ಜೈಪುರ: ಸನಾತನದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಕಿತ್ತೊಗೆಯಬೇಕು ಎಂಬ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜಸ್ಥಾನದ ಪರ್ಮಾರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, “ಸನಾತನದ ವಿರುದ್ಧ ಮಾತನಾಡುವ ಯಾರೂ ದೇಶದಲ್ಲಿ ರಾಜಕೀಯ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸನಾತನವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ಕೂಡಿದ ಹೊಸ ಸಮವಸ್ತ್ರ!
ಸನಾತನವನ್ನು ಉಳಿಸಲು ಪೂರ್ವಜರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಆದರೆ ಕೆಲವರು ಅದನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಸನಾತನದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಕಿತ್ತೊಗೆಯಬೇಕು” ಎಂದು ಹೇಳಿದರು.
ಇದನ್ನೂ ಓದಿ: ರಿವಾರ್ಡ್ 360 ಕಂಪನಿಯ ವೆಬ್‌ಸೈಟ್ ಹ್ಯಾಕ್: ಸುಮಾರು ರೂ 4 ಕೋಟಿ ಮೌಲ್ಯದ ವಸ್ತುಗಳು ಅಮಾನತ್ತು; ಆರೋಪಿ ಅರೆಸ್ಟ್!
ಸನಾತನ ವಿರೋಧಿಸಿದರೆ ನಾಲಿಗೆಯನ್ನು ಕಿತ್ತೊಗೆಯಬೇಕು ಎಂಬ ಕೇಂದ್ರ ಸಚಿವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.