತರ ಬೆಳಗ್ಗೆ 12 ರಂದು ಹೊನ್ನಾಳಿ ತಾಲ್ಲೂಕಿನ ಚೀಲೂರ್ ಗ್ರಾಮವನ್ನು ತಲುಪುವುದು, ಊಟದ ನಂತರ ಮದ್ಯಾಹ್ನ 3.30 ಗಂಟೆಯ ನಂತರ ಗೋಪಾನಹಳ್ಳಿಯ ಮೂಲಕ ಗೋವಿನಕೋವಿಯಲ್ಲಿ ಟೀ-ಕಾಫಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ನದಿಯ ನೀರಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ನಂತರ ಹರಳಹಳ್ಳಿ ದಿಡಗೂರು ಮೂಲಕ ಸಂಜೆ 6.00 ಗಂಟ್ಟೆಗೆ ದೇವನಾಯ್ಕನಹಳ್ಳಿ / ಟಿಬಿ ಸರ್ಕಲ್ ನ ಕನಕದಾಸರ ವೃತ್ತ ತಲುಪಲಿದೆ. ಟಿಬಿ ವೃತ್ತದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಗುವುದು. ಅಲ್ಲಿಂದ ಮುಂದೆಸಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಸಾರ್ವಜನಿಕರಲ್ಲಿ ನದಿಯ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳು ನಡೆಯಲಿವೆ. ಅದಾದ ನಂತರ ನೇರವಾಗಿ ಹಿರೇಕಲ್ಮಠಕ್ಕೆ ಹೋಗಿ ಸ್ವಲ್ಪ ವಿಶ್ರಾಂತಿಯ ನಂತರ ಅಲ್ಲಿ ಅರ್ಧ ತಾಸು ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ನಡೆಯಲಿದೆ. ನಂತರ ರಾತ್ರಿ ಭೋಜನದ ನಂತರ ವಿಶ್ರಾಂತಿ ಮಾಡಲಾಗುವುದು.
ಅಲ್ಲಿಂದ ಬೆಳಗ್ಗೆ ತಿಂಡಿ ಟೀ-ಕಾಫಿಯ ನಂತರ ನವಂಬರ್ 13 ರಂದು ಅದೇ ರಸ್ತೆಯ ಮೂಲಕ ತುಂಗಭದ್ರಾ ನದಿಯ ಸೇತುವೆಯ ಮೂಲಕ ಗೊಲ್ಲರಹಳ್ಳಿಗೆ ಪಾದಯಾತ್ರೆಯ ಪ್ರಯಾಣ ಮುಂದುವರಿಯುವುದು. ಅಲ್ಲಿಂದ ಬೇಲಿ ಮಲ್ಲೂರಿನಲ್ಲಿ ಟೀ-ಕಾಫಿ, ಅಲ್ಪಹಾರದ ವ್ಯವಸ್ಥೆಯ ನಂತರ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ನಂತರ, ಪಾದಯಾತ್ರೆ ಕೋಟೆ ಮಲ್ಲೂರು, ಚಿಕ್ಕಗೊಣಗೇರಿ, ಹಿರೇಗೊಣಗೇರಿ, ಹರಗನಹಳ್ಳಿ ನಂತರ ಕೋಣನತಲೆಯ ಶ್ರೀ.ಗುರುದೇವ ಮುಪ್ಪಿನಾರ್ಯ ಆಶ್ರಮ – ಕೋಣನ ತಲೆ, ಶ್ರೀ ಗುರು ಬಸವರಾಜ ದೇಶಿಕೇಂದ್ರ, ಶ್ರೀ ಶ್ರೀ ಶ್ರೀ ತಿಪ್ಪೇಸ್ವಾಮಿ ಜೀ ಅವರ ಮಠದಲ್ಲಿ ಮದ್ಯಾಹ್ನದ ಪ್ರಸಾದ / ಉಪಹಾರದ ನಂತರ ಮುಂದೆ ಸಾಗುವುದು.
ಅಲ್ಲಿಯವರೆಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಈ ಪಾದಯಾತ್ರೆಯ ಕಾರ್ಯಕರ್ತರು ಜೊತೆಯಾಗಿ ಇರಬೇಕು ಎಂಬುದು ನಮ್ಮ ವಿನಂತಿಯಾಗಿದೆ. ಮತ್ತು ಎಲ್ಲರೂ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಮನವಿ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ತಾವೆಲ್ಲರೂ ಸೇರಿಕೊಂಡು ಪಾದಯಾತ್ರೆಯನ್ನು ನಮ್ಮ ತಾಲ್ಲೂಕಿನಿಂದ ಹರಿಹರ ತಾಲ್ಲೂಕಿನ ವರೆಗೆ ಮುಂದುವರಿಸಿ ಯಶಸ್ವಿಗೊಳಿಸಬೇಕೆಂದು ವಾಸಪ್ಪ (ಮೊಬೈಲ್: 8050399487) ಮನವಿ ಮಾಡಿದ್ದಾರೆ.