ಪ್ರಪಂಚದ ಅಂತ್ಯದ ನಿಮಿಷಗಳ ಮೊದಲು ತೆಗೆಯುವ ಕೊನೆಯ ಸೆಲ್ಫಿಗಳು ಹೇಗಿರುತ್ತವೆ!
ಪ್ರಪಂಚದ ಅಂತ್ಯದ ಮೊದಲು ಕೊನೆಯ ಸೆಲ್ಫಿಗಳು ಹೇಗಿರುತ್ತದೆ ಎಂದು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಭವಿಷ್ಯ ನುಡಿದಿರುವ ಭಯಾನಕ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ವಿಜ್ಞಾನದ ಬೆಳವಣಿಗೆಯಿಂದ ಇಲ್ಲಿಯವರೆಗೆ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಮುಖ ಪ್ರಶ್ನೆಗಳೆಂದರೆ, ಈ ಜಗತ್ತು ಕೊನೆಗೊಳ್ಳುತ್ತದೆಯೇ? ಜಗತ್ತು ಕೊನೆಗೊಳ್ಳುತ್ತಿದ್ದರೆ, ಅದು ಹೇಗೆ ಸಂಭವಿಸುತ್ತದೆ? ಆಗ ನಾವೆಲ್ಲರೂ ಏನಾಗುತ್ತೇವೆ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರ ಮನಸಲ್ಲೂ ಮೂಡುತ್ತವೆ.
ಇದಕ್ಕೆ ಪ್ರತಿಕ್ರಿಯೆಯಾಗಿ AI ಭವಿಷ್ಯ ನುಡಿದ ಕೆಲವು ಭಯಾನಕ ಫೋಟೋಗಳು ಅಂತರ್ಜಾಲದಲ್ಲಿ ಈಗ ವೈರಲ್ ಆಗುತ್ತಿವೆ.
AI (ಕೃತಕ ಬುದ್ಧಿವಂತಿಕೆ) ತಂತ್ರಜ್ಞಾನವು ಮಾನವನಿಗೆ ಸಮಾನವಾಗಿ ಯೋಚಿಸುವ ಹಂತಕ್ಕೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ AI ತಂತ್ರಜ್ಞಾನವು ಮನುಷ್ಯರನ್ನು ನಿಯಂತ್ರಿಸುವ ಸಾಧ್ಯತೆಯಿದೆ ಎಂಬ ವದಂತಿಗಳೂ ಇವೆ. ಅದಕ್ಕೆ ಉದಾರಣೆಯಾಗಿ ChatGPT ಎಂಬ AI ಪ್ರಸ್ತುತ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿದೆ.
ಇಂತಹ ಕೃತಕ ಬುದ್ಧಿವಂತಿಕೆ ತಂತ್ರಜ್ಞಾನವು ಜನರನ್ನು ಅಚ್ಚರಿ ಗೊಳಿಸುತ್ತಿರುವಾಗ, ಪ್ರಪಂಚದ ಅಂತ್ಯದ ಮೊದಲು ಕೊನೆಯ ಸೆಲ್ಫಿ ತೆಗೆದುಕೊಂಡರೆ ಹೇಗಿರುತ್ತದೆ ಎಂಬ ಫೋಟೋವನ್ನು AI ರಚಿಸಿದೆ. ಆ ಫೋಟೋ ಶೂಟ್‌ಗಳನ್ನು ಒಮ್ಮೆ ನೀವೇ ನೋಡಿ.
Yoo should by now have heard about the artistic AI. DALL•E someone asked it to create “the last selfie on earth” the result is accurate pic.twitter.com/zVnO5QdSIa
— Daniel Silva (@volterinator) July 29, 2022