ರಾಜ್ಯದ ಜನತೆಗೆ ಸುಭಿಕ್ಷತೆ, ಆರೋಗ್ಯ ದಯಪಾಲಿಸಲೆಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥನೆ! » Dynamic Leader
October 21, 2024
ರಾಜ್ಯ

ರಾಜ್ಯದ ಜನತೆಗೆ ಸುಭಿಕ್ಷತೆ, ಆರೋಗ್ಯ ದಯಪಾಲಿಸಲೆಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥನೆ!

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲಕ್ಕೆ ಕರ್ನಾಟಕದಿಂದ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸುತ್ತಿರುವ ವಸತಿಗೃಹ ಹಾಗೂ ಕಲ್ಯಾಣ ಮಂಟಪದ ಕಾಮಗಾರಿಯನ್ನು ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದರು. ಇದರ ವೆಚ್ಚ ಸುಮಾರು 220 ಕೋಟಿಗಳಷ್ಟು ಆಗಲಿದ್ದು, ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ 384 ವಸತಿಗೃಹ ಹಾಗೂ ಕಲ್ಯಾಣ ಮಂಟಪದ ಕಾಮಗಾರಿ ಪೂರ್ಣವಾಗಲಿದೆ.

300 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಕರ್ನಾಟಕದ ಭಕ್ತರಿಗಾಗಿ ತಿರುಮಲದಲ್ಲಿ 7 ಎಕರೆ ಭೂಮಿಯನ್ನು ಖರೀದಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ದಿನ ಜುಲೈ 26. ಈ ದಿನದ ವಿಶೇಷ ಪ್ರಯುಕ್ತ ಶ್ರೀವಾರಿ ಪಲ್ಲೋತ್ಸವ ದೇವರ ವಿಶೇಷ ಸೇವೆ ನಡೆಯುತ್ತಾ ಬಂದಿದ್ದು ಶ್ರೀವಾರಿ ಉತ್ಸವ ಮೂರ್ತಿಗೆ ವರ್ಷಕ್ಕೊಮ್ಮೆ ವಜ್ರ ವೈಡೂರ್ಯಗಳ ಅಲಂಕಾರದ ಉತ್ಸವವನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ರಾಜ ಮಾತೆ ಶ್ರೀಮತಿ ಪ್ರಮೋದ ದೇವಿಯವರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಕರ್ನಾಟಕ ರಾಜ್ಯದ ಜನತೆಗೆ ಸುಭಿಕ್ಷತೆ, ಆರೋಗ್ಯ ದಯಪಾಲಿಸಲೆಂದು ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು. ತಿರುಮಲದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನ ಸಭೆಯನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಶಾಸಕರು ಹಾಗೂ ಟಿಟಿಡಿ ಸದಸ್ಯರಾದ ಎಸ್.ಆರ್.ವಿಶ್ವನಾಥ್, ಇಓ ದರ್ಣ ರೆಡ್ಡಿ, ಕೃಷ್ಣಮ್ ರಾಜು, ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟೀರಿಯ ಹಾಗೂ ಮುಜರಾಯಿ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Posts