ಅಪೂರ್ಣ ಸ್ಥಿತಿಯಲ್ಲಿರುವ ಕೊಳಗೇರಿ ಮನೆಗಳಿಗೆ ಬಣ್ಣ ಬಳಿದು ಉದ್ಘಾಟಸಿದ ಸಿದ್ದರಾಮಯ್ಯ! » Dynamic Leader
November 21, 2024
ರಾಜ್ಯ

ಅಪೂರ್ಣ ಸ್ಥಿತಿಯಲ್ಲಿರುವ ಕೊಳಗೇರಿ ಮನೆಗಳಿಗೆ ಬಣ್ಣ ಬಳಿದು ಉದ್ಘಾಟಸಿದ ಸಿದ್ದರಾಮಯ್ಯ!

ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯದಾದ್ಯಂತ ನಿರ್ಮಿಸಲಾದ 36,789 ಮನೆಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಕೆ.ಆರ್.ಪುರಂನಲ್ಲಿರುವ ನಗರೇಶ್ವರ ನಾಗೇನಹಳ್ಳಿಯಲ್ಲಿ ಉದ್ಘಾಟಸಿ, ಫಲಾನುಭವಿಗಳಿಗೆ ಸ್ವಾಧೀನ ಪತ್ರ ವಿತರಿಸಿದರು.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು!

ನಗರೇಶ್ವರ ನಾಗೇನಹಳ್ಳಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಿರುವ ಒಟ್ಟು 768+294=1062 ಮನೆಗಳ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ನಿರ್ಮಾಣ ಹಂತದಲ್ಲಿರುವ ಸದರಿ ಮನೆಗಳ ಫಲಾನುಭವಿಗಳು ಯಾರು ಕೂಡ ಘೋಷಿತ ಕೊಳಗೇರಿ ನಿವಾಸಿಗಳಾಗಿರುವುದಿಲ್ಲ. ಅಪೂರ್ಣ ಸ್ಥಿತಿಯಲ್ಲಿರುವ ಕೊಳಗೇರಿ ಜನರ ಮನೆಗಳಿಗೆ ಬಣ್ಣ ಬಳಿದು ಉದ್ಘಾಟಸಿದ್ದೂ ಅಲ್ಲದೇ ಇತರ ವರ್ಗದವರಿಗೆ ಸ್ವಾಧೀನ ಪತ್ರಗಳನ್ನು ಸಹ ವಿತರಿಸಲಾಗಿದೆ.

ಇದನ್ನೂ ಓದಿ: ಮನೆಗಳ ಹಂಚಿಕೆಯಲ್ಲಿ ಅಕ್ರಮ: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ವಿರುದ್ಧ ಲೋಕಾಯುಕ್ತರಲ್ಲಿ ದೂರು! 

ಸದರಿ ಮನೆಗಳ ಫಲಾನುಭವಿಗಳೆಲ್ಲರೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರ ಹಿಂಬಾಲಕರು, ಅವರ ಪಕ್ಷದ (ಬಿಜೆಪಿ) ಕಾರ್ಯಕರ್ತರು ಮತ್ತು ಅನುಕೂಲಸ್ಥ ವರ್ಗದ ಜನರಾಗಿದ್ದಾರೆ. ಇಂತಹವರಿಗೆ ಕೊಳಗೇರಿ ಜನರ ಮನೆಗಳನ್ನು ಹಂಚಿಕೆ ಮಾಡಲು ಮಂಡಳಿಯ ನಿಯಮಗಳಲ್ಲಿ ಅವಕಾಶವಿಲ್ಲ. ಇದರ ಬಗ್ಗೆ ಈಗಾಗಲೇ ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ. ಆದರೂ ಸದರಿ ಮನೆಗಳನ್ನು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಲಾಗಿದೆ.

Related Posts