ನಾನು ಮಹಾವಿಷ್ಣುವಿನ ಅವತಾರ ಎಂದು ನಾಟಕವಾಡಿದ ನಕಲಿ ಆಸಾಮಿ! » Dynamic Leader
October 21, 2024
ಕ್ರೈಂ ರಿಪೋರ್ಟ್ಸ್

ನಾನು ಮಹಾವಿಷ್ಣುವಿನ ಅವತಾರ ಎಂದು ನಾಟಕವಾಡಿದ ನಕಲಿ ಆಸಾಮಿ!

ಕಾವಿಧಾರಿಗಳು ವಿವಿಧ ವೇಷಗಳನ್ನು ಬಳಸಿ ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳು ಸಾಕಷ್ಟಿವೆ. ಆದರೆ ನಾನೇ ಮಹಾವಿಷ್ಣು; ನಾನೇ ಪಾಂಡುರಂಗನೆಂದು ಹೇಳಿಕೊಂಡು, ತಿರುವಣ್ಣಾಮಲೈ ಮೂಲದ ನಕಲಿ ಸ್ವಾಮಿ ಸಂತೋಷ್ ಕುಮಾರ್, ವಿಷ್ಣುವಿನ ವೇಷದಲ್ಲಿ ಸಾರ್ವಜನಿಕರನ್ನು ವಂಚಿಸಿ ತೆಲಂಗಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾನೆ.

ತಿರುವಣ್ಣಾಮಲೈ ಜಿಲ್ಲೆಯವನಾದ ನಕಲಿ ಸ್ವಾಮಿ ಸಂತೋಷ್ ಕುಮಾರ್ ಗೆ  ಎರಡು ಹೆಂಡತಿಯರು ಮತ್ತು ಒಬ್ಬ ಮಗನಿದ್ದಾನೆ. ಈ ನಕಲಿ ಸ್ವಾಮಿ ಕಳೆದ ಕೆಲವು ದಿನಗಳ ಹಿಂದೆ ತಿರುವಣ್ಣಾಮಲೈನಿಂದ ಇಬ್ಬರು ಪತ್ನಿಯರೊಂದಿಗೆ ತೆಲಂಗಾಣಕ್ಕೆ ಬಂದಿದ್ದಾನೆ.

ಅಲ್ಲಿ ಸಂತೋಷ್ ತನ್ನನ್ನು ಮಹಾ ವಿಷ್ಣು ಎಂದು ಮತ್ತು ತನ್ನ ಹೆಂಡತಿಯರನ್ನು ಶ್ರೀದೇವಿ ಮತ್ತು ಬೂದೇವಿ ಎಂದು ಹೇಳಿಕೊಂಡನು. ಅಲ್ಲದೆ, 5 ತಲೆಯ ಹಾವಿನಂತೆ ಹಾಸಿಗೆಯನ್ನು ಮಾಡಿಸಿ ಅದರ ಮೇಲೆ ವಿಷ್ಣುವಿನಂತೆ ಮಲಗಿ, ತನ್ನ 2 ಪತ್ನಿಯರನ್ನು ತನ್ನ ಕಾಲುಗಳನ್ನು ಒತ್ತುವಂತೆ ಮಾಡಿ, ತಿರುಪತಿ ತಿಮ್ಮಪ್ಪನ ವೇಷ ಧರಿಸಿಕೊಂಡು ನಾನೇ ದೇವರು ಎಂದು ಹೇಳುತ್ತಿದ್ದನು.

ಸ್ವಾಮೀಜಿಯ ಮಹಿಮೆಯಿಂದ ಮಾತು ಬಾರದವರು ಮಾತನಾಡಿದರು; ನಡೆಯಲಾರದವರು ನಡೆದರು ಎಂದು ಕೆಲವರು ಸುತ್ತಲಿನ ಗ್ರಾಮಸ್ಥರಲ್ಲಿ ಪ್ರಚಾರ ಮಾಡಿದರು. ಇದರಿಂದ ಅಲ್ಲಿ ಜನ ಸೇರಲು ಆರಂಭಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪವಾಡ ಪುರುಷನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತರು.

ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಕೋಡಿತೊಟ್ಟಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತೋಷ್ ಸ್ವಾಮಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆಗ ಕ್ರುದ್ಧನಾದ ಸ್ವಾಮೀಜಿ ನಾನೇ ಮಹಾವಿಷ್ಣು; ನಾನೇ ಪಾಂಡುರಂಗನೆಂದು ಕೂಗಿದ್ದಾನೆ. ನಂತರ ಪೊಲೀಸರು ಆತನನ್ನು ಎಚ್ಚರಿಸಿ ಕಳುಹಿಸಿದ್ದಾರೆ.

ಸಿದ್ಧರ ನಾಡು ತಿರುವಣ್ಣಾಮಲೈನಲ್ಲಿ ಅನೇಕ ಸ್ವಾಮೀಜಿಗಳು ಇದ್ದಾರೆ. ಇವರಲ್ಲಿ ಕೆಲವರು ಸಾರ್ವಜನಿಕರನ್ನು ಸುಲಭವಾಗಿ ಸೆಳೆಯಲು ವಿವಿಧ ಕೋಡಂಗಿ ಕೆಲಸಗಳಲ್ಲಿ ತೊಡಗಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಆ ಸಾಲಿಗೆ ಇದೀಗ ನಕಲಿ ಸ್ವಾಮೀಜಿ ಸಂತೋಷ್ ಕುಮಾರ್ ಸೇರಿಕೊಂಡಿದ್ದಾನೆ.

ಮಹಾವಿಷ್ಣುವಿನ ವೇಷದಲ್ಲಿ ಇಬ್ಬರು ಪತ್ನಿಯರೊಂದಿಗೆ ಇರುವ ಚಿತ್ರಗಳು ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತೆಲಂಗಾಣವನ್ನು ಅಲುಗಾಡಿಸಿದ ನಕಲಿ ಸ್ವಾಮಿ ಇದೀಗ ತಿರುವಣ್ಣಾಮಲೈನಲ್ಲಿ ಹಾಸ್ಯದ ನೆಪದಲ್ಲಿ ಸಂಚಲನ ಮೂಡಿಸಿದ್ದಾನೆ.

Related Posts