ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
July 2023 » Dynamic Leader
November 21, 2024
Home 2023 July
ರಾಜ್ಯ

ಕರ್ನಾಟಕ ಮುಸ್ಲಿಮ್ ಯೂನಿಟಿ (KMU) ಬಾಗಲಕೋಟೆ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಮುಸ್ಲಿಮರ ಐಕ್ಯತಾ ಸಮಾವೇಶವು ಬಾಗಲಕೋಟೆ ಜಿಲ್ಲೆಯ ಹುನುಗುಂದ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.

ಸುಮಾರು ಮುನ್ನೂರಕ್ಕೂ ಹೆಚ್ಚು ಕೆಎಂಯು ಮುಖಂಡರು, ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೆಎಂಯುನ ರಾಜ್ಯ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿಯವರು, ಕರ್ನಾಟಕ ಮುಸ್ಲಿಮ್ ಸಮಾಜದ ಪ್ರಮುಖವಾದ ಮೂರು ಬೇಡಿಕೆಗಳ ನಿರ್ಣಯಗಳನ್ನು ಸಮಾವೇಶದಲ್ಲಿ ಓದಿದರು.  ಅದಕ್ಕೆ ಎಲ್ಲಾ ಪದಾಧಿಕಾರಿಗಳು ಕೈ ಎತ್ತುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು. 

ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ನಗರ, ಹೋಬಳಿ, ಪಂಚಾಯತಿ, ಹಳ್ಳಿ ಹಾಗೂ ವಾರ್ಡ್ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟುವ ಮೂಲಕ, ಮುಸ್ಲಿಮರ ಸಾಮಾಜಿಕ ನ್ಯಾಯ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಸಮಪಾಲಿಗಾಗಿ ನಾವು ಒಂದಾಗಬೇಕು ಎಂಬ ನಿರ್ಣಯವನ್ನು ಕೈಗೊಂಡರು.

ಕರ್ನಾಟಕ ಮುಸ್ಲಿಮ್ ಯೂನಿಟಿಯ ಉತ್ತರ ಕರ್ನಾಟಕ ಸಂಚಾಲಕರಾದ ಮೈಬೂಬ್ ಸರ್ಕಾವಾಸ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಮುಸ್ಲಿಮರು ಸರ್ಕಾರದ ಎಲ್ಲಾ ಯೋಜನೆಗಳ ಪಾಲುದಾರರು ಆಗಬೇಕು; ತಳಮಟ್ಟದ ರಾಜಕೀಯ ನಾಯಕತ್ವಕ್ಕೆ ಆದ್ಯತೆ ಅವಕಾಶಗಳನ್ನು ನೀಡಬೇಕು; ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಶ್ರಮಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹಾಗೂ ನಗರ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳ ಪದಗ್ರಹಣ ಕಾರ್ಯ ನಡೆಯಿತು. ಅಧ್ಯಕ್ಷೀಯ ಭಾಷಣವನ್ನು ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರರವರು ವಹಿಸಿದ್ದರು. ಈ ಸಮಾವೇಶದಲ್ಲಿ ಕೆಎಂಯುನ ಇತರೆ ಜಿಲ್ಲಾ ಮುಖಂಡರು, ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.

ದೇಶ

ವಾರಣಾಸಿ ಮತ್ತು ಮಥುರಾದಲ್ಲಿ ಮಸೀದಿಯೊಳಗೆ ಮಂದಿರ ಇರುವುದಕ್ಕೆ ವಿವಾದ ಎದ್ದಿರುವ ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು, ಪುರಿಯ ಜಗನ್ನಾಥ ದೇವಾಲಯ, ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯ ಮತ್ತು ಮಹಾರಾಷ್ಟ್ರದ ಬಂದರ್‌ಪುರದ ವಿಠ್ಠಲ ದೇವಾಲಯ ಈ ಹಿಂದೆ ಬೌದ್ಧ ವಿಹಾರಗಳಾಗಿದ್ದವು. ಅಲ್ಲಿ 8ನೇ ಶತಮಾನದವರೆಗೆ ಬುದ್ಧ ವಿಹಾರಗಳು ಇದ್ದವು. ಈಗ ಆ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ರೂಪುಗೊಂಡಿವೆ.

ದೇವಸ್ಥಾನಗಳು ಬೌದ್ಧ ವಿಹಾರಗಳಾಗಬೇಕು ಎಂಬುದು ನನ್ನ ಉದ್ದೇಶವಲ್ಲ. ಆದರೆ ನೀವು ಪ್ರತಿ ಮಸೀದಿಯಲ್ಲೂ ದೇವಾಲಯಗಳನ್ನು ಹುಡುಕಿದರೆ, ಪ್ರತಿ ದೇವಾಲಯದಲ್ಲೂ ಬೌದ್ಧ ವಿಹಾರಗಳನ್ನು ಏಕೆ ಹುಡುಕಬಾರದು? ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, ಸಮಾಜವಾದಿ ಪಕ್ಷ ಮತ್ತು ಅದರ ನಾಯಕರಿಂದ ಸನಾತನ ಧರ್ಮವನ್ನು ಪದೇ ಪದೇ ಅವಮಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೇದಾರನಾಥ, ಬದರಿನಾಥ್ ಮತ್ತು ಜಗನ್ನಾಥ ಪುರಿ ಹಿಂದೂಗಳ ಪವಿತ್ರ ಸ್ಥಳಗಳಾಗಿವೆ. ಇದು ವಿವಾದಾತ್ಮಕ ಹೇಳಿಕೆ ಮಾತ್ರವಲ್ಲ. ಇದು ಅವರ ಕ್ಷುಲ್ಲಕ ಮನಸ್ಥಿತಿ ಮತ್ತು ರಾಜಕೀಯವನ್ನೂ ತೋರಿಸುತ್ತದೆ.

ಭಾರತ ಮತ್ತು ಉತ್ತರ ಪ್ರದೇಶದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಸಮಾಜದಲ್ಲಿ ದ್ವೇಷ ಹುಟ್ಟು ಹಾಕಿದೆ. ಇದಕ್ಕೆ ಮೌರ್ಯ ಕ್ಷಮೆ ಕೇಳಬೇಕು. ಒಂದು ವೇಳೆ ಸಮಾಜವಾದಿ ಪಕ್ಷ ಇದನ್ನು ಒಪ್ಪಿಕೊಂಡರೆ ಅಖಿಲೇಶ್ ಯಾದವ್ ಈ ಬಗ್ಗೆ ವಿವರಣೆ ನೀಡಬೇಕು ಎಂದಿದ್ದಾರೆ.

ವಿದೇಶ

ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಬಜಾವುರ್ ಜಿಲ್ಲೆಯಲ್ಲಿ, ಕರ್ತೆಹ್ಸಿಲ್ ಪ್ರದೇಶದಲ್ಲಿ ಜಾಮಿಯತ್ ಉಲೇಮಾ-ಇ-ಇಸ್ಲಾಂ-ಫಜಲ್ ಎಂಬ ಸಂಘಟನೆಯ ವತಿಯಿಂದ ಇಂದು (ಜೂನ್ 30) ಸಮಾವೇಶ ನಡೆಯಿತು. 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಈ ಸಮಾವೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ, ಜಾಮಿಯತ್ ಉಲೇಮಾ-ಇ-ಇಸ್ಲಾಂ-ಫಜಲ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಜಿಯಾವುಲ್ಲಾ ಜಾನ್ ಸೇರಿದಂತೆ 35 ಮಂದಿ ಸಾವನ್ನಪ್ಪಿದ್ದಾರೆ; 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಖೈಬರ್ ಪಖ್ತುಂಖ್ವಾದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫಿರೋಜ್ ಶಾ ಜಮಾಲ್ ಅವರು, ‘ಗಾಯಾಳುಗಳನ್ನು ಬಜಾವುರ್ ಮತ್ತು ಸಮೀಪದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ಪೇಶಾವರ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ನಡೆಯುತ್ತಿದೆ. ಸ್ಫೋಟ ನಡೆದ ಸ್ಥಳವನ್ನು ಸುತ್ತುವರಿಯಲಾಗಿದೆ. ಪ್ರಸ್ತುತ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸೇನೆ ಮತ್ತು ಇತರ ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ’ ಎಂದು ಅವರು ಹೇಳಿದರು.

150 ಮಂದಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದಲ್ಲಿ ಕೆಲವು ಸ್ಥಳೀಯ ವರದಿಗಾರರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಾಳಿಯನ್ನು ಆತ್ಮಹತ್ಯಾ ದಾಳಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಸುಳಿವು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ.

ರಾಜಕೀಯ

ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರು ನೀಡಿರುವ ಹೇಳಿಕೆಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಸಚಿವ ಸುನಿಲ್ ಕುಮಾರ್ ಈ ವರದಿಯ ಯಥಾವತ್ ಜಾರಿಯಿಂದ ಪಶ್ಚಮಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆಯಾಗುತ್ತದೆ ಮತ್ತು ಅರಣ್ಯಾಶ್ರಿತ ಜನರ ಬದುಕು ಹೈರಾಣಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನೊಬ್ಬ ವ್ಯಕ್ತಿಯನ್ನು ತನ್ನ ಪತಿ ಎಂದು ಭಾವಿಸಿ ಮನೆಗೆ ಕರೆದೊಯ್ದ ಮಹಿಳೆ!

ಹೀಗಾಗಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿ ಅವೈಜ್ಞಾನಿಕವಷ್ಟೇ ಅಲ್ಲ, ಅಮಾನವೀಯವೂ ಹೌದು. ಈ ವರದಿ ಜಾರಿ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸುವುದಕ್ಕೆ ಮುನ್ನ ಇನ್ನಷ್ಟು ಚರ್ಚೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೇಶ

ಉತ್ತರಪ್ರದೇಶದ ಬಲ್ಲಿಯಾದಲ್ಲಿ ಮಹಿಳೆಯೊಬ್ಬರು ತನ್ನ ದೀರ್ಘಾವಧಿಯ ಪತಿ ಎಂದು ಭಾವಿಸಿ ಮನೆಗೆ ಕರೆತಂದ ವ್ಯಕ್ತಿ ನಿಜವಾಗಿಯೂ ಬೇರೊಬ್ಬರು ಎಂದು ಅರಿತುಕೊಂಡ ನಂತರ ಆಘಾತಕ್ಕೊಳಗಾಗಿದ್ದಾಳೆ.

ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಪತಿ ಮೋತಿ ಚಂದ್ ಎಂದು ಭಾವಿಸಿ ಜಾನಕಿ ದೇವಿ ಎಂಬ ಮಹಿಳೆ ಶುಕ್ರವಾರ ವಿಶೇಷಚೇತನ ವ್ಯಕ್ತಿಯನ್ನು ಮನೆಗೆ ಕರೆತಂದಿದ್ದಾಳೆ.

ಅವಳು ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಹೊರಗೆ ಗೊಂದಲದ ಸ್ಥಿತಿಯಲ್ಲಿ ಆ ವ್ಯಕ್ತಿಯನ್ನು ನೋಡಿದಳು. ಅವನ ಕೆದರಿದ ಕೂದಲು ಮತ್ತು ಕೆಸರು ಗಡ್ಡವನ್ನು ನೋಡಿ, ಜಾನಕಿ ಅವನನ್ನು ತನ್ನ ಗಂಡ ಎಂದು ತಪ್ಪಾಗಿ ಭಾವಿಸಿದಳು. ಅವನು ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸಿದ್ದನು ಮತ್ತು ನೆಲದ ಮೇಲೆ ಕುಳಿತಿದ್ದನು.

“ಇಷ್ಟು ದಿನ ಎಲ್ಲಿದ್ದೆ? ಎಲ್ಲಿಗೆ ಹೋಗಿದ್ದೆ!?”, ಎಂದು ಆಸ್ಪತ್ರೆಯ ಹೊರಗಿದ್ದವನನ್ನು ಜಾನಕಿ ಕೇಳುತ್ತಿದ್ದಳು. ಆದಾಗ್ಯೂ, ಆ ವ್ಯಕ್ತಿ ಮೌನವಾಗಿಯೇ ಇದ್ದನು. ಆಸ್ಪತ್ರೆಯ ಹೊರಗೆ ರಾಹುಲ್ ನನ್ನು ಕಂಡು ತನ್ನ ಮಕ್ಕಳಿಗೆ ಫೋನ್ ಮಾಡಿ ಕುರ್ತಾ ತರುವಂತೆ ಹೇಳಿದಳು.

ಮೋತಿ ಚಂದ್ ಎಂದು ನಂಬಿಸಿ ಮನೆಗೆ ಕರೆದುಕೊಂಡು ಹೋದರು. ನಂತರ, ಅವಳು ಅವನ ಗುರುತನ್ನು ಖಚಿತಪಡಿಸಿಕೊಳ್ಳಲು ಅವನ ದೇಹದ ಮೇಲೆ ಗುರುತುಗಳನ್ನು ನೋಡಿದಳು. ಅವನು ಮೋತಿ ಚಂದ್ ಅಲ್ಲ ಎಂದು ಅವಳು ಅರಿತುಕೊಂಡಳು. ವ್ಯಕ್ತಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ.

ತನ್ನ ತಪ್ಪಿನ ಅರಿವಾದ ಮೇಲೆ ಜಾನಕಿ ಕ್ಷಮೆ ಕೇಳಿದಳು. ರಾಹುಲ್ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಗ್ರಾಮದ ಮುಖಂಡರು ಮತ್ತು ಕೆಲವರು ಆತನ ಗುರುತನ್ನು ಖಚಿತಪಡಿಸಿದ್ದಾರೆ. ಬಳಿಕ ಆತನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ದೇಶ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿಯ ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸಲಾಗಿದೆ. ಹಿಂದೂ-ಮುಸ್ಲಿಂ ಏಕತೆಯ ಕುರಿತು ಮೊಘಲ್ ರಾಜಕುಮಾರ ತಾರಾ ಶಿಖೋ ಅವರ ಬೋಧನೆಗಳನ್ನು ಹರಡುವ ಯೋಜನೆಯಲ್ಲಿ ಅವರು ಆರ್‌ಎಸ್‌ಎಸ್ ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ತನ್ನ ಅಲ್ಪಸಂಖ್ಯಾತ ವಿಭಾಗದ ಸಾರ್ವಜನಿಕ ಸಭೆಗಳು ಮತ್ತು ವಿಶೇಷ ಕಾರ್ಯಕ್ರಮಗಳ ಮೂಲಕ ಮುಸ್ಲಿಂ ಜನಸಂಖ್ಯೆಯ ಒಂದು ವರ್ಗದಿಂದ ಬೆಂಬಲವನ್ನು ಪಡೆಯುತ್ತಿದೆ. ವಿಶೇಷವಾಗಿ ಪಸ್ಮಾಂಡ ಮುಸ್ಲಿಮರಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಗಮನವನ್ನು ನೀಡುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನ ರಾಮೇಶ್ವರಂಗೆ ತೆರಳಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಮರುದಿನವೇ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಗಮನಾರ್ಹ.

ಇದನ್ನೂ ಓದಿ: ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ!

ತಾರಿಕ್ ಮನ್ಸೂರ್ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಯಿಂದ ಮೇಲ್ಮನೆಗೆ ಆಯ್ಕೆಯಾದ ನಾಲ್ಕನೇ ಮುಸ್ಲಿಂ ನಾಯಕ ಎಂಬುದು ಗಮನಾರ್ಹ. ತಾರಿಕ್ ಮನ್ಸೂರ್ ಉತ್ತರ ಪ್ರದೇಶದ ಅಲಿಘರ್ ಮೂಲದವರು. ಅಲ್ಲಿನ ಮತದಾರರಲ್ಲಿ ಮುಸ್ಲಿಮರು ಸುಮಾರು 19% ಇದ್ದಾರೆ. ಮತ್ತು ಸುಮಾರು 30 ಲೋಕಸಭಾ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಮರಿದ್ದಾರೆ. ಅವುಗಳಲ್ಲಿ 15 ರಿಂದ 20 ಕ್ಷೇತ್ರಗಳು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಹಿಂದೂಗಳೇ ಆಚರಿಸುವ ಮೊಹರಂ ಹಬ್ಬ; 300 ವರ್ಷಗಳಿಂದ ನಡೆದು ಬರುವ ಅದ್ಭುತ!

ತಾರಾ ಶಿಕೋ ಕಾರ್ಯಕ್ರಮಗಳಿಂದ ಮನ್ಸೂರ್ ಅವರ ಕೊಡುಗೆ ಆರ್‌ಎಸ್‌ಎಸ್ ನಾಯಕತ್ವವನ್ನು ಮೆಚ್ಚಿಸಿದೆ ಎಂದು ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪರ್ಷಿಯನ್ ವಿಭಾಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಅಂತರ್ಧರ್ಮೀಯ ಸಂವಾದದಲ್ಲಿ, ಶಿಕೋ ಅವರ ಹೆಚ್ಚಿನ ಕೃತಿಗಳನ್ನು ಅನುವಾದಿಸಿ, ಮುಸ್ಲಿಂ ಸಮುದಾಯದ ಶ್ರೇಷ್ಠ ನಾಯಕ ಎಂದು ತೋರಿಸಿಕೊಂಡಿದ್ದಾರೆ. ಅದರ ಬಗ್ಗೆ ವಿಚಾರ ಸಂಕಿರಣ, ಸಮ್ಮೇಳನಗಳನ್ನೂ ನಡೆಸಿರುವುದಾಗಿ ಸಂಘಟನೆಯ ಪ್ರಮುಖರು ತಿಳಿಸಿದರು.

ಇದನ್ನೂ ಓದಿ: ರೂ.10 ಕೋಟಿಯನ್ನು ತಮ್ಮದಾಗಿಸಿಕೊಂಡ 11 ಸ್ವಚ್ಛತಾ ಮಹಿಳಾ ಕಾರ್ಮಿಕರು!

ತಾರಿಕ್ ಮನ್ಸೂರ್ ಅವರ ನೇಮಕದ ಕುರಿತು ಮಾತನಾಡಿರುವ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಮಾಲ್ ಸಿದ್ದಿಕಿ, ಮನ್ಸೂರ್ ಒಬ್ಬ ರಾಷ್ಟ್ರೀಯವಾದಿ ಮುಸ್ಲಿಂ. ಅವರು ಯಾವಾಗಲೂ ರಾಷ್ಟ್ರದ ಆದರ್ಶವನ್ನೇ ಪ್ರಚಾರ ಮಾಡಿಕೊಂಡು ಬಂದಿದ್ದಾರೆ. ಅವರು ಯಾವಾಗಲೂ ರಾಷ್ಟ್ರವೇ ಮೊದಲು ಎಂಬ ಆದರ್ಶವನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರು ದಾರಿ ತಪ್ಪದಂತೆ ನೋಡಿಕೊಂಡರು. ಅವರ ನೇಮಕ ಪಕ್ಷ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಉಡುಪಿ ನಗರದ ಅರೆ ವೈದ್ಯಕೀಯ ಕಾಲೇಜಿನ ವಾಶ್‍ರೂಂನಲ್ಲಿ ವಿದ್ಯಾರ್ಥಿನಿಯೋರ್ವಳ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ಸ್ಪಷ್ಟೀಕರಣ ನೀಡಿದ ನಂತರವೂ ಈ ವಿಚಾರವನ್ನು ಕೆದುಕುತ್ತಿರುವ ಬಿಜೆಪಿಯವರ ಮೇಲೆ ಹರಿಹಾಯ್ದಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 

ಇದನ್ನೂ ಓದಿ: ಹಿಂದೂಗಳೇ ಆಚರಿಸುವ ಮೊಹರಂ ಹಬ್ಬ; 300 ವರ್ಷಗಳಿಂದ ನಡೆದು ಬರುವ ಅದ್ಭುತ!

“ಉಡುಪಿ ಪ್ರಕರಣದಲ್ಲಿ ಬಿಜೆಪಿಯವರು ಮತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ವದಂತಿ ಹಬ್ಬಿಸಬೇಡಿ ಎಂದಿದ್ದಾರೆ. ಖುಷ್ಬೂ ಬಿಜೆಪಿ ಸದಸ್ಯೆ. ಬಿಜೆಪಿಯವರಿಗೆ ಅವರ ಮಾತಿನ ಮೇಲೂ ನಂಬಿಕೆಯಿಲ್ಲವೇ?

ಇದನ್ನೂ ಓದಿ: ರೂ.10 ಕೋಟಿಯನ್ನು ತಮ್ಮದಾಗಿಸಿಕೊಂಡ 11 ಸ್ವಚ್ಛತಾ ಮಹಿಳಾ ಕಾರ್ಮಿಕರು!

ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿರುವ ಬಿಜೆಪಿ ಉಡುಪಿ ಪ್ರಕರಣವನ್ನು ‘ರಾಷ್ಟ್ರೀಯ ವಿವಾದ’ ಎಂಬಂತೆ ಬಿಂಬಿಸುತ್ತಿದ್ದಾರೆ. ಮಣಿಪುರದಲ್ಲಿ ಇಬ್ಬರು ‌ಮಹಿಳೆಯರ ನಗ್ನ ಮೆರವಣಿಗೆ ‌ಮಾಡಿ ಅತ್ಯಾಚಾರಗೈದಾಗ ಬಿಜೆಪಿಯವರ ಬಾಯಿ ಸತ್ತು ಹೋಗಿತ್ತು. ಉಡುಪಿ ವಿಚಾರದಲ್ಲಿ ಇಷ್ಟು ಗಲಭೆ ಮಾಡುತ್ತಿರುವ ಬಿಜೆಪಿ ಮಣಿಪುರ ವಿಚಾರದಲ್ಲಿ ಯಾಕೆ ಗಲಭೆ ಎಬ್ಬಿಸಲಿಲ್ಲ? ಎಂದು ಕಿಡಿಕಾರಿದ್ದಾರೆ.

ರಾಜ್ಯ

ತಂಜಾವೂರು: ಕಾಸವಳನಾಡಿನ ಪುದೂರು ಗ್ರಾಮ ತಮೀಳುನಾಡು ತಂಜಾವೂರಿಗೆ ಸಮೀಪದಲ್ಲಿದೆ. ಈ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದಾರೆ. ಆದರೆ, ಅವರು ಪ್ರತಿ ವರ್ಷ ಮುಸ್ಲಿಮರ ಹಬ್ಬವಾದ ಮೊಹರಂ ಹಬ್ಬವನ್ನು ವಿಮರ್ಶಾತ್ಮಕವಾಗಿ ಆಚರಿಸುವುದನ್ನು ರೂಡಿಸಿಕೊಂಡಿದ್ದಾರೆ.

ಈ ಗ್ರಾಮದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ ಹಿಂದೂಗಳು ಮೊಹರಂ ಹಬ್ಬವನ್ನು ತಮ್ಮ ಮನೆಯ ಹಬ್ಬವನ್ನಾಗಿ ಆಚರಿಸಿ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಇಂದು ಮುಸ್ಲಿಂ ಬಾಂಧವರ ಮೊಹರಂ ಹಬ್ಬ. ಇದನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಎಂದಿನಂತೆ ಕಾಸವಳನಾಡಿನ ಹಿಂದೂ ಗ್ರಾಮಸ್ಥರು ಮೊಹರಂ ಹಬ್ಬವನ್ನು ಎಲ್ಲ ಗ್ರಾಮಗಳಿಗಿಂತಲೂ ಹೆಚ್ಚು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮೊಹರಂ ಹಬ್ಬದ ಆಚರಣೆಗೆ 10 ದಿನಗಳ ಮೊದಲೇ ಹಿಂದೂಗಳು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಉಪವಾಸ ಮತ್ತು ಭಕ್ತಿಯಿಂದ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದರು.

ಇದರ ಪ್ರಕಾರ ಇಂದು ಮುಸ್ಲಿಮರು ಪಂಜಾ ಎಂದು ಕರೆಯಲ್ಪಡುವ ಕರಗವನ್ನು ಹಳ್ಳಿಯಲ್ಲಿರುವ ಹಿಂದೂಗಳ ಮನೆಗಳಿಗೆ ಟಮಟೆ ವಾದ್ಯಗೋಷ್ಠಿಯೊಂದಿಗೆ ಸಾಗಿಸಿದರು. ನಂತರ ಪ್ರತಿ ಮನೆಯಲ್ಲೂ ದೇವರಿಗೆ ನೀರು ಸುರಿದು ನಿಂಬೆಹಣ್ಣಿನ ಮಾಲೆ ಹಾಗೂ ರೇಷ್ಮೆ ವಸ್ತ್ರವನ್ನು ಇಟ್ಟು ತಮ್ಮ ಇಷ್ಟಾರ್ಥ ನೆರವೇರುವಂತೆ ಪ್ರಾರ್ಥಿಸಿದರು. ನಂತರ ಅದನ್ನು ಅಲ್ಲಾಹ ದೇವಸ್ಥಾನಕ್ಕೆ ತಂದು ಫಾತೀಯಾ ಪಠಿಸಿ ತಮ್ಮ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ಅರ್ಪಿಸಿದರು.

ಪಂಜಾ ಕರಗವು ಅಲ್ಲಿನ ಹೂವಿನ ಕುಂಡದಲ್ಲಿ ಇಳಿದ ತಕ್ಷಣ ಅಲ್ಲಾಹ ಸ್ವಾಮಿ ಹೊತ್ತವರು ಮೊದಲು ಬೆಂಕಿ ಮೆತ್ತಿದರು. ನಂತರ ಉಳಿದ ಸಾರ್ವಜನಿಕರು ಭಕ್ತಿಯಿಂದ ಬೆಂಕಿ ತುಳಿದು ಪೂಜೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ವಿಭೂತಿ ಮತ್ತು ನಿಂಬೆ ಹಣ್ಣನ್ನು ಪ್ರಸಾದವಾಗಿ ನೀಡಲಾಯಿತು. ಇದರಿಂದಾಗಿ ಇಂದು ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಇದರ ಬಗ್ಗೆ ಮಾತನಾಡಿದ ಕಾಸವಳನಾಡಿನ ಪುದೂರು ಗ್ರಾಮ ಭಕ್ತಾಧಿಗಳು, ನಮ್ಮ ಪೂರ್ವಜರ ಮಾರ್ಗದರ್ಶನದಂತೆ ಹಿಂದೂಗಳೇ ಹೆಚ್ಚಿರುವ ನಮ್ಮ ಊರಿನಲ್ಲಿ ಕಳೆದ 300 ವರ್ಷಗಳಿಂದ ಮೊಹರಂ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ದೇಶ

ಕೇರಳದಲ್ಲಿ ಲಾಟರಿ ಟಿಕೆಟ್‌ಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಬಂಪರ್ ಬಹುಮಾನವಾಗಿ ದೊಡ್ಡ ಮೊತ್ತದ ವಿಶೇಷ ಮಾರಾಟವೂ ನಡೆಯುತ್ತಿದೆ. ಕೇರಳ ಲಾಟರಿ ಟಿಕೆಟ್‌ಗಳನ್ನು ಕೇರಳ ರಾಜ್ಯದ ಜನರು ಮಾತ್ರವಲ್ಲದೆ ಹೊರ ರಾಜ್ಯದವರೂ ಖರೀದಿಸುತ್ತಾರೆ.

ಈ ಹಿನ್ನಲೆಯಲ್ಲಿ ಕೇರಳದಲ್ಲಿ 2023ನೇ ಸಾಲಿನ ಮಾನ್ಸೂನ್ ಬಂಪರ್ ಬಹುಮಾನವಾಗಿ ರೂ.10 ಕೋಟಿ ಪ್ರಕಟಿಸಲಾಗಿತ್ತು. ಇದಕ್ಕಾಗಿ 27 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿದ್ದು, ಪ್ರತಿ ಟಿಕೆಟಿನ ಬೆಲೆ 250 ರೂಪಾಯಿ ಎಂದು ಘೋಷಿಸಲಾಗಿತ್ತು.

ಕಳೆದ 26 ರಂದು ಈ ಬಂಪರ್ ಲಾಟರಿ ಟಿಕೆಟ್ ಡ್ರಾ ನಡೆದಿತ್ತು. ಇದರಲ್ಲಿ ಎಂ.ಪಿ. 200261 ಸಂಖ್ಯೆಯ ಲಾಟರಿ ಟಿಕೆಟ್‌ಗೆ 10 ಕೋಟಿ ರೂಪಾಯಿ ಬಿದ್ದಿತು. ಪಾಲಕ್ಕಾಡ್‌ನಲ್ಲಿ ಮಾರಾಟವಾದ ಈ ಲಾಟರಿ ಟಿಕೆಟ್ ಖರೀದಿಸಿದವರು ಯಾರು ಎಂಬ ಕುತೂಹಲ ಮೂಡಿಸಿದ ಹಿನ್ನಲೆಯಲ್ಲಿ ಲಾಟರಿ ಟಿಕೆಟನ್ನು 11 ಸ್ವಚ್ಛತಾ ಮಹಿಳಾ ಕಾರ್ಮಿಕರು ಖರೀದಿಸಿದ್ದಾರೆ ಎಂಬು ಸುದ್ದಿ ತಿಳಿದುಬಂದಿತು.

250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಅನ್ನು 11 ಸ್ವಚ್ಛತಾ ಮಹಿಳಾ ಕಾರ್ಮಿಕರು ಹಂಚಿಕೊಂಡು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಮಲಪ್ಪುರಂ ಜಿಲ್ಲೆಯ ಪರಪ್ಪನಕಾಡಿ ಪುರಸಭೆಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ 9 ಮಂದಿ 25 ರೂಪಾಯಿ ಹಾಗೂ ಒಬ್ಬರು 50 ರೂಪಾಯಿ ಹಂಚಿಕೊಂಡು ಲಾಟರಿ ಟಿಕೆಟ್ ಖರೀದಿಸಿದ್ದಾರೆ.

ಆ ಲಾಟರಿ ಟಿಕೆಟಿಗೆ ಬಹುಮಾನ ಬಿದ್ದು ಕ್ಷಣಮಾತ್ರದಲ್ಲಿ ಅವರ ಬದುಕನ್ನೇ ಬದಲಿಸಿದೆ. ಲಾಟರಿಯಲ್ಲಿ 10 ಕೋಟಿ ರೂಪಾಯಿ ಬಿದ್ದಿರುವ ಸುದ್ದಿಯಿಂದ ಸ್ವಚ್ಛತಾ ಮಹಿಳಾ ಕಾರ್ಮಿಕರು ಖುಷಿಯಲ್ಲಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು, ಅದನ್ನೇ ಅದೃಷ್ಟ ಎನ್ನುತ್ತಾರೆ. ಅವರ ಜೀವನದಲ್ಲಿ ತಾವೇ ಊಹಿಸದಂತಹ ಬದಲಾವಣೆ ಉಂಟಾಗಿದೆ ಎಂದು ಅಭಿನಂದಿಸುತ್ತಿದ್ದಾರೆ.

ದೇಶ

ಮಧ್ಯಪ್ರದೇಶ ಗಂಗಾಪುರ, ಗೋಳಗುತಾನ್ ಆಶ್ರಮದ ಮೂವರು ಶಿಷ್ಯರು, ಲೋಕದ ಒಳಿತಿಗಾಗಿ ರಸ್ತೆಯಲ್ಲಿ ತೆವಳುತ್ತಾ, ತಮಿಳುನಾಡಿನ ರಾಮೇಶ್ವರಕ್ಕೆ ತೀರ್ಥಯಾತ್ರೆ ಹೋಗಲು ನಿರ್ಧರಿಸಿದರು.

ಇದಕ್ಕಾಗಿ ಕಳೆದ ವರ್ಷ ಜೂನ್ 29 ರಂದು ಅವರು ಯಾತ್ರೆ ಆರಂಭಿಸಿದರು. ಥರ್ಮಾಕೋಲ್ ಶೀಟ್ ಮೇಲೆ ಮಲಗಿ ತಮಿಳುನಾಡಿನ ರಾಮೇಶ್ವರಂ ಕಡೆಗೆ ತೆವಳಿದರು. ತಿರುವಣ್ಣಾಮಲೈ ಜಿಲ್ಲೆ ವಂದವಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತೆವಳಿದರು.

ಮಾತನಾಡಿಸಿದಾಗ, ‘ಮಧ್ಯಪ್ರದೇಶದಿಂದ ರಾಮೇಶ್ವರಂವರೆಗಿನ 4000 ಕಿ.ಮೀ., ದೂರವನ್ನು ಥರ್ಮಾಕೋಲ್ ಕವರ್ ಮೇಲೆ ಮಲಗಿ ನಮಸ್ಕಾರಿಸುಲೇ ತೆವಳುತ್ತಿದ್ದೇವೆ’ ಎಂದರು. ಲೋಕದ ಒಳಿತಿಗಾಗಿ ರಸ್ತೆಯಲ್ಲಿ ತೆವಳುತ್ತಿದ್ದ ಈ ಪವಾಡ ಪುರುಷರ ಕಾರ್ಯವನ್ನು ನೋಡಿ ಎಲ್ಲರೂ ಆಶ್ಚರ್ಯದಿಂದ ನೋಡಿದರು.