ಭಾರತ್ ಜೋಡೋ ಪಯಣ ಮುಗಿಸಿದರೂ ರಾಹುಲ್ ಪಯಣ ವಿಶ್ರಮಿಸಲಿಲ್ಲ. ಕೆಲವು ವಾರಗಳ ಹಿಂದೆ ಅವರು ದೆಹಲಿ-ಚಂಡೀಗಢದಲ್ಲಿ ರಾತ್ರಿ ಸರಕು ಟ್ರಕ್ನಲ್ಲಿ ಪ್ರಯಾಣಿಸಿ, ಚಾಲಕನ ಕಷ್ಟದ ಬಗ್ಗೆ ಕೇಳಿದ್ದರು. ಪ್ರಸ್ತುತ ಅವರು ಅಮೆರಿಕಾದ ವಾಷಿಂಗ್ಟನ್ನಿಂದ ನ್ಯೂಯಾರ್ಕ್ಗೆ ಟ್ರಕ್ನಲ್ಲಿ ಪ್ರಯಾಣಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅದರ ಒಂದು ಭಾಗವಾಗಿ, ವಾಷಿಂಗ್ಟನ್ನಿಂದ ನ್ಯೂಯಾರ್ಕ್ ನಗರಕ್ಕೆ ‘ಅಮೆರಿಕನ್ ಟ್ರಕ್ ಯಾತ್ರಾ’ ಹೆಸರಿನಲ್ಲಿ 190 ಕಿಲೋ ಮೀಟರ್, ಭಾರತೀಯರೊಬ್ಬರು ಚಾಲಕಾರಾಗಿರುವ ಅತ್ಯಾಧುನಿಕ ಟ್ರಕ್ನಲ್ಲಿ ಪ್ರಯಾಣಿಸಿದ್ದಾರೆ.
“ಸಮುದಾಯದಲ್ಲಿನ ವೈವಿಧ್ಯಮಯ ಜನರ ಧ್ವನಿಗಳನ್ನು ಕೇಳುವ ಪ್ರಯಾಣವು ಅಮೆರಿಕಾದಲ್ಲೂ ಮುಂದುವರೆದಿದೆ. ಭಾರತದ ದೆಹಲಿಯಿಂದ ಚಂಡೀಗಢಕ್ಕೆ ಹೋದ ನನ್ನ ಟ್ರಕ್ ಪ್ರಯಾಣದಂತೆ, ಈ ಬಾರಿ ಅಮೆರಿಕಾದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್ಗಳ ದೈನಂದಿನ ಜೀವನವನ್ನು ನಾನು ತಿಳಿದುಕೊಂಡೆ.
ಅವರೊಂದಿಗಿನ ಸಂಭಾಷಣೆ ಹೃದಯಸ್ಪರ್ಶಿಯಾಗಿತ್ತು. ಚಾಲಕನ ಸೌಕರ್ಯಗಳಿಗೆ ಒತ್ತು ನೀಡುವ ವ್ಯವಸ್ಥೆ, ಅವರು ಗಳಿಸುವ ನ್ಯಾಯಯುತ ವೇತನವನ್ನು ನೋಡಿ ನನಗೆ ಸಂತೋಷವಾಯಿತು. ಭಾರತದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಟ್ರಕ್ ಚಾಲಕರು ಸಹ ಯೋಗ್ಯವಾದ ಜೀವನಕ್ಕೆ ಅರ್ಹರಾಗಿದ್ದಾರೆ. ಅವರನ್ನು ಮುಂದೆ ಕೊಂಡೊಯ್ಯುವ ಯೋಜನೆ, ನಮ್ಮ ಇಡೀ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕವಾದ ಶ್ರೇಣೀಕೃತ ಪರಿಣಾಮವನ್ನು ಬೀರುತ್ತದೆ” ಎಂದು ಹೇಳಿದ್ದಾರೆ.
"कितना कमा लेते हो?"
"कुछ गाने बजा लें? सिद्धू मूसेवाला के?"
"हम ट्रक वालों के कारण ही मैन्युफैक्चरर्स का काम चलता है।”
अमेरिका में एक भारतीय ड्राइवर के साथ ट्रक यात्रा, उनके अनुभव और कहानियां!
पूरा वीडियो यूट्यूब पर:https://t.co/AxWYEHoka7 pic.twitter.com/KQ8OJq8Vrg
— Rahul Gandhi (@RahulGandhi) June 13, 2023
ಟ್ರಕ್ ಚಾಲಕನೊಂದಿಗೆ ಮಾತನಾಡುತ್ತಲೇ ಸಾಗಿದ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ ಆ ಚಾಲಕ, “ಇಲ್ಲಿ ನನಗೆ ಮಾಸಿಕ ರೂ.6 ರಿಂದ 8 ಲಕ್ಷದವರೆಗೆ ವೇತನ ಸಿಗುತ್ತಿದೆ; ನಾನು ಸ್ವಂತವಾಗಿ ಟ್ರಕ್ ಹೊಂದಿದ್ದೇನೆ” ಎಂದು ಹೇಳಿದರು. “ಭಾರತದಲ್ಲಿ ಟ್ರಕ್ ಮಾಲೀಕರು ಬೇರೆಯವರಾಗಿರುತ್ತಾರೆ; ಚಾಲಕರೇ ಬೇರೆಯಾಗಿರುತ್ತಾರೆ. ಚಾಲಕರು ಅತೀ ಬಡವರಾಗಿರುತ್ತಾರೆ. ಅವರು ಆಸ್ತಿ ಇಲ್ಲದೆ ಸಾಲ ಪಡೆಯಲು ಸಾಧ್ಯವಿಲ್ಲ. ಅನೇಕ ಜನರು ಅಲ್ಲಿ ಆಸ್ತಿ ಹೊಂದಿರುವುದಿಲ್ಲ. ಹಾಗಾಗಿ ಅವರು ಚಾಲಕರಾಗಿ ಮುಂದುವರಿಯುತ್ತಾರೆ. ಭಾರತದಲ್ಲಿರುವಂತೆ ಆರ್ಟಿಒ ಕಿರುಕುಳ ಇಲ್ಲಿ ಇರುವುದಿಲ್ಲ” ಎಂದು ಹೇಳಿದರು. Rahul Gandhi takes truck ride from Washington to New York