ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪ್ರಾದೇಶಿಕ ಪಕ್ಷ Archives » Dynamic Leader
October 31, 2024
Home Posts tagged ಪ್ರಾದೇಶಿಕ ಪಕ್ಷ
ದೇಶ

ಪಾಟ್ನಾ: ಬಿಹಾರದಲ್ಲಿ ಬಿಜೆಪಿಯನ್ನು ಬೆಳೆಸಿದ ದಿಗ್ಗಜ ನಾಯಕ ಕೈಲಾಸಪತಿ ಮಿಶ್ರಾ ಅವರ 100ನೇ ಜನ್ಮದಿನದ ಅಂಗವಾಗಿ ಪಾಟ್ನಾದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮುಖಂಡ ಜೆಪಿ ನಡ್ಡಾ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಕುಟುಂಬ ಪ್ರಾಬಲ್ಯ ಹೊಂದಿವೆ. ಸ್ವಹಿತಾಸಕ್ತಿಯ ನಾಯಕರು ಮೊದಲು ಪ್ರಾದೇಶಿಕ ಪಕ್ಷಗಳನ್ನು ಪ್ರಾರಂಭಿಸುತ್ತಾರೆ. ನಂತರ ಅವರು ಅದನ್ನು ಕುಟುಂಬ ಪಕ್ಷಗಳಾಗಿ ಪರಿವರ್ತಿಸುತ್ತಾರೆ. ಇದುವೇ ಅವರ ಶೈಲಿ. ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಬದ್ಧವಾಗಿ, ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳುತ್ತದೆ.

ಈಗ ಜನರ ಮನಸ್ಥಿತಿ ಬದಲಾಗಿದೆ. ಅವರು ಇನ್ನು ಮುಂದೆ ಪ್ರಾದೇಶಿಕ ಪಕ್ಷಗಳನ್ನು ಸಹಿಸುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ಪ್ರಾದೇಶಿಕ ಪಕ್ಷಗಳು ನೆಲಕಚ್ಚುವುದು ಖಚಿತ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ, 12 ಲಕ್ಷ ಕೋಟಿ ರೂ.ಗಳ ವರೆಗೆ ಭ್ರಷ್ಟಾಚಾರ ನಡೆದಿದೆ. ಹೊಸದಾಗಿ ಆರಂಭವಾದ ‘ಇಂಡಿಯಾ’ ಮೈತ್ರಿಕೂಟದ ಉದ್ದೇಶ ಭ್ರಷ್ಟಾಚಾರವನ್ನು ಪೋಷಿಸುವುದು ಮತ್ತು ಭ್ರಷ್ಟ ರಾಜಕೀಯ ಕುಟುಂಬಗಳನ್ನು ರಕ್ಷಿಸುವುದೇ ಆಗಿದೆ.

ಬಡವರ ಬದುಕನ್ನು ಹಸನುಗೊಳಿಸುವುದೇ ಬಿಜೆಪಿಯ ಗುರಿಯಾಗಿದೆ. ಮೋದಿ ಸರ್ಕಾರ ತಂದ ಯೋಜನೆಗಳಿಂದ ಇತರೆ ಹಿಂದುಳಿದವರು ಲಾಭ ಪಡೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ 2025ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.