ಸುರೇಶ್ ಗೋಪಿ ಮಗಳ ಮದುವೆ ಗುರುವಾಯೂರು ದೇವಸ್ಥಾನದಲ್ಲಿ ಕೆಲವು ತಿಂಗಳ ಹಿಂದೆ ನಡೆದಿತ್ತು. ಅದರಲ್ಲಿ, ಪ್ರಧಾನಿ ಮೋದಿ ಭಾಗವಹಿಸಿದ್ದರು. ವಿವಾಹದ ನಂತರ, ಸುರೇಶ್ ಗೋಪಿ ಅವರು ತಮ್ಮ ಕುಟುಂಬದೊಂದಿಗೆ ಲೂರ್ದ್ ಮಾತೆಯ ದೇಗುಲಕ್ಕೆ ತೆರಳಿ ಲೂರ್ದ್ ಮಾತೆಗೆ ಚಿನ್ನದ ಕಿರೀಟವನ್ನು ಅರ್ಪಿಸಿದ್ದರು.
ಕಳೆದ ಸಂಸತ್ ಚುನಾವಣೆಯಲ್ಲಿ ಕೇರಳ ರಾಜ್ಯದಲ್ಲಿ ಗೆಲುವು ಸಾಧಿಸಿದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ. ಸುರೇಶ್ ಗೋಪಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡ ಬೆನ್ನಲ್ಲೇ ಧನ್ಯವಾದ ಅರ್ಪಿಸುವ ಸಲುವಾಗಿ ದೇವಸ್ಥಾನಗಳಿಗೆ ತೆರಳಿ ಹರಕೆ ಸಲ್ಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ತಾಳಿಕೋಟ ಮಹಾದೇವ ದೇಗುಲ ಸೇರಿದಂತೆ ದೇಗುಲಗಳಲ್ಲಿ ಪೂಜೆ ಸಲ್ಲಿಸಿದ ಸುರೇಶ್ ಗೋಪಿ, ತ್ರಿಶೂರಿನ ಲೂರ್ದ್ ಮಾತೆಗೆ 20 ಗ್ರಾಂ ಚಿನ್ನದ ಶಿಲುಬೆ ಮಾಲೆಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ನಂತರ ‘ಧನ್ಯವಾದದಿಂದ ಹಾಡುತ್ತೇನೆ ದೇವರೇ…’ ಗೀತೆಯನ್ನು ಹಾಡುವ ಮೂಲಕ ಲೂರ್ದ್ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್ ಗೋಪಿ, “ಯಶಸ್ವಿಯ ಕೃತಜ್ಞತೆ ಹೃದಯದಲ್ಲಿದೆ; ಇದು ವಸ್ತುಗಳಲ್ಲಿ ಇಲ್ಲ.. ಭಕ್ತಿಯ ಸಂಕೇತವೇ ಈ ಕಾಣಿಕೆ” ಎಂದು ಹೇಳಿದರು. ಸುರೇಶ್ ಗೋಪಿ ಅವರಿಗೆ ಈಗಾಗಲೇ ತ್ರಿಶೂರ್ ಲೂರ್ದ್ ಮಾತೆಯ ದೇವಸ್ಥಾನದ ಮೇಲೆ ಬದ್ಧತೆ ಮತ್ತು ನಂಬಿಕೆ ಇದೆ. ಹಿಂದೂ ದೇವಾಲಯಗಳಂತೆ, ಸುರೇಶ್ ಗೋಪಿ ಅವರು ಲೂರ್ದ್ ಮಾತೆಯ ದೇವಾಲಯಕ್ಕೂ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಸುರೇಶ್ ಗೋಪಿ ಅವರ ಮಗಳ ಮದುವೆ ನಡೆದಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ವಿವಾಹದ ನಂತರ, ಸುರೇಶ್ ಗೋಪಿ ಅವರು ತಮ್ಮ ಕುಟುಂಬದೊಂದಿಗೆ ಲೂರ್ದ್ ಮಾತೆಯ ದೇಗುಲಕ್ಕೆ ತೆರಳಿ ಲೂರ್ದ್ ಮಾತೆಗೆ ಚಿನ್ನದ ಕಿರೀಟವನ್ನು ಅರ್ಪಿಸಿದರು. ಆ ಸಮಯದಲ್ಲಿ ಅವರು ನೀಡಿದ ಚಿನ್ನದ ಕಿರೀಟದ ಬಗ್ಗೆ ವಿವಾದಗಳು ಹುಟ್ಟಿಕೊಂಡಿತು.
ಚಿನ್ನದ ಕಿರೀಟವೆಂದು ಹೇಳಿ, ತಾಮ್ರದ ಲೋಹದಲ್ಲಿ ಚಿನ್ನ ಲೇಪಿತ ಕಿರೀಟವನ್ನು ಸಿದ್ದಪಡಿಸಿ ಸುರೇಶಗೋಪಿ ನೀಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲಾಗಿತ್ತು. ಅದನ್ನು ವಿರೋಧ ಪಕ್ಷಗಳೂ ಚರ್ಚೆಯ ವಿಷಯವಾಗಿಸಿತ್ತು. ಈ ಚರ್ಚೆಗೆ ಸುರೇಶಗೋಪಿ ಕಟುವಾದ ಮಾತುಗಳಿಂದ ಪ್ರತಿಕ್ರಿಯಿಸಿದ್ದರು. ಇಂತಹ ಸನ್ನಿವೇಶದಲ್ಲೇ, ಚುನಾವಣೆ ಮುಗಿದ ನಂತರ ಸುರೇಶಗೋಪಿ ಅವರು ಲೂರ್ದ್ ಮಾತೆ ದೇವಾಲಯಕ್ಕೆ ಚಿನ್ನದ ಶಿಲುಬೆಯ ಮಾಲೆಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶಗೋಪಿ, “ತ್ರಿಶೂರ್ನಲ್ಲಿ ನನಗೆ ಈ ವಿಜಯವನ್ನು ನೀಡಿದ ಎಲ್ಲಾ ದೇವರುಗಳಿಗೆ ಹಾಗೂ ಲೂರ್ದು ಮಾತೆಗೆ ನಮಸ್ಕಾರ. ಈ ಗೆಲುವು ದೊಡ್ಡ ಹೋರಾಟಕ್ಕೆ ದೇವರು ಕೊಟ್ಟ ಪ್ರತಿಫಲ. ತ್ರಿಶೂರಿನ ಮತದಾರರು ಪ್ರಜಾ ದೈವಗಳು. ನಾನು ಜನರನ್ನು ಆರಾಧಿಸುತ್ತೇನೆ. ಮತದಾರರ ದಿಕ್ಕು ತಪ್ಪಿಸುವ ಯತ್ನ ನಡೆದಿದೆ. ಆದರೆ ದೇವರುಗಳು ಅವರಿಗೆ ಮಾರ್ಗದರ್ಶನ ನೀಡಿದರು” ಎಂದು ಲೂರ್ದ್ ಮಾತೆಯ ಬಗ್ಗೆ ಉತ್ಸಾಹದಿಂದ ಹೇಳಿದ್ದಾರೆ.