ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸೆಂಥಿಲ್ ಬಾಲಾಜಿ ಅರೆಸ್ಟ್ Archives » Dynamic Leader
November 28, 2024
Home Posts tagged ಸೆಂಥಿಲ್ ಬಾಲಾಜಿ ಅರೆಸ್ಟ್
ದೇಶ

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಸೆಂಥಿಲ್ ಬಾಲಾಜಿ ಮತ್ತು ಇತರರ ಮನೆಗಳಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಸೆಂಥಿಲ್ ಬಾಲಾಜಿಯನ್ನು ಬಂಧಿಸಿ, ಅವರನ್ನು ವಿಚಾರಣೆಗೆ ಕರೆದೊಯ್ದರು. ಆಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸೆಂಥಿಲ್ ಬಾಲಾಜಿ ತಮಿಳುನಾಡು ಇಂಧನ ಸಚಿವರಾಗಿದ್ದಾರೆ. ಅವರು ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಆಗ 81 ಮಂದಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ, 1.62 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ವಿಚಾರದಲ್ಲಿ ನಡೆದ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸೆಂಥಿಲಬಾಲಾಜಿ, ಅವರ ಸಹೋದರನ ಮನೆ ಹಾಗೂ ಅವರ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾನೂನುಬಾಹಿರ ಹಣ ವರ್ಗಾವಣೆ ನಿಷೇಧ ಕಾಯಿದೆ ಅಡಿಯಲ್ಲಿ ಇಡಿ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಅರೆಸೇನಾ ಪಡೆಗಳ ರಕ್ಷಣೆಯೊಂದಿಗೆ ಚೆನ್ನೈ ಗ್ರೀನ್‌ವೇಸ್ ರಸ್ತೆಯಲ್ಲಿರುವ ಸಚಿವ ಸೆಂಥಿಲ್ ಬಾಲಾಜಿ ಅವರ ಬಂಗಲೆ ಮತ್ತು ಮಂದೈವೆಳಿ ಬಿಷಪ್ ಗಾರ್ಡನ್ ಪ್ರದೇಶದಲ್ಲಿರುವ ಅವರ ಸಹೋದರ ಅಶೋಕ್ ಕುಮಾರ್ ಮನೆಯಲ್ಲಿ ಇಡಿ ಅಧಿಕಾರಿಗಳು ನಿನ್ನೆ ಬೆಳಿಗ್ಗೆ 8:30ಕ್ಕೆ ತನಿಖೆ ಪ್ರಾರಂಭಿಸಿ, ಮಧ್ಯರಾತ್ರಿ 1:30ಕ್ಕೆ ಪೂರ್ಣಗೊಳಿಸಿದರು.

ನಂತರ ಮಧ್ಯರಾತ್ರಿ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿ, ವಿಚಾರಣೆಗಾಗಿ ನುಂಗಮ್ ಪಾಕ್ಕಂನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆದೊಯ್ದರು. ಆಗ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು ಎನ್ನಲಾಗಿದೆ. ನಂತರ ಅವರನ್ನು ಓಮಂದೂರಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ.

ಸಚಿವ ಸೆಂಥಿಲ್ ಬಾಲಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿದು, ಸಚಿವರಾದ ಎಂ.ಸುಬ್ರಮಣಿಯನ್, ಎ.ವಿ.ವೇಲು, ಶೇಖರ್ ಬಾಬು, ಮತ್ತು ಉದಯನಿಧಿ ಸ್ಟಾಲಿನ್ ಮುಂತಾದವರು ಯೋಗಕ್ಷೇಮ ವಿಚಾರಿಸಲಿಕ್ಕಾಗಿ, ಓಮಂದೂರಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

‘ಸೆಂಥಿಲ್ ಬಾಲಾಜಿ ಬಂಧನದ ಬಗ್ಗೆ ಸಂಬಂಧಿಕರಿಗೂ ಮಾಹಿತಿ ನೀಡಿಲ್ಲ. ಅವರನ್ನು ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬುದೂ ತಿಳಿದುಬಂದಿಲ್ಲ. ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದು ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಅವರು ಹೇಳಿದ್ದಾರೆ.

TAMILNADU MINISTER V.SENTHIL BALAJI ARRESTED IN MONEY LAUNDERING CASE 
The Enforcement Directorate arrested Tamil Nadu Electricity Minister V. Senthil Balaji in a money-laundering case on Wednesday early morning. The arrest came after an 18-hour questioning at Senthilbalaji’s residence in Chennai, according to a report by The Hindu.