ಗುಜರಾತ್‌ನ ಸೂರತ್ ನಗರದಲ್ಲಿ ವಿಶ್ವದ ಅತಿ ದೊಡ್ಡ ವ್ಯಾಣಿಜ್ಯ ಕೇಂದ್ರವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ! » Dynamic Leader
November 21, 2024
ದೇಶ

ಗುಜರಾತ್‌ನ ಸೂರತ್ ನಗರದಲ್ಲಿ ವಿಶ್ವದ ಅತಿ ದೊಡ್ಡ ವ್ಯಾಣಿಜ್ಯ ಕೇಂದ್ರವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ!

ಸೂರತ್: ಗುಜರಾತ್‌ನ ಸೂರತ್‌ ನಗರದಲ್ಲಿ ವಿಶ್ವದ ಅತಿ ದೊಡ್ಡ ವ್ಯಾಣಿಜ್ಯ ಕೇಂದ್ರ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 17 ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ 35.54 ಎಕರೆ ಪ್ರದೇಶದಲ್ಲಿ 9 ಆಯತಾಕಾರದ ರಚನೆಗಳಲ್ಲಿ (Rectangular Structures) 15 ಮಹಡಿಗಳ ಡೈಮಂಡ್ ಟ್ರೇಡ್ ಸೆಂಟರ್ ನಿರ್ಮಾಣ ಪೂರ್ಣಗೊಂಡಿದೆ. 2015ರಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಯಿತು ಎನ್ನಲಾಗಿದೆ.

ಅಮೆರಿಕ ದೇಶದ ಸೇನಾ ಪ್ರಧಾನ ಕಛೇರಿಯಾದ ‘ಪೆಂಟಗನ್’ ಕಟ್ಟಡವೇ ವಿಶ್ವದ ಅತಿ ದೊಡ್ಡ ಕಟ್ಟಡವಾಗಿದೆ. ಈ ಹಿನ್ನಲೆಯಲ್ಲಿ ಗುಜರಾತ್‌ನ ಸೂರತ್ ನಗರದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಕೇಂದ್ರದ ಕಟ್ಟಡವೇ ವಿಶ್ವದ ಅತಿ ದೊಡ್ಡ ಕಟ್ಟಡ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಕಟ್ಟಡವನ್ನುಇದೇ 17 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

Related Posts