ಅಸ್ಸಾಂನಲ್ಲಿ ಭ್ರಷ್ಟ ಆಡಳಿತ ನಡೆಯುತ್ತಿದೆ: ರಾಹುಲ್ ಗಾಂಧಿ ಆರೋಪ!
ಕೊಹಿಮಾ: ‘ಅಸ್ಸಾಂನಲ್ಲಿ ಭ್ರಷ್ಟ ಸರ್ಕಾರ ನಡೆಯುತ್ತಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನವರಿ 14 ರಂದು ಮಣಿಪುರದಿಂದ ಮುಂಬೈಗೆ “ಭಾರತ ಜೋಡೋ ನ್ಯಾಯ ಯಾತ್ರೆ”ಯ ಎರಡನೇ ಹಂತವನ್ನು ಮಣಿಪುರದಲ್ಲಿ ಪ್ರಾರಂಭಿಸಿದರು. 5ನೇ ದಿನವಾದ ಇಂದು (ಜ.18) ಅಸ್ಸಾಂ ರಾಜ್ಯದ ಶಿವಸಾಗರ ಜಿಲ್ಲೆಯಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.
ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನಾವು ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದಿಂದ ಪ್ರಾರಂಭಿಸಿದ್ದೇವೆ. ಈ ಯಾತ್ರೆಯು ಭಾರತದ ಎಲ್ಲಾ ಧರ್ಮಗಳು ಮತ್ತು ಜಾತಿಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಬಿಜೆಪಿ ದೇಶದ ಜನತೆಗೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಅನ್ಯಾಯ ಮಾಡಿದೆ.
ನಾಟಕಕಾರ ಮತ್ತು ಸುಧಾರಕ ಶಂಕರದೇವ್ ಅವರು ಎಲ್ಲರನ್ನೂ ಒಟ್ಟಿಗೆ ಸೇರಿಸಲು ಪ್ರಯತ್ನಿಸಿದರು. ಭಾರತ ಜೋಡೋ ನ್ಯಾಯ ಯಾತ್ರೆಯ ಗುರಿಯೂ ಇದೇ ಆಗಿದೆ.
ಮಣಿಪುರವು ಅಂತರ್ಯುದ್ಧದ ಸ್ಥಿತಿಯಲ್ಲಿದೆ. ಆದರೆ ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಲಿಲ್ಲ. ನಾಗಾಲ್ಯಾಂಡ್‌ನಲ್ಲಿ ಪ್ರಧಾನಿ ಭರವಸೆ ಏನಾಯಿತು ಎಂದು ಜನರು ಕೇಳುತ್ತಿದ್ದಾರೆ. ಅಸ್ಸಾಂನಲ್ಲಿ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ” ಎಂದು ರಾಹುಲ್ ಗಾಂಧಿ ಮಾತನಾಡಿದ್ದಾರೆ.