ಅಂದು ‘ನರೇಂದ್ರ’ನಾಥ ದತ್ತಾ… ಇಂದು ‘ನರೇಂದ್ರ’ ದಾಮೋದರ ದಾಸ್ ಮೋದಿ! ಕಾಕತಾಳೀಯವೋ ಅಥವಾ ದೇವರ ಕಾರ್ಯವೋ!? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಸ್ವಾಮಿ ವಿವೇಕಾನಂದರು 1892ರಲ್ಲಿ ಕನ್ಯಾಕುಮಾರಿ ಬಳಿ ಮೂರು ಸಮುದ್ರಗಳು ಸಂಗಮಿಸುವ ಬೆಟ್ಟದ ಮೇಲೆ ಧ್ಯಾನ ಮಾಡಿದರು. ಅವರ ಜನ್ಮನಾಮ ನರೇಂದ್ರನಾಥ ದತ್ತಾ. ಇಂದು 132 ವರ್ಷಗಳ ನಂತರ ಅದೇ ಬಂಡೆಯ ಮೇಲೆ ನರೇಂದ್ರ ದಾಮೋದರ ದಾಸ್ ಎಂಬ ಹೆಸರು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಿದ್ದಾರೆ.
ಅಮೆರಿಕಾದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಕನ್ಯಾಕುಮಾರಿಗೆ ಬಂದ ವಿವೇಕಾನಂದರು ಬಂಡೆಯ ಮೇಲೆ ಧ್ಯಾನ ಮಾಡಿ ಆಧ್ಯಾತ್ಮಿಕವಾಗಿ ಹಾಗೂ ಮಾನಸಿಕವಾಗಿ ತಮ್ಮನ್ನು ಬಲಪಡಿಸಿಕೊಂಡರು. ಬಳಿಕ ಅಮೆರಿಕಕ್ಕೆ ತೆರಳಿ ಅಲ್ಲಿನ ಚಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಅರಿವು ಮೂಡಿಸಿ ಮಾತನಾಡಿದರು.
ಅದೇ ರೀತಿ ಧ್ಯಾನದ ಮೂಲಕ ಆಧ್ಯಾತ್ಮಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಿರುವ ಪ್ರಧಾನಿ ಮೋದಿ, ವಿವೇಕಾನಂದರು ಧ್ಯಾನ ಮಾಡಿದ ಜಾಗದಲ್ಲಿಯೇ ಧ್ಯಾನ ಮಾಡುತ್ತಿರುವುದು ವಿಶ್ವದ ಗಮನ ಸೆಳೆದಿದೆ. ಇಬ್ಬರ ಹೆಸರೂ ನರೇಂದ್ರ ಆಗಿರುವುದು ಕಾಕತಾಳೀಯವೋ ಅಥವಾ ದೇವರ ಕಾರ್ಯವೋ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.