ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ವಿಧಾನಸಭೆ ಚುನಾವಣೆ Archives » Dynamic Leader
November 23, 2024
Home Posts tagged ವಿಧಾನಸಭೆ ಚುನಾವಣೆ
ರಾಜಕೀಯ

ಕಾಶ್ಮೀರಿ ಪಂಡಿತರು ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು ನಡೆಯಲಿದೆ. “ಇಂಡಿಯಾ ಮೈತ್ರಿಕೂಟ”ದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷ, ಪ್ಯಾಂಥರ್ ಪಕ್ಷಗಳು ಸ್ಪರ್ಧಿಸುತ್ತಿವೆ.

ಅಂತೆಯೇ ಈ ಚುನಾವಣೆಯನ್ನು ಬಿಜೆಪಿ ಮತ್ತು ಡೆಮಾಕ್ರಟಿಕ್ ಪಾರ್ಟಿ ಪ್ರತ್ಯೇಕವಾಗಿ ಎದುರಿಸುತ್ತಿವೆ. ಇದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಸಮಯದಲ್ಲಿ ಮಾತ್ರ ನಮ್ಮ ಬಗ್ಗೆ ಮಾತನಾಡುವುದೇಕೆ? ಎಂದು ಪ್ರಶ್ನಿಸಿರುವ ಕಾಶ್ಮೀರ ಪಂಡಿತರ ಸಮನ್ವಯ ಸಮಿತಿಯು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.

ಈ ಕುರಿತು, ಮಾತನಾಡಿರುವ ಕಾಶ್ಮೀರ ಪಂಡಿತರ ಸಂಯೋಜಕರೊಬ್ಬರು, ‘ನಾವು ಹಲವಾರು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸಿಗ ಸಮುದಾಯವಾಗಿದ್ದೇವೆ. ನಂತರ ಬಂದ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೂಡ ಚುನಾವಣೆ ಸಮಯದಲ್ಲಿ ಮಾತ್ರ ನಮ್ಮ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತವೆ.

ನಿರ್ದಿಷ್ಟವಾಗಿ ಕೆಲವು ಪಕ್ಷಗಳು ಚುನಾವಣಾ ಸಮಯದಲ್ಲಿ ಕಾಶ್ಮೀರಿ ಪಂಡಿತರಿಂದ ಲಾಭ ಪಡೆದುಕೊಳ್ಳುತ್ತವೆ. ಆದರೆ ನಮಗೆ ಯಾವುದೇ ಪ್ರಾತಿನಿಧ್ಯವನ್ನು ಕೊಡುವುದಿಲ್ಲ. ಇದರಿಂದಾಗಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.