ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮ್ಯಾನ್ಮಾರ್ Archives » Dynamic Leader
November 22, 2024
Home Posts tagged ಮ್ಯಾನ್ಮಾರ್
ವಿದೇಶ

ಮ್ಯಾನ್ಮಾರ್‌,

ಆಂಗ್ ಸಾನ್ ಸೂ ಕಿ (ವಯಸ್ಸು 78) ಆಗ್ನೇಯ ಏಷ್ಯಾದ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಅನೇಕ ಪ್ರತಿಭಟನೆಗಳಿಗೆ ನೇತೃತ್ವ ವಹಿಸಿದವರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದ ಇವರು 2020ರಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ನಾಯಕರಾಗಿ ಆಯ್ಕೆಯಾದರು.

ಆದರೆ ಮರುವರ್ಷವೇ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ ಅಲ್ಲಿ ಮತ್ತೆ ಮಿಲಿಟರಿ ಆಡಳಿತ ತರಲಾಯಿತು. ಅದರೊಂದಿಗೆ 2½ ವರ್ಷಗಳ ಕಾಲ ಅಲ್ಲಿ ತುರ್ತು ಪರಿಸ್ಥಿತಿಯನ್ನೂ ಹೇರಲಾಯಿತು. ಏತನ್ಮಧ್ಯೆ, ಆಂಗ್ ಸಾನ್ ಸೂ ಕಿ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಆಂಗ್ ಸಾನ್ ಸೂ ಕಿ ವಿರುದ್ಧ ಸೇನೆಯ ವಿರುದ್ಧ ದಂಗೆ, ಭ್ರಷ್ಟಾಚಾರ ಮತ್ತು ಇತರ ಆರೋಪಗಳನ್ನು ಹೊರಿಸಲಾಗಿದೆ. ಈ ಸಂಬಂಧ ಹಲವು ಪ್ರಕರಣಗಳು ಆ ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಇದುವರೆಗೆ 27 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಹಿನ್ನಲೆಯಲ್ಲಿ, ಆಂಗ್ ಸಾನ್ ಸೂ ಕಿ ಅವರನ್ನು ಜೈಲಿನಿಂದ ಗೃಹಬಂಧನಕ್ಕೆ ವರ್ಗಾಯಿಸಲಾಗಿದೆ ಎಂದು ಮ್ಯಾನ್ಮಾರ್ ಸೇನೆ ತಿಳಿಸಿದೆ. ಶಾಖದ ಅಲೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಜೈಲಿನಿಂದ ವರ್ಗಾವಣೆಗೊಂಡಿರುವ ಆಂಗ್ ಸಾನ್ ಸೂ ಕಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ದೇಶ ರಾಜಕೀಯ

ಗಲಭೆಗಳು ಭುಗಿಲೆದ್ದಿರುವ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರಲು ಚೀನಾವೇ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ.

ಪ್ರಸ್ತುತ ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ 2 ಬುಡಕಟ್ಟುಗಳ ನಡುವೆ ಸಂಘರ್ಷವಿದೆ. ಕಳೆದ ವರ್ಷ ಇಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ ಸಮಸ್ಯೆಗಳು ಹೆಚ್ಚುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮೈತೇಯಿ ಸಮುದಾಯದ ಜನರು ತಮ್ಮನ್ನು ಬುಡಕಟ್ಟು ಪಟ್ಟಿಗೆ ಸೇರಿಸಬೇಕು ಎಂದು ಕಳೆದ ಕೆಲವು ತಿಂಗಳಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ‘ಕುಕಿ’ ಸಮುದಾಯ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.

ಇದರಿಂದಾಗಿ ಎರಡು ಸಮುದಾಯಗಳ ನಡುವೆ ಸಮಸ್ಯೆಗಳು ಉದ್ಭವಿಸಿ ಗಲಭೆಯಾಗಿ ಮಾರ್ಪಟ್ಟಿವೆ. ಈ ಗಲಭೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಅಲ್ಲಿರುವ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದಲ್ಲದೇ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ಈ ಗಲಭೆಯನ್ನು ನಿಯಂತ್ರಣಕ್ಕೆ ತರದೆ ತಮಾಷೆ ನೋಡುತ್ತಿದೆ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಟೀಕಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಬಿಜೆಪಿ ಸಚಿವರುಗಳು, ಬಿಜೆಪಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ಪತ್ರ ರವಾನಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ 50 ದಿನಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಅಹಿತಕರ ಘಟನೆಯನ್ನು ಸರಿಪಡಿಸಲು ಮುಂದಾಗದ ಪ್ರಧಾನಿ ಮೋದಿ, ಮಣಿಪುರದ ಬದಲು ಅಮೆರಿಕ-ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದರು. ಈ ಘಟನೆಯಿಂದ ದೇಶದೆಲ್ಲೆಡೆ ಮೋದಿಯವರ ವಿರುದ್ದ ವ್ಯಾಪಕವಾದ ಖಂಡನೆಗಳು ವ್ಯಕ್ತವಾದವು. ಆದರೂ, ಇಲ್ಲಿಯವರೆಗೆ ಮೋದಿಯವರು ಮಣಿಪುರದ ಕಡೆ ನೋಡಲೇ ಇಲ್ಲ.

ಈ ಹಿನ್ನಲೆಯಲ್ಲಿ ಮೋದಿ ಮಣಿಪುರಕ್ಕೆ ಹೋಗದಿರಲು ಚೀನಾವೇ ಕಾರಣ ಎಂದು, ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಪುಟದಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಅವರು ಮಾಡಿರುವ ಟ್ವೀಟ್ ನಲ್ಲಿ, “ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಿ ಅಲ್ಲಿನ ಜನರಿಗೆ ಏಕೆ ಸಾಂತ್ವನ ಹೇಳಲಿಲ್ಲ.

ಬರ್ಮಾ (ಮ್ಯಾನ್ಮಾರ್) ಮೂಲಕ ಚೀನಾ ಸರಬರಾಜು ಮಾಡುವ ಶಸ್ತ್ರಾಸ್ತ್ರಗಳಿಂದ ಮೈತೇಯಿ ವಿರೋಧಿ (ಹಿಂದೂ) ಜನರನ್ನು ಗುರಿಯಾಗಿಸಲಾಗುತ್ತಿದೆ. ಈ ಹಿಂದೆ ಲಡಾಖ್‌ನಲ್ಲಿ ಚೀನಾ ನಮ್ಮ ಭೂಮಿಯನ್ನು ಕಬಳಿಸಲು ಯತ್ನಿಸಿದಾಗ ಮೋದಿ ಹೆದರಿದ್ದರು.

ಅಂದರೆ, ಮ್ಯಾನ್ಮಾರ್ ಮೂಲಕ ಮೈತೇಯಿ ಸಮುದಾಯದ ಮೇಲೆ ದಾಳಿ ಮಾಡಲು ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದು, ಚೀನಾದ ಭಯದಿಂದ ಪ್ರಧಾನಿ ಮೋದಿ ಈ ವಿಷಯದಲ್ಲಿ ಮೌನವಾಗಿದ್ದಾರೆ” ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಗಲಭೆಯಿಂದ ಸಂತ್ರಸ್ತರಾದ ಜನರನ್ನು ಮೋದಿ ಭೇಟಿ ಮಾಡದಿರುವ ಹಿನ್ನಲೆಯಲ್ಲಿ, ಅಲ್ಲಿನ ಜನರನ್ನು ಭೇಟಿ ಯಾಗಲು ಇಂದು ರಾಹುಲ್ ಗಾಂಧಿ ಮಣಿಪುರಕ್ಕೆ ತೆರಳಿದ್ದಾರೆ. ಆದರೆ ಇಂಫಾಲ ವಿಮಾನ ನಿಲ್ದಾಣದಿಂದ ಸುರಚಂದಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಬಿಷ್ಣುಪುರ ಪ್ರದೇಶದಲ್ಲಿ ಪೊಲೀಸರು ತಡೆದರು. ಇದರಿಂದಾಗಿ ಕಾಂಗ್ರೆಸ್ ಪಕ್ಷವು ಅಲ್ಲಿ ಪ್ರತಿಭಟನೆಯಲ್ಲಿ ತೊಡಗಿತು.