ಮತಾಂತರಗೊಂಡ ದಲಿತ ಕ್ರೈಸ್ತರಿಗೆ ಎಸ್.ಸಿ.ಮೀಸಲಾತಿಯನ್ನು ಮುಂದುವರಿಸಿ! ಎಂ.ಕೆ.ಸ್ಟಾಲಿನ್ » Dynamic Leader
November 21, 2024
ರಾಜಕೀಯ

ಮತಾಂತರಗೊಂಡ ದಲಿತ ಕ್ರೈಸ್ತರಿಗೆ ಎಸ್.ಸಿ.ಮೀಸಲಾತಿಯನ್ನು ಮುಂದುವರಿಸಿ! ಎಂ.ಕೆ.ಸ್ಟಾಲಿನ್

ಮತಾಂತರಗೊಂಡ ದಲಿತ ಕ್ರೈಸ್ತರಿಗೆ ಎಸ್.ಸಿ.ಮೀಸಲಾತಿಯನ್ನು ಮುಂದುವರಿಸಲು ಸ್ಟಾಲಿನ್ ಮಂಡಿಸಿದ ಪ್ರತ್ಯೇಕ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಯಿತು.

ಚೆನ್ನೈ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ಕ್ರೈಸ್ತರಿಗೆ ಎಸ್.ಸಿ.ಮೀಸಲಾತಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರದ ಪ್ರತ್ಯೇಕ ನಿರ್ಣಯವನ್ನು ಮಂಡಿಸಿದರು.

ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾದ ಶಾಸನಬದ್ಧ ರಕ್ಷಣೆ, ಹಕ್ಕುಗಳು ಮತ್ತು ಮೀಸಲಾತಿ ಸೇರಿದಂತೆ ಸವಲತ್ತುಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೂ ವಿಸ್ತರಿಸಿ, ಅವರು ಎಲ್ಲಾ ರೀತಿಯಲ್ಲೂ ಸಾಮಾಜಿಕ ನ್ಯಾಯದ ಪ್ರಯೋಜನಗಳನ್ನು ಪಡೆಯಲು ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಇಂದು ವಿಧಾನಸಭೆಯಲ್ಲಿ ಸರ್ಕಾರದ ಪ್ರತ್ಯೇಕ ನಿರ್ಣಯವನ್ನು ಮಂಡಿಸಿದರು.

ಕ್ರೈಸ್ತ ಧರ್ಮಕ್ಕೆ ಒಳಗಾದ ದಲಿತರಿಗೆ ಮೀಸಲಾತಿ ನೀಡಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಮಂಡಿಸಿದ ಪ್ರತ್ಯೇಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್,

“ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರ ಗೊಂಡವರು ಪರಿಶಿಷ್ಟ ಜಾತಿಗೆ ಸೇರುವಂತಿಲ್ಲ. ಆದರೆ, 1956 ಮತ್ತು 1990ರಲ್ಲಿ ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡವರನ್ನು ಪರಿಶಿಷ್ಟ ಜಾತಿಗಳಲ್ಲಿ ಮುಂದುವರಿಸಲು ಕಾಯಿದೆಯನ್ನು ತಿದ್ದುಪಡಿ ಮಾಡಲಾಯಿತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರೂ ಇದೇ ರೀತಿಯ ತಿದ್ದುಪಡಿಯನ್ನು ನಿರೀಕ್ಷಿಸುತ್ತಿದ್ದಾರೆ.

ಐತಿಹಾಸಿಕವಾಗಿ ದಲಿತರಾಗಿರುವ ಇವರಿಗೆ ಪರಿಶಿಷ್ಟ ಜಾತಿಯ ಹಕ್ಕನ್ನು ನೀಡುವುದು ಸರಿಯಾಗಿರುತ್ತದೆ. ಯಾವ ಧರ್ಮವನ್ನು ಆರಿಸಿಕೊಂಡರೂ ಅದನ್ನು ಆಚರಿಸುವ ಹಕ್ಕು ಮನುಷ್ಯರಿಗೆ ಇದೆ. ಆದರೆ ಜಾತಿ ಬದಲಾವಣೆಗೆ ಒಳಪಡುವುದಿಲ್ಲ. ಜಾತಿಯ ಅಸಮಾನತೆಯ ಆಧಾರದ ಮೇಲೆ ಅವರು ಯಾವ ರೀತಿಯಲ್ಲಿ ತುಳಿತಕ್ಕೊಳಗಾಗುತ್ತಾರೋ ಅದೇ ಜಾತಿಯ ಆಧಾರದ ಮೇಲೆ ಅವರಿಗೆ ಮೀಸಲಾತಿ ಒದಗಿಸುವ ಮೂಲಕ ಅವರನ್ನು ಉನ್ನತೀಕರಣ ಗೊಳಿಸುವ ತತ್ವಶಾಸ್ತ್ರವೆ ಸಾಮಾಜಿಕ ನ್ಯಾಯದ ಸಿದ್ಧಾಂತವಾಗಿದೆ.

ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರವೂ ಅಸ್ಪೃಶ್ಯತೆಯ ಕ್ರೌರ್ಯ ಮುಂದುವರಿಯುತ್ತಿದೆ. ಸಾಮಾಜಿಕ ನ್ಯಾಯ ಸಿದ್ಧಾಂತವು ಎಲ್ಲ ರೀತಿಯಲ್ಲೂ ಅನುಸರಿಸಬೇಕು ಎಂಬುದೇ ದ್ರಾವಿಡ ಮಾಡಲ್ ಸರ್ಕಾರದ ಗುರಿಯಾಗಿರುತ್ತದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೂ ಸಾಮಾಜಿಕ ನ್ಯಾಯದ ಹಕ್ಕು ನೀಡಬೇಕು” ಎಂದರು. Tamil Nadu Chief Minister M K Stalin on Wednesday moved a resolution in the Assembly seeking to bring Dalit Christians under the ambit of reservation for Scheduled Castes (SC), arguing that it will help them avail the benefits of social justice in all aspects.

Related Posts