ವರದಿ: ರಾಮು, ನೀರಮಾನ್ವಿ
ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮತ್ತು ರಾಯಚೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡಿತ್ತಿದ್ದ ಎರಡು ಗುಂಪುಗಳ ಮೇಲೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ. ಅಕ್ರಮ ಮರಳು ದಂದೆಯ ಸಾಗಾಟದ ನಿಖರವಾದ ಮಾಹಿತಿ ಪಡೆದ ರಾಯಚೂರು ಉಪ ವಿಭಾಗಧಿಕಾರಿ ಯಂಗ್ ಡೈನಾಮಿಕ್ ಆಫೀಸರ್ ರಜನಿಕಾಂತ್ ರವರು ದಾಳಿ ಮಾಡಿ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.
ಫೆಬ್ರವರಿ 12 ರಂದು ರಾತ್ರಿ 10-30ಕ್ಕೆ ಮಾನ್ವಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದ್ಲಾಪುರ ಗ್ರಾಮದ ಹತ್ತಿರದ ತುಂಗ ಬದ್ರಾ ನದಿಯಲ್ಲಿ ಮತ್ತು ಫೆಬ್ರವರಿ 1 ರಂದು ರಾಯಚೂರು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೃಷ್ಣ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಾರಿಗಳನ್ನು ಹಿಡಿದು ತಪಾಸಣೆ ಮಾಡಿ, ನಿಯಮವಳಿಗಳ ಪ್ರಕಾರ ದೂರು ದಾಖಲಿಸಿಕೊಂಡು ದಂಡ ವಿದಿಸಿರುವ ಸಂಗತಿ ತಿಳಿದು ಬಂದಿದೆ.
ಈ ನದಿಗಳ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಬಹು ಹಿಂದಿನಿಂದಲೂ ನಡೆಯುತ್ತಿರುವ ಕಳ್ಳ ದಂದೆಯಾಗಿದೆ. ಇದೀಗ ರಾಯಚೂರು ಉಪ ವಿಭಾಗಧಿಕಾರಿ ಯಾದ ರಜನಿಕಾಂತ್ ಅವರು ಮಾಡಿರುವ ದಾಳಿಯನ್ನು ರಾಯಚೂರು ಜಿಲ್ಲೆಯ ನಾಗರಿಕರು ಶ್ಲಾಘಿಸಿದ್ದಾರೆ.