ಬಿಜೆಪಿಯವರ ಒಳ ಜಗಳ ಏನೇ ಇರಲಿ; ಮೊದಲು ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ! » Dynamic Leader
October 31, 2024
ರಾಜಕೀಯ

ಬಿಜೆಪಿಯವರ ಒಳ ಜಗಳ ಏನೇ ಇರಲಿ; ಮೊದಲು ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ!

ಸಂವಿಧಾನದಲ್ಲಿ ವಿಪಕ್ಷ ನಾಯಕನ ಹುದ್ದೆಗೆ ಮಹತ್ವದ ಸ್ಥಾನವಿದೆ. ಯಾವುದೇ ಸರ್ಕಾರದ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವುದು ವಿಪಕ್ಷ ನಾಯಕನ ಕೆಲಸ. ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಇಲ್ಲಿ.

“ನಮ್ಮ ಸರ್ಕಾರದ ಪ್ರಥಮ ಬಜೆಟ್ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ.‌ ಅಧಿವೇಶನ ಶುರುವಾಗುತ್ತಿದ್ದರೂ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ BJP ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಒಂದು ಸೋಲು ವಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು BJP ನಾಯಕರಿಗೆ ರೇಜಿಗೆ ಹುಟ್ಟಿಸಿದೆಯೇ? ವಿಪಕ್ಷ ನಾಯಕನಿಲ್ಲದೆ ಅಧಿವೇಶನ ‌ನಡೆಸಬೇಕೇ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಯಂತೆ ವಿಪಕ್ಷ ನಾಯಕನ ಹುದ್ದೆಯೂ ಸಾಂವಿಧಾನಿಕ ಹುದ್ದೆ. ನಮ್ಮ ಸರ್ಕಾರದ CM ಆಯ್ಕೆ ವಿಚಾರದಲ್ಲಿ BJPಯವರು, ಯಾರು‌ CM? ಯಾವಾಗ ಮುಖ್ಯಮಂತ್ರಿ ಆಯ್ಕೆ ಎಂದು ರಚ್ಚೆ ಹಿಡಿದಿದ್ದರು. ನಮ್ಮಲ್ಲಿ CM ಆಯ್ಕೆಯೂ ಆಯಿತು. DCM ಆಯ್ಕೆಯೂ ಆಯಿತು. ಪೂರ್ಣಪ್ರಮಾಣದ ಸಂಪುಟವೂ ಆಯಿತು. ಈಗ ನಾವು ಕೇಳುತ್ತಿದ್ದೇವೆ ವಿಪಕ್ಷ ನಾಯಕ ಯಾರು?

ವಿಪಕ್ಷ ನಾಯಕ ಯಾರಾಗಬೇಕೆಂಬುದು BJPಯ ಆಂತರಿಕ ವಿಚಾರ ಇರಬಹುದು. ಸಂವಿಧಾನದಲ್ಲಿ ವಿಪಕ್ಷ ನಾಯಕನ ಹುದ್ದೆಗೆ ಮಹತ್ವದ ಸ್ಥಾನವಿದೆ. ಯಾವುದೇ ಸರ್ಕಾರದ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವುದು ವಿಪಕ್ಷ ನಾಯಕನ ಕೆಲಸ. ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಇಲ್ಲಿ. BJPಯವರ ಒಳ ಜಗಳ ಏನೇ ಇರಲಿ. ಮೊದಲು ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ” ಎಂದು ಹೇಳಿದ್ದಾರೆ.

Related Posts