ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Martin Cooper Archives » Dynamic Leader
October 23, 2024
Home Posts tagged Martin Cooper
ವಿದೇಶ

ಬಾರ್ಸಿಲೋನಾ: ಅಮೇರಿಕ ವಿಜ್ಞಾನಿಯಾದ ಮಾರ್ಟಿನ್ ಕೂಪರ್ ಅವರು 1973ರಲ್ಲಿ ಅಮೆರಿಕದ ಬೀದಿಯಲ್ಲಿ ನಿಂತು ನ್ಯೂಯಾರ್ಕ್ ನಗರದ ವ್ಯಕ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಇದುವೇ ಮೊದಲ ಸೆಲ್ ಫೋನ್ ಕರೆಯಾಗಿತ್ತು. ಇಟ್ಟಿಗೆಯಂತೆ ಕಾಣುವ ಆ ಸೆಲ್ ಫೋನ್ ಭವಿಷ್ಯದಲ್ಲಿ ಜಾಗತಿಕ ಸಂವಹನ ಸಾಧನವಾಗಿ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಆ ಸಮಯದಲ್ಲಿ ಮಾರ್ಟಿನ್ ಕೂಪರ್ ಅವರಿಗೆ ತಿಳಿದಿರಲು ಸಾಧ್ಯವಿಲ್ಲ.

ಸೆಲ್ ಫೋನ್ ಕಂಡುಹಿಡಿದು ಈಗ 50 ವರ್ಷಗಳಾಗಿವೆ. ಅರ್ಧ ಶತಮಾನದ ಕಾಲಘಟ್ಟದಲ್ಲಿ ಇಟ್ಟಿಗೆಯಂತೆ ಕಾಣುತ್ತಿದ್ದ ಸೆಲ್ ಫೋನ್, ಈಗ ಕೈಯಲ್ಲಿ ಮರೆಮಾಚುವ ಸಿಕ್ಕ ಸಾಧನವಾಗಿ ಬದಲಾಗಿದೆ. ಅದರ ಹೊರತಾಗಿ ಸಂವಹನದ ಎಲ್ಲೆಗಳನ್ನು ಮೀರಿ, ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುವ ಕಲೆ ಭಂಡಾರವಾಗಿ ಮತ್ತು ಕೇವಲ ದೂರಸಂಪರ್ಕಕ್ಕಾಗಿ ಆರಂಭವಾದ ಸೆಲ್ ಫೋನ್ ಇಂದು ಜಗತ್ತಿನ ಮಾಹಿತಿಗಳನ್ನು ತಿಳಿದುಕೊಳ್ಳುವ ಸಾಧನವಾಗಿಯೂ ಮಾರ್ಪಟ್ಟಿದೆ. ಇದರ ಜೊತೆಯಲ್ಲಿ ಅಶ್ಲೀಲ ಚಿತ್ರಗಳನ್ನು ಇತರರಿಗೆ ತಿಳಿಯದಂತೆ ರೆಕಾರ್ಡಿಂಗ್ ಮಾಡುವುದು, ಸಂಭಾಷಣೆಗಳನ್ನು ರೆಕಾರ್ಡಿಂಗ್ ಮಾಡುವುದು, ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವುದು ಮುಂತಾದ ಹಲವಾರು ಅಪರಾದ ಕೃತ್ಯಗಳೂ ನಡೆಯುತ್ತಿದೆ.

ಸೆಲ್ ಫೋನ್ ಕಂಡುಹಿಡಿದ ವಿಜ್ಞಾನಿ ಮಾರ್ಟಿನ್ ಕೂಪರ್ ಅವರಿಗೆ ಈಗ 94 ವರ್ಷ ವಯಸ್ಸಾಗಿದೆ. ಸೆಲ್ ಫೋನಿನ ಪ್ರಸ್ತುತ ಸ್ಥಿತಿಯ ಬಗ್ಗೆ ಅವರಲ್ಲಿ ಕೇಳಿದಾಗ, ‘ನಾನು ಸೆಲ್ ಫೋನ್‌ನ ಕಪ್ಪು ಪುಟಗಳ ಬಗ್ಗೆ ಚಿಂತಿಸುತ್ತಿದ್ದೇನೆ. ಆದರು, ಅದರ ಅಗಾಧ ಬೆಳವಣಿಗೆಯು ಭವಿಷ್ಯಕ್ಕೆ ಒಳ್ಳೆಯದನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಎಲ್ಲರ ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದರಿಂದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.