ಮೂವತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ತಾಯಿಗೆ ನ್ಯಾಯ ದೊರಕಿಸಿಕೊಟ್ಟ ಮಗ!
ಬರೈಲಿ: ಮೂವತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಆಕೆಯ ತಾಯಿಗೆ ನ್ಯಾಯ ದೊರಕಿಸಿಕೊಟ್ಟ ಮಗ. 1994ರಲ್ಲಿ, ತನ್ನೆ 12ನೇ ವಯಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ತನ್ನ ಮಗನ ಸಹಾಯದಿಂದ ಪ್ರಕರಣ ದಾಖಲಿಸಿ 30 ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಾಚಾರಕ್ಕೊಳಗಾದ ನಂತರ ಜನಿಸಿದ ಗಂಡು ಮಗುವನ್ನು ಸಂಬಂಧಿಕರ ಬಳಿ ನೀಡಿದ ಮಹಿಳೆಗೆ, ಬೇರೆಯವರೊಂದಿಗೆ ವಿವಾಹ ಮಾಡಿಸಿದ್ದಾರೆ. 2022ರಲ್ಲಿ ಸತ್ಯವನ್ನು ತಿಳಿದುಕೊಂಡ ಮಗ, ತನ್ನ ತಾಯಿಗೆ ನ್ಯಾಯ ದೊರಕಿಸಲು ಸಹಾಯ ಮಾಡಿದ್ದಾರೆ.
ಶಹಜಹಾನ್‌ಪುರದಲ್ಲಿ ನಡೆದ ಈ ಪ್ರಕರಣವು ಕಳೆದ ಬುಧವಾರ ಅಂತ್ಯಗೊಂಡಿದೆ. ಎರಡೂ ಲೈಂಗಿಕ ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ, ರೂ.30,000 ದಂಡವನ್ನುವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸಂತ್ರಸ್ತ ಮಹಿಳೆ, “ನಾನು ಬಹಳ ದಿನಗಳಿಂದ ಭಯದಿಂದ ಬದುಕಿದ್ದೇನೆ. ಪ್ರಸ್ತುತ “ನನ್ನ ಮಗ ನನಗೆ ಮಾನಸಿಕ ಶಕ್ತಿಯನ್ನು ತುಂಬಿದ್ದಾನೆ ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾನೆ” ಎಂದು ಮಹಿಳೆ ಹೇಳಿದ್ದಾರೆ.