ಧರ್ಮ ಪ್ರಚಾರಕ್ಕೆ ಯತ್ನಿಸಿದ ಪಾಲ್ ದಿನಕರನ್: ಶ್ರೀಲಂಕಾದಲ್ಲಿ ಪಾಸ್‌ಪೋರ್ಟ್ ಜಪ್ತಿ! » Dynamic Leader
November 24, 2024
ವಿದೇಶ

ಧರ್ಮ ಪ್ರಚಾರಕ್ಕೆ ಯತ್ನಿಸಿದ ಪಾಲ್ ದಿನಕರನ್: ಶ್ರೀಲಂಕಾದಲ್ಲಿ ಪಾಸ್‌ಪೋರ್ಟ್ ಜಪ್ತಿ!

ಕೊಲಂಬೊ: ಬ್ಯುಸಿನೆಸ್ ವೀಸಾದಲ್ಲಿ ಶ್ರೀಲಂಕಾಕ್ಕೆ ಹೋಗಿ ಧರ್ಮ ಪ್ರಚಾರ ಮಾಡಿ, ಜನರನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದ್ದಕ್ಕಾಗಿ ಪಾಲ್ ದಿನಕರನ್ ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕ್ರಿಶ್ಚಿಯನ್ ಧರ್ಮ ಪ್ರಚಾರಕ ಪಾಲ್ ದಿನಕರನ್, ಜೀಸಸ್ ಕಾಲ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಳೆದ ವಾರ ವ್ಯಾಪಾರ ವೀಸಾದ ಮೇಲೆ ಶ್ರೀಲಂಕಾಗೆ ಹೋಗಿದ್ದ ಜೀಸಸ್ ಕಾಲ್ಸ್ ತಂಡವು, ಶ್ರೀಲಂಕಾ ಜಾಫ್ನಾದಲ್ಲಿ ಮಣಿಬೆ ಮತ್ತು ರಸವಿನ್ ಪ್ರದೇಶಗಳಲ್ಲಿ 3 ದಿನಗಳು ಧಾರ್ಮಿಕ ಪ್ರಚಾರ ಸಭೆ ನಡೆಯಲಿದೆ ಎಂದು ಕರಪತ್ರಗಳನ್ನು ವಿತರಿಸಿತು. “This is Shiva Bhumi. Evangelists don’t set foot”, Sri Lankan officials send back pastor Paul Dinakaran after Hindus protest.

ಇದನ್ನು ತೀವ್ರವಾಗಿ ವಿರೋಧಿಸಿದ ಜಾಫ್ನಾದಲ್ಲಿರುವ ಶಿವಸೇನಾ ಸಂಘಟನೆ, ‘ವ್ಯಾಪಾರ ವೀಸಾದ ಮೇಲೆ ಶ್ರೀಲಂಕಾಕ್ಕೆ ಬಂದಿರುವ ಪಾಲ್ ದಿನಕರನಿಗೆ ಇಲ್ಲಿ ಧಾರ್ಮಿಕ ಪ್ರಚಾರಕ್ಕೆ ಅವಕಾಶ ಕೊಡಬಾರದು ಎಂದು ಅಲ್ಲಿನ ಜನರಲ್ಲಿ ಮನವಿ ಮಾಡಿಕೊಂಡಿತು. ನಂತರ ಮಣಿಬೆ ಪ್ರದೇಶದ 50ಕ್ಕೂ ಹೆಚ್ಚು ಹಿಂದೂಗಳು ಸೇರಿ ಜಾಫ್ನಾ ಪೊಲೀಸ್ ಡಿಐಜಿಗೆ ದೂರು ಪತ್ರವನ್ನು ಕಳುಹಿಸಿದರು ಅದರಂತೆ ಜಾಫ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾಲ್ ದಿನಕರನ್ ಮತ್ತು ಅವರ ತಂಡವನ್ನು ವಲಸೆ ಅಧಿಕಾರಿಗಳು ತಡೆದು ನಿಲ್ಲಿಸಿ, ಧರ್ಮ ಪ್ರಚಾರ ಮಾಡದಂತೆ ಎಚ್ಚರಿಕೆಯನ್ನು ಕೊಟ್ಟು ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೋಂಡು ವಾಪಸ್ಸು ಕಳುಹಿಸಿದ್ದಾರೆ. Paul Dhinakaran And Jesus Calls Team Stopped At Jaffna Airport By Immigration Officials, Passport Confiscated To Prevent Religious Preaching.

Related Posts