ಬೆಂಗಳೂರು: ಕೆ.ಆರ್.ಪುರಂನಿಂದ ಯಲಹಂಕ ವಯಾ ಹೊರಮಾವು, ಹೊರಮಾವು ಅಗರ, ಗೆದ್ದಲಹಳ್ಳಿ, ಕೆ.ನಾರಾಯಣಪುರ, ಕೋಗಿಲು ಮುಖಾಂತರ ಯಲಹಂಕ ನ್ಯೂ ಟೌನ್ಗೆ ಬಸ್ ಸೌಲಭ್ಯವನ್ನು ಒದಗಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರಂ (ಕೃಷ್ಣರಾಜಪುರಂ) ಬಸ್ ನಿಲ್ದಾಣದಿಂದ ಯಲಹಂಕ ನ್ಯೂ ಟೌನ್ಗೆ ಸಾರ್ವಜನಿಕರು ಪ್ರತಿದಿನ ಶಾಲಾ ಕಾಲೇಜು, ಕಛೇರಿ ಮತ್ತು ಇನ್ನಿತರೇ ಸ್ಥಳಗಳಿಗೆ ತೆರಳಲು ತುಂಬಾ ಕಷ್ಟಪಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆ.ಆರ್.ಪುರಂ ವಯಾ ಹೊರಮಾವು, ಹೊರಮಾವು ಅಗರ, ಗೆದ್ದಲಹಳ್ಳಿ, ಕೆ.ನಾರಾಯಣಪುರ, ಕೋಗಿಲು ಮುಖಾಂತರ ಯಲಹಂಕ ನ್ಯೂ ಟೌನ್ಗೆ ಮತ್ತು ಅದೇ ಮಾರ್ಗದಲ್ಲಿ ಪುನಃ ಕೆ.ಆರ್.ಪುರಂಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಸ್ಸುಗಳ ಸೌಕರ್ಯವನ್ನು ಒದಗಿಸಿಕೊಡುವಂತೆ ಡಿ.ಕೆ.ಮೋಹನ್ ಬಾಬು ಅವರು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಕೆ.ಆರ್.ಪುರಂಗೆ ಬಸ್ಸುಗಳ ಸೌಕರ್ಯವನ್ನು ಒದಗಿಸಿದಲ್ಲಿ, ಮೆಟ್ರೋ ಸಂಪರ್ಕಕ್ಕೂ ಮತ್ತು ಸಾರ್ವಜನಿಕ ಸಂಚಾರಕ್ಕೂ ಅನುಕೂಲವಾಗುತ್ತದೆ ಎಂದು ಡಿ.ಕೆ.ಮೋಹನ್ ಬಾಬು ಅವರು ಸಾರಿಗೆ ಸಚಿವರ ಗಮನ ಸೆಳೆದಿದ್ದಾರೆ.