ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರ ಅಭಿಯಾನ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್!
ಬೆಂಗಳೂರು: ಗಾಂಧಿನಗರ ಕ್ಷೇತ್ರದ ಕಾಟನ್‌ಪೇಟೆಯಲ್ಲಿ ಅನೇಕ ಬೀದಿಗಳಲ್ಲಿ ಹೊಗೆಯಾಡಿಸುವ ಅಭಿಯಾನದ ನೇತೃತ್ವ ವಹಿಸಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ತಿಳಿವಳಿಕೆ ಕರಪತ್ರಗಳನ್ನು ವಿತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್.
“ಈ ರೋಗವನ್ನು ಎದುರಿಸಲು ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವಾಗ, ಡೆಂಗ್ಯೂ ಬಗ್ಗೆ ತಿಳುವಳಿಕೆಯನ್ನು ಉಳಿಸಿಕೊಳ್ಳುವ ಮೂಲಕ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮ ಕೈಲಾದಷ್ಟು ಮಾಡುವಂತೆ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಗುರುತರವಾದ ಈ ಕರಪತ್ರ ಅಭಿಯಾನವನ್ನು ಬೆಂಗಳೂರಿನ ಪ್ರತಿಯೊಂದು ವಾರ್ಡ್‌ಗಳಿಗೂ ವಿಸ್ತರಿಸುವುದರ ಜೊತೆಯಲ್ಲೇ ಚರಂಡಿ, ಒಳಚರಂಡಿಗಳನ್ನು ಸ್ವಚ್ಚಗೊಳಿಸಿ, ಬೀದಿಯಲ್ಲಿ ಅಡ್ಡದಿಡ್ಡಿಯಾಗಿ ಬಿದ್ದಿರುವ ಕಸದ ರಾಶಿಗಳನ್ನು ವಿಲೇ ಮಾಡಿ, ದಿನನಿತ್ಯ ಬೀದಿಗಳಲ್ಲಿ ಹೊಗೆಯಾಡಿಸುವ ಕೆಲಸವೂ ಅತ್ಯಂತ ಜರೂರಾಗಿ ನಡೆಸಲು ಆರೋಗ್ಯ ಸಚಿವರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲು ಮುಂದಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ.