ದಲಿತ ಸಮುದಾಯದ ಹಿರಿಯ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಈ ರಾಜ್ಯದಲ್ಲಿ ರಕ್ಷಣೆ ಇಲ್ಲವೇ? » Dynamic Leader
October 22, 2024
ರಾಜಕೀಯ

ದಲಿತ ಸಮುದಾಯದ ಹಿರಿಯ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಈ ರಾಜ್ಯದಲ್ಲಿ ರಕ್ಷಣೆ ಇಲ್ಲವೇ?

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ರವರು ಇಂದು ಸಂಜೆ ಸುಮಾರು 5 ಗಂಟೆಯ ಸಮಯಕ್ಕೆ ಕೊರಟಗೆರೆ ಭೈರೇನಹಳ್ಳಿಯ ಬಳಿ ಸಾವಿರಾರು ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ, ಅಪರಿಚಿತ ಕಿಡಿಗೇಡಿಗಳು ಅವರ ತಲೆಗೆ ಕಲ್ಲು ಹೊಡೆದು ಗಂಭೀರವಾದ ಗಾಯವನ್ನು ಏರ್ಪಡಿಸಿದ್ದಾರೆ. ಇದು ಅಪ್ಪಟ್ಟವಾದ ಕೊಲೆ ಪ್ರಯತ್ನವಾಗಿದೆ.

ಭೈರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆಯಲ್ಲಿ ಪರಮೇಶ್ವರ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿಯುತ್ತಿದ್ದಾಗ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.

ಅವರನ್ನು ನಿರ್ಧಿಷ್ಟವಾದ ಸ್ಥಳಕ್ಕೆ ಕರೆದುಕೊಂಡು ಬಂದು, ದುಷ್ಕರ್ಮಿಗಳು ಕಲ್ಲು ಹೊಡೆಯಲು ಅನುಕೂಲವಾಗುವಂತೆ ಹೂ ಎರಚುವ ನೆಪದಲ್ಲಿ ಅವರನ್ನು ಎತ್ತಿ ಹೆಗಲಮೇಲೆ ಕೂರಿಸಲಾಯಿತೆ? ಎಂಬ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪೊಲೀಸ್ ಇಲಾಖೆ ಆದೇಶಿಸಬೇಕು. ಪರಮೇಶ್ವರ್ ಮೇಲೆ ನಡೆದಿರುವ ಹಲ್ಲೆ ಇದು ಮೊದಲನೆಯದಲ್ಲ; ಎರಡನೆಯದು. ಇದು ಅಪ್ಪಟ್ಟವಾದ ಕೊಲೆ ಪ್ರಯತ್ನವಾಗಿದೆ. ವೈಯಕ್ತಿಕ ದ್ವೇಶದಿಂದ ಈ ದುಷ್ಕೃತ್ಯ ನಡೆದಿದೆಯೇ? ಅಥವಾ ಯಾರಾದರು ಸುಪಾರಿ ನಿಡಿದ್ದಾರೆಯೇ? ಎಂಬುದನ್ನು ಪತ್ತೆಮಾಡಬೇಕು; ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು.

ದಲಿತ ಸಮುದಾಯದ ಒಬ್ಬ ಹಿರಿಯ ಮುಖಂಡ; ಮಾಜಿ ಗೃಹ ಸಚಿವ ಹಾಗೂ ಮಾಜಿ ಉಪ ಮುಖ್ಯಮಂತ್ರಿಗೆ ಈ ಬಿಜೆಪಿ ಸರ್ಕಾರದಲ್ಲಿ ರಕ್ಷಣೆಯಿಲ್ಲ ಎನ್ನುವುದಾದರೆ, ಜನಸಾಮಾನ್ಯರ ಪಾಡೇನು? ಮುಖ್ಯಮಂತ್ರಿಗಳು ಈ ಕೂಡಲೇ ಉನ್ನತ ಮಟ್ಟದ ಪೊಲೀಸ್ ತನಿಖೆಗೆ ಆದೇಶ ನೀಡಿ, ಡಾ.ಜಿ.ಪರಮೇಶ್ವರ್ ಅವರಿಗೆ ಆದ ಅನ್ಯಾಯಕ್ಕೆ ನ್ಯಾಯವನ್ನು ಕಲ್ಪಿಕೊಡುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ.          

Related Posts