ನಂಜನಗೂಡು: ಸಿಂಧುವಳ್ಳಿ ಗ್ರಾಮದ ಪುರಾತನ ಶಂಕರೇಶ್ವರ ಹಾಗೂ ದೇವಿರಮ್ಮ ದೇವಾಲಯದಲ್ಲಿದೆ ಚೋಳರ ಕಾಲದ ತಮಿಳು ಶಾಸನ! » Dynamic Leader
November 24, 2024
ರಾಜ್ಯ

ನಂಜನಗೂಡು: ಸಿಂಧುವಳ್ಳಿ ಗ್ರಾಮದ ಪುರಾತನ ಶಂಕರೇಶ್ವರ ಹಾಗೂ ದೇವಿರಮ್ಮ ದೇವಾಲಯದಲ್ಲಿದೆ ಚೋಳರ ಕಾಲದ ತಮಿಳು ಶಾಸನ!

ಡಿ.ಸಿ.ಪ್ರಕಾಶ್

ಮೈಸೂರು: ಜಿಲ್ಲೆಯ ಈ ದೇವಾಲಯದಲ್ಲಿ ಕಂಡುಬಂದಿದೆ ಅತ್ಯಂತ ಪುರಾತನ ತಮಿಳು ಶಾಸನ. ಈ ಶಾಸನವು ತಮಿಳು ಭಾಷೆಯಲ್ಲಿದ್ದು ಚೋಳರ ಕಾಲದ ಇತಿಹಾಸವನ್ನು ಮುಂದಿಡುತ್ತದೆ. ಈ ಶಾಸನವು (Inscription) ನಂಜನಗೂಡಿನ ಸಿಂಧುವಳ್ಳಿ ಗ್ರಾಮದ ಪುರಾತನ ಶಂಕರೇಶ್ವರ ಹಾಗೂ ದೇವಿರಮ್ಮ ದೇವಾಲಯದಲ್ಲಿ ಕಂಡುಬಂದಿದೆ. ಇದು ಗ್ರಾಮದ ಪುರಾತನ ಹಾಗೂ ದೇವಾಲಯದ ಹಿನ್ನೆಲೆಯನ್ನು ಹೇಳುತ್ತದೆ.

ಇಲ್ಲಿ ದೊರೆತಿರುವ ಶಾಸನದ ಬಗ್ಗೆ ಇತಿಹಾಸದ ಎಪಿಗ್ರಫಿ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ. ಇದರಲ್ಲಿ ಸಿಂಧುವಳ್ಳಿ ಗ್ರಾಮದ ಇತಿಹಾಸ ಏನು ಅನ್ನೋದನ್ನ ತೋರಿಸುತ್ತದೆ. ಈ ಶಾಸನವು 1106-07ರ ಚೋಳ ಮನೆತನದ ಸುಪ್ರಸಿದ್ದ ಕೊನೆಯ ರಾಜನಾದ ಒಂದನೇ ಕುಲೋತುಂಗ ಚೋಳನ ಆಳ್ವಿಕೆಯ ಕಾಲದ ಶಾಸನವಾಗಿದೆ.

ಈ ಶಾಸನವು ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ಇದೊಂದು 15 ಸಾಲುಗಳನ್ನು ಹೊಂದಿರುವ ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡ ಶಾಸನವಾಗಿದೆ.

ಈ ತಮಿಳು ಶಾಸನವು ಕುಲೋತ್ತುಂಗನ ಆಳ್ವಿಕೆಯ 37ನೇ ವರ್ಷವನ್ನು ಉಲ್ಲೇಖಿಸುತ್ತದೆ. ಗಂಗೈಕೊಂಡ ಚೋಳನಾಡಿನ ಕರೆ-ನಾಡಿನ ಹಳ್ಳಿಯ ಹೆಸರು ಕಳೆದುಹೋಗಿದೆ. ಶಾಸನದಲ್ಲಿ ಉಲ್ಲೇಖಿತವಾಗಿರುವಂತಹ ದೇವಾಲಯ ಮತ್ತು ಕೆರೆ ಎರಡು ಕೂಡ ಸಿಂಧುವಳ್ಳಿ ಗ್ರಾಮದಲ್ಲಿ ಇರುವುದು ಗಮನಾರ್ಹ.

Related Posts