• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

BBC ವರದಿ: ಕಮಲ್ ಹಾಸನ್ ಹೇಳುವಂತೆ ಕನ್ನಡ ತಮಿಳಿನಿಂದ ಹುಟ್ಟಿತೇ? ಭಾಷಾಶಾಸ್ತ್ರಜ್ಞರು ಏನು ಹೇಳುತ್ತಾರೆ?

ಕ್ರಿಸ್ತಪೂರ್ವ 8ನೇ ಶತಮಾನದಿಂದ ಕ್ರಿಸ್ತಪೂರ್ವ 6ನೇ ಶತಮಾನದವರೆಗೆ, ಪ್ರಾಚೀನ ದಕ್ಷಿಣ ದ್ರಾವಿಡ ಭಾಷೆಗಳು ಚದುರಲು ಪ್ರಾರಂಭಿಸಿದವು.

by Dynamic Leader
04/06/2025
in ದೇಶ
0
ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ, ಯಾವ ಭಾಷೆ ಯಾವ ಭಾಷೆಯಿಂದ ಹುಟ್ಟಿಕೊಂಡಿತು ಎಂದು ಹೇಳುವುದು ಕಷ್ಟ ಎಂದು ಭಾಷಾಶಾಸ್ತ್ರಜ್ಞರು ಹೇಳುತ್ತಾರೆ.
0
SHARES
83
VIEWS
Share on FacebookShare on Twitter

ಮುರಳಿಧರನ್ ಕಾಶಿ ವಿಶ್ವನಾಥನ್, ಬಿಬಿಸಿ ತಮಿಳು
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ, ಯಾವ ಭಾಷೆ ಯಾವ ಭಾಷೆಯಿಂದ ಹುಟ್ಟಿಕೊಂಡಿತು ಎಂದು ಹೇಳುವುದು ಕಷ್ಟ ಎಂದು ಭಾಷಾಶಾಸ್ತ್ರಜ್ಞರು ಹೇಳುತ್ತಾರೆ.

ಕಮಲ್ ಹಾಸನ್ ನಟಿಸಿ, ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಾಗ, ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಮಲ್ ಹಾಸನ್ ಅವರು ನಟ ಶಿವರಾಜ್‌ಕುಮಾರ್ ಬಗ್ಗೆ ಮಾತನಾಡುತ್ತಾ, “ಆ ಊರಿನಲ್ಲಿರುವ ರಾಜ್‌ಕುಮಾರ್ ಅವರ ಕುಟುಂಬವವು ನನ್ನ ಕುಟುಂಬವಾಗಿದೆ. ಅದಕ್ಕಾಗಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಭಾಷಣವನ್ನು ಪ್ರಾರಂಭಿಸಿದಾಗ, ‘ಉಯಿರೇ ಉರವೇ ತಮಿಳೇ’ ಎಂದು ಪ್ರಾರಂಭಿಸಿದೆ. ತಮಿಳಿನಿಂದ ಹುಟ್ಟಿದ್ದೇ ಕನ್ನಡ. ಅದನ್ನು ನೀವು ಕೂಡ ಒಪ್ಪುತ್ತೀರಿ” ಎಂದು ಹೇಳಿದರು. ಇದನ್ನು ಕೇಳಿದ ಶಿವರಾಜ್‌ಕುಮಾರ್ ಮುಗುಳ್ನಕ್ಕರು.

ಆದರೆ, ಕಮಲ್ ಹಾಸನ್ ಅವರ ಕನ್ನಡ ಮೂಲದ ಕುರಿತಾದ ಈ ಹೇಳಿಕೆ ಕರ್ನಾಟಕ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಯಿತು. ಕರ್ನಾಟಕದ ಮುಖ್ಯಮಂತ್ರಿಯಿಂದ ಹಿಡಿದು ಕನ್ನಡ ಸಂಘಟನೆಗಳವರೆಗೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಮಲ್ ಹಾಸನ್ ತಮ್ಮ ಭಾಷಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಈಗ ಈ ಸಮಸ್ಯೆಯಿಂದಾಗಿ, ಜೂನ್ 5 ರಂದು ‘ತಕ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ವಿಷಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ.

ಹಲವು ಅಥವಾ ಎಲ್ಲಾ ದ್ರಾವಿಡ ಭಾಷೆಗಳು ತಮಿಳಿನಿಂದ ಹುಟ್ಟಿಕೊಂಡಿವೆ ಎಂಬ ಅಭಿಪ್ರಾಯ ಹೊಸದೇನಲ್ಲ. ತಮಿಳು ರಾಷ್ಟ್ರೀಯತಾವಾದಿ ಚಿಂತಕರು ಈ ವಿಚಾರವನ್ನು ದೀರ್ಘಕಾಲದಿಂದಲೇ ಮುಂದಿಡುತ್ತಿದ್ದಾರೆ. ಆದರೆ, ದ್ರಾವಿಡ ಭಾಷಾ ಕುಟುಂಬದ ಇತರ ಭಾಷೆಗಳ ಜನರು ಇದನ್ನು ಒಪ್ಪಿಕೊಳ್ಳುವುದಿಲ್ಲ.

ತಮಿಳು ದ್ರಾವಿಡ ಭಾಷೆಗಳಿಗೆ ಮಾತೃಭಾಷೆಯೇ ಅಥವಾ ಸಹೋದರಿ ಭಾಷೆಯೇ?
19ನೇ ಶತಮಾನದ ಮಿಷನರಿ ಮತ್ತು ಭಾಷಾಶಾಸ್ತ್ರಜ್ಞ ರಾಬರ್ಟ್ ಕಾಲ್ಡ್ ವೆಲ್ (Robert Caldwell) ಅವರು ದ್ರಾವಿಡ ಭಾಷೆಗಳ ಸಮಗ್ರ ತುಲನಾತ್ಮಕ ಅಧ್ಯಯನವನ್ನು ಕೈಗೊಂಡ ಮೊದಲ ವ್ಯಕ್ತಿಯಾಗಿದ್ದಾರೆ.

ಅವರ A Comparative Grammar of the Dravidian or South Indian Family of Languages (ದ್ರಾವಿಡ ಭಾಷೆಗಳ ಹೋಲಿಕೆ) ಎಂಬ ಪುಸ್ತಕವು ದ್ರಾವಿಡ ಭಾಷಾ ಕುಟುಂಬದ ಭಾಷೆಗಳನ್ನು ವ್ಯವಸ್ಥಿತವಾಗಿ ಹೋಲಿಸಿ ಕೆಲವು ವಿಚಾರಗಳನ್ನು ಮಂಡಿಸಿದೆ.

ತಮಿಳು ಸೇರಿದಂತೆ ದ್ರಾವಿಡ ಭಾಷೆಗಳು ಇಂಡೋ-ಆರ್ಯನ್ ಭಾಷೆಗಳಿಂದ ಹುಟ್ಟಿಕೊಂಡಿಲ್ಲ. ಅವು ಪ್ರತ್ಯೇಕವಾದ, ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿವೆ ಎಂದು ಕಾಲ್ಡ್ ವೆಲ್ ಪ್ರಸ್ತಾಪಿಸಿದ್ದಾರೆ.

ಇದಲ್ಲದೆ, ದ್ರಾವಿಡ ಭಾಷೆಗಳು ಮೂಲ-ದ್ರಾವಿಡ ಎಂಬ ಭಾಷೆಯಿಂದ ಹೊರಹೊಮ್ಮಿವೆ ಮತ್ತು ತಮಿಳು ಈ ಮೂಲ-ದ್ರಾವಿಡ ಭಾಷೆಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ ಎಂದು ರಾಬರ್ಟ್ ಕಾಲ್ಡ್ ವೆಲ್ ಉಲ್ಲೇಖಿಸಿದ್ದಾರೆ.

ಆದರೆ, 20ನೇ ಶತಮಾನದ ಮಧ್ಯಭಾಗದಲ್ಲಿ, “ದೇವನೇಯ ಪಾವಾನರ್” ಅವರಂತಹವರು ತಮಿಳು ದ್ರಾವಿಡ ಭಾಷೆಗಳಿಗೆ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಭಾಷೆಗಳಿಗೂ ಮಾತೃಭಾಷೆಯಾಗಿದೆ ಎಂಬ ಅಭಿಪ್ರಾಯವನ್ನು ಮುಂದಿಟ್ಟರು. ಅಂದಿನಿಂದ, ಈ ಅಭಿಪ್ರಾಯನ್ನು ಕೆಲವರಿಂದ ನಿರಂತರವಾಗಿ ಪ್ರಸ್ತಾಪಿಸಲಾಗುತ್ತಿದೆ. ಆದರೆ, ಭಾಷಾ ಸಂಶೋಧಕರು ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ.

ತಮಿಳು ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯದು ಮತ್ತು ವಿಶಿಷ್ಟ ಸಾಹಿತ್ಯವನ್ನು ಹೊಂದಿದೆ ಎಂದು ಒಪ್ಪಿಕೊಂಡರೂ, ಒಂದರಿಂದ ಇನ್ನೊಂದು ವಿಕಸನಗೊಂಡಿತು ಎಂಬುದನ್ನು ಅವರು ಒಪ್ಪುವುದಿಲ್ಲ.

ಜೆಕ್ (Czech) ಮೂಲದ ಭಾರತೀಯ ಭಾಷಾಶಾಸ್ತ್ರಜ್ಞ ಕಾಮಿಲ್ ಜ್ವೆಲೆಬಿಲ್ (Kamil Zvelebil), ದ್ರಾವಿಡ ಭಾಷೆಗಳ ಮೂಲವನ್ನು ಉಲ್ಲೇಖಿಸುವಾಗ, “ಕ್ರಿಸ್ತಪೂರ್ವ 8ನೇ ಶತಮಾನದಿಂದ ಕ್ರಿಸ್ತಪೂರ್ವ 6ನೇ ಶತಮಾನದ ಕಾಲಘಟ್ಟದಲ್ಲಿ ಪ್ರಾಚೀನ ದಕ್ಷಿಣ ದ್ರಾವಿಡ ಭಾಷೆಗಳು ಚದುರಲು ಪ್ರಾರಂಭಿಸಿದವು.

ದ್ರಾವಿಡ ಭಾಷೆಗಳ ಇತಿಹಾಸಕಾರರು ತಮಿಳು ಭಾಷೆಯು ಕ್ರಿಸ್ತಪೂರ್ವ ನಾಲ್ಕನೇ ಮತ್ತು ಮೂರನೇ ಶತಮಾನಗಳ ನಡುವೆ ಸಾಹಿತ್ಯಿಕ ಭಾಷೆಯಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಪ್ರಾರಂಭಿಸಿತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ತಮಿಳು ಮತ್ತು ಕನ್ನಡ ಭಾಷೆಯ ಪ್ರತ್ಯೇಕತೆಯ ಅಂತಿಮ ಹಂತದಲ್ಲಿ, ಪ್ರಾಚೀನ ತಮಿಳು ಸಾಹಿತ್ಯದ ಆರಂಭಿಕ ಹಂತಗಳಲ್ಲಿ, ವ್ಯಾಕರಣಜ್ಞರು ಪದ್ಯದ ರೂಪದ ಸೃಷ್ಟಿಯ ಮೇಲೆ ಕೇಂದ್ರೀಕರಿಸಿದರು” ಎಂದು ಅವರು ತಮ್ಮ The Smile of Murugan ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅವರ ಪುಸ್ತಕದಲ್ಲಿ, “ತಮಿಳು ಮತ್ತು ಕನ್ನಡ ಪ್ರತ್ಯೇಕತೆಯ ಅಂತಿಮ ಹಂತದಲ್ಲಿ” ಎಂಬ ನುಡಿಗಟ್ಟು ಮಾತ್ರ ಕನ್ನಡ ತಮಿಳಿನಿಂದ ಹೊರಹೊಮ್ಮಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಆದರೆ ತಮಿಳನ್ನು ಹೊರತುಪಡಿಸಿ, ತೆಲುಗು, ಮಲಯಾಳಂ ಮತ್ತು ಕನ್ನಡದಂತಹ ಇತರ ಪ್ರಮುಖ ದ್ರಾವಿಡ ಭಾಷೆಗಳ ಆರಂಭಿಕ ಸಾಹಿತ್ಯಗಳು ಬೇರೆ ಯಾವುದಾದರೂ ಭಾಷೆಯ ಸಾಹಿತ್ಯದ ಪ್ರತಿಗಳಾಗಿದ್ದವು ಅಥವಾ ಅದರ ಮಾದರಿಯಲ್ಲಿದ್ದವು ಎಂದು ಅವರು ಹೇಳುತ್ತಾರೆ.

ಆರ್.ನರಸಿಂಹಾಚಾರ್ಯ ಬರೆದ History of Kannada Language ಎಂಬ ಪುಸ್ತಕದಲ್ಲಿ, ಆ ಭಾಷೆಯ ಮೂಲದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ. ಆದರೆ, ಕನ್ನಡ ಭಾಷೆ ತಮಿಳಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ ಎಂದು ಸೂಚಿಸುತ್ತದೆ.

“ಕನ್ನಡ ಭಾಷೆಗೂ ತಮಿಳಿಗೂ ನಿಕಟ ಸಂಬಂಧವಿದೆ. ವ್ಯಾಕರಣದ ಪ್ರಕಾರ ಈ ಎರಡೂ ಭಾಷೆಗಳ ನಡುವೆ ಹಲವು ಹೋಲಿಕೆಗಳಿವೆ. ತಮಿಳಿಗಿಂತ ಕನ್ನಡ ಭಿನ್ನವಾಗಿರುವುದಕ್ಕಿಂತ, ತೆಲುಗು ಭಾಷೆಗೆ ಹೆಚ್ಚು ಭಿನ್ನವಾಗಿದೆ” ಎಂದು ಆರ್. ನರಸಿಂಹಾಚಾರ್ಯ ಹೇಳುತ್ತಾರೆ.

ಇತರ ದ್ರಾವಿಡ ಭಾಷೆಗಳು ಮೂಲ-ದ್ರಾವಿಡ ಭಾಷೆಯಿಂದ ಹೊರಹೊಮ್ಮಿದವು ಎಂಬ ಊಹೆಯನ್ನು ಮುಂದಿಡಲಾಗಿದ್ದರೂ, ರಾಷ್ಟ್ರೀಯ ಜಾನಪದ ಬೆಂಬಲ ಕೇಂದ್ರದ (NFSC) ನಿರ್ದೇಶಕ ಎಂ.ಡಿ.ಮುತ್ತುಕುಮಾರಸ್ವಾಮಿ, ತಮಿಳು ಆ ಪ್ರಾಚೀನ ದ್ರಾವಿಡ ಭಾಷೆಗೆ ಹತ್ತಿರವಾದ ಭಾಷೆ ಎಂದು ಹೇಳುತ್ತಾರೆ.

“A comparative grammar of the dravidian or south indian family of languages’ ಎಂಬ ಪುಸ್ತಕ ಬರೆದ ರಾಬರ್ಟ್ ಕಾಲ್ಡ್ ವೆಲ್, ಇತರ ಭಾಷೆಗಳು ತಮಿಳಿನಿಂದ ಹುಟ್ಟಿಕೊಂಡಿವೆ ಎಂದು ಉಲ್ಲೇಖಿಸಿಲ್ಲ. ಆದರೆ ಬದಲಾಗಿ, ಅವರು ಮೂಲ-ದ್ರಾವಿಡ ಭಾಷೆಯ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಆ ಪ್ರಾಚೀನ ದ್ರಾವಿಡ ಭಾಷೆಗೆ ಹತ್ತಿರವಿರುವ ಭಾಷೆ ತಮಿಳೇ ಆಗಿತ್ತು ಎಂದೂ ಅವರು ಹೇಳುತ್ತಾರೆ.

ಅವರ ಪ್ರಕಾರ, ಎಲ್ಲಾ ದ್ರಾವಿಡ ಭಾಷೆಗಳು ಸಹೋದರ ಭಾಷೆಗಳು ಎಂದು ಉಲ್ಲೇಖಿಸುತ್ತಾರೆ. ಅವರ ನಂತರ ಬಂದ ಭಾಷಾಶಾಸ್ತ್ರಜ್ಞರು ಈ ಮೂಲ-ದ್ರಾವಿಡ ಭಾಷೆಗಳನ್ನು ಉತ್ತರ ಮೂಲ-ದ್ರಾವಿಡ ಮತ್ತು ದಕ್ಷಿಣ ಮೂಲ-ದ್ರಾವಿಡ ಸೇರಿದಂತೆ ಹಲವಾರು ಪ್ರಕಾರಗಳಾಗಿ ವಿಂಗಡಿಸಿ ಅಧ್ಯಯನ ಮಾಡಿದ್ದಾರೆ” ಎಂದು ಎಂ.ಡಿ.ಮುತ್ತುಕುಮಾರಸ್ವಾಮಿ ವಿವರಿಸಿದ್ದಾರೆ.

ಇದಲ್ಲದೆ, “ದ್ರಾವಿಡ ಮೂಲ ನಿಘಂಟೊಂದನ್ನು ಸಂಕಲಿಸಲಾಗಿದೆ. ಆ ಮೂಲ ನಿಘಂಟಿನಲ್ಲಿರುವ ಹೆಚ್ಚಿನ ಪದಗಳ ಮೂಲವು ತಮಿಳೇ ಆಗಿತ್ತು. ಇದಲ್ಲದೆ, ಕನ್ನಡ ಭಾಷೆಯಲ್ಲಿ ಗದ್ಯವು 10ನೇ ಶತಮಾನದಲ್ಲೇ ಪ್ರಾರಂಭವಾಗಿದೆ.

ಆದ್ದರಿಂದ, ಈಗ ಪ್ರಶ್ನೆ ಏನೆಂದರೆ ತಮಿಳಿಗೆ ಕನ್ನಡ ಸಹೋದರಿಯೋ (ಅಕ್ಕ) ಅಥವಾ ತಾಯಿಯೋ ಎಂಬುದು. ಸಹೋದರಿ ಎಂದರೆ ಎಲ್ಲರೂ ಸ್ವೀಕರಿಸುತ್ತಾರೆ. ಆದರೆ ಗಮನಾರ್ಹ ಸಂಗತಿಯೆಂದರೆ ಈ ಸಹೋದರಿ ಭಾಷೆಯು ತಾಯಿಯಷ್ಟೇ ಹಳೆಯದು ಎಂಬುದೇ ಗಮನಿಸಬೇಕಾದ ಅಂಶವಾಗಿದೆ,” ಎಂದು ಅವರು ವಿವರಿಸಿದ್ದಾರೆ.

ಇತರ ದ್ರಾವಿಡ ಭಾಷೆಗಳು ತಮಿಳಿನಿಂದ ಹೊರಹೊಮ್ಮಿದವು ಎಂದು ಹೇಳುವುದು ಸರಿಯಲ್ಲ ಎಂದು ಬರಹಗಾರ ಮತ್ತು ಪ್ರಾಧ್ಯಾಪಕ ಪೆರುಮಾಳ್ ಮುರುಗನ್ ಹೇಳಿದ್ದಾರೆ.

ಈ ಬಗ್ಗೆ ಅವರು ಬರೆದಿರುವ ಲೇಖನದಲ್ಲಿ, “ಇತರ ಎಲ್ಲಾ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದಿರಬೇಕು ಎಂಬ ಭಾಷಾಶಾಸ್ತ್ರಜ್ಞರ ಅಭಿಪ್ರಾಯವನ್ನು ನಾನು ಸಹ ಒಪ್ಪುತ್ತೇನೆ. ಹಾಗಾದರೆ, ಆ ಮೂಲ ದ್ರಾವಿಡ ಭಾಷೆ ಎಲ್ಲಿದೆ? ಎಂದು ಕೇಳುತ್ತಾರೆ. ಒಂದು ಕಲ್ಲನ್ನು ಒಡೆದರೆ, ಅದು ಅನೇಕ ತುಂಡುಗಳಾಗಿ ಚೂರುಚೂರಾಗುತ್ತದೆ. ಮೂಲೆಗಲ್ಲು ಎಲ್ಲಿದೆ ಎಂದು ಕೇಳಲು ಸಾಧ್ಯವಿಲ್ಲ.

ಭಾಷೆಯ ವಿಷಯದಲ್ಲೂ ಅಷ್ಟೇ. ಇತರ ದ್ರಾವಿಡ ಭಾಷೆಗಳು ತಮಿಳಿನಲ್ಲಿ ಇಲ್ಲದ ಮೂಲ ದ್ರಾವಿಡ ಭಾಷೆಯ ಕೆಲವು ಅಂಶಗಳನ್ನು ಉಳಿಸಿಕೊಂಡಿವೆ. ಆದ್ದರಿಂದ, ಇವುಗಳನ್ನು ಸಹೋದರ ಭಾಷೆಗಳು ಎಂದು ಕರೆಯುವುದು ಸರಿಯಾಗಿದೆ. ಇದಲ್ಲದೆ, ಇಂದಿನ ರಾಜಕೀಯ ವಾತಾವರಣದಲ್ಲಿ ಈ ‘ತಾಯಿ-ಮಗುವಿನ ಸಂಬಂಧ’ಕ್ಕೆ ಒತ್ತು ನೀಡುವುದು ಪ್ರಯೋಜನಕಾರಿ ಆಗುವುದಿಲ್ಲ. ನಿಮ್ಮ ಭಾಷೆ ನಮ್ಮ ಭಾಷೆಯಿಂದಲೇ ಹುಟ್ಟಿಕೊಂಡಿತು ಎಂದು ಇತರರನ್ನು ಉದ್ದೇಶಿಸಿ ಮಾತನಾಡುವುದು ಪ್ರಾಬಲ್ಯದ ಭಾವನೆಯನ್ನು ವ್ಯಕ್ತಪಡಿಸುತ್ತದೆ” ಎಂದು ಹೇಳಿದ್ದಾರೆ.

ತಮಿಳುನಾಡಿನ ಅನೇಕ ಭಾಷಾಶಾಸ್ತ್ರಜ್ಞರು ಈ ವಿವಾದದಿಂದ ದೂರವಿರಲೇ ಬಯಸುತ್ತಾರೆ. ನಿರೀಕ್ಷೆಯಂತೆ, ಕನ್ನಡ ಭಾಷಾಶಾಸ್ತ್ರಜ್ಞರು ಈ ವಿಚಾರವನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

ಕನ್ನಡ ತಮಿಳಿನಿಂದ ಹೊರಹೊಮ್ಮಿತು ಎಂಬುದು ಸಂಪೂರ್ಣ ತಪ್ಪು ಕಲ್ಪನೆಯಾಗಿದೆ. ತಮಿಳು ಮತ್ತು ಕನ್ನಡ ಸಹೋದರ ಭಾಷೆಗಳು. ಒಂದು ಪ್ರಾಚೀನ ಭಾಷೆಯಿಂದ ವಿಕಸನಗೊಂಡ ಭಾಷೆಗಳು. ಕನ್ನಡ ಭಾಷೆ ತಮಿಳಿನಿಂದಲ್ಲ, ಬದಲಾಗಿ ಪ್ರಾಚೀನ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಿದೆ ಎಂದು ಹೇಳುತ್ತಿದ್ದಾರೆ.

ಈ ಎರಡೂ ಭಾಷೆಗಳಲ್ಲಿ ಮೂಲ-ದ್ರಾವಿಡ ಭಾಷೆಯ ಪದಗಳು ಒಂದೇ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಕನ್ನಡದಲ್ಲಿ, ಕಿವಿಯನ್ನು ಉಲ್ಲೇಖಿಸಲು ನಾವು “ಕಿವಿ” ಎಂದು ಹೇಳುತ್ತೇವೆ. ತಮಿಳಿನಲ್ಲಿ “ಸೆವಿ” ಎಂದು ಹೇಳುತ್ತಾರೆ. ಈ ಎರಡು ಪದಗಳು ಒಂದೇ ಮೂಲ-ದ್ರಾವಿಡ ಭಾಷೆಯಿಂದ ಪಡೆದ ಎರಡು ವಿಭಿನ್ನ ಧ್ವನಿಮಾಗಳಾಗಿವೆ. ಆದ್ದರಿಂದ, ಕನ್ನಡ ತಮಿಳಿನಿಂದ ಹುಟ್ಟಿಕೊಂಡಿತು ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊಫೆಸರ್ ಎಸ್.ಜಿ.ಸಿದ್ದರಾಮಯ್ಯನವರು ಹೇಳಿದ್ದಾರೆ.

ದ್ರಾವಿಡ ಭಾಷೆಗಳನ್ನು ದಕ್ಷಿಣ ದ್ರಾವಿಡ ಭಾಷೆಗಳು, ದಕ್ಷಿಣ ಮಧ್ಯ ದ್ರಾವಿಡ ಭಾಷೆಗಳು, ಮಧ್ಯ ದ್ರಾವಿಡ ಭಾಷೆಗಳು ಮತ್ತು ಉತ್ತರ ದ್ರಾವಿಡ ಭಾಷೆಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ತಮಿಳು, ಕನ್ನಡ, ಮಲಯಾಳಂ, ಇರುಳ, ಕೊಡವ, ಟೋಡ, ಕೋಟಾ, ಪಟಕ, ಕೊರಗ ಮತ್ತು ತುಳು ಸೇರಿವೆ.

ದಕ್ಷಿಣ ಮಧ್ಯ ದ್ರಾವಿಡ ಭಾಷಾ ಗುಂಪಿನಲ್ಲಿ ತೆಲುಗು, ಗೊಂಡಿ, ಕುಯಿ ಮತ್ತು ಕೋಯಾ ಮುಂತಾದ ಭಾಷೆಗಳು ಸೇರಿವೆ. ಮಧ್ಯ ದ್ರಾವಿಡ ಭಾಷಾ ಗುಂಪಿನಲ್ಲಿ ಕೊಲಾಮಿ, ಧ್ರುರುವಾ, ಒಲ್ಲಾರಿ ಮತ್ತು ನಾಯ್ಕಿ ಮುಂತಾದ ಭಾಷೆಗಳು ಸೇರಿವೆ. ಮತ್ತು ಉತ್ತರ ದ್ರಾವಿಡ ಭಾಷಾ ಗುಂಪಿನಲ್ಲಿ ಕುರುಖ್, ಮಾಲ್ಟೊ ಮತ್ತು ಬ್ರಾಹುಯಿ ಮುಂತಾದ ಭಾಷೆಗಳು ಸೇರಿವೆ.

ಕೃಪೆ: ಬಿಬಿಸಿ

Tags: Robert Caldwellಕನ್ನಡಕಮಲಹಾಸನ್ಕರವೇತಮಿಳುಥಗ್ ಲೈಪ್ದ್ರಾವಿಡಬಿಬಿಸಿರಾಬರ್ಟ್ ಕಾಲ್ಡ್ ವೆಲ್
Previous Post

ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಸೈನಿಕರಿಗೆ ಗೌರವ ಸಲ್ಲಿಸಲು ಶಂಕರ್ ಮಹಾದೇವನ್ ಸಂಗೀತ ಪ್ರದರ್ಶನ!

Next Post

ಅಭಿಮಾನಿಗಳು ಆಟವನ್ನು ಆಟದಂತೆ ನೋಡಬೇಕು; ಹುಚ್ಚರಂತೆ ಕುಣಿದಾಡಿದರೆ ಇಂತಹ ಸಂಭವ ಖಚಿತ! – ಡಿ.ಸಿ.ಪ್ರಕಾಶ್

Next Post
ಐಪಿಎಲ್ 2025ರ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಇಂದು ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 33 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಭಿಮಾನಿಗಳು ಆಟವನ್ನು ಆಟದಂತೆ ನೋಡಬೇಕು; ಹುಚ್ಚರಂತೆ ಕುಣಿದಾಡಿದರೆ ಇಂತಹ ಸಂಭವ ಖಚಿತ! - ಡಿ.ಸಿ.ಪ್ರಕಾಶ್

Stay Connected test

  • 23.9k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

28/07/2025
ದೇಶದ ವಿವಿಧ ಭಾಗಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತ ತನಿಖೆಗೆ ಮುಂದಾಗಿದೆ.

Rabies Death: ನಾಯಿ ಕಡಿತದ ಪ್ರಮಾಣ ಹೆಚ್ಚಳ; ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

28/07/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

Recent News

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

28/07/2025
ದೇಶದ ವಿವಿಧ ಭಾಗಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತ ತನಿಖೆಗೆ ಮುಂದಾಗಿದೆ.

Rabies Death: ನಾಯಿ ಕಡಿತದ ಪ್ರಮಾಣ ಹೆಚ್ಚಳ; ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

28/07/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಳೆ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಪ್ರಮುಖ ಘಟನೆಯಾಗಿ ವಿರೋಧ ಪಕ್ಷಗಳಿಗೆ ಉತ್ತರಿಸಲಿದ್ದಾರೆ.

ಆಪರೇಷನ್ ಸಿಂಧೂರ ಮುಗಿದಿಲ್ಲ ಎಂದು ಹೇಳುವುದಾದರೇ ಅದು ಹೇಗೆ ಯಶಸ್ವಿಯಾಗುತ್ತದೆ: ವಿರೋಧ ಪಕ್ಷಗಳು

28/07/2025
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

28/07/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS