ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬಿ.ಆರ್.ಅಂಬೇಡ್ಕರ್ Archives » Dynamic Leader
October 17, 2024
Home Posts tagged ಬಿ.ಆರ್.ಅಂಬೇಡ್ಕರ್
ಬೆಂಗಳೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

“ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 8 ರಿಂದ 19 ರವರೆಗೆ ಏರ್ಪಡಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಬೌದ್ಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.

“ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ” ಎಂದು ಹೇಳಿದರು.

“ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶಗಳಿಗೆ ಸೇರಿದ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರು ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ” ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ.

 

ದೇಶ

ಸೌದಿಕ್ ಬಿಸ್ವಾಸ್, ಬಿಬಿಸಿ ವರದಿಗಾರ
ಕನ್ನಡಕ್ಕೆ ಡಿ.ಸಿ.ಪ್ರಕಾಶ್
ಕೃಪೆ: ಬಿಬಿಸಿ

ನವೆಂಬರ್ 25, 1949 ರಂದು, ಭಾರತದ ಸಂವಿಧಾನದ ಅಂತಿಮ ವಾಚನದ ಕೊನೆಯಲ್ಲಿ, ಭಾರತದ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾದ ಮತ್ತು ದೇಶದ ದಲಿತರ ನಿರ್ವಿವಾದ ನಾಯಕರಾದ ಡಾ.ಭೀಮರಾವ್ ಅಂಬೇಡ್ಕರ್ ಅವರು ಪೂರ್ವಭಾವಿ ಭಾಷಣವೊಂದನ್ನು ಮಾಡಿದರು.

“ಜನವರಿ 26, 1950 ರಂದು ನಾವು ವಿರೋಧಾಭಾಸದ ಜೀವನವನ್ನು ಪ್ರವೇಶಿಸಲಿದ್ದೇವೆ, ರಾಜಕೀಯದಲ್ಲಿ ಸಮಾನತೆ ಇರುತ್ತದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಎದುರಾಗುತ್ತದೆ’’ ಎಂದು ಅಂಬೇಡ್ಕರ್ ಹೇಳಿದರು.

ಸಂವಿಧಾನ ಜಾರಿಗೆ ಬಂದ ದಿನವೇ ಭಾರತವು ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಯುವ ಗಣರಾಜ್ಯ ಮತ್ತು ಹಳೆಯ ನಾಗರಿಕತೆಯ ನಡುವಿನ ವೈರುಧ್ಯಗಳ ಬಗ್ಗೆ ಸಂಭಾವ್ಯವಾಗಿ ಉಲ್ಲೇಖಿಸಿದ್ದರು ಎಂದೇ ಅನಿಸುತ್ತಿದೆ. ಅವರು ಬೇರೊಂದು ಸಂದರ್ಭದಲ್ಲಿ ಮಾತನಾಡುವಾಗ ಪ್ರಜಾಪ್ರಭುತ್ವವು ಕೇವಲ ‘ಮೂಲಭೂತವಾಗಿ ಪ್ರಜಾಸತ್ತಾತ್ಮಕವಲ್ಲದ’ ‘ಭಾರತದ ಮಣ್ಣಿನ ಮೇಲ್ಭಾಗ’ ಮತ್ತು ಗ್ರಾಮವು “ಸ್ಥಳೀಯತೆ, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕೋಮುವಾದದ ಹೊಂಡ” ಎಂದರು.

ಅಸ್ಪೃಶ್ಯತೆ ನಿವಾರಣೆ, ದೃಢವಾದ ಕ್ರಮ, ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕು ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಭಾರತದಂತಹ ಬಡ, ಅಸಮಾನ ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಪ್ರಸಿದ್ಧ ಜರ್ಮನ್ ತತ್ವಜ್ಞಾನಿ ಜಾರ್ಜ್ ವಿಲ್ಹೆಲ್ಮ್ ಫ್ರೆಡ್ರಿಕ್ ಹೆಗೆಲ್ ಭಾರತವನ್ನು ‘ಬದಲಾಗದ ಸ್ಥಿರ’ ದೇಶ ಎಂದು ಬಣ್ಣಿಸಿದ್ದಾರೆ.

299 ಸದಸ್ಯರ ಸಂವಿಧಾನ ಸಭೆಯು ಪ್ರಕ್ಷುಬ್ಧ ಸಮಯದಲ್ಲಿ 1946 ಮತ್ತು 1949ರ ನಡುವೆ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ಈ ಅವಧಿಯಲ್ಲಿ ಧಾರ್ಮಿಕ ಗಲಭೆಗಳು ಮತ್ತು ವಿಭಜನೆಗಳು ನಡೆದವು. ಮಾನವ ಇತಿಹಾಸದಲ್ಲಿ ಅತಿ ದೊಡ್ಡ ವಲಸೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ನೂರಾರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಲು ಬಹಳ ಕಷ್ಟಕರವಾದ ಹೆಜ್ಜೆಯನ್ನು ತೆಗೆದುಕೊಳ್ಳಲಾಯಿತು.

ಅಂಬೇಡ್ಕರ್ ಅವರು ಏಳು ಸದಸ್ಯರ ಕೋರ್ ಕಮಿಟಿಯ ನೇತೃತ್ವ ವಹಿಸಿದ್ದರು.ಕಮಿಟಿಯು 395 ಭಾಗಗಳ ದಾಖಲೆಯನ್ನು ತಯಾರಿಸಿತು.

ಅಂಬೇಡ್ಕರ್ ಅವರ ಜನ್ಮದಿನದಂದು, ಏಪ್ರಿಲ್ 14, 1942 ರಂದು ಮುಂಬೈ (ಆಗಿನ ಬಾಂಬೆ) ನಲ್ಲಿರುವ ತಮ್ಮ ಮನೆಯಲ್ಲಿ ಮಹಿಳಾ ಕಾರ್ಯಕರ್ತರ ಗುಂಪಿನೊಂದಿಗೆ.

ಅಶೋಕ್ ಗೋಪಾಲ್ ಅವರ ಹೊಸ ‘ಎ ಪಾರ್ಟ್ ಅಪಾರ್ಟ್ ಜೀವನಚರಿತ್ರೆ’, ಅಂಬೇಡ್ಕರ್ ಅವರು ವಿಶ್ವದ ಅತಿ ಉದ್ದದ ಸ್ಥಾಪನೆಯ ದಾಖಲೆಗಳಲ್ಲಿ ಒಂದನ್ನು ರಚಿಸಲು, ಅಂಬೇಡ್ಕರ್ ಅವರು ಹೇಗೆ ಅನಾರೋಗ್ಯದಿಂದ ಹೋರಾಡಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹೇಗೆ ಬದಿಗಿರಿಸಿದರು ಎಂಬುದನ್ನು ಸಹ ವಿವರಿಸುತ್ತದೆ.

ಅಂಬೇಡ್ಕರ್ ಅವರ ವ್ಯಕ್ತಿತ್ವವು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಪುಸ್ತಕವು ಬಹಿರಂಗಪಡಿಸುತ್ತದೆ. ಕರಡು ಸಮಿತಿಯ ಏಳು ಸದಸ್ಯರಲ್ಲಿ ಐವರು ಮೇಲ್ಜಾತಿಯವರು. ಆದರೆ ಅವರೆಲ್ಲರೂ ಅಂಬೇಡ್ಕರ್ ಅವರನ್ನು ಸಮಿತಿಯನ್ನು ಮುನ್ನಡೆಸುವಂತೆ ಕೇಳಿಕೊಂಡರು.

ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಿದ ಐರ್ಲೆಂಡ್‌ನ ಸಂವಿಧಾನವನ್ನು ಬರೆದ ಐರಿಶ್ ರಾಜಕಾರಣಿ ಎಮನ್ ಡಿ ವಲೇರಾ ಅವರು ಸಂವಿಧಾನ ಕರುಡು ಸಮಿತಿಗೆ ಮುಖ್ಯಸ್ಥರನ್ನಾಗಿ ಅಂಬೇಡ್ಕರ್ ಅವರ ಹೆಸರನ್ನು ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್ ಅಥವಾ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ  ಶಿಫಾರಸು ಮಾಡಿದರು ಎಂದು ಗೋಪಾಲ್ ಬರೆಯುತ್ತಾರೆ. (ವೈಸರಾಯ್ ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ ಅವರು ಅಂಬೇಡ್ಕರ್ ಅವರಿಗೆ ಬರೆದ ಕೊನೆಯ ಪತ್ರದಲ್ಲಿ ಇದು ಬಹಿರಂಗವಾಗಿದೆ.)

“ಎಲ್ಲ ವರ್ಗಗಳಿಗೆ ಮತ್ತು ಧರ್ಮಕ್ಕೆ ಸಮಾನ ನ್ಯಾಯವನ್ನು ನೀಡುವ ಏಕೈಕ ಪ್ರತಿಭೆ” ಅವರಾಗಿರುವುದರಿಂದ ಸಂವಿಧಾನ ರಚನೆಯ “ಮೇಲ್ವಿಚಾರಣೆ” ಮಾಡುತ್ತಿರುವುದು ನನಗೆ “ವೈಯಕ್ತಿಕ ಸಂತೋಷ” ಆಗಿದೆ ಎಂದು ಎಡ್ವಿನಾ ಮೌಂಟ್‌ಬ್ಯಾಟನ್ ಅವರು ಅಂಬೇಡ್ಕರ್ ಅವರಿಗೆ ಹೇಳಿದರು.

1947 ಮಾರ್ಚ್ ತಿಂಗಳು ವೈಸರಾಯ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಂಬೇಡ್ಕರ್ ಅವರೊಂದಿಗೆ ಅತ್ಯಂತ ಆಸಕ್ತಿದಾಯಕ ಮತ್ತು ಮೌಲ್ಯಯುತ ಮಾತುಕತೆಗಳನ್ನು ನಡೆಸಿದರು ಎಂದು ಗೋಪಾಲ್ ಬರೆಯುತ್ತಾರೆ. ನೆಹರೂ ಅವರ ಹಂಗಾಮಿ ಕೇಂದ್ರ ಸಚಿವ ಸಂಪುಟದ 15 ಮಂತ್ರಿಗಳ ಪಟ್ಟಿಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ನೋಡಲು “ಅತ್ಯಂತ ಸಂತೋಷವಾಗಿದೆ” ಎಂದು ವೈಸರಾಯ್ ಅವರು ಹಿರಿಯ ಬ್ರಿಟಿಷ್ ಅಧಿಕಾರಿಗೆ ತಿಳಿಸಿದರು.

1947 ಮೇ ತಿಂಗಳು ಸಂವಿಧಾನ ಸಭೆಯಲ್ಲಿ ಸಲ್ಲಿಸಲಾದ ಸಂವಿಧಾನದ ಸಂಪೂರ್ಣವಾದ ಕರಡನ್ನು ಅಂಬೇಡ್ಕರ್ ನೇತೃವದ ಸಮಿತಿ ಪರಿಶೀಲಿಸಿತು. ಅದನ್ನು ಸಂಬಂಧಪಟ್ಟ ಸಚಿವರಿಗೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿಕೊಡಲಾಯಿತು. ಕೆಲವು ಭಾಗಗಳನ್ನು ಏಳು ಬಾರಿ ಮಾರ್ಪಡಿಸಲಾಯಿತು.

ಅಂಬೇಡ್ಕರ್ ಏಪ್ರಿಲ್ 1948ರಲ್ಲಿ ಶಾರದ ಕಬೀರ್ ಎಂಬ 36 ವರ್ಷದ ವೈದ್ಯೆಯನ್ನು ವಿವಾಹವಾದರು

ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರಿಗೆ ಅಂಬೇಡ್ಕರ್ ಅವರಿಂದ ಸಲ್ಲಿಸಲಾದ ಪರಿಷ್ಕೃತ ಕರಡಿನಲ್ಲಿ 20 ತಿದ್ದುಪಡಿಗಳನ್ನು ಮಾಡಲಾಯಿತು. ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಪ್ರತಿಜ್ಞೆಗಳನ್ನು ಒದಗಿಸುವ ಮತ್ತು ಸ್ಥಾಪನಾ ದಾಖಲೆಯ ಮೂಲಭೂತ ಲಕ್ಷಣಗಳನ್ನು ಒಳಗೊಂಡಿರುವ ಮುನ್ನುಡಿಗೆ ಮಾಡಿದ ತಿದ್ದುಪಡಿಯು ಸಹ ಇದರಲ್ಲಿ ಒಳಗೊಂಡಿರುತ್ತದೆ.

ಮೂಲ ಪೀಠಿಕೆಯಲ್ಲಿ ಸೇರಿಸಲಾದ “ಭ್ರಾತೃತ್ವ” ಎಂಬ ಪದವನ್ನು, “81 ನಿಜವಾದ ಅದ್ಭುತ ಮತ್ತು ಐತಿಹಾಸಿಕ ಪದಗಳ ಸಂಗ್ರಹವಾದ” ಉಳಿದ ತಿದ್ದುಪಡಿಗಳೆಲ್ಲವೂ ಸಂಪೂರ್ಣವಾಗಿ ಅಂಬೇಡ್ಕರ್ ಅವರದ್ದು. ತತ್ವಜ್ಞಾನಿ ಆಕಾಶ್ ಸಿಂಗ್ ರಾಥೋಡ್ ಬರೆದ “Ambedkar’s Preamble: A Secret History of the Constitution of India” ಎಂಬ ಪುಸ್ತಕವನ್ನು ಉಲ್ಲೇಖಿಸಿ ಗೋಪಾಲ್ ಹೇಳುತ್ತಾರೆ.

ಅಂಬೇಡ್ಕರ್ ಅವರೇ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೂ ಅವರು ಸುಮಾರು 100 ದಿನಗಳ ಕಾಲ ಸಂವಿಧಾನ ಸಭೆಯಲ್ಲಿ ನಿಂತು, “ಪ್ರತಿ ಷರತ್ತನ್ನು ತಾಳ್ಮೆಯಿಂದ ವಿವರಿಸಿ, ಕಾರಣಗಳನ್ನು ನೀಡಿದರು ಅಥವಾ ಸೂಚಿಸಿದ ಪ್ರತಿ ತಿದ್ದುಪಡಿಯನ್ನು ತಿರಸ್ಕರಿಸಿದರು”.

ಎಲ್ಲ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ. “ಈ (ಪರಿಷ್ಕೃತ) ಸಂವಿಧಾನವನ್ನು ರೂಪಿಸುವ ಹೊರೆ ಅಂಬೇಡ್ಕರ್ ಅವರ ಮೇಲೆ ಬಿದ್ದಿತು. ಏಕೆಂದರೆ ಹೆಚ್ಚಿನ ಸದಸ್ಯರು ಸಾವು, ಅನಾರೋಗ್ಯ ಮತ್ತು ಇತರ ಕೆಲಸಗಳಿಂದಾಗಿ ಗಣನೀಯವಾದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ” ಎಂದು ಸಮಿತಿಯ ಸದಸ್ಯರಲ್ಲೊಬ್ಬರಾದ ಟಿಟಿ ಕೃಷ್ಣಮಾಚಾರಿ 1948 ನವೆಂಬರ್ ತಿಂಗಳಲ್ಲಿ ಸಭೆಗೆ ತಿಳಿಸಿದರು.

ಕರಡು 7,500ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಿತು. ಅವುಗಳಲ್ಲಿ ಸುಮಾರು 2,500 ಸ್ವೀಕರಿಸಲಾಯಿತು. “ಅತ್ಯಂತ ಸಂಕೀರ್ಣವಾದ ಪ್ರಸ್ತಾವನೆಗಳನ್ನು ಸರಳ ಕಾನೂನು ರೂಪಕ್ಕೆ ಹಾಕುವ ಸಾಮರ್ಥ್ಯ” ಹೊಂದಿದ ಹಿರಿಯ ಸರ್ಕಾರಿ ನೌಕರರಾದ ಎಸ್.ಎನ್.ಮುಖರ್ಜಿಯವರಿಗೆ ಕರಡನ್ನು ಸಿದ್ಧಪಡಿಸಿದ್ದಕ್ಕಾಗಿ ಅಂಬೇಡ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಜನ್ಮದಿನದಂದು ಭಾರತೀಯ ಸಂವಿಧಾನದ ಪುಸ್ತಕವನ್ನು ಹಿಡಿದಿರುವ ವ್ಯಕ್ತಿ.

ಭಾರತದ ‘ಹಿಂದುಳಿದ ವರ್ಗಗಳ’ ಬೆಂಬಲಿಗರೆಂಬ ಖ್ಯಾತಿ ಇದ್ದರೂ ಸಹ ಅಂಬೇಡ್ಕರ್ ಎಲ್ಲಾ ವರ್ಗಗಳ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸಿದರು. ಮೀಸಲು ಕ್ಷೇತ್ರಗಳ ಅವರ ಬೇಡಿಕೆಯನ್ನು ಸಂವಿಧಾನ ಸಭೆಯ ಅಲ್ಪಸಂಖ್ಯಾತರ ಸಮಿತಿಯು ತಿರಸ್ಕರಿಸಿತು. ಪ್ರಮುಖ ಕೈಗಾರಿಕೆಗಳ ರಾಷ್ಟ್ರೀಕರಣಕ್ಕಾಗಿ ಅವರ ಆರಂಭಿಕ ಬೇಡಿಕೆಯನ್ನು ಸಹ ಸ್ವೀಕರಿಸಲಿಲ್ಲ. ಸಂವಿಧಾನದ ಉದ್ದೇಶಗಳಲ್ಲಿ ಸಮಾಜವಾದವನ್ನೂ ಉಲ್ಲೇಖಿಸಿಲ್ಲ.

1946 ಡಿಸೆಂಬರ್ ನಲ್ಲಿ ಸಂವಿಧಾನ ಸಭೆ ಮೊದಲ ಬಾರಿಗೆ ಸೇರಿದಾಗ, ಅಂಬೇಡ್ಕರ್ ಅವರು “ಇಂದು ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಭಜನೆಯಾಗಿದ್ದೇವೆ ಎಂದು ನನಗೆ ತಿಳಿದಿದೆ. ನಾವು ಯುದ್ಧ ಮಾಡುವ ಶಿಬಿರಗಳ ಗುಂಪುಗಳಾಗಿದ್ದೇವೆ. ಒಂದುವೇಳೆ ಅಂತಹ ಒಂದು ಶಿಬಿರದ ನಾಯಕನಾಗಿ ನಾನಿರಬಹುದು ಎಂಬುದನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ನಾನು ಹೋಗಬಹುದು” ಎಂದು ಉಲ್ಲೇಖಿಸಿದರು.

“ಅಂಬೇಡ್ಕರ್ ಅವರ ಹಿಂದಿನ ಬೇಡಿಕೆಗಳನ್ನು ನಿಭಾಯಿಸಿದ ರೀತಿ ಅವರ ರಾಜಕೀಯ ಸ್ವರೂಪವನ್ನು ಸೂಚಿಸುತ್ತದೆ. ಪರಿಶಿಷ್ಟ ಜಾತಿಗಳು ಎಂಬ ನಿರ್ದಿಷ್ಟವಾದ ಒಂದು ವರ್ಗದ ಹಿತಾಸಕ್ತಿಗಳನ್ನು ಮಾತ್ರವಲ್ಲದೆ, ಎಲ್ಲರ ಹಿತಾಸಕ್ತಿಗಳನ್ನು ಅವರು ಪರಿಗಣಿಸಿದ್ದಾರೆ,” ಎಂದು ಗೋಪಾಲ್ ಹೇಳುತ್ತಾರೆ. (ಭಾರತದ 140 ಕೋಟಿ ಜನಸಂಖ್ಯೆಯಲ್ಲಿ 23 ಕೋಟಿ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡದವರು)

ಇವೆಲ್ಲವನ್ನು ನೋಡಿದಾಗ, ಅಂಬೇಡ್ಕರ್ ಅವರು ಸಂವಿಧಾನದ ಪ್ರಧಾನ ಶಿಲ್ಪಿ ಎಂದು, “ವಿಶಾಲ ದೃಷ್ಟಿಯನ್ನು ಹೊಂದಿದವರು” ಮತ್ತು ದಾಖಲೆಯ “ಪ್ರತಿಯೊಂದು ಭಾಗವನ್ನು” ಅಂತಿಮಗೊಳಿಸಲು ಮಾರ್ಗದರ್ಶನ ನೀಡಿದವರು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎನ್ನುತ್ತಾರೆ ಗೋಪಾಲ್.

‘ಅಂಬೇಡ್ಕರ್ ಅವರು ಸಾಂವಿಧಾನಿಕತೆಗೆ ಸಮರ್ಥ ಮಾರ್ಗದರ್ಶಕರಾಗಿದ್ದರು’ ಎಂದು ರಾಜೇಂದ್ರ ಪ್ರಸಾದ್ ವರ್ಷಗಳ ನಂತರ ಒಪ್ಪಿಕೊಂಡರು. ‘ಡಾ.ಅಂಬೇಡ್ಕರ್ ಅವರಿಗಿಂತ ಸಂವಿಧಾನದ ಬಗ್ಗೆ ಹೆಚ್ಚು ಕಾಳಜಿ ವಹಿಸಿದವರು ಯಾರೂ ಇಲ್ಲ’ ಎಂದು ಪ್ರಧಾನಿ ನೆಹರೂ ಅವರು ಡಿಸೆಂಬರ್ 6, 1956 ರಂದು ತಮ್ಮ 63ನೇ ವಯಸ್ಸಿನಲ್ಲಿ ಅಂಬೇಡ್ಕರ್ ನಿಧನರಾದ ಸಂದರ್ಭದಲ್ಲಿ ಹೇಳಿದರು.

ಏಳು ದಶಕಗಳ ನಂತರ, ಭಾರತದ ಶ್ರೇಷ್ಠ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಧ್ರುವೀಕರಣ ಮತ್ತು ಸಾಮಾಜಿಕ ಅಸಮಾನತೆಗಳು ಅದರ ಭವಿಷ್ಯದ ಬಗ್ಗೆ ಅನೇಕರನ್ನು ಚಿಂತಿಸುವಂತೆ ಮಾಡಿದೆ. ಸಂವಿಧಾನದ ಪರಿಷ್ಕೃತ ಕರಡನ್ನು ಪರಿಚಯಿಸುವಾಗ ಅಂಬೇಡ್ಕರ್ ಅವರು ಮಾಡಿದ ಮತ್ತೊಂದು ಅಂತಃಪ್ರಜ್ಞೆ ಭಾಷಣವನ್ನು ಅವರು ಎತ್ತಿ ತೋರಿಸುತ್ತಿದ್ದಾರೆ.

“ಭಾರತದಲ್ಲಿ ಅಲ್ಪಸಂಖ್ಯಾತರು ಬಹುಮತದ ಆಡಳಿತವನ್ನು ನಿಷ್ಠೆಯಿಂದ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡದ ಕರ್ತವ್ಯವನ್ನು ಈ ಬಹುಸಂಖ್ಯಾತರು ಭಾವಿಸಬೇಕು ಎಂದು ಹೇಳಿದ್ದರು.