ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನ್ಯೂಸ್‌ ಕ್ಲಿಕ್ Archives » Dynamic Leader
October 22, 2024
Home Posts tagged ನ್ಯೂಸ್‌ ಕ್ಲಿಕ್
ದೇಶ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ‘ನ್ಯೂಸ್ ಕ್ಲಿಕ್’ ಸಂಸ್ಥಾಪಕ ಮತ್ತು ಸಂಪಾದಕರ ಬಂಧನ ಸರಿಯಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

ಅಕ್ಟೋಬರ್ 3, 2023 ರಂದು, ದೆಹಲಿ ಪೊಲೀಸರು ‘ನ್ಯೂಸ್‌ ಕ್ಲಿಕ್’ ಸುದ್ದಿ ಜಾಲತಾಣದ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಚೀನಾದಿಂದ ಹಣ ಪಡೆದ ಆರೋಪದಡಿ ಬಂಧಿಸಲಾಯಿತು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು (ಮೇ 15) ನೀಡಿರುವ ತಮ್ಮ ತೀರ್ಪಿನಲ್ಲಿ, ಪ್ರಬೀರ್ ಪುರಕಾಯಸ್ಥನ ಬಂಧನ ಮತ್ತು ಸೆರೆವಾಸವು ಸರಿಯಾದ ಕ್ರಮವಲ್ಲ. ಅವರ ಬಂಧನಕ್ಕೆ ಕಾರಣವನ್ನು ಅವರಿಗಾಗಲಿ ಅಥವಾ ಅವರ ವಕೀಲರಿಗಾಗಲಿ ಬಂಧನಕ್ಕೆ ಮುನ್ನ ಹೇಳಿರಲಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶ ಮಾಡಿದೆ.

ದೇಶ

‘ನ್ಯೂಸ್ ಕ್ಲಿಕ್’ ಸಂಸ್ಥೆ ಚೀನಾದಿಂದ ಹಣ ಪಡೆದಿದೆ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ನ್ಯೂಯಾರ್ಕ್ ಟೈಮ್ಸ್’ ಸುಮಾರು 2 ತಿಂಗಳ ಹಿಂದೆ ಆಧಾರರಹಿತ ವರದಿ ಪ್ರಕಟಿಸಿತ್ತು. ಅದರ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ (ಇಡಿ) ಸೆಪ್ಟೆಂಬರ್ 2021 ರಲ್ಲಿ ‘ನ್ಯೂಸ್ ಕ್ಲಿಕ್’ ಮಾಧ್ಯಮ ಕಚೇರಿ ಮೇಲೆ ದಾಳಿ ನಡೆಸಿತು. ಮನಿ ಲಾಂಡರಿಂಗ್ ತಡೆ ಕಾಯಿದೆ ಅಡಿಯಲ್ಲಿ, ‘ನ್ಯೂಸ್ ಕ್ಲಿಕ್’ ಕಂಪನಿಯ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಮಾಲೀಕತ್ವದಲ್ಲಿನ ರೂ.4.5 ಕೋಟಿ ಮೌಲ್ಯದ ಮನೆ ಮತ್ತು ರೂ. 41 ಲಕ್ಷ ಸ್ಥಿರ ಠೇವಣಿಗಳನ್ನೂ ಸ್ಥಗಿತಗೊಳಿಸಿತು.

ಈ ಹಿನ್ನಲೆಯಲ್ಲಿ, ಅಕ್ಟೋಬರ್ 3 ರಂದು ‘ನ್ಯೂಸ್ ಕ್ಲಿಕ್’ ಮಾಧ್ಯಮ ಮತ್ತು ಅದರ ಸಂಬಂಧಿತ ಪತ್ರಕರ್ತರಿಗೆ ಸೇರಿದ 100 ಸ್ಥಳಗಳಲ್ಲಿ 12 ಗಂಟೆಗಳ ಕಾಲ ದಾಳಿ ನಡೆಸಿದ ದೆಹಲಿ ಪೊಲೀಸರು, ಸೆಲ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ‘ನ್ಯೂಸ್ ಕ್ಲಿಕ್’ ನೌಕರರು ಮತ್ತು 9 ಪತ್ರಕರ್ತರಿಗೆ 25 ಪ್ರಶ್ನೆಗಳ ಪಟ್ಟಿಯನ್ನು ನೀಡಿ  ತನಿಖೆ ನಡೆಸಲಾಯಿತು.

ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ರಾಜ್ಯ ಪಕ್ಷಗಳು ನೆಲಕಚ್ಚುವುದು ಖಚಿತ!

ಇದಕ್ಕೂ ಮುನ್ನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿಕೊಂಡ ದೆಹಲಿ ಪೊಲೀಸರು, 12 ಗಂಟೆಗಳ ದಾಳಿ ಮತ್ತು ವಿಚಾರಣೆಯ ನಂತರ, ‘ನ್ಯೂಸ್ ಕ್ಲಿಕ್’ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ರಾತ್ರಿ ಬಂಧಿಸಲಾಗಿದೆ.

‘ನ್ಯೂಸ್ ಕ್ಲಿಕ್’ ಮೇಲಿನ ದಾಳಿಯು ದೇಶಾದ್ಯಂತ ಆಘಾತವನ್ನು ಉಂಟುಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷಗಳು ಮತ್ತು ಭಾರತೀಯ ಪತ್ರಕರ್ತರ ಸಂಘ, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮುಂತಾದ ಸಂಘಟನೆಗಳು ‘ಇದು ಮೋದಿ ಸರ್ಕಾರದ ದಬ್ಬಾಳಿಕೆ ವಿಧಾನ’ ಎಂದು ಖಂಡಿಸಿವೆ.

ಇದನ್ನೂ ಓದಿ: ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ: ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, “ಚೀನಾದ ಕಂಪನಿಗಳಿಂದ ಭಾರಿ ಹಣ ಪಡೆದಿರುವ ‘ಪಿಎಂ ಕೇರ್ಸ್’ (PM CARES) ನ ವ್ಯವಸ್ಥಾಪಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, “ಮೋದಿ ಸರಕಾರವೇ ಚೀನಾಕ್ಕೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ ಪೇಜ್ ನಲ್ಲಿ, “ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು 20 ಬಾರಿ ಭೇಟಿಯಾಗಿದ್ದಾರೆ. ಜೂನ್ 19, 2020 ರಂದು ಚೀನಾ ಸೇನೆಯು ಗಡಿಯಲ್ಲಿ ಅತಿಕ್ರಮಣ ಮಾಡಿದಾಗ ಅದರ ಬಗ್ಗೆ ಅವರು ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಪಿಎಂ ಕೇರ್ಸ್‌ಗಾಗಿ ಚೀನಾ ಕಂಪನಿಗಳಿಗೆ ಕೋಟಿಗಟ್ಟಲೆ ಹಣ ನೀಡಲು ಮೋದಿ ಅವಕಾಶ ನೀಡಿದ್ದರು. ಹಾಗಾದರೆ ವಿದೇಶಿ ಶಕ್ತಿಗಳು ಯಾರನ್ನು ನಿಯಂತ್ರಿಸುತ್ತಿವೆ?” ಎಂದು ಪ್ರಶ್ನಿಸಿ ಆರೋಪಿಸಿದ್ದಾರೆ.

ದೇಶ

“ನ್ಯೂಸ್‌ ಕ್ಲಿಕ್” ಪ್ರಗತಿಪರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಆನ್‌ಲೈನ್ ಮಾಧ್ಯಮವಾಗಿದೆ. 2009ರಲ್ಲಿ ಪ್ರಾರಂಭವಾದ ನ್ಯೂಸ್‌ ಕ್ಲಿಕ್ ವಿವಿಧ ಜನರಪರ ಚಳುವಳಿಗಳು ಮತ್ತು ಪ್ರತಿಭಟನೆಗಳನ್ನು ವರದಿ ಮಾಡುವ ಜೊತೆಗೆ ಸರ್ಕಾರದ ತಪ್ಪು ನೀತಿಗಳ ಬಗ್ಗೆ ವಿವರವಾದ ಸುದ್ದಿಗಳನ್ನು ನೀಡುವಲ್ಲಿಯೂ ಇದು ಪ್ರಸಿದ್ಧವಾಗಿದೆ. PPK ನ್ಯೂಸ್ ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಒಡೆತನದ ಈ ಕಂಪನಿಯನ್ನು ಪ್ರಬೀರ್ ಪುರ್ಕಾಯಸ್ಥ ಸ್ಥಾಪಿಸಿದ್ದಾರೆ.

ಈ ಹಿನ್ನಲೆಯಲ್ಲಿ, ದೆಹಲಿ ಪೊಲೀಸರು ನ್ಯೂಸ್‌ ಕ್ಲಿಕ್ ಮಾಧ್ಯಮದ ಕಚೇರಿ ಮತ್ತು ಅದರ ವಿವಿಧ ವರದಿಗಾರರು ಹಾಗೂ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಭಾರತದ ವಿರುದ್ಧದ ಚಟುವಟಿಕೆಗಳಿಗಾಗಿ ಚೀನಾದಿಂದ ಪರೋಕ್ಷವಾಗಿ ಹಣ ಪಡೆದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ವಿಶೇಷ ಪೊಲೀಸ್ ತಂಡ 30 ಸ್ಥಳಗಳಲ್ಲಿ ದಾಳಿಯನ್ನು ನಡೆಸಿದ್ದಾರೆ.

ದಾಳಿ ಪೂರ್ಣಗೊಂಡ ನಂತರ, ಅಧಿಕಾರಿಗಳು ನ್ಯೂಸ್‌ ಕ್ಲಿಕ್ ಕಚೇರಿಗೆ ಬೀಗ ಜಡಿದಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ವಿರುದ್ಧ ರಚನೆಯಾಗಿರುವ “ಇಂಡಿಯಾ ಮೈತ್ರಿಕೂಟ” ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದರ ಬಗ್ಗೆ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ,

“ಜನಸಾಮಾನ್ಯರಿಗೆ ಸತ್ಯವನ್ನು ವಿವರಿಸುವವರ ವಿರುದ್ಧ ಬಿಜೆಪಿ ಕಾರ್ಯನಿರ್ವಹಿಸುತ್ತಲೇ ಇದೆ. ಹಿಂಸಾಚಾರ ಮತ್ತು ವಿಭಜನೆಯನ್ನು ಪ್ರಚೋದಿಸುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಉದ್ಯಮಿಗಳು ಅವರಿಗೆ ಅಗತ್ಯವಿರುವ ಮಾಧ್ಯಮಗಳನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸರ್ಕಾರದ ತಪ್ಪುಗಳನ್ನು ಅಂಕಿಅಂಶಗಳೊಂದಿಗೆ ಮಾಧ್ಯಮಗಳು ವಿಶ್ಲೇಷಿಸುವುದನ್ನು ಮತ್ತು ವರದಿ ಮಾಡುವುದನ್ನು ಈ ಸರ್ಕಾರ ತಡೆಯಲು ಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಬುದ್ಧ ಪ್ರಜಾಪ್ರಭುತ್ವ ಎಂದು ಪರಿಗಣಿಸಲ್ಪಟ್ಟಿದ್ದ ಭಾರತಕ್ಕೆ ಇದು ಭಾರೀ ಹಿನ್ನಡೆಯಾಗಲಿದೆ. ಬಿಬಿಸಿ, ನ್ಯೂಸ್ ಲಾಂಡ್ರಿ, ದೈನಿಕ್ ಬಜಾರ್, ಭಾರತ್ ಸಮಾಚಾರ್ ಮತ್ತು ವೈರ್ ಮುಂತಾದ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡಿದ್ದ ಸಾಲಿನಲಿನಲ್ಲಿ ಇದೀಗ ನ್ಯೂಸ್‌ ಕ್ಲಿಕ್‌ ಸೇರ್ಪಡೆಯಾಗಿದೆ” ಎಂದು ವಿರೋಧಪಕ್ಷಗಳ “ಇಂಡಿಯಾ ಮೈತ್ರಿಕೂಟ” ತಮ್ಮ ಆಕ್ರೋಶವನ್ನು ಹೊರಹಾಕಿದೆ.