• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ಬೆಂಗಳೂರು

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯನ್ನು ಖಂಡಿಸಿ ಮಹಿಳಾ ಆಟೋ ಚಾಲಕರು ನಡೆಸಿದ ಪ್ರತಿಭಟನೆ!

by Dynamic Leader
05/11/2024
in ಬೆಂಗಳೂರು
0
0
SHARES
2
VIEWS
Share on FacebookShare on Twitter

ಬೆಂಗಳೂರು: ಆಶ್ರಯ ಸಮಿತಿ ಹೆಸರಲ್ಲಿ ಕೊಳಗೇರಿ ಜನರ ಮನೆಗಳನ್ನು ಬಲಾಢ್ಯರಿಗೆ ಹಂಚಿಕೆ ಮಾಡಲು ಮುಂದಾಗುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಮಾಜಿ ಸಚಿವರು ಹಾಗೂ ಶಾಸಕ ಬೈರತಿ ಬಸವರಾಜು ಅವರನ್ನು ಖಂಡಿಸಿ ನೆನ್ನೆ (05.11.2024) ಫ್ರೀಡಂ ಪಾರ್ಕಿನಲ್ಲಿ ಜನಶಕ್ತಿ ವೇದಿಕೆ ಮತ್ತು ಜನಶಕ್ತಿ ಮಹಿಳಾ ವೇದಿಕೆಯ ಕಾರ್ಯಕರ್ತರು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದ್ದರು.

ಪ್ರತಿಭಟನಾ ಧರಣಿಯಲ್ಲಿ ದಲಿತ ವಿಮೋಚನಾ ಸೇನೆ (ರಿ), ಕರ್ನಾಟಕ ಮಹಿಳಾ ಆಟೋ ಚಾಲಕರ ಸಂಘ, ಅಖಿಲ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಬೆಂಗಳೂರು ಗುಡಿಸಲು ನಿವಾಸಿಗಳ ಸಂಘದ ನಾಯಕರು ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಕೋರಿಕೆಗಳನ್ನು ಪರಿಶೀಲಿಸಿ ಕ್ರಮವಹಿಸುವ ಭರವಸೆ ನೀಡಿದರು. ಸದರಿ ಪ್ರತಿಭಟನಾ ಧರಣಿಗೆ ಮಹಿಳಾ ಆಟೋ ಚಾಲಕರು ಮುಂದಾಳತ್ವ ವಹಿಸಿದ್ದರು. ಜನಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಿ.ಸಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

ಬೇಡಿಕೆಗಳು:
1) ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, NURM-BSUP ಯೋಜನೆಯಡಿ 208 ಮನೆಗಳನ್ನು ನಿರ್ಮಿಸಿದ್ದು, ಅದರಲ್ಲಿ 166 ಮನೆಗಳನ್ನು ಮಾತ್ರ 2041ರಲ್ಲಿ ಲಾಟರಿ ಮುಖಾಂತರ ಹಂಚಿಕೆ ಮಾಡಿದೆ. ಹಂಚಿಕೆಯಾಗದೆ ಖಾಲಿಯಿದ್ದ 42 ಮನೆಗಳಲ್ಲಿ, ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸವಾಗಿದ್ದ ಕೆಲವು ಬಡಕೂಲಿ ಕಾರ್ಮಿಕರು ಅನಧೀಕೃತವಾಗಿ ಬಂದು ಸೇರಿಕೊಂಡು, ನಮ್ಮನ್ನೂ ಸಕ್ರಮಗೊಳಿಸಿ ಹಂಚಿಕೆ ಪತ್ರ ನೀಡಿ ಎಂದು ಸುಮಾರು 9 ವರ್ಷಗಳಿಂದ ಮಂಡಳಿಯೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. 42 ಅನಧೀಕೃತದಾರರನ್ನು ಸಕ್ರಮ ಗೊಳಿಸುವ ಸಲುವಾಗಿ, ಮಂಡಳಿ ಈಗಾಗಲೇ ಅನಧೀಕೃತದಾರರ ಪಟ್ಟಿಯನ್ನೂ ಸಿದ್ದಪಡಿಸಿದೆ.

ಈ ಹಿನ್ನೆಲೆಯಲ್ಲಿ, ಸದರಿ ಮನೆಗಳನ್ನು ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಿರುವುದರ ವಿರುದ್ಧ ಜನಶಕ್ತಿ ವೇದಿಕೆ 2015ರಲ್ಲಿ ಮಾನ್ಯ ಲೋಕಾಯುಕ್ತರಲ್ಲಿ ದೂರು ದಾಖಲಿಸಿದೆ. ಪ್ರಕರಣ ಸಂಖ್ಯೆ: ಕಂಪ್ಲೆಂಟ್/ಲೋಕ್/ಬಿಸಿಡಿ/844/2015. ಸದರಿ ಪ್ರಕರಣಲ್ಲಿ ಮಾನ್ಯ ಲೋಕಾಯುಕ್ತರು, ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿದ 9 ಜನರನ್ನು ಅಪರಾಧಿಗಳೆಂದು ತೀರ್ಮಾನಿಸಿ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದ್ದಾರೆ; ಪ್ರಕರಣ ಬಾಕಿಯಿದೆ.

ಮೇಲಿನ 208 ಮನೆಗಳ ಪೈಕಿ, ಹಂಚಿಕೆ ಪಡೆದ 166 ಫಲಾನುಭವಿಗಳಲ್ಲಿ ಬಹುಪಾಲರು ಅನುಕೂಲಸ್ಥ ವರ್ಗದವರಾಗಿರುವುದರಿಂದ ಸದರಿ ಮನೆಗಳಿಗೆ ಯಾರೂ ವಾಸಕ್ಕೆ ಬರುತ್ತಿಲ್ಲ. ರಸ್ತೆ ಅಗಲೀಕರಣದಿಂದ ಮನೆಗಳನ್ನು ಕಳೆದುಕೊಂಡವರೊಂದಿಗೆ ಸೇರಿ ಸುಮಾರು 50 ಕುಟುಂಬಗಳು ಮಾತ್ರ ಇಲ್ಲಿ ವಾಸ ಮಾಡುತ್ತಿವೆ. ಅದರಲ್ಲೂ ಕೆಲವರು ಮನೆಗಳನ್ನು ಬಾಡಿಗೆಗೆ ಬಿಟ್ಟು ಹೊರಗಿನಿಂದ ಹಣ ಪಡೆಯುತ್ತಿದ್ದಾರೆ.

ಹಾಗಾಗಿ, NURM-BSUP ಯೋಜನೆಯಡಿ ನಿರ್ಮಿಸಿ ಹಂಚಿಕೆ ಮಾಡಿರುವ 208 ಮನೆಗಳ ವಿಚಾರದಲ್ಲಿ ಲೋಕಾಯುಕ್ತರ ಅಂತಿಮ ಆದೇಶ ಬರುವವರೆಗೂ 166 ಫಲಾನುಭವಿಗಳಿಗೆ ಹಂಚಿಕೆ ಪತ್ರ ನೀಡುವುದನ್ನು ಮತ್ತು ನೋಂದಣಿ ಮಾಡಿಸಿಕೊಡುವುದನ್ನು ತಡೆಯಿಡಿಯಬೇಕು.

2) ಮೇಲಿನಂತೆಯೇ ಸದರಿ ಪ್ರದೇಶದಲ್ಲಿ ಮತ್ತೆ PMAY-HFA ಯೋಜನೆಯಡಿ ಕೊಳಗೇರಿ ಮಂಡಳಿ ಒಟ್ಟು 768 ಮನೆಗಳನ್ನು ನಿರ್ಮಿಸಿದ್ದು, ಅದನ್ನು ಕೂಡ ಕ್ರಮವಾಗಿ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡದೆ, ಮಂಡಳಿಯ ಕಾಯ್ದೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿ, ಆಶ್ರಯ ಸಮಿತಿಯ ಹೆಸರಿನಲ್ಲಿ ಬಲಾಢ್ಯರಿಗೆ ಹಂಚಿಕೆ ಮಾಡಲು ಮಂಡಳಿ ಮುಂದಾಗಿದೆ. ಈ ಸಂಬಂಧ ಶಾಸಕರಾದ ಬೈರತಿ ಬಸವರಾಜು, ಮಂಡಳಿಯ ಆಯುಕ್ತರಾಗಿದ್ದು ಪ್ರಸ್ತುತ ನಿವೃತ್ತಿ ಹೊಂದಿರುವ ಬಿ.ವೆಂಕಟೇಶ್ ಹಾಗೂ ಬೇರೆಡೆಗೆ ಸ್ಥಳಾಂತರಗೊಂಡಿರುವ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್‌ರಾಜ್ ವಿರುದ್ಧವೂ ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಖ್ಯೆ: ಕಂಪ್ಲೆಂಟ್/ಲೋಕ್/ಬಿಸಿಡಿ/1267/2024. ಆದರೂ ಸದರಿ ಮನೆಗಳನ್ನು ಹಂಚಿಕೆ ಮಾಡಲು ಮಂಡಳಿ ಆತುರ ತೋರಿಸುತ್ತಿದೆ.

ಮನೆಗಳನ್ನು ನಿರ್ಮಿಸಿ ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು ಮಂಡಳಿಯ ಕಾಯ್ದೆ-ಮಾರ್ಗಸೂಚಿಗಳಲ್ಲಿ ಅವಕಾಶವಿಲ್ಲ. ಕೊಳಗೇರಿ ಅಭಿವೃದ್ಧಿ ಮಂಡಳಿ ಬಿಲ್ಡರ್ಸ್ ಸಂಸ್ಥೆಯೂ ಅಲ್ಲ. ಕೊಳಗೇರಿ ಜನರ ಏಳಿಗೆಗಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರಿಂದ ಜನ್ಮತಾಳಿದ ಸಂಸ್ಥೆಯಿದು. ಯೋಜನೆ ಯಾವುದೇ ಇದ್ದರೂ ಅದರ ಫಲಾನುಭವಿ ಕೊಳಗೇರಿ ಜನರೇ ಆಗಿರಬೇಕು; ಇದು ನಿಯಮ. ಅದು ಮಾತ್ರವಲ್ಲ, ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಸಮಿತಿಯೇ ರಚನೆಯಾಗಿಲ್ಲ. ಆದರೆ, ಆಶ್ರಯ ಸಮಿತಿ ಹೆಸರಲ್ಲಿ ಸದರಿ ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗುತ್ತಿದೆ.

ಹಾಗಾಗಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಶಾಸಕ ಬೈರತಿ ಬಸವರಾಜು ಅವರು ಜಂಟಿಯಾಗಿ ಆಶ್ರಯ ಸಮಿತಿ ಹೆಸರಲ್ಲಿ ಅಕ್ರಮವಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಕೈಬಿಟ್ಟು, ಸದರಿ ಮನೆಗಳನ್ನು ನಿಜವಾದ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು.

3) ಮೇಲಿನ ಎಲ್ಲಾ ಅಂಶಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಂಡವಾಳ ಮಾಡಿಕೊಂಡಿರುವ ಸದರಿ ಪ್ರದೇಶದ ನಿವಾಸಿಯಾದ ಕೆ.ಸಿ.ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಎಂಬುವರು ಶಾಸಕರಾದ ಬೈರತಿ ಬಸವರಾಜು ಅವರ ಹೆಸರನ್ನು ಹೇಳಿಕೊಂಡು, ಪ್ರಭಾವ ಬಳಸಿ,  2014ರಲ್ಲಿ ಹಂಚಿಕೆಯಾದ 208 ಮನೆಗಳಲ್ಲಿ ಖಾಲಿಯಿರುವ ಮನೆಗಳನೆಲ್ಲ ನಕಲಿ ಗುರುತಿನ ಚೀಟಿ ಬಳಸಿ ಮಾರಾಟ ಮಾಡುತ್ತಿದ್ದಾರೆ. ಮತ್ತು ಬಾಡಿಗೆಗೆ ಕೊಡುತ್ತಿದ್ದಾರೆ. ಇದರ ಬಗ್ಗೆ ಮಂಡಳಿಯಲ್ಲಿ ದೂರು ನೀಡಿದರೂ ಸಂಬಂಧಪಟ್ಟ ಉಪ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ, ಇವರೊಂದಿಗೆ ಸೇರಿಕೊಂಡು ಇವರು ಮಾಡುತ್ತಿರುವ ಅಕ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ, ಇವರು ಅಕ್ರಮವಾಗಿ ಮಾರಾಟ ಮಾಡಿರುವ ಮತ್ತು ಬಾಡಿಗೆಗೆ ಬಿಟ್ಟಿರುವ ಮನೆಗಳನೆಲ್ಲ ತೆರವುಗೊಳಿಸಿ ಸಂಬಂಧಪಟ್ಟವರಿಗೆ ಮರಳಿ ನೀಡಲು ಕ್ರಮ ಕೈಗೊಳ್ಳಬೇಕು.

4) 2014ರಲ್ಲಿ ಹಂಚಿಕೆಯಾದ 208 ಮನೆಗಳಲ್ಲಿ ಅನಧೀಕೃತವಾಗಿ ಬಂದು ಸೇರಿಕೊಂಡಿರುವ 42 ಕುಟುಂಬಗಳ ಮೇಲೆ ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಮುಂತಾದವರು ದಿನನಿತ್ಯವೂ ಯಾವುದಾದರೂ ಒಂದು ಕಾರಣ ಹೇಳಿ ದಬ್ಬಾಳಿಕೆ ಮಾಡುತ್ತಾ ಅವರಲ್ಲಿನ ಕೆಲವರ ಮನೆಗಳನ್ನು ಬಲವಂತವಾಗಿ ಖಾಲಿ ಮಾಡಿಸಿ ಆ ಮನೆಗಳನ್ನೂ ಮಾರಾಟ ಮಾಡಿದ್ದಾರೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕೆ.ಸಿ.ಪವಿತ್ರ ಆತನ ಗಂಡ ಗಿರೀಶ್ ವಿರುದ್ಧ ಡಿ.ರಾಣಿ ರೀಟಾ (ಅಪರಾಧ ಸಂಖ್ಯೆ: ೦೦42/2021), ಜೇಸುದಾಸ್ (ಅಪರಾಧ ಸಂಖ್ಯೆ: ೦೦33/2021), ಹಾಗೂ ಸುನಿತಾ (ಅಪರಾಧ ಸಂಖ್ಯೆ: ೦೦37/2021) ನ್ಯಾಯಾಲಯಕ್ಕೆ ತೆರಳಿ PCR ಹೂಡಿ, FIR ದಾಖಲಿಸಿದರೂ ಶಾಸಕರಾದ ಬೈರತಿ ಬಸವರಾಜು ಅವರ ಪ್ರಭಾವ ಬಳಸಿ, ಬಿ ರಿಪೋರ್ಟ್ ಹಾಕಿ ಪ್ರಕರಣವನ್ನು ಹಿಂದೆಕ್ಕೆ ಪಡೆಯುತ್ತಾರೆ. ಸರವಣನ್ ಎಂಬುವವರ ಮನೆಯನ್ನು ಇದೇ ಪವಿತ್ರ ಆತನ ಗಂಡ ಗಿರೀಶ್ ಮತ್ತು ಇತರರು ಸೇರಿಕೊಂಡು ಬಲವಂತವಾಗಿ ಖಾಲಿ ಮಾಡಿರುವ ವಿಚಾರದಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (NCR ನಂ.354/2021). ಆದರೆ ಏನೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇವರು ಬಲವಂತದಿಂದ ಖಾಲಿ ಮಾಡಿಸಿ, ಅಕ್ರಮವಾಗಿ ಮಾರಾಟ ಮತ್ತು ಬಾಡಿಗೆಗೆ ಬಿಟ್ಟಿರುವ ಮನೆಗಳನ್ನು ತೆರವುಗೊಳಿಸಿ ನೊಂದವರಿಗೆ ವಾಪಸ್ಸು ನೀಡಲು ಕ್ರಮ ಕೈಗೊಳ್ಳಬೇಕು.

5) ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಸಮುದಾಯ ಭವನವನ್ನು ಸಂಘದ ಹೆಸರಿನಲ್ಲಿ ಪಡೆದು, ಅದನ್ನು ಉತ್ತಮವಾಗಿ ನಿರ್ವಹಿಸದೆ, ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್ ಅವರು ತಮ್ಮ ಸ್ವಂತಕ್ಕೆ-ಸ್ವಾರ್ಥಕ್ಕೆ ಬಳಸಿಕೊಂಡು, ಮಾಡಬಾರದ ಅಕ್ರಮಗಳನ್ನು ಮಾಡುತ್ತಿದ್ದಾರೆ. ಸಮುದಾಯ ಭವನದ  ಕೊಠಡಿಗಳನೆಲ್ಲ ಬಾಡಿಗೆಗೆ ನೀಡಿದ್ದಾರೆ. ಒಂದು ಕೊಠಡಿಯ ಕಿಟಕಿಯನ್ನು ಹೊಡೆದು, ಅದಕ್ಕೆ ದೊಡ್ಡ ಬಾಗಿಲನ್ನು ಅಳವಡಿಸಿ, ಚಿಕನ್ ಅಂಗಡಿಗೆ ಬಾಡಿಗೆ ಬಿಟ್ಟಿದ್ದಾರೆ. ಬಲವಂತವಾಗಿ ಖಾಲಿ ಮಾಡಿಸುವ ಮನೆಗಳ ಸಾಮಾನುಗಳನ್ನು ತುಂಬಿಡಲು ಸಭಾಂಗಣವನ್ನು ಗೋಡನ್ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಭಾವಚಿತ್ರವಿರುವ ಜನಶಕ್ತಿ ವೇದಿಕೆಯ ನಾಮಫಲಕವನ್ನು ಬಲವಂತದಿಂದ ಕಿತ್ತು, ಒಂದು ಕೋಣೆಯಲ್ಲಿ ಕಸದ ರಾಶಿಯಂತೆ ಎಸೆದು, ಅಂಬೇಡ್ಕರ್ ಮತ್ತು ದಲಿತರಿಗೆ ಅಪಮಾನ ಮಾಡಿದ್ದಾರೆ. ಒಂದು ಮಳಿಗೆಯಲ್ಲಿ ಪವಿತ್ರ ಮತ್ತು ಆತನ ಗಂಡ ಗಿರೀಶ್ ಚಿಲ್ಲರೆ ಅಂಗಡಿ ತೆರೆದಿದ್ದಾರೆ. ಪಕ್ಕದ ಒಂದು ಮಳಿಗೆಯನ್ನು ಲೋಕೇಶ್ ಕಛೇರಿಯನ್ನಾಗಿ ಮಾಡಿಕೊಂಡು ಇಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದಾರೆ.

ಹಾಗಾಗಿ, ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್ ಅವರ ಸಂಘಕ್ಕೆ ನೀಡಿರುವ ಸಮುದಾಯ ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಹಿಂಪಡೆದು, ಸಮುದಾಯ ಭವನದ ನಿರ್ವಹಣೆಯನ್ನು ಅಲ್ಲಿನ ಅರ್ಹ ಸಂಘ ಅಥವಾ ವ್ಯಕ್ತಿಗಳಿಗೆ ಈ ಕೂಡಲೇ ನೀಡಬೇಕು.

6) ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್, ಮನೆಗಳಿಗೆ ಹಕ್ಕು ಪತ್ರ ಕೊಡಿಸುವುದಾಗಿ ಹೇಳಿ, ಪ್ರತಿ ಮನೆಗೆ 51೦೦.೦೦ ರೂ.ಗಳನ್ನು ವಸೂಲಿ ಮಾಡಿದ್ದಾರೆ. ಆದರೆ, ಯಾರಿಗೂ ಇದುವರೆಗೆ ಹಂಚಿಕೆ ಪತ್ರ ಕೊಡಿಸಲಿಲ್ಲ. ಇವರು ಸಕಾಲದಲ್ಲಿ ಸಲ್ಲಿಸಿದ್ದ ನೂರಾರು ಅರ್ಜಿಗಳನ್ನು ಮಂಡಳಿ ಈಗಾಗಲೇ ತಿರಸ್ಕರಿಸಿದೆ. ಅದೇ ರೀತಿ ನಗರೇಶ್ವರ ನಾಗೇನಹಳ್ಳಿ ಪ್ರದೇಶದಲ್ಲಿ PMAY-HFA ಯೋಜನೆಯಡಿ ಕೊಳಗೇರಿ ಮಂಡಳಿ ನಿರ್ಮಿಸಿರುವ 768 ಮನೆಗಳಲ್ಲಿ ಮನೆ ಕೊಡಿಸುವುದಾಗಿ ನಂಬಿಸಿ, ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್ ಮುಂತಾದವರು ನೂರಾರು ಜನರಿಂದ ದೊಡ್ಡ ಮಟ್ಟದಲ್ಲಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಬೇಕು.

7) ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಮುಂತಾದವರನ್ನು ಸಂಘಟಿತ ಅಪರಾಧ, ಬೆದರಿಕೆ, ವಂಚನೆ, ಅತಿಕ್ರಮ ಪ್ರವೇಶ, ಸರ್ಕಾರಿ ಆಸ್ತಿಗಳಿಗೆ ಹಾನಿ ಹಾಗೂ ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಬೇಕು.

8) ಕರ್ನಾಟಕ ಮಹಿಳಾ ಆಟೋ ಚಾಲಕರ ಸಂಘ ರಚಿಸಿಕೊಂಡು ಆಟೋ ಚಾಲಕರಾಗಿರುವ ಕೊಳಗೇರಿ ಮಹಿಳೆಯರಿಗೆ ಮಂಡಳಿ ಮನೆಗಳನ್ನು ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

Tags: AshrayaIllegal allocationJanashakthi VedhikeSlum BoardSlum DwellersSlum Housesಅಕ್ರಮ ಹಂಚಿಕೆಆಶ್ರಯ ಮನೆಗಳುಆಶ್ರಯ ಸಮಿತಿಕೆ.ಆರ್.ಪುರಂಕೊಳಗೇರಿ ಮಂಡಳಿಕೊಳಗೇರಿ ಮನೆಗಳುಜನಶಕ್ತಿ ವೇದಿಕೆಬೈರತಿ ಬಸವರಾಜುಸ್ಲಂ
Previous Post

ಕರ್ನಾಟಕ ರಾಜ್ಯೋತ್ಸವ: ಅಭಿನಂದಿಸಿದ ಪ್ರಧಾನಿ ಮೋದಿ; ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ!

Next Post

ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್!

Next Post

ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್!

Stay Connected test

  • 23.9k Followers
  • 99 Subscribers
  • Trending
  • Comments
  • Latest
edit post

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
edit post
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025
edit post

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
edit post

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
edit post

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
edit post

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
edit post

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
edit post

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
edit post
ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ನೀಡುವ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ತರಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಭರವಸೆ ಈಡೇರಿಸಬೇಕು: ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೋರಿ ಪ್ರಧಾನಿಗೆ ರಾಹುಲ್ ಪತ್ರ

16/07/2025
edit post
ಟಿಬೆಟ್ ನ ಮಕ್ಕಳು ಮತ್ತು ಹುಡುಗರನ್ನು ಚೀನಾ ಆಕ್ರಮಿತ ಪ್ರದೇಶದಲ್ಲಿ ಚೀನಿಯರು ನಡೆಸುವ ಬೋರ್ಡಿಂಗ್ ಶಾಲೆಗೆ ಬಲವಂತವಾಗಿ ಸೇರಿಸಲಾಗುತ್ತಿದೆ.

ಸಂಸ್ಕೃತಿಯನ್ನು ನಾಶಮಾಡಲು ಟಿಬೆಟಿಯನ್ ಮಕ್ಕಳನ್ನು ಚೀನಾದ ಶಾಲೆಗಳಿಗೆ ಬಲವಂತವಾಗಿ ಸೇರಿಸಲಾಗುತ್ತಿದೆ!

12/07/2025
edit post
ಗುಜರಾತ್ನ ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹಿಸಾಗರ್ ನದಿಗೆ ಅಡ್ಡಲಾಗಿ 900 ಮೀಟರ್ ಉದ್ದದ ಸೇತುವೆಯ ಒಂದು ಭಾಗ ಇತ್ತೀಚೆಗೆ ಕುಸಿದಿದೆ.

ಗುಜರಾತ್ ಮಾದರಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಜಿಗ್ನೇಶ್ ಮೇವಾನಿ ಆರೋಪ!

11/07/2025
edit post
ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ

ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಅಪರಾಧ: ಸಿದ್ದರಾಮಯ್ಯ

10/07/2025

Recent News

edit post
ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ನೀಡುವ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ತರಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಭರವಸೆ ಈಡೇರಿಸಬೇಕು: ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೋರಿ ಪ್ರಧಾನಿಗೆ ರಾಹುಲ್ ಪತ್ರ

16/07/2025
edit post
ಟಿಬೆಟ್ ನ ಮಕ್ಕಳು ಮತ್ತು ಹುಡುಗರನ್ನು ಚೀನಾ ಆಕ್ರಮಿತ ಪ್ರದೇಶದಲ್ಲಿ ಚೀನಿಯರು ನಡೆಸುವ ಬೋರ್ಡಿಂಗ್ ಶಾಲೆಗೆ ಬಲವಂತವಾಗಿ ಸೇರಿಸಲಾಗುತ್ತಿದೆ.

ಸಂಸ್ಕೃತಿಯನ್ನು ನಾಶಮಾಡಲು ಟಿಬೆಟಿಯನ್ ಮಕ್ಕಳನ್ನು ಚೀನಾದ ಶಾಲೆಗಳಿಗೆ ಬಲವಂತವಾಗಿ ಸೇರಿಸಲಾಗುತ್ತಿದೆ!

12/07/2025
edit post
ಗುಜರಾತ್ನ ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹಿಸಾಗರ್ ನದಿಗೆ ಅಡ್ಡಲಾಗಿ 900 ಮೀಟರ್ ಉದ್ದದ ಸೇತುವೆಯ ಒಂದು ಭಾಗ ಇತ್ತೀಚೆಗೆ ಕುಸಿದಿದೆ.

ಗುಜರಾತ್ ಮಾದರಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಜಿಗ್ನೇಶ್ ಮೇವಾನಿ ಆರೋಪ!

11/07/2025
edit post
ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ

ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಅಪರಾಧ: ಸಿದ್ದರಾಮಯ್ಯ

10/07/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ನೀಡುವ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ತರಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಭರವಸೆ ಈಡೇರಿಸಬೇಕು: ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೋರಿ ಪ್ರಧಾನಿಗೆ ರಾಹುಲ್ ಪತ್ರ

16/07/2025
ಟಿಬೆಟ್ ನ ಮಕ್ಕಳು ಮತ್ತು ಹುಡುಗರನ್ನು ಚೀನಾ ಆಕ್ರಮಿತ ಪ್ರದೇಶದಲ್ಲಿ ಚೀನಿಯರು ನಡೆಸುವ ಬೋರ್ಡಿಂಗ್ ಶಾಲೆಗೆ ಬಲವಂತವಾಗಿ ಸೇರಿಸಲಾಗುತ್ತಿದೆ.

ಸಂಸ್ಕೃತಿಯನ್ನು ನಾಶಮಾಡಲು ಟಿಬೆಟಿಯನ್ ಮಕ್ಕಳನ್ನು ಚೀನಾದ ಶಾಲೆಗಳಿಗೆ ಬಲವಂತವಾಗಿ ಸೇರಿಸಲಾಗುತ್ತಿದೆ!

12/07/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS