ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನವು ಗಡಿಯಾಚೆಗಿನ ದಾಳಿಗಳಲ್ಲಿ ತೊಡಗಿದ್ದರೆ, ಪಾಕಿಸ್ತಾನದೊಳಗಿನ ಬಲೂಚಿಸ್ತಾನ ಪ್ರಾಂತ್ಯದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿರುವ ಬಲೂಚ್ ಬಂಡುಕೋರರು (Balochistan Rebels) ಪಾಕಿಸ್ತಾನಿ ಸೇನೆಯ ವಿರುದ್ಧ ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಪಾಕಿಸ್ತಾನದ ಪಶ್ಚಿಮ ಪ್ರಾಂತ್ಯದ ಬಲೂಚಿಸ್ತಾನದ ನಿರ್ದಿಷ್ಟ ಪ್ರದೇಶಗಳ ಮೇಲೆ ಮೂರು ಬಂಡಾಯ ಗುಂಪುಗಳು ಹಿಡಿತ ಸಾಧಿಸಿವೆ. ಬಲೂಚಿಸ್ತಾನ ಪಡೆಗಳು ಮತ್ತು ಪಾಕಿಸ್ತಾನ ಸೇನೆಯ ನಡುವಿನ ಘರ್ಷಣೆಗಳೊಂದಿಗೆ ‘ಸ್ವತಂತ್ರ ಬಲೂಚಿಸ್ತಾನ’ ಎಂಬ ಘೋಷಣೆಯೂ ಮೊಳಗತೊಡಗಿದೆ.
ಕೆಲವು ಸ್ಥಳಗಳಲ್ಲಿ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ ಬಲೂಚಿಸ್ತಾನ್ ಧ್ವಜವನ್ನು ಹಾರಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.