ಬೆಂಬಲಿಗರನ್ನು ಕಳೆದುಕೊಳ್ಳುತ್ತಿರುವ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ, ಈ ಕುಸಿತದಿಂದ ಚೇತರಿಸಿಕೊಳ್ಳಲು ಬಹಿರಂಗವಾಗಿಯೇ ಲಂಚ ನೀಡಲು ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತದಲ್ಲಿ, ಕಳೆದ ಏಳು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮಗಳು, ವಂಚನೆಗಳು ಮತ್ತು ಅಪರಾಧಗಳು ನಡೆದಿವೆ.
ಅದರಲ್ಲಿ ರೈತರ ಪ್ರತಿಭಟನೆ ವೇಳೆ ರ‍್ಯಾಲಿ ನಡೆಸುತ್ತಿದ್ದ 8 ರೈತರನ್ನು ಹತ್ಯೆಗೈದ ಘಟನೆ, ಮತೀಯವಾದವನ್ನು ಬೆಳೆಸುವ ಸಲುವಾಗಿ, ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಇತರ ಧಾರ್ಮಿಕ ದೇವಾಲಯಗಳ ಮುಂದೆ ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗಿದ್ದು, ಲೋಕಸಭೆ ಚುನಾವಣೆ ವೇಳೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತದಾನ ಮಾಡದಂತೆ ತಡೆದಿದ್ದು ಮುಂತಾದವುಗಳನ್ನು ಪ್ರಮುಖ ಅಕ್ರಮಗಳೆಂದು ಪರಿಗಣಿಸಲಾಗಿದೆ.
ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿತು. ‘ಇಂಡಿಯಾ ಮೈತ್ರಿಕೂಟ’ ಬಹುಮತ ಗಳಿಸಿತು.
ಏತನ್ಮಧ್ಯೆ, ಬಿಜೆಪಿ ಮೈತ್ರಿಕೂಟದೊಳಗಿನ ಗೊಂದಲ ಬೇರೆ. ಹಾಗಾಗಿ ಬೆಂಬಲಿಗರನ್ನು ಕಳೆದುಕೊಳ್ಳುತ್ತಿರುವ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪತನದಿಂದ ಚೇತರಿಸಿಕೊಳ್ಳಲು ಬಹಿರಂಗವಾಗಿಯೇ ಲಂಚ ನೀಡಲು ಮುಂದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಪೋಸ್ಟ್ ಮಾಡುವವರಿಗೆ ಮಾಸಿಕ ರೂ.8 ಲಕ್ಷದವರೆಗೆ ಸರ್ಕಾರ ನೀಡಲಿದೆ ಎಂದು ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇದು ಬಹಿರಂಗ ಲಂಚವಾಗಿದೆ.
ಈ ಕುರಿತು ಖ್ಯಾತ ಯುಟ್ಯೂಬರ್ (Youtuber) ಧ್ರುವ್ ರಾಠೆ (Dhruv Rathee), ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಅಂತರ್ಜಾಲದಲ್ಲಿ ಪೋಸ್ಟ್ ಮಾಡುವವರಿಗೆ, ಯೋಗಿ ಆದಿತ್ಯನಾಥ್ ಸರ್ಕಾರ ತಿಂಗಳಿಗೆ ರೂ.8 ಲಕ್ಷದವರೆಗೆ ನೀಡುವುದಾಗಿ ಉಲ್ಲೇಖಿಸಿರುವುದು, ಕಾನೂನುಬದ್ಧಗೊಳಿಸಿದ ಲಂಚವಾಗಿದೆ” ಎಂದು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆಯನ್ನು ಪೋಸ್ಟ್ ಮಾಡಿದ್ದಾರೆ.