ರಿವಾರ್ಡ್ 360 ಕಂಪನಿಯ ವೆಬ್‌ಸೈಟ್ ಹ್ಯಾಕ್: ಸುಮಾರು ರೂ 4 ಕೋಟಿ ಮೌಲ್ಯದ ವಸ್ತುಗಳು ಅಮಾನತ್ತು; ಆರೋಪಿ ಅರೆಸ್ಟ್! » Dynamic Leader
October 21, 2024
ಕ್ರೈಂ ರಿಪೋರ್ಟ್ಸ್

ರಿವಾರ್ಡ್ 360 ಕಂಪನಿಯ ವೆಬ್‌ಸೈಟ್ ಹ್ಯಾಕ್: ಸುಮಾರು ರೂ 4 ಕೋಟಿ ಮೌಲ್ಯದ ವಸ್ತುಗಳು ಅಮಾನತ್ತು; ಆರೋಪಿ ಅರೆಸ್ಟ್!

ಬೆಂಗಳೂರು: ರಿವಾರ್ಡ್ 360 ಕಂಪನಿಯ ವೆಬ್‌ಸೈಟ್ ಹ್ಯಾಕ್ ಮಾಡಿ, ಕಸ್ಟಮರ್‌ಗಳಿಗೆ ನೀಡುವ ವೋಚರ್‌ಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಕಸ್ಟಮರ್‌ಗಳು ವೋಚರನ್ನು ಬಳಕೆ ಮಾಡುವ ಮೊದಲೇ ಬಳಕೆ ಮಾಡಿ, ಇ-ಕಾಮರ್ಸ್ ಕಂಪನಿಗಳ ಮೂಲಕ ಕೋಟ್ಯಾಂತರ ರೂ ಬೆಲೆ ಬಾಳುವ ಚಿನ್ನ, ಬೆಳ್ಳಿ, ದ್ವಿಚಕ್ರ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ನಗದು ಹಣವನ್ನು ಆನ್‌ಲೈನ್ ಮುಖಾಂತರ ಖರೀದಿಸಿ ಚಂಚನೆ ಮಾಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿ.ಎ.ಎನ್ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಪ್ರಕರಣವನ್ನು ಭೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ಕೂಡಿದ ಹೊಸ ಸಮವಸ್ತ್ರ!

ಆರೋಪಿಯಿಂದ 5.269 ಕೆಜಿ ಚಿನ್ನ, 27.250 ಕೆಜಿ ಬೆಳ್ಳಿ, ರೂ.11 ಲಕ್ಷ 13 ಸಾವಿರ ನಗದು, ವಿವಿಧ ಕಂಪನಿಯ 07 ದ್ವಿಚಕ್ರ ವಾಹನಗಳು, ಪ್ಲಿಪ್ ಕಾರ್ಟ್ ವಾಲೇಟ್ ಪ್ರೀಜ್ ಆದ ರೂ.3 ಲಕ್ಷ 50 ಸಾವಿರ ಹಣ, 2 ಲ್ಯಾಪ್ ಟಾಪ್, 03 ಮೊಬೈಲ್‌ಗಳು ಒಟ್ಟು ಅಂದಾಜು ಮೊತ್ತ 4,16,63,000/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತು ಮಾಡಲಾಗಿದೆ

Related Posts