ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪದಚ್ಯುತಿ Archives » Dynamic Leader
January 7, 2025
Home Posts tagged ಪದಚ್ಯುತಿ
ದೇಶ

‘ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಸಭೆಯಲ್ಲಿ ಮಾಡಿದ ಭಾಷಣವು ಸಂವಿಧಾನದ 14, 21, 25 ಮತ್ತು 26ನೇ ವಿಧಿಗಳನ್ನು ಉಲ್ಲಂಘಿಸಿದೆ ಮತ್ತು ಸಂವಿಧಾನದಲ್ಲಿನ ಜಾತ್ಯತೀತತೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದೆ’ -ಪ್ರಶಾಂತ್ ಭೂಷಣ್

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಕಳೆದ ಡಿಸಂಬರ್ 8 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವರು ತಮ್ಮ ಖಂಡನೆಗಳನ್ನು ದಾಖಲಿಸಿದ್ದಾರೆ.

‘ಇದೊಂದು ಹಿಂದೂಸ್ತಾನ್ ದೇಶ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಇಲ್ಲಿ ವಾಸಿಸುವ ಬಹುಪಾಲು ಜನರಿಗೆ ಸರಿಹೊಂದುವ ರೀತಿಯಲ್ಲೇ ದೇಶವು ಕಾರ್ಯನಿರ್ವಹಿಸುತ್ತಿದೆ. ಇದುವೇ ಕಾನೂನು. ಇದನ್ನು ಹೈಕೋರ್ಟ್ ನ್ಯಾಯಮೂರ್ತಿ ಹೇಳುವುದಾಗಿ ಯಾರೂ ಬಾವಿಸಬಾರದು. ಬಹುಮತವನ್ನು ಆಧರಿಸಿಯೇ ಕಾನೂನು ಇದೆ. ಇದನ್ನೇ ಒಂದು ಸಮುದಾಯ ಅಥವಾ ಕುಟುಂಬದಲ್ಲಿ ನೋಡುವುದಾದರೆ ಇದರಲ್ಲಿಯೂ ಬಹುಸಂಖ್ಯಾತರ ಸಂತೋಷಕ್ಕೆ ಕಾರಣವಾಗುವುದನ್ನು ಒಪ್ಪಿಕೊಳ್ಳಲಾಗುತ್ತದೆ’ ಮುಂತಾದ ಅಪಾಯಕಾರಿ ಅಪಾಯಕಾರಿ ಭಾಷಣವನ್ನು ಮಾಡಿದ್ದರು.

ಇವರ ಹೇಳಿಕೆಗೆ ಸಂಬಂಧಿಸಿದಂತೆ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಹಾಗೂ ಖಾಸಗಿ ಸಂಸ್ಥೆಯಾದ ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (CJAR) ಸಂಯೋಜಕ ಪ್ರಶಾಂತ್ ಭೂಷಣ್ ಅವರು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ‘ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಸಭೆಯಲ್ಲಿ ಮಾಡಿದ ಭಾಷಣವು ಸಂವಿಧಾನದ 14, 21, 25 ಮತ್ತು 26ನೇ ವಿಧಿಗಳನ್ನು ಉಲ್ಲಂಘಿಸಿದೆ ಮತ್ತು ಸಂವಿಧಾನದಲ್ಲಿನ ಜಾತ್ಯತೀತತೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದೆ’ ಎಂದು ಪತ್ರದಲ್ಲಿ ಒತ್ತಿಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡು ಅವರನ್ನು ಹುದ್ದೆಯಿಂದ ಅಮಾನತುಗೊಳಿಸುವಂತೆ ಮನವಿಯನ್ನೂ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​(ಎಸ್‌ಸಿಪಿಎ) ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಕೂಡ ‘ನ್ಯಾಯಮೂರ್ತಿ ಯಾದವ್ ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಕೇಂದ್ರ ಸರ್ಕಾರ ಇದಕ್ಕೆ ಬೆಂಬಲ ಸೂಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ‘ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಿಗೆ ಸಂಬಂಧಿಸಿದ ಪ್ರಕರಣವು ಪರಿಗಣನೆಯಲ್ಲಿದ್ದು, ಈ ಬಗ್ಗೆ ಹೈಕೋರ್ಟ್‌ನಿಂದ ವಿವರಗಳನ್ನು ಕೋರಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.