ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ರಾಜಸ್ಥಾನದ ಅಜ್ಮೀರ್ ದರ್ಗಾದಲ್ಲಿರುವ ದರ್ಗಾ ಆಡಳಿತ ಮಂಡಳಿಯು ಸಸ್ಯಾಹಾರವನ್ನು ತಯಾರಿಸಿ 4,000 ಜನರಿಗೆ ಆಹಾರ ನೀಡಲು ಯೋಜಿಸಿದೆ.
ಪರ್ಷಿಯನ್ ಸೂಫಿ ಸಂತರಾದ ಖ್ವಾಜಾ ಮೊಯಿನುದ್ದೀನ್ ಚಿಶ್ತಿ (Khwaja Moinuddin Chishti) ಅವರು 1192 ರಿಂದ 1236 ರವರೆಗೆ ರಾಜಸ್ಥಾನದ ಅಜ್ಮೀರ್ನಲ್ಲಿ ವಾಸಿಸುತ್ತಿದ್ದರು. ಅವರ ನಿಧನದ ನಂತರ, ಅವರ ದೇಹವನ್ನು ಆ ಸ್ಥಳದಲ್ಲೇ ಹೂಳಲಾಯಿತು. ಇಲ್ಲಿ, ಎಲ್ಲ ಧರ್ಮದವರೂ ಬಂದು ಪೂಜೆ ಸಲ್ಲಿಸುವುದು ವಾಡಿಕೆ.
ಈ ಹಿನ್ನೆಲೆಯಲ್ಲಿ, ಇದೇ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 74ನೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಅಂದು ಅಜ್ಮೀರ್ (Ajmer) ದರ್ಗಾದಲ್ಲಿರುವ ‘ಡೆಗ್’ (Ajmer Dargah Deg) ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಅಡುಗೆ ಪಾತ್ರೆಯಲ್ಲಿ 4 ಸಾವಿರ ಜನರಿಗೆ ಸಸ್ಯಾಹಾರವನ್ನು ತಯಾರಿಸಿ ಅನ್ನಸಂತರ್ಪಣೆ ಮಾಡಲಾಗುವುದು ಎಂದು ದರ್ಗಾ ಆಡಳಿತ ತಿಳಿಸಿದೆ.