ವಿಶ್ವಸಂಸ್ಥೆ: ಇರಾನ್ ತನ್ನ ಯುರೇನಿಯಂ ಪುಷ್ಟೀಕರಣವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರಾಸ್ಸಿ (Rafael Mariano Grossi) ಬಿಡುಗಡೆ ಮಾಡಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಯುರೇನಿಯಂ ಪುಷ್ಟೀಕರಣವನ್ನು ರಹಸ್ಯವಾಗಿ ಹೆಚ್ಚಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ.
ಈ ಹಿನ್ನೆಲೆಯಲ್ಲಿ, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಯುರೇನಿಯಂ ಪುಷ್ಟೀಕರಣವನ್ನು ಮೇಲ್ವಿಚಾರಣೆ ಮಾಡುವ ಅಂತರರಾಷ್ಟ್ರೀಯ ಪರಮಾಣು ಶಕ್ತಿ (IAEA) ಸಂಸ್ಥೆಯ ಡೈರೆಕ್ಟರ್ ಜನರಲ್ ರಾಫೆಲ್ ಗ್ರಾಸ್ಸಿ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ,
‘ಇರಾನ್ ತನ್ನ ಯುರೇನಿಯಂ ಪುಷ್ಟೀಕರಣವನ್ನು ಕಳೆದ ಫೆಬ್ರವರಿಯಲ್ಲಿ 20.06 ಕೆಜಿಯಿಂದ 142.1 ಕೆಜಿಗೆ ಹೆಚ್ಚಿಸಿದೆ. ಇದು ಶೇ.60ರಷ್ಟು ಏರಿಕೆಯಾಗಿದೆ. ಇರಾನ್‌ನ ಈ ಕ್ರಮವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಮಾನವಾದದ್ದು’ ಎಂದು ಐಎಇಎ ಹೇಳಿದೆ.