ನವದೆಹಲಿ: ‘ಕಾಂಗ್ರೆಸ್ ಎಲ್ಲೇ ಅಧಿಕಾರದಲ್ಲಿದ್ದರೂ ಅದು ಭಾರತದ ಹಣವನ್ನು ಭಾರತೀಯರಿಗೆ ಖರ್ಚು ಮಾಡುತ್ತದೆ; ಬಂಡವಾಳಶಾಹಿಗಳಿಗೆ ಅಲ್ಲ. ಇದು ನಮ್ಮ ಭರವಸೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದಾರೆ.
ಈ ಕುರಿತು ಅವರು ತಮ್ಮ ‘ಎಕ್ಸ್’ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, ತೆಲಂಗಾಣ ರೈತ ಕುಟುಂಬಗಳಿಗೆ ಅಭಿನಂದನೆಗಳು. 2 ಲಕ್ಷದವರೆಗಿನ ಎಲ್ಲಾ ಸಾಲಗಳನ್ನು ಮನ್ನಾ ಮಾಡುವ ಮೂಲಕ, 40 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳನ್ನು ಸಾಲದಿಂದ ಮುಕ್ತಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಐತಿಹಾಸಿಕವಾದ ಕ್ರಮ ಕೈಗೊಂಡಿದೆ.
ರೈತರು ಏನು ಹೇಳುತ್ತಾರೋ ಅದನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತದೆ. ಇದುವೇ ನನ್ನ ಆಲೋಚನೆ ಮತ್ತು ನನ್ನ ಅಭ್ಯಾಸವಾಗಿದೆ. ರೈತರು, ಕಾರ್ಮಿಕರು ಸೇರಿದಂತೆ ದಲಿತ ಸಮುದಾಯದ ಬಲವರ್ಧನೆಗೆ ಕಾಂಗ್ರೆಸ್ ಸರಕಾರ ಮುಂದಾಗಲಿದೆ.
ತೆಲಂಗಾಣ ಸರ್ಕಾರದ ಈ ನಿರ್ಧಾರ ಅದಕ್ಕೆ ನಿದರ್ಶನ. ಕಾಂಗ್ರೆಸ್ ಎಲ್ಲೇ ಅಧಿಕಾರದಲ್ಲಿದ್ದರೂ ಅದು ಭಾರತದ ಹಣವನ್ನು ಭಾರತೀಯರಿಗೆ ಖರ್ಚು ಮಾಡುತ್ತದೆ. ಬಂಡವಾಳಶಾಹಿಗಳಿಗೆ ಅಲ್ಲ. ಇದು ನಮ್ಮ ಭರವಸೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದಾರೆ.