ರಾಜ್ಯಪಾಲರು ತಿರುವಳ್ಳುವರ್‌ನಿಂದ ಆರಂಭಗೊಂಡು ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾವಿ ಬಣ್ಣ ಬಳಿಯುತ್ತಿದ್ದಾರೆ: ಸ್ಟಾಲಿನ್ ಆರೋಪ » Dynamic Leader
October 31, 2024
ದೇಶ

ರಾಜ್ಯಪಾಲರು ತಿರುವಳ್ಳುವರ್‌ನಿಂದ ಆರಂಭಗೊಂಡು ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾವಿ ಬಣ್ಣ ಬಳಿಯುತ್ತಿದ್ದಾರೆ: ಸ್ಟಾಲಿನ್ ಆರೋಪ

ಚೆನ್ನೈ: ರಾಜ್ಯಪಾಲರು ಅಗ್ಗದ ಮತ್ತು ಕೀಳು ಗುಣಮಟ್ಟದ ರಾಜಕಾರಣ ಮಾಡುತ್ತಿರುವ ದುಃಸ್ಥಿತಿಗೆ ಭಾರತ ಸಾಕ್ಷಿಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅವರು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ, “ರಾಜ್ಯಪಾಲರು ಅಗ್ಗದ ಮತ್ತು ಕೀಳು ಗುಣಮಟ್ಟದ ರಾಜಕಾರಣ ಮಾಡುತ್ತಿರುವ ದುಃಸ್ಥಿತಿಯನ್ನು ಭಾರತವು ಈಗ ತಾನೆ ನೋಡುತ್ತಿದೆ. ಅವರಿಗೆ ನೀಡಿದ ಉನ್ನತ ಜವಾಬ್ದಾರಿಗೆ ಅವರು ಅನರ್ಹರಾಗಿರುತ್ತಾರೆ. ತಿರುವಳ್ಳುವರ್‌ನಿಂದ ಆರಂಭಗೊಂಡು ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾವಿ ಬಣ್ಣ ಬಳಿಯುತ್ತಿದ್ದಾರೆ.

ಕೇಂದ್ರ ಸರ್ಕಾರದ ಕ್ರೂರ ರಾಜಕಾರಣವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೋಲಿಸುವ ಶಕ್ತಿ ಡಿಎಂಕೆಗೆ ಇದೆ. ರಾಜ್ಯಪಾಲರ ಮೂಲಕ ಸ್ಪರ್ಧಾತ್ಮಕ ಸರ್ಕಾರ ನಡೆಸಲು ಯೋಚಿಸುವುದು ಸಂವಿಧಾನ ಬಾಹಿರ. ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ರಾಜ್ಯಗಳು ಹಕ್ಕುಗಳನ್ನು ಕಳೆದುಕೊಂಡಿದೆ” ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

Related Posts