ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ Archives » Dynamic Leader
October 23, 2024
Home Posts tagged ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ
ದೇಶ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿಯ ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸಲಾಗಿದೆ. ಹಿಂದೂ-ಮುಸ್ಲಿಂ ಏಕತೆಯ ಕುರಿತು ಮೊಘಲ್ ರಾಜಕುಮಾರ ತಾರಾ ಶಿಖೋ ಅವರ ಬೋಧನೆಗಳನ್ನು ಹರಡುವ ಯೋಜನೆಯಲ್ಲಿ ಅವರು ಆರ್‌ಎಸ್‌ಎಸ್ ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ತನ್ನ ಅಲ್ಪಸಂಖ್ಯಾತ ವಿಭಾಗದ ಸಾರ್ವಜನಿಕ ಸಭೆಗಳು ಮತ್ತು ವಿಶೇಷ ಕಾರ್ಯಕ್ರಮಗಳ ಮೂಲಕ ಮುಸ್ಲಿಂ ಜನಸಂಖ್ಯೆಯ ಒಂದು ವರ್ಗದಿಂದ ಬೆಂಬಲವನ್ನು ಪಡೆಯುತ್ತಿದೆ. ವಿಶೇಷವಾಗಿ ಪಸ್ಮಾಂಡ ಮುಸ್ಲಿಮರಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಗಮನವನ್ನು ನೀಡುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನ ರಾಮೇಶ್ವರಂಗೆ ತೆರಳಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಮರುದಿನವೇ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಗಮನಾರ್ಹ.

ಇದನ್ನೂ ಓದಿ: ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ!

ತಾರಿಕ್ ಮನ್ಸೂರ್ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಯಿಂದ ಮೇಲ್ಮನೆಗೆ ಆಯ್ಕೆಯಾದ ನಾಲ್ಕನೇ ಮುಸ್ಲಿಂ ನಾಯಕ ಎಂಬುದು ಗಮನಾರ್ಹ. ತಾರಿಕ್ ಮನ್ಸೂರ್ ಉತ್ತರ ಪ್ರದೇಶದ ಅಲಿಘರ್ ಮೂಲದವರು. ಅಲ್ಲಿನ ಮತದಾರರಲ್ಲಿ ಮುಸ್ಲಿಮರು ಸುಮಾರು 19% ಇದ್ದಾರೆ. ಮತ್ತು ಸುಮಾರು 30 ಲೋಕಸಭಾ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಮರಿದ್ದಾರೆ. ಅವುಗಳಲ್ಲಿ 15 ರಿಂದ 20 ಕ್ಷೇತ್ರಗಳು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಹಿಂದೂಗಳೇ ಆಚರಿಸುವ ಮೊಹರಂ ಹಬ್ಬ; 300 ವರ್ಷಗಳಿಂದ ನಡೆದು ಬರುವ ಅದ್ಭುತ!

ತಾರಾ ಶಿಕೋ ಕಾರ್ಯಕ್ರಮಗಳಿಂದ ಮನ್ಸೂರ್ ಅವರ ಕೊಡುಗೆ ಆರ್‌ಎಸ್‌ಎಸ್ ನಾಯಕತ್ವವನ್ನು ಮೆಚ್ಚಿಸಿದೆ ಎಂದು ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪರ್ಷಿಯನ್ ವಿಭಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಅಂತರ್ಧರ್ಮೀಯ ಸಂವಾದದಲ್ಲಿ, ಶಿಕೋ ಅವರ ಹೆಚ್ಚಿನ ಕೃತಿಗಳನ್ನು ಅನುವಾದಿಸಿ, ಮುಸ್ಲಿಂ ಸಮುದಾಯದ ಶ್ರೇಷ್ಠ ನಾಯಕ ಎಂದು ತೋರಿಸಿಕೊಂಡಿದ್ದಾರೆ. ಅದರ ಬಗ್ಗೆ ವಿಚಾರ ಸಂಕಿರಣ, ಸಮ್ಮೇಳನಗಳನ್ನೂ ನಡೆಸಿರುವುದಾಗಿ ಸಂಘಟನೆಯ ಪ್ರಮುಖರು ತಿಳಿಸಿದರು.

ಇದನ್ನೂ ಓದಿ: ರೂ.10 ಕೋಟಿಯನ್ನು ತಮ್ಮದಾಗಿಸಿಕೊಂಡ 11 ಸ್ವಚ್ಛತಾ ಮಹಿಳಾ ಕಾರ್ಮಿಕರು!

ತಾರಿಕ್ ಮನ್ಸೂರ್ ಅವರ ನೇಮಕದ ಕುರಿತು ಮಾತನಾಡಿರುವ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಮಾಲ್ ಸಿದ್ದಿಕಿ, ಮನ್ಸೂರ್ ಒಬ್ಬ ರಾಷ್ಟ್ರೀಯವಾದಿ ಮುಸ್ಲಿಂ. ಅವರು ಯಾವಾಗಲೂ ರಾಷ್ಟ್ರದ ಆದರ್ಶವನ್ನೇ ಪ್ರಚಾರ ಮಾಡಿಕೊಂಡು ಬಂದಿದ್ದಾರೆ. ಅವರು ಯಾವಾಗಲೂ ರಾಷ್ಟ್ರವೇ ಮೊದಲು ಎಂಬ ಆದರ್ಶವನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರು ದಾರಿ ತಪ್ಪದಂತೆ ನೋಡಿಕೊಂಡರು. ಅವರ ನೇಮಕ ಪಕ್ಷ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.