ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ! ಪಳ ನೆಡುಮಾರನ್
ಡಿ.ಸಿ.ಪ್ರಕಾಶ್ ಸಂಪಾದಕರು
ತಂಜಾವೂರು: ತಂಜೂರು ಮುಲ್ಲಿವಾಯ್ಕಾಲ್ ಸ್ಮಾರಕ ಭವನದಲ್ಲಿ ಇಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ತುರ್ತು ಪತ್ರಿಕಾ ಘೋಷ್ಟಿ ನಡೆಸಿ, ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಎಂಬ ಸುದ್ಧಿಯನ್ನು ಕೊಟ್ಟು ಎಲ್ಲರನ್ನು ಆಶ್ಚರ್ಯ ಪಡೆವಂತೆ ಮಾಡಿದರು.
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಅವರು ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ನಾನು ಪ್ರಪಂಚದಾದ್ಯಂತ ಇರುವ ತಮಿಳರಿಗೆ ಇದರ ಮೂಲಕ ತಿಳಿಯಪಡಿಸಲು ಬಯಸುತ್ತೇನೆ’. ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ಘೋಷಣೆ ಮಾಡಿದರು.
‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ. ಪ್ರಭಾಕರನ್ ಆರೋಗ್ಯವಾಗಿರುವುದು ಶ್ರೀಲಂಕಾ (ಈಳಂ) ತಮಿಳರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಪ್ರಭಾಕರನ್ ಬಗ್ಗೆ ಅಂದಿನ ರಾಜಪಕ್ಸೆ ಸರ್ಕಾರ ಹಾಗೂ ಇತರರಿಂದ ತಪ್ಪು ಮಾಹಿತಿಯನ್ನು ಹಬ್ಬಿಸಲಾಯಿತು. ಅವರು ಶೀಘ್ರದಲ್ಲೇ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾದ ಸಮಗ್ರ ಯೋಜನೆಯನ್ನು ಘೋಷಿಸಲಿದ್ದಾರೆ. ಜಗತ್ತಿನಾದ್ಯಂತ ಇರುವ ತಮಿಳರು ಇದನ್ನು ಬೆಂಬಲಿಸಬೇಕು.
ಪ್ರಭಾಕರನ್ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿ ದ್ದೇನೆ. ಅವರ ಅನುಮತಿಯ ಮೇರೆಗೆ, ಅವರ ಮೂಲಕ ತಿಳಿದ ವಿಷಯಗಳನ್ನು ಇಲ್ಲಿ ತಿಳಿಸುತ್ತಿದ್ದೇನೆ.
ಅವರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಎಂಬ ಕುತೂಹಲ ನಿಮಗಷ್ಟೇ ಅಲ್ಲ, ನನಗೂ ಮತ್ತು ಪ್ರಪಂಚದಾದ್ಯಂತ ಇರುವ ತಮಿಳರಿಗೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಶೀಘ್ರದಲ್ಲೇ ಅವರು ಹೊರಹೊಮ್ಮುತ್ತಾರೆ. ಪ್ರಭಾಕರನ್ ಪತ್ನಿ ಹಾಗೂ ಪುತ್ರಿ ಕೂಡ ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಜನರ ಮುಂದೆ ಬರುತ್ತಾರೆ. ಪ್ರಭಾಕರನ್ ಎಲ್ಲಿದ್ದಾರೆ ಎಂಬುದನ್ನು ಸದ್ಯಕ್ಕೆ ಪ್ರಕಟಿಸಲು ಸಾಧ್ಯವಿಲ್ಲ. ತಮಿಳುನಾಡು ಸರ್ಕಾರ ಮತ್ತು ಜನರು ಪ್ರಭಾಕರನ್ ಅವರಿಗೆ ಬೆಂಬಲವಾಗಿರಬೇಕು. ಶ್ರೀಲಂಕಾದಲ್ಲಿ ರಾಜಪಕ್ಸೆ ಆಡಳಿತ ಅಂತ್ಯಗೊಂಡಿರುವುದರಿಂದ ನಾವು ಈ ಘೋಷಣೆ ಮಾಡುತ್ತಿದ್ದೇವೆ.
ರಾಜಪಕ್ಸೆಯನ್ನು ಅಧಿಕಾರಕ್ಕೆ ತಂದ ಅದೇ ಸಿಂಹಳೀಯರು ಈಗ ಅವರನ್ನು ದೇಶದಿಂದ ಓಡಿಸುತ್ತಿದ್ದಾರೆ. ಇದಕ್ಕಿಂತ ಉತ್ತಮ ವಾತಾಕಾರಣ ಬೇರೊಂದು ಇರಲು ಸಾದ್ಯವಿಲ್ಲ. ಚೀನಾ ಶ್ರೀಲಂಕಾದಲ್ಲಿ ಆಳವಾಗಿ ನೆಲೆಯೂರುವ ಮೂಲಕ ಭಾರತದ ವಿರುದ್ಧ ಕೆಲಸ ಮಾಡುತ್ತಿದೆ ಇದನ್ನು ತಡೆಯಬೇಕಾಗಿದೆ.’ ಅದಕ್ಕೆ ಶ್ರೀಲಂಕಾದಲ್ಲಿ ಪ್ರತ್ಯೇಕವಾದ ತಮಿಳು ರಾಷ್ಟ್ರ ರಚನೆ ಆಗಬೇಕು. ಇಂದಿನ ಸನ್ನಿವೇಶದಲ್ಲಿ ಇದು ಅನಿವಾರ್ಯವೂ ಆಗಿದೆ.’ ಎಂದರು.